#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಪ್ರಧಾನ ಮಂತ್ರಿ ಡಿಜಿಟಲ್ ಆರೋಗ್ಯ ಮಿಷನ್ (ಪಿಎಂ-ಡಿಎಚ್‌ಎಂ) ಗೆ ನಾಳೆ ಚಾಲನೆ

ಪ್ರಧಾನ ಮಂತ್ರಿ ಡಿಜಿಟಲ್ ಆರೋಗ್ಯ ಮಿಷನ್ (ಪಿಎಂ-ಡಿಎಚ್‌ಎಂ) ಗೆ ನಾಳೆ ಚಾಲನೆ

ಪ್ರಧಾನ ಮಂತ್ರಿ ಡಿಜಿಟಲ್ ಆರೋಗ್ಯ ಮಿಷನ್ (ಪಿಎಂ-ಡಿಎಚ್‌ಎಂ) ಗೆ ನಾಳೆ ಚಾಲನೆ

Profile Vishwavani News Sep 26, 2021 7:15 PM
image-79dc47db-237e-478f-9a8d-a04f8442c6f3.jpg
image-a339a447-a634-400c-9b45-4764e7e25cbd.jpg
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸೆ.27ರಂದು (ಸೋಮವಾರ) ಬೆಳಿಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಮಂತ್ರಿ ಡಿಜಿಟಲ್ ಆರೋಗ್ಯ ಮಿಷನ್ (ಪಿಎಂ-ಡಿಎಚ್‌ಎಂ) ಗೆ ಚಾಲನೆ ನೀಡಲಿದ್ದಾರೆ. 2020ರ ಆಗಸ್ಟ್ 15ರಂದು ಕೆಂಪು ಕೋಟೆಯ ಪ್ರಾಂಗಣದಿಂದ ಪ್ರಧಾನಮಂತ್ರಿ ಅವರು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಯೋಜನೆಯ ಪ್ರಾಯೋಗಿಕ ಯೋಜನೆ ಪ್ರಕಟಿಸಿದ್ದರು. ಸದ್ಯ ಯೋಜನೆಯನ್ನು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸ ಲಾಗುತ್ತಿದೆ. ಇದರ ಅಡಿ ಪ್ರತಿಯೊಬ್ಬ ಭಾರತೀಯ ನಿಗೂ ಆರೋಗ್ಯ ಗುರುತಿನ ಚೀಟಿ ನೀಡಲಾಗು ತ್ತದೆ. ದೇಶದಾದ್ಯಂತ ಆರೋಗ್ಯ ದಾಖಲೆಗಳು, ವೈದ್ಯರು ಮತ್ತು ಆರೋಗ್ಯ ಸೇವೆಗಳ ನೋಂದಣಿ ಡಿಜಿಟಲೀ ಕರಣ ಮಾಡಲಾಗುತ್ತದೆ. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಎಬಿ ಪಿಎಂ-ಜೆಎವೈ)ನ ಮೂರನೇ ವಾರ್ಷಿಕೋತ್ಸವದೊಂದಿಗೆ ಪಿಎಂ-ಡಿಎಚ್‌ಎಂ ದೇಶಾದ್ಯಂತ ಜಾರಿಗೊಳಿಸುವುದಕ್ಕೆ ಚಾಲನೆ ನೀಡಲಾಗುತ್ತಿದೆ. ಪಿಎಂ-ಡಿಎಚ್‌ಎಂ ವ್ಯಾಪಕ ಶ್ರೇಣಿಯ ದತ್ತಾಂಶ ಮತ್ತು ಮಾಹಿತಿ ಒದಗಿಸುವ ಮೂಲಕ ತಡೆರಹಿತ ಆನ್ ಲೈನ್ ವೇದಿಕೆಯನ್ನು ಒದಗಿಸಲಿದೆ. ಮಿಷನ್‌ನ ಒಂದು ಭಾಗವಾಗಿ ರಚಿಸಲಾಗಿರುವ ಪಿಎಂ-ಡಿಎಚ್‌ಎಂ ಸ್ಯಾಂಡ್ ಬಾಕ್ಸ್, ತಂತ್ರಜ್ಞಾನ ಮತ್ತು ಉತ್ಪನ್ನ ಪರೀಕ್ಷೆಯ ಚೌಕಟ್ಟಾಗಿ ಕಾರ್ಯನಿರ್ವಹಿಸಲಿದೆ. ಆಯುಷ್ಮಾನ್ ಭಾರತದ ಅನುಷ್ಠಾನ ಸಂಸ್ಥೆ ಎನ್‌ಎಚ್‌ಎ, ಇದಕ್ಕೆ ಪ್ಲಾಟ್‌ಫಾರ್ಮ್ ಸ್ಥಾಪನೆ ಮಾಡಿದೆ. ಆಪ್ ಮತ್ತು ವೆಬ್‌ಸೈಟ್ ಎರಡೂ ಮೂಲಗಳಲ್ಲಿ ಇದು ಲಭ್ಯವಿದೆ. ಈ ಪ್ರಸ್ತಾವಕ್ಕೆ ಹಣಕಾಸು ಸಚಿವಾಲಯ 470 ಕೋಟಿ ರೂ.ಗಳ ಬಜೆಟ್‌ಗೆ ಅನುಮೋದನೆ ನೀಡಿದೆ.