ನವದೆಹಲಿ: ದಕ್ಷಿಣ ಅಮೆರಿಕದ ನಾಯಕ (South American leader), ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ (Brazilian President Luiz Inacio Lula da Silva) ಅವರನ್ನು ಗುರವಾರ ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಶೀಘ್ರದಲ್ಲೇ ಅವರನ್ನು ಭಾರತದಲ್ಲಿ ಸ್ವಾಗತಿಸಲು ಎದುರು ನೋಡುತ್ತಿರುವುದಾಗಿ ಹೇಳಿದರು. ಜಾಗತಿಕ ಹಿತಾಸಕ್ತಿಗಳನ್ನು ಮುನ್ನಡೆಸಲು ಭಾರತ ಮತ್ತು ಬ್ರೆಜಿಲ್ ನಡುವಿನ ನಿಕಟ ಸಹಕಾರಕ್ಕೆ ಇದು ನಿರ್ಣಾಯಕವಾಗಿದೆ ಎಂದು ಪ್ರಧಾನಿ ಮೋದಿ (PM Modi) ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಬ್ರೆಜಿಲ್ ಅಧ್ಯಕ್ಷರ ಪ್ರವಾಸದ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ವಿದೇಶಾಂಗ ಸಚಿವಾಲಯ (Ministry of External Affairs) ತಿಳಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಂಕ ಬೆದರಿಕೆ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ. ಇದು ಭಾರತ ಮತ್ತು ಅಮೆರಿಕ ನಡುವಿನ ಮುಂದಿನ ರಾಜತಾಂತ್ರಿಕ ನಡೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಬ್ರೆಜಿಲ್ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಅಹ್ವಾನ ಕೊಟ್ಟಿರುವುದು ಭಾರತ ಮತ್ತು ಬ್ರೆಜಿಲ್ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಪ್ರಗತಿಯನ್ನು ತೋರಿಸುತ್ತದೆ.
ಶುಭಮನ್ ಗಿಲ್ ಕಿತ್ತಾಕಿ, ಭಾರತ ಏಕದಿನ ತಂಡದ ನಾಯಕತ್ವ ರೋಹಿತ್ ಶರ್ಮಾಗೆ ನೀಡಿ ಎಂದ ಮನೋಜ್ ತಿವಾರಿ!
ಈ ಕುರಿತು ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಪ್ರಧಾನಿ ಮೋದಿ, ಬ್ರೆಜಿಲ್ ಅಧ್ಯಕ್ಷ ಲೂಲಾ ಅವರೊಂದಿಗೆ ಮಾತನಾಡಿ ಸಂತೋಷವಾಗಿದೆ. ಭಾರತ-ಬ್ರೆಜಿಲ್ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ನಾವು ಮುಂದಿನ ವರ್ಷ ಹೊಸ ಎತ್ತರವನ್ನು ತಲುಪುವ ನಿರೀಕ್ಷೆ ಇದೆ. ಜಾಗತಿಕವಾಗಿ ದಕ್ಷಿಣದ ಹಂಚಿಕೆಯ ಹಿತಾಸಕ್ತಿಗಳ ಮುನ್ನಡೆಗೆ ನಮ್ಮ ನಿಕಟ ಸಹಕಾರ ಅತ್ಯಗತ್ಯ. ಬ್ರೆಜಿಲ್ ಅಧ್ಯಕ್ಷರನ್ನು ಶೀಘ್ರದಲ್ಲೇ ಭಾರತಕ್ಕೆ ಸ್ವಾಗತಿಸಲು ನಾನು ಎದುರು ನೋಡುತ್ತಿದ್ದೇನೆ ಎಂದರು.
ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರಧಾನಿ ಮೋದಿ ಅವರು ಬ್ರೆಜಿಲ್ ಅಧ್ಯಕ್ಷರನ್ನು ಭೇಟಿ ಮಾಡಿದ್ದರು. ಇತ್ತೀಚೆಗೆ ಈ ಇಬ್ಬರು ನಾಯಕರು ನಡೆಸಿದ ಮಾತುಕತೆಯಲ್ಲಿ ಜಾಗತಿಕ ಬೆಳವಣಿಗೆಗಳ ಕುರಿತು ವಿಸ್ತೃತ ಚರ್ಚೆ ನಡೆಸಿದ್ದು, ಅಧ್ಯಕ್ಷ ಲೂಲಾ ಅವರು ಅಮೆರಿಕ ವಿಧಿಸಿದ ಹೊಸ ಸುಂಕಗಳ ವಿಷಯವನ್ನು ಕೂಡ ಎತ್ತಿದ್ದರು.
ರಾಹುಲ್ ಗಾಂಧಿ ವಿರುದ್ಧ ಶಶಿ ತರೂರ್ ಅಸಮಾಧಾನ! ಕಾಂಗ್ರೆಸ್‌ನ ಮಹತ್ವದ ಸಭೆಗೆ ಗೈರು
ಈ ಕುರಿತು ಪ್ರತಿಕ್ರಿಯಿಸಿದ್ದ ಬ್ರೆಜಿಲ್ ಅಧ್ಯಕ್ಷ ಲೂಲಾ ಅವರು ವ್ಯಾಪಾರ ಕ್ರಮಗಳ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡೂ ದೇಶಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿದ್ದು, ಏಕಪಕ್ಷೀಯ ಸುಂಕಗಳ ಹೇರಿಕೆ ಬಗ್ಗೆ ತಾವು ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸಿದ್ದು, ಟ್ರಂಪ್ ಅವರು ಬಹುಪಕ್ಷೀಯತೆಯನ್ನು ಕೆಡವಲು ಬಯಸುತ್ತಾರೆ ಎಂದು ಹೇಳಿದ್ದರು.
ಆದರೂ ಇದರ ಬಳಿಕ ಕಳೆದ ನವೆಂಬರ್‌ನಲ್ಲಿ, ಟ್ರಂಪ್ ಕೆಲವು ಬ್ರೆಜಿಲ್ ಆಹಾರ ಉತ್ಪನ್ನಗಳ ಮೇಲೆ ವಿಧಿಸಿದ್ದ ಶೇ. 40ರಷ್ಟು ಸುಂಕಗಳನ್ನು ತೆಗೆದುಹಾಕಿದ್ದರು.