ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತಮಿಳುನಾಡು ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಪಿಯೂಷ್ ಗೋಯಲ್ ನೇಮಕ

BJP's election incharge: ಅಸ್ಸಾಂನಲ್ಲಿ, ಪಾಂಡಾ ಅವರಿಗೆ ಸುನಿಲ್ ಕುಮಾರ್ ಶರ್ಮಾ ಮತ್ತು ದರ್ಶನ ಬೆನ್ ಜರ್ದೋಷ್ ಸಹಾಯ ಮಾಡಲಿದ್ದಾರೆ ಎಂದು ಅರುಣ್ ಸಿಂಗ್ ಹೇಳಿದರು. 2026ರಲ್ಲಿ ಅಸ್ಸಾಂ, ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಮಾರ್ಚ್ ಮತ್ತು ಮೇ ನಡುವೆ ವಿಧಾನಸಭಾ ಚುನಾವಣೆಗಳು ನಡೆಯಲಿವೆ.

ಅಸ್ಸಾಂ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಬೈಜಯಂತ್ ಪಾಂಡಾ ನೇಮಕ

ಪಿಯೂಷ್ ಗೋಯಲ್ -

Abhilash BC
Abhilash BC Dec 15, 2025 1:21 PM

ನವದೆಹಲಿ, ಡಿ.15: ಮುಂದಿನ ವರ್ಷ ನಡೆಯಲಿರುವ ನಿರ್ಣಾಯಕ ವಿಧಾನಸಭಾ ಚುನಾವಣೆಗೆ ಮುನ್ನ, ಬಿಜೆಪಿ ಸೋಮವಾರ ಉಸ್ತುವಾರಿಗಳ ನೇಮಕಾತಿಗಳ ಪಟ್ಟಿಯನ್ನು ಪ್ರಕಟಿಸಿದೆ. ಕೇಂದ್ರ ಸಚಿವರಾದ ಪಿಯೂಷ್ ಗೋಯಲ್(Piyush Goyal) ಮತ್ತು ಬೈಜಯನ್ ಪಾಂಡಾ(Baijayant Panda) ಅವರನ್ನು ಕ್ರಮವಾಗಿ ತಮಿಳುನಾಡು ಮತ್ತು ಅಸ್ಸಾಂನ ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಿಸಿದೆ.

"ತಮಿಳುನಾಡಿನಲ್ಲಿ ಮುಂಬರುವ ಚುನಾವಣೆಗಳಿಗೆ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಪಿಯೂಷ್ ಗೋಯಲ್ ಅವರನ್ನು ನೇಮಕ ಮಾಡಲಾಗಿದೆ. ಅರ್ಜುನ್ ರಾಮ್ ಮೇಘವಾಲ್ ಮತ್ತು ಮುರಳೀಧರ್ ಮೊಹೋಲ್ ಅವರನ್ನು ಸಹ-ಪ್ರಭಾರಿಗಳಾಗಿ ನೇಮಿಸಲಾಗಿದೆ" ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಘೋಷಿಸಿದರು.

ಏತನ್ಮಧ್ಯೆ, ಅಸ್ಸಾಂನಲ್ಲಿ, ಪಾಂಡಾ ಅವರಿಗೆ ಸುನಿಲ್ ಕುಮಾರ್ ಶರ್ಮಾ ಮತ್ತು ದರ್ಶನ ಬೆನ್ ಜರ್ದೋಷ್ ಸಹಾಯ ಮಾಡಲಿದ್ದಾರೆ ಎಂದು ಅರುಣ್ ಸಿಂಗ್ ಹೇಳಿದರು. 2026ರಲ್ಲಿ ಅಸ್ಸಾಂ, ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಮಾರ್ಚ್ ಮತ್ತು ಮೇ ನಡುವೆ ವಿಧಾನಸಭಾ ಚುನಾವಣೆಗಳು ನಡೆಯಲಿವೆ.

ಇದನ್ನೂ ಓದಿ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ; 3 ದಿನ 3 ದೇಶಗಳಿಗೆ ಭೇಟಿ ನೀಡಲಿರುವ ಪಿಎಂ

ಮೋದಿ ತಮಿಳುನಾಡು ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ಅವರು ಜ.13-15ರವರೆಗೆ ತಮಿಳುನಾಡಿನ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿನ ರೈತರೊಂದಿಗೆ ಪೊಂಗಲ್‌ ಹಬ್ಬವನ್ನು ಆಚರಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ತಮಿಳುನಾಡು ಭೇಟಿ ವೇಳೆ ಅವರು ರಾಮೇಶ್ವರದಲ್ಲಿ ನಡೆಯಲಿರುವ ಕಾಶಿ ತಮಿಳ್‌ ಸಂಗಮಂ 4.0 ಸಮಾರೋಪದಲ್ಲಿ ಹಾಗೂ ಇತರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ರೈತರ ಜತೆ ಪೊಂಗಲ್‌ ಆಚರಿಸಲಿದ್ದಾರೆ ಎಂದು ಹೇಳಲಾಗಿದೆ.

ತಮಿಳುನಾಡಿನಲ್ಲಿ ಪ್ರಧಾನಿ ಭೇಟಿಯು ಬಹುಮುಖ್ಯ ಪಾತ್ರ ವಹಿಸಲಿದೆ. ಭೇಟಿ ವೇಳೆ ಅವರು ಹಲವು ರಾಜ್ಯ ನಾಯಕರೊಂದಿಗೆ ಬಿಜೆಪಿ ಜತೆ ಮೈತ್ರಿ ಕುರಿತು ಚರ್ಚೆ ನಡೆಸಬಹುದು . ತಮಿಳುನಾಡಿನ ಗ್ರಾಮೀಣ ಮತ್ತು ರೈತಾಪಿ ವರ್ಗದ ಮತ ಸೆಳೆಯಲೂ ಮುಂದಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.