Hair Fall: ಕೂದಲು ಉದುರುವಿಕೆ ಸಮಸ್ಯೆಗೆ ಪತಂಜಲಿಯಲ್ಲಿ ಪರಿಣಾಮಕಾರಿ ಚಿಕಿತ್ಸೆ; ಸಂಶೋಧನೆಯಲ್ಲಿ ಸಾಬೀತು
ಇಂದಿನ ದಿನಮಾನದಲ್ಲಿ ಕೂದಲು ಉದುರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಎಷ್ಟೇ ಚಿಕಿತ್ಸೆ ಪಡೆದುಕೊಂಡರೂ ಸಮಸ್ಯೆಗೆ ಮಾತ್ರ ಪರಿಹಾರ ಸಿಗುತ್ತಿಲ್ಲ ಎಂಬುದು ಹಲವರ ಗೋಳು. ಈ ಸಮಸ್ಯೆಗೆ ಈಗ ಪರಿಹಾರ ದೊರಕಿದೆ. ಪತಂಜಲಿಯ ಸಂಸ್ಥೆ ಈ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ.


ನವದೆಹಲಿ: ಇಂದಿನ ದಿನಮಾನದಲ್ಲಿ ಕೂದಲು ಉದುರುವುದು (Hair Fall) ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಎಷ್ಟೇ ಚಿಕಿತ್ಸೆ ಪಡೆದುಕೊಂಡರೂ ಸಮಸ್ಯೆಗೆ ಮಾತ್ರ ಪರಿಹಾರ ಸಿಗುತ್ತಿಲ್ಲ ಎಂಬುದು ಹಲವರ ಗೋಳು. ಈ ಸಮಸ್ಯೆಗೆ ಈಗ ಪರಿಹಾರ ದೊರಕಿದೆ. ಪತಂಜಲಿಯ ಸಂಸ್ಥೆ ಈ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಪತಂಜಲಿಯ ಆಯುರ್ವೇದ ಸಂಸ್ಥೆಯ ವೈದ್ಯರ ತಂಡವೊಂದು 6 ವಾರಗಳ ಕಾಲ ಅನೇಕ ರೋಗಿಗಳ ಮೇಲೆ ಸಂಶೋಧನೆ ನಡೆಸಿತು. ಸಂಶೋಧನೆಯ ಸಮಯದಲ್ಲಿ, ಅವರಿಗೆ ವಿವಿಧ ವಿಧಾನಗಳಿಂದ ಚಿಕಿತ್ಸೆ ನೀಡಲಾಯಿತು. ಈ ವೇಳೆ ಕೂದಲು ಉದುರುವುದು ನಿಂತಿದ್ದು ಮಾತ್ರವಲ್ಲದೆ ಹೊಸ ಕೂದಲು ಬೆಳೆಯಲು ಪ್ರಾರಂಭಿಸಿತು. ಈ ಸಂಶೋಧನೆಯನ್ನು ಪತಂಜಲಿ ಸಂಸ್ಥೆ ಪ್ರಕಟಿಸಿದೆ.
ಇಂದಿನ ಯುವ ಜನತೆಗೆ ಬಹುದೊಡ್ಡ ಸಮಸ್ಯೆಯೆಂದರೆ ಕೂದಲು ಉದುರುವುದು. ಅದಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿ ಬೇರೆ ಬೇರೆ ಚಿಕಿತ್ಸೆ ಪಡೆದರೂ ಅದರಿಂದ ಪ್ರಯೋಜನ ಸಿಗುತ್ತಿಲ್ಲ. ಬೋಳು ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪತಂಜಲಿಯವರು ಇದರ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿದರು. ಅಚ್ಚರಿಯ ಫಲಿತಾಂಶಗಳು ಹೊರಬಂದವು. ಸಂಶೋಧನೆಯ ನಂತರ, ಬೋಳು ಸಮಸ್ಯೆಗೆ ಶಾಶ್ವತ ಪರಿಹಾರವೂ ಕಂಡುಬಂದಿದೆ.
ಕೂದಲು ಉದುರುವ ಕಾಯಿಲೆಯಾದ ಅಲೋಪೆಸಿಯಾ ಅರೆಟಾದಿಂದ ಬಳಲುತ್ತಿರುವ ಕೆಲವು ರೋಗಿಗಳನ್ನು ಪತಂಜಲಿಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆಯುರ್ವೇದದ ತತ್ವಗಳ ಆಧಾರದ ಮೇಲೆ ನೋಡಿದಾಗ, ವಾತ ಮತ್ತು ಪಿತ್ತಗಳ ಕ್ಷೀಣತೆಯಿಂದ ಕೂದಲು ಉದುರುವಿಕೆ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಸಂಶೋಧನೆಯಲ್ಲಿ ಪರಿಗಣಿಸಲಾಗಿದೆ. ಇದಲ್ಲಿ ಶುದ್ಧೀಕರಣ, ನಿವಾರಣೆ ಮತ್ತು ಚಿಕಿತ್ಸೆಯನ್ನು ಒಳಗೊಂಡಿದೆ. 6 ವಾರಗಳಲ್ಲಿ, ಕೂದಲು ಉದುರುವುದು ನಿಂತಿದ್ದು ಮಾತ್ರವಲ್ಲದೆ, ಹೊಸ ಕೂದಲು ಬೆಳೆಯಲು ಪ್ರಾರಂಭಿಸಿತು.
ಈ ಸುದ್ದಿಯ್ನನೂ ಓದಿ: Baba Ramdev: ʼಶರಬತ್ ಜಿಹಾದ್ʼ ಹೇಳಿಕೆ ಆಘಾತ ತಂದಿದೆ; ಬಾಬಾ ರಾಮ್‌ದೇವ್‌ಗೆ ಚಾಟಿ ಬೀಸಿದ ದೆಹಲಿ ಹೈಕೋರ್ಟ್
ಅವರಿಗೆ ನಿಯಮಿತವಾಗಿ ಪಂಚಕರ್ಮ ವಿಧಾನದ ಮೂಲಕ ಶುದ್ಧೀಕರಣ ಚಿಕಿತ್ಸೆಯನ್ನು ನೀಡಲಾಯಿತು. ಇದಲ್ಲದೆ, ಬಾಯಿ ಮತ್ತು ಮೂಗಿನ ಮೂಲಕವೂ ಔಷಧಿಗಳನ್ನು ನೀಡಲಾಗುತ್ತಿತ್ತು. ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಲಾಯಿತು. ಅದರ ನಂತರ ರೋಗಿಗಳ ತಲೆ ಮತ್ತು ದೇಹದ ಇತರ ಭಾಗಗಳಲ್ಲಿ ಹೊಸ ಕೂದಲು ಬೆಳೆಯಲು ಪ್ರಾರಂಭಿಸಿತು. ವಾತ ಮತ್ತು ಪಿತ್ತವನ್ನು ನಿಯಂತ್ರಿಸುವ ಮೂಲಕ ಚಿಕಿತ್ಸೆಯನ್ನು ನೀಡಿದರೆ, ಕೂದಲು ಉದುರುವಿಕೆಯ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಹೊಸ ಕೂದಲು ಬೆಳೆಯಲು ಪ್ರಾರಂಭಿಸುತ್ತದೆ ಎಂದು ಸಂಶೋಧನೆಯು ಕಂಡುಹಿಡಿದಿದೆ.