India-Pakistan Conflict: ಪಹಲ್ಗಾಮ್ ದಾಳಿ, ಆಪರೇಷನ್ ಸಿಂದೂರ್, ಉಗ್ರರ ನಿರ್ಣಾಮ.. ಇಲ್ಲಿವರೆಗೆ ನಡೆದಿಷ್ಟು!
India-Pakistan Conflict Timeline: ಏ.22ರಂದು ನಡೆದ ಪ್ರವಾಸಿಗರ ಮಾರಣಹೋಮ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ನೆಲೆಯುವಂತೆ ಮಾಡಿದೆ. 2019ರಲ್ಲಿ ನಡೆದ ಪುಲ್ವಾಮಾ ದಾಳಿಯ ನಂತರ ಬಾರಿಗೆ ಉಭಯ ರಾಷ್ಟ್ರಗಳ ನಡುವೆ ಬೂದಿ ಮುಚ್ಚಿದ ಕೆಂಡದಂತಿದ್ದ ಶತ್ರುತ್ವದ ಕಿಡಿಗೆ ಇದೀಗ ಬೆಂಕಿ ಹಚ್ಚಿದಂತಾಗಿದೆ. ಹಾದದ್ರೆ ಈವರೆಗೆ ಏನೆಲ್ಲಾ ನಡೆಯಿತು? ಇಲ್ಲಿದೆ ಡಿಟೇಲ್ಸ್


ನವದೆಹಲಿ: ಎರಡು ವಾರಗಳ ಹಿಂದೆ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು(Pahalgam Attack) ಅಟ್ಟಹಾಸ(India-Pakistan Conflict) ಮೆರೆದು 26ಜನರ ಪ್ರವಾಸಿಗರನ್ನು ಬಲಿ ಪಡೆದ ನಂತರ ನಡೆದ ಬೆಳವಣಿಗೆಗಳು ಭಾರತ ಮತ್ತು ಪಾಕಿಸ್ತಾನವನ್ನು ಯುದ್ಧದ ಪರಿಸ್ಥಿತಿ ನೂಕಿದೆ. ಶತ್ರು ರಾಷ್ಟ್ರ ನಿರೀಕ್ಷೆಯಂತೆ ತನ್ನ ನೆಲದಿಂದ ಭಯೋತ್ಪಾದನೆಯ ವಿಷ ಬೀಜವನ್ನು ಕಿತ್ತೊಗೆಯಲು ಸಂಪೂರ್ಣವಾಗಿ ವಿಫಲವಾಗಿದೆ. ಏ.22ರಂದು ನಡೆದ ಪ್ರವಾಸಿಗರ ಮಾರಣಹೋಮ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ನೆಲೆಯುವಂತೆ ಮಾಡಿದೆ. 2019ರಲ್ಲಿ ನಡೆದ ಪುಲ್ವಾಮಾ ದಾಳಿಯ ನಂತರ ಬಾರಿಗೆ ಉಭಯ ರಾಷ್ಟ್ರಗಳ ನಡುವೆ ಬೂದಿ ಮುಚ್ಚಿದ ಕೆಂಡದಂತಿದ್ದ ಶತ್ರುತ್ವದ ಕಿಡಿಗೆ ಇದೀಗ ಬೆಂಕಿ ಹಚ್ಚಿದಂತಾಗಿದೆ. ಹಾದದ್ರೆ ಈವರೆಗೆ ಏನೆಲ್ಲಾ ನಡೆಯಿತು? ಇಲ್ಲಿದೆ ಡಿಟೇಲ್ಸ್
ಏಪ್ರಿಲ್ 22: ದಕ್ಷಿಣ ಕಾಶ್ಮೀರದ ಪಹಲ್ಗಾಮ್ ರೆಸಾರ್ಟ್‌ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು ಕನಿಷ್ಠ 26 ಪ್ರವಾಸಿಗರನ್ನು ಗುಂಡಿಕ್ಕಿ ಕೊಂದರು. ಲಷ್ಕರ್-ಎ-ತೈಬಾ (ಎಲ್‌ಇಟಿ) ನ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿತು. ಭಯೋತ್ಪಾದಕರು ಜನರನ್ನು ನೀವು ಹಿಂದೂಗಳೇ ಎಂದು ಕೇಳಿ ನಂತರ ಗುಂಡು ಹಾರಿಸಿ ಅಟ್ಟಹಾಸ ಮೆರೆದಿದ್ದರು.
ಏಪ್ರಿಲ್ 23: ಭಾರತವು ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುವ ಮೂಲಕ ಪ್ರತಿಕ್ರಿಯಿಸಿತು ಮತ್ತು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತು. ಅಲ್ಲದೇ ಅಟ್ಟಾರಿ-ವಾಘಾ ಗಡಿಯನ್ನು ಸಹ ಮುಚ್ಚಿತು. ಪಹಲ್ಗಾಮ್ ಭಯೋತ್ಪಾದಕರಿಗಾಗಿ ಹುಡುಕಾಟ ಪ್ರಾರಂಭವಾಯಿತು. ಪಾಕ್ ಮಾತ್ರ ತನ್ನ ಕೈವಾಡ ಇಲ್ಲವೆಂದೇ ವಾದಿಸಿತ್ತು.
ಏಪ್ರಿಲ್ 24: ಭಾರತ ಮತ್ತು ಪಾಕಿಸ್ತಾನವು ಪರಸ್ಪರ ವೀಸಾಗಳನ್ನು ರದ್ದುಗೊಳಿಸಿವು. ಭಾರತದಲ್ಲಿರುವ ಪಾಕಿಸ್ತಾನಿಗಳನ್ನು ಹೊರ ಹೋಗುವಂತೆ ಆದೇಶಿಸಿತ್ತು. ಪಾಕಿಸ್ತಾನವು ಎಲ್ಲಾ ಭಾರತೀಯ ಸ್ವಾಮ್ಯದ ಅಥವಾ ಭಾರತದಿಂದ ನಡೆಸಲ್ಪಡುವ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಸಹ ಮುಚ್ಚಿದವು. ಪಾಕಿಸ್ತಾನಿ ಸಚಿವರು ಹೇಳಿಕೆ ಕೊಡಲು ಶುರು ಮಾಡುತ್ತಾರೆ ಮತ್ತು ಪರಮಾಣು ಕ್ಷಿಪಣಿಗಳನ್ನು ಬಳಸುವ ಬೆದರಿಕೆ ಹಾಕಲು ಪ್ರಾರಂಭಿಸುತ್ತಾರೆ.
ಏಪ್ರಿಲ್ 25: ಪಾಕಿಸ್ತಾನವು ನಿಯಂತ್ರಣ ರೇಖೆಯ (LoC) ಉದ್ದಕ್ಕೂ ಕದನ ವಿರಾಮ ಉಲ್ಲಂಘನೆಯನ್ನು ಪ್ರಾರಂಭಿಸುತ್ತದೆ. ಪಾಕಿಸ್ತಾನವು ಎಲ್‌ಒಸಿ ಸ್ಥಾಪಿಸಿದ ಒಪ್ಪಂದವಾದ ಶಿಮ್ಲಾ ಒಪ್ಪಂದವನ್ನು ಸ್ಥಗಿತಗೊಳಿಸುತ್ತದೆ. ವಿಶ್ವಸಂಸ್ಥೆ, ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ಪಾಲುದಾರರು ಶಾಂತಿ ಕಾಪಾಡುವಂತೆ ಕೋರುತ್ತಾರೆ.
ಏಪ್ರಿಲ್ 30: ಪಾಕಿಸ್ತಾನವು ಸತತ ಐದನೇ ರಾತ್ರಿಯೂ ಕದನ ವಿರಾಮವನ್ನು ಉಲ್ಲಂಘಿಸಲು ಪ್ರಾರಂಭಿಸಿ ಭೀಕರ ದಾಳಿ ನಡೆಸುತ್ತದೆ.
ಮೇ 1: ಬಿಕ್ಕಟ್ಟನ್ನು ಶಮನಗೊಳಿಸುವ ಪ್ರಯತ್ನದಲ್ಲಿ ಭಾರತ ಮತ್ತು ಪಾಕಿಸ್ತಾನದ ಹಿರಿಯ ಅಧಿಕಾರಿಗಳನ್ನು ಕರೆಸಿದ್ದೇನೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳುತ್ತಾರೆ.
ಮೇ 3: ಪಾಕಿಸ್ತಾನವು 450 ಕಿಲೋಮೀಟರ್ (ಸುಮಾರು 280 ಮೈಲುಗಳು) ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಿಸಿತು. ಭಾರತವು ಪಾಕಿಸ್ತಾನದಿಂದ ವಾಯು ಮತ್ತು ಮೇಲ್ಮೈ ಮಾರ್ಗಗಳ ಮೂಲಕ ಎಲ್ಲಾ ಮೇಲ್ ವಿನಿಮಯವನ್ನು ಸ್ಥಗಿತಗೊಳಿಸಿತು ಮತ್ತು ತನ್ನ ನೆರೆಹೊರೆಯವರಿಂದ ಸರಕುಗಳ ನೇರ ಮತ್ತು ಪರೋಕ್ಷ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸುತ್ತದೆ.
ಮೇ 7: ಭಾರತವು ಆಪರೇಷನ್ ಸಿಂಧೂರ್ ಅನ್ನು ನಡೆಸುತ್ತದೆ ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ), ಜೈಶ್-ಎ-ಮೊಹಮ್ಮದ್ (ಜೆಎಂ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಗೆ ಸೇರಿದ ಒಂಬತ್ತು ಭಯೋತ್ಪಾದಕ ಅಡಗುತಾಣಗಳನ್ನು ಧ್ವಂಸ ಮಾಡುತ್ತದೆ.
ಮೇ 8: ಪಾಕಿಸ್ತಾನದ, ಲಾಹೋರ್, ರಾವಲ್ಪಿಂಡಿ ಸೇರಿದಂತೆ ವಿವಿಧ ನಗರಗಳಲ್ಲಿ ಸೇನಾ ನೆಲೆಗಳನ್ನು ಗುರಿಯಾಗಿಸಿ ಭಾರತ ಡ್ರೋನ್, ಕ್ಷಿಪಣಿ ದಾಳಿ ನಡೆಸಿತು. ಸಿಯಾಲ್‌ಕೋಟ್‌ನಲ್ಲಿರುವ ವಾಯುನೆಲೆಗಳನ್ನು ಸಹ ಗುರಿಯಾಗಿರಿಸಿ ದಾಳಿ ಮುಂದುವರಿದಿತ್ತು. ಭಾರತದ ಉತ್ತರ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ಎರಡು ಡಜನ್‌ಗೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಯಿತು.
ಈ ಸುದ್ದಿಯನ್ನೂ ಓದಿ: Pahalgam Satellite Images: ಉಗ್ರರ ದಾಳಿಗಿಂತ 2 ತಿಂಗಳ ಹಿಂದೆಯೇ ಪಹಲ್ಗಾಮ್‌ನ ಸ್ಯಾಟಲೈಟ್ ಫೋಟೋಗೆ ಡಿಮ್ಯಾಂಡ್ ಏಕಾಏಕಿ ಹೆಚ್ಚಾಗಿತ್ತು!
ಮೇ 9: ಪಾಕಿಸ್ತಾನದೊಂದಿಗಿನ ಮಿಲಿಟರಿ ಉದ್ವಿಗ್ನತೆ ಹೆಚ್ಚುತ್ತಿರುವ ನಂತರ ಭಾರತವು ಇಂಡಿಯನ್ ಪ್ರೀಮಿಯರ್ ಲೀಗ್ ಟಿ 20 ಪಂದ್ಯಾವಳಿಯನ್ನು ಒಂದು ವಾರದವರೆಗೆ ಸ್ಥಗಿತಗೊಳಿಸಿತು. ಬಿಕ್ಕಟ್ಟಿನ ಕಾರಣದಿಂದಾಗಿ ಪಾಕಿಸ್ತಾನವು ಆರಂಭದಲ್ಲಿ ತನ್ನದೇ ಆದ ದೇಶೀಯ ಟಿ 20 ಪಂದ್ಯಾವಳಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಿಸುವುದಾಗಿ ಹೇಳಿತು, ಆದರೆ ನಂತರ ಅದು ಪಂದ್ಯಗಳನ್ನು ಮಾತ್ರ ಮುಂದೂಡುವುದಾಗಿ ಹೇಳಿತು.
ಮೇ 10: ಪಾಕಿಸ್ತಾನದ ಮೇಲೆ ಮತ್ತೆ ಭಾರತ ಕ್ಷಿಪಣಿ ದಾಳಿ ನಡೆಸುತ್ತದೆ. ರಾವಲ್ಪಿಂಡಿಯ ಗ್ಯಾರಿಸನ್ ನಗರ, ಚಕ್ವಾಲ್ ನಗರದ ಮುರಿದ್ ವಾಯುನೆಲೆ ಮತ್ತು ಪೂರ್ವ ಪಂಜಾಬ್ ಪ್ರಾಂತ್ಯದ ಜಾಂಗ್ ಜಿಲ್ಲೆಯ ರಫಿಕಿ ವಾಯುನೆಲೆಗೆ ವ್ಯಾಪಕ ಹಾನಿಯಾಗಿತ್ತು.ಇದರ ಬೆನ್ನಲ್ಲೇ ಕ್ಷಿಪಣಿ ದಾಳಿ ಮಾಡಿ ವಿಫಲ ಯತ್ನ ನಡೆಸುತ್ತದೆ.
ಮೇ 10: ಉಭಯ ರಾಷ್ಟ್ರಗಳ ಕದನವಿರಾಮಕ್ಕೆ ಒಪ್ಪಿಗೆ ಸೂಚಿಸಿ ಯುದ್ಧಕ್ಕೆ ಬ್ರೇಕ್ ಹಾಕುತ್ತವೆ. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುತ್ತದೆ.