ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಭೇಟಿಯಾದ ವಿಶ್ವಕಪ್ ವಿಜೇತ ಭಾರತ ವನಿತೆಯರು!
ಮಹಿಳಾ ಏಕದಿನ ವಿಶ್ವಕಪ್ ಗೆದ್ದ ನಂತರ ಭಾರತ ಮಹಿಳಾ ಕ್ರಿಕೆಟ್ ತಂಡ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಯಿತು. ಕ್ರಿಕೆಟ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಭಾರತ ಮಹಿಳಾ ತಂಡ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಭಾರತ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು.
ಪ್ರಧಾನಿ ಮೋದಿಯನ್ನು ಭೇಟಿಯಾದ ಭಾರತ ಮಹಿಳಾ ಕ್ರಿಕೆಟ್ ತಂಡ! -
ನವದೆಹಲಿ: ಮಹಿಳಾ ವಿಶ್ವಕಪ್ (Women's World Cup 2025) ವಿಜೇತ ಭಾರತೀಯ ಕ್ರಿಕೆಟ್ ತಂಡ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ಭೇಟಿ ಮಾಡಿತು. ಇಲ್ಲಿನ 7 ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಈ ಭೇಟಿ ನಡೆಯಿತು. ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಮತ್ತು ಅವರ ತಂಡದ ಸದಸ್ಯರು ತಮ್ಮ ಐತಿಹಾಸಿಕ ವಿಜಯವನ್ನು ಆಚರಿಸಲು ಪ್ರಧಾನಿಯನ್ನು ಭೇಟಿಯಾದರು. ಎರಡು ದಿನಗಳ ಹಿಂದೆ ಈ ಸಭೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಧಾನ ಮಂತ್ರಿ ಕಚೇರಿಯಿಂದ (ಪಿಎಂಒ) ಔಪಚಾರಿಕ ಆಹ್ವಾನವನ್ನು ಸ್ವೀಕರಿಸಿತ್ತು.
ಈ ಐತಿಹಾಸಿಕ ಗೆಲುವು ಭಾನುವಾರ ನವ ಮುಂಬೈನಲ್ಲಿ ನಡೆದಿತ್ತು. ಇಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ, ದಕ್ಷಿಣ ಆಫ್ರಿಕಾವನ್ನು ಫೈನಲ್‌ನಲ್ಲಿ ಸೋಲಿಸಿ ಮೊದಲ ಬಾರಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದಿತು. ಡಾ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಹರ್ಮನ್‌ಪ್ರೀತ್ ಕೌರ್ ಬಳಗ ಈ ಅಭೂತಪೂರ್ವ ಗೌರವವನ್ನು ಗಳಿಸಿತ್ತು.
ಪ್ರಧಾನಿಯವರನ್ನು ಭೇಟಿ ಮಾಡಲು ಪ್ರತೀಕಾ ರಾವಲ್ ವೀಲ್‌ಚೇರ್‌ನಲ್ಲಿ ಬಂದರು. ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದ ತಂಡದ ಆಟಗಾರರು ಪ್ರಧಾನಿಯವರನ್ನು ಭೇಟಿಯಾದರು. ಗಮನಾರ್ಹವಾಗಿ, ಆಟಗಾರ್ತಿ ಪ್ರತೀಕಾ ರಾವಲ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಮೊಣಕಾಲಿನ ಗಾಯಗಳಿಂದಾಗಿ ಸೆಮಿಫೈನಲ್‌ಗೂ ಮುನ್ನ ಪ್ರತೀಕಾ ಟೂರ್ನಿಯಿಂದ ಹೊರ ನಡೆದಿದ್ದರು. ಆದರೂ ಪ್ರಧಾನಿಯವರನ್ನು ಭೇಟಿ ಮಾಡಲು ಅವರು ವೀಲ್‌ಚೇರ್‌ನಲ್ಲಿ ಬಂದರು.
Nigar Sultana: ಕಿರಿಯ ಆಟಗಾರ್ತಿಗೆ ದೈಹಿಕ ಕಿರುಕುಳ: ಬಾಂಗ್ಲಾದೇಶ ಮಹಿಳಾ ತಂಡದ ನಾಯಕಿ ಮೇಲೆ ಗಂಭೀರ ಆರೋಪ!
ಇದು ಭಾರತದ ಮೊದಲ ಮಹಿಳಾ ವಿಶ್ವಕಪ್ ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ ಭಾರತ ತಂಡ ನಾಲ್ಕು ಬಾರಿ ಫೈನಲ್ ತಲುಪಿತ್ತು ಆದರೆ ಗೆಲ್ಲಲು ಸಾಧ್ಯವಾಗಿರಲಿಲ್ಲ. 2005 ಮತ್ತು 2017 ರ ಏಕದಿನ ವಿಶ್ವಕಪ್ ಫೈನಲ್‌ಗಳಲ್ಲಿ ಕ್ರಮವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು. 2020ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿತ್ತು. ಈ ಗೆಲುವು ಈ ಹಿಂದಿನ ಎಲ್ಲಾ ಸೋಲುಗಳಿಗಿಂತ ಪ್ರಮುಖ ಜಯವಾಗಿದೆ.
Prime Minister Narendra Modi today hosted the champions of the Women’s World Cup at his residence at Lok Kalyan Marg.
— ANI (@ANI) November 5, 2025
PM congratulated the team for the victory and praised their remarkable comeback in the tournament after a string of three defeats and the trolling they had… pic.twitter.com/5TYxNMEafK
ವಿಶ್ವಕಪ್ ವಿಜೇತ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಪ್ರಧಾನ ಮಂತ್ರಿ ಪ್ರಧಾನ ಮಂತ್ರಿ ಅವರ ಜತೆಗೆ ಫೋಟೋಗೆ ಪೋಸ್ ನೀಡಿತು. ಈ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಭಾರತ ತಂಡದ ʻನಮೋʼ ಹೆಸರಿನ ಜೆರ್ಸಿಯನ್ನು ನೀಡಲಾಯಿತು. ಈ ಜೆರ್ಸಿಯಲ್ಲಿ ತಂಡದ ಆಟಗಾರ್ತಿಯರ ಸಹಿ ಇದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆಟಗಾರ್ತಿಯರು ಔಪಚಾರಿಕ ಉಡುಪುಗಳನ್ನು ಧರಿಸಿದ್ದರು. ಈ ಸಭೆಯು ಭಾರತೀಯ ಮಹಿಳಾ ಕ್ರಿಕೆಟ್‌ಗೆ ಮಹತ್ವದ ಕ್ಷಣವಾಗಿದ್ದು, ಇದು ದೇಶಾದ್ಯಂತದ ಯುವತಿಯರಿಗೆ ಸ್ಫೂರ್ತಿ ನೀಡುತ್ತದೆ.