ಒಡಿಶಾ: ಅಂಗನವಾಡಿಯಲ್ಲಿ (Anganwadi) ದಲಿತ ಮಹಿಳೆ (Dalit women) ತಯಾರಿಸಿದ ಊಟ ಸೇವಿಸಲು ಮಕ್ಕಳು ನಿರಾಕರಿಸಿದ ಬಳಿಕ ಬಿಜೆಪಿ ಸಂಸದರು (BJP MP) ಅಂಗನವಾಡಿಗೆ ತೆರಳಿ ದಲಿತ ಮಹಿಳೆ ತಯಾರಿಸಿದ ಆಹಾರ ಸೇವಿಸಿದರು. ಈ ಬಳಿಕ ಮಕ್ಕಳು ಕೂಡ ಅಂಗನವಾಡಿಗೆ ಬಂದು ಊಟ ಮಾಡಿದರು. ಈ ಘಟನೆ ಒಡಿಶಾದ (Odisha) ಕೇಂದ್ರಪಾರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಬಿಜೆಪಿ ಸಂಸದ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ (BJP national vice president Baijayant) 'ಜಯ' ಪಾಂಡ ಅವರು ಭಾನುವಾರ ಅಂಗನವಾಡಿಗೆ ತೆರಳಿ ಊಟ ಸೇವಿಸಿದ್ದಾರೆ.
ಕಳೆದ ನವೆಂಬರ್ ನಲ್ಲಿ ಅಂಗನವಾಡಿಗೆ ಅಡುಗೆಯವರಾಗಿ ದಲಿತ ಮಹಿಳೆ ಶರ್ಮಿಷ್ಠ ಸೇಥಿ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಅಂಗನವಾಡಿ ಕೇಂದ್ರ ಮುಚ್ಚಲ್ಪಟ್ಟಿತ್ತು.
ಆಗ್ರಾ ವಾಯುಪಡೆ ನಿಲ್ದಾಣದೊಳಗೆ ಪಾಕಿಸ್ತಾನ ಬಲೂನ್ ಪತ್ತೆ
ದಲಿತ ಮಹಿಳೆಯನ್ನು ಅಂಗನವಾಡಿಯ ಅಡುಗೆಯವರಾಗಿ ನೇಮಿಸಿರುವುದಕ್ಕೆ ಗ್ರಾಮಸ್ಥರು ಅಂಗನವಾಡಿ ಕೇಂದ್ರವನ್ನೇ ಬಹಿಷ್ಕರಿಸಿದ್ದಾರೆ ಎಂದು ಸುದ್ದಿ ತಿಳಿದ ಬಿಜೆಪಿ ಸಂಸದ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ 'ಜಯ' ಪಾಂಡ ಅವರು ಭಾನುವಾರ ಇಲ್ಲಿಗೆ ಭೇಟಿ ನೀಡಿ ದಲಿತ ಮಹಿಳೆ ತಯಾರಿಸಿದ ಊಟವನ್ನು ಸೇವಿಸಿದರು. ಇದರ ಬಳಿಕ ಸೋಮವಾರ ಅಂಗನವಾಡಿಯ ಎಲ್ಲ ಮಕ್ಕಳು ಬಂದು ಊಟ ಮಾಡಿದರು. ಇವರಲ್ಲಿ ಮೇಲ್ಜಾತಿಯ ಮಕ್ಕಳು ಕೂಡ ದಲಿತ ಮಹಿಳೆ ತಯಾರಿಸಿದ ಆಹಾರವನ್ನು ಸೇವಿಸಿದರು.
ಕಳೆದ ನವೆಂಬರ್ 21 ರಿಂದ ಅಂಗನವಾಡಿ ಮುಚ್ಚಲಾಗಿತ್ತು. ದಲಿತ ಮಹಿಳೆ ಶರ್ಮಿಷ್ಠ ಸೇಥಿ ಅವರನ್ನು ಅಡುಗೆಯವರು ಮತ್ತು ಸಹಾಯಕಿಯಾಗಿ ನೇಮಿಸಿದ ಬಳಿಕ ಹಲವಾರು ಮೇಲ್ಜಾತಿಯ ಕುಟುಂಬಗಳು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಾಗೂ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಸರ್ಕಾರ ಪೂರೈಸಿದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸ್ವೀಕರಿಸಲು ನಿರಾಕರಿಸಿದ್ದವು.
ಇದೀಗ ಬಿಜೆಪಿ ಸಂಸದರು ಅಂಗನವಾಡಿಗೆ ಭೇಟಿ ನೀಡಿದ ಬಳಿಕ ಸಮಸ್ಯೆ ಬಗೆ ಹರಿದಂತಾಗಿದೆ. ಈ ಕುರಿತು ಮಾತನಾಡಿದ ಬಿಜೆಪಿ ಸಂಸದ ಬೈಜಯಂತ್, ರಾಜನಗರದ ನುಗಾಂವ್‌ನಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪೌಷ್ಟಿಕ ಆಹಾರ ವಿತರಣೆಯನ್ನು ಬಲಪಡಿಸುವತ್ತ ಗಮನಹರಿಸಿದ್ದೇನೆ. ಇಲ್ಲಿಗೆ ನೀಡಲಾಗಿರುವ ಸೌಲಭ್ಯಗಳನ್ನು ಪರಿಶೀಲಿಸಿದ್ದೇನೆ. ಸಿಬ್ಬಂದಿಯೊಂದಿಗೆ ಸಂವಹನ ನಡೆಸಲು ಸ್ವಲ್ಪ ಸಮಯ ಬೇಕಾಯಿತು. ಸ್ಥಳೀಯ ಮುಖಂಡರು ಮತ್ತು ಸಮುದಾಯದ ಸದಸ್ಯರೊಂದಿಗೆ ಸೇರಿ ಊಟವನ್ನು ಹಂಚಿಕೊಂಡೆವು. ಅವರ ಪ್ರಯತ್ನಗಳ ಪರಿಣಾಮ ಇಂದು ಎಲ್ಲ ಮಕ್ಕಳು ಕೂಡ ಅಂಗನವಾಡಿಗೆ ಬಂದು ಊಟ ಮಾಡಿದ್ದಾರೆ ಎಂದು ಹೇಳಿದರು.
ಮಕ್ಕಳು ಅಂಗನವಾಡಿಯಲ್ಲಿ ಪೌಷ್ಟಿಕ ಊಟವನ್ನು ಸೇವಿಸುತ್ತಿರುವುದನ್ನು ನೋಡಿ ಸಂತೋಷವಾಯಿತು. ಮಕ್ಕಳಿಗೆ ಉತ್ತಮ ಆರಂಭವನ್ನು ಖಚಿತಪಡಿಸಿಕೊಳ್ಳಲು ಸಮುದಾಯವು ಒಟ್ಟಿಗೆ ಸೇರುವುದನ್ನು ನೋಡುವುದು ಹೃದಯಸ್ಪರ್ಶಿಯಾಗಿದೆ ಎಂದು ಅವರು ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಹೇಳಿದ್ದಾರೆ.
ಸಿಂಹಿಣಿಯ ಅಬ್ಬರಕ್ಕೆ ಕಾಡಿನ ರಾಜನೇ ಬೆಚ್ಚಿ ಬಿದ್ದ ; ವಿಡಿಯೊ ನೋಡಿ!
ಅಂಗನವಾಡಿಯ 20 ಮಕ್ಕಳಲ್ಲಿ 16 ಮಕ್ಕಳು ಸೋಮವಾರ ಅಂಗನವಾಡಿ ಕೇಂದ್ರಕ್ಕೆ ಬಂದು ಸೇಥಿಯವರು ತಯಾರಿಸಿದ ಆಹಾರವನ್ನು ಸ್ವೀಕರಿಸಿದರು. ಉಳಿದ ನಾಲ್ವರು ವಿದ್ಯಾರ್ಥಿಗಳು ಅನಾರೋಗ್ಯದ ಕಾರಣದಿಂದ ಗೈರು ಹಾಜರಾಗಿದ್ದರು.
ಮಕ್ಕಳಿಗೆ ರಾಗಿ ಲಡ್ಡು, ಅನ್ನ, ಸಾಂಬಾರು ಬೇಯಿಸಿ ಬಡಿಸಿದೆ. ಅವರು ಊಟ ಮಾಡುವುದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಅವರು ಆಟಿಕೆಗಳೊಂದಿಗೆ ಆಟವಾಡಿದರು, ಸುಮಾರು ಮೂರು ತಿಂಗಳ ಕಾಲ ನಿರ್ಜನವಾಗಿದ್ದ ಕೇಂದ್ರಕ್ಕೆ ಮತ್ತೆ ಜೀವ ತುಂಬಿದರು ಎಂದು ಸೇಥಿ ಹೇಳಿದ್ದು, ಗ್ರಾಮದಲ್ಲಿ ಇನ್ನು ಮುಂದೆ ಜಾತಿ ತಾರತಮ್ಯ ಇರುವುದಿಲ್ಲ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.