Global Leader Approval Rating: ಜನಪ್ರಿಯ ಜಾಗತಿಕ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ ಅಗ್ರ ಸ್ಥಾನ; ಟ್ರಂಪ್‌ಗೆ ಎಷ್ಟನೇ ರ‍್ಯಾಂಕ್?
Morning Consult: ಅಮೆರಿಕ ಮೂಲದ ಮಾರ್ನಿಂಗ್ ಕನ್ಸಲ್ಟ್‌ನ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್ ನಡೆಸಿದ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯು ನವೆಂಬರ್ 6ರಿಂದ 12ರವರೆಗೆ ಸಂಗ್ರಹಿಸಿದ ಡೇಟಾವನ್ನು ಆಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ದೆಹಲಿ, ನ. 19: ಅಮೆರಿಕ ಮೂಲದ ಮಾರ್ನಿಂಗ್ ಕನ್ಸಲ್ಟ್ (Morning Consult)ನ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್ ನಡೆಸಿದ ನವೆಂಬರ್‌ನ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ (Global Leader Approval Rating). ಅವರು ಶೇ. 71ರಷ್ಟು ರೇಟಿಂಗ್ ಪಡೆದುಕೊಂಡಿದ್ದಾರೆ. ಈ ಪಟ್ಟಿಯು ನವೆಂಬರ್ 6ರಿಂದ 12ರವರೆಗೆ ಸಂಗ್ರಹಿಸಿದ ಡೇಟಾವನ್ನು ಆಧರಿಸಿದೆ. ಶೇ. 71ರಷ್ಟು ಜನರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಅನುಮೋದಿಸಿದರೆ, ಶೇ. 22ರಷ್ಟು ಜನರು ಅವರನ್ನು ಒಪ್ಪುವುದಿಲ್ಲ ಎಂದಿದ್ದಾರೆ. ಶೇ. 7ರಷ್ಟು ಮಂದಿ ಯಾವುದೇ ಅಭಿಪ್ರಾಯ ನೀಡಿಲ್ಲ.
ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇ. 63ರಷ್ಟು ಮಂದಿಯ ಅನುಮೋದನೆ ಪಡೆದ ಜಪಾನ್ ಪ್ರಧಾನಿ ಸನೇ ತಕೈಚಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇನ್ನು ಕ್ಷಿಣ ಕೊರಿಯಾದ ಲೀ ಜೇ ಮ್ಯುಂಗ್ ಶೇ. 58ರಷ್ಟು ರೇಟಿಂಗ್‌ನೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ 4ನೇ ಸ್ಥಾನದಲ್ಲಿದ್ದರೆ, ಅರ್ಜೆಂಟೀನಾದ ಜೇವಿಯರ್ ಮಿಲೀ 5ನೇ ಸ್ಥಾನದಲ್ಲಿದ್ದಾರೆ.
ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್ ವರದಿ:
Impressive approval ratings by Sanae Takaichi in the latest Global leader approval tracker by Morning Consult. Modi still has the highest approval numbers. Macron is at the bottom. pic.twitter.com/ruABIchqZp
— DeusXMachina (@DeusXMachina14) November 15, 2025
ಇನ್ನು ಪಟ್ಟಿಯಲ್ಲಿ ಕೆನಡಾದ ಮಾರ್ಕ್ ಕ್ಯಾರ್ನಿ 6 ಮತ್ತು ಸ್ವಿಟ್ಜರ್‌ಲ್ಯಾಂಡ್‌ನ ಕರಿನ್ ಕೆಲ್ಲರ್-ಸುಟರ್ 7ನೇ ರ‍್ಯಾಂಕ್ ಪಡೆದಿದ್ದಾರೆ. 8ನೇ ಸ್ಥಾನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದ್ದಾರೆ. 9 ಮತ್ತು 10ನೇ ಸ್ಥಾನದಲ್ಲಿ ಮೆಕ್ಸಿಕೊದ ಕ್ಲೌಡಿಯಾ ಶೀನ್‌ಬಾಮ್ ಹಾಗೂ ಬ್ರೆಜಿಲ್‌ನ ಲುಲಾ ಡಾ ಸಿಲ್ವಾ ಇದ್ದಾರೆ.
ಮಾರ್ನಿಂಗ್ ಕನ್ಸಲ್ಟ್ ರಾಜಕೀಯ ಚುನಾವಣೆಗಳು, ಚುನಾಯಿತ ಅಧಿಕಾರಿಗಳು ಮತ್ತು ಮತದಾನದ ಸಮಸ್ಯೆಗಳ ಕುರಿತು ರಿಯಲ್ ಟೈಂ ಮತದಾನದ ಡೇಟಾವನ್ನು ಒದಗಿಸುತ್ತದೆ. ಮಾರ್ನಿಂಗ್ ಕನ್ಸಲ್ಟ್ ಪ್ರತಿದಿನ 20,000ಕ್ಕೂ ಹೆಚ್ಚು ಜಾಗತಿಕ ಸಂದರ್ಶನಗಳನ್ನು ನಡೆಸುತ್ತದೆ. ಈ ಎಲ್ಲ ಸಂದರ್ಶನಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ ಎನ್ನುವುದು ವಿಶೇಷ. ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶಗಳಲ್ಲಿ ಮಾರ್ನಿಂಗ್ ಕನ್ಸಲ್ಟ್ ನಡೆಸುವ ಸಮೀಕ್ಷೆ ಇದಾಗಿದೆ.
ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್‌ನ ಟಾಪ್ ನಾಯಕರು
- ನರೇಂದ್ರ ಮೋದಿ (ಭಾರತ)
- ಸನೇ ತಕೈಚಿ (ಜಪಾನ್)
- ಲೀ ಜೇ-ಮ್ಯುಂಗ್ (ದಕ್ಷಿಣ ಕೊರಿಯಾ)
- ಆಂಥೋನಿ ಅಲ್ಬನೀಸ್ (ಆಸ್ಟ್ರೇಲಿಯಾ)
- ಜೇವಿಯರ್ ಮಿಲೀ (ಅರ್ಜೆಂಟೀನಾ)
- ಮಾರ್ಕ್ ಕಾರ್ನಿ (ಕೆನಡಾ)
- ಕರಿನ್ ಕೆಲ್ಲರ್-ಸುಟರ್ (ಸ್ವಿಟ್ಜರ್‌ಲ್ಯಾಂಡ್)
- ಡೊನಾಲ್ಡ್ ಟ್ರಂಪ್ (ಯುಎಸ್)
- ಕ್ಲೌಡಿಯಾ ಶೀನ್‌ಬಾಮ್ (ಮೆಕ್ಸಿಕೊ)
- ಲುಲಾ ಡಾ ಸಿಲ್ವಾ (ಬ್ರೆಜಿಲ್)
Narendra Modi: ಪ್ರಧಾನಿ ಮೋದಿ ವಿಶ್ವದ ಅತ್ಯಂತ ವಿಶ್ವಾಸಾರ್ಹ ನಾಯಕ; ಜಾಗತಿಕ ಅನುಮೋದನೆಯಲ್ಲಿ ಶೇ. 75 ರಷ್ಟು ಬೆಂಬಲ
ಹಿಂದೆಯೂ ಅಗ್ರ ಸ್ಥಾನದಲ್ಲಿ ಮುಂದುವರಿದ ಮೋದಿ
ವಿಶೇಷ ಎಂದರೆ 2021ರ ಸೆಪ್ಟಂಬರ್‌ನಿಂದ ಮಾರ್ನಿಂಗ್ ಕನ್ಸಲ್ಟ್ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ‍್ಯಾಕರ್‌ನಲ್ಲಿ ಮೋದಿ ಅಗ್ರ ಸ್ಥಾನದಲ್ಲಿದ್ದಾರೆ. 2021ರಲ್ಲಿ ಮೋದಿ ಶೇ. 70ರಷ್ಟು ರೇಟಿಂಗ್ ಪಡೆದಿದ್ದರು. 2024ರ ಸಮೀಕ್ಷೆಯಲ್ಲಿ ಮೋದಿ ಅಪ್ರೂವಲ್ ರೇಟಿಂಗ್ ಶೇ. 78ಕ್ಕೆ ತಲುಪಿತ್ತು.