ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪ್ರಧಾನಿ ದೇಶವನ್ನೇ ಮಾರಿದ್ದಾರೆ: ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಆರೋಪ

Rahul Gandhi’s allegation: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಮೆರಿಕ–ಭಾರತ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ಆರೋಪ ಹೊರಿಸಿದ್ದಾರೆ. ಪ್ರಧಾನಿ ಮೋದಿ ರಾಜಿ ಮಾಡಿಕೊಂಡಿದ್ದಾರೆ ಮತ್ತು ದೇಶವನ್ನು ಮಾರಾಟ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)

ನವದೆಹಲಿ, ಫೆ. 3: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಫೋಟಕ ಆರೋಪ ಹೊರಿಸಿದ್ದಾರೆ (Rahul Gandhi’s allegation). ಅಮೆರಿಕ ವ್ಯಾಪಾರ ಒಪ್ಪಂದದ (Indo-US trade deal) ಬಗ್ಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ (PM Modi) ರಾಜಿ ಮಾಡಿಕೊಂಡಿದ್ದಾರೆ, ದೇಶವನ್ನೇ ಮಾರಿದ್ದಾರೆ ಎಂದು ಹೇಳಿದ್ದಾರೆ. ಚೀನಾ ಉಲ್ಲೇಖ ಹಾಗೂ ಮಾಜಿ ಸೇನಾ ಮುಖ್ಯಸ್ಥ ನರವಣೆ ಅವರ ಪುಸ್ತಕಕ್ಕೆ ಸಂಬಂಧಿಸಿದ ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ತಮ್ಮ ಮಾತುಗಳಿಗೆ ಅವಕಾಶ ಸಿಗದೆ ಹೋದ ನಂತರ, ಅವರು ಸಂಸತ್ತಿನ ಹೊರಗೆ ಮಾತನಾಡಿದರು.

ಒತ್ತಡದ ಮಧ್ಯೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದೀಗ ಪ್ರಧಾನಿ ಮೋದಿ ಅಸ್ಥಿರರಾಗಿದ್ದಾರೆ ಎನ್ನುವುದಕ್ಕೆ ಸಾಕ್ಷಿ. ಇದೀಗ ತಮ್ಮ ಪ್ರತಿಷ್ಠೆಗೆ ಧಕ್ಕೆ ಆಗುವ ಭಯದಿಂದ ಪ್ರಧಾನಿ ಆತಂಕದಲ್ಲಿದ್ದಾರೆ ಎಂದು ಅವರು ಆರೋಪಿಸಿದರು. ಮೋದಿ ದಿಗ್ಭ್ರಮೆಗೊಂಡಿದ್ದಾರೆ. ಕಳೆದ ಕೆಲವು ತಿಂಗಳಿಂದ ಸ್ಥಗಿತಗೊಂಡಿದ್ದ (ಅಮೆರಿಕ-ಭಾರತ) ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. ಮೋದಿ ಮೇಲೆ ತೀವ್ರ ಒತ್ತಡವಿದೆ. ಇದು ನರೇಂದ್ರ ಮೋದಿ ಅವರ ಇಮೇಜ್‌ಗೆ ಧಕ್ಕೆ ಉಂಟಾಗಬಹುದು ಎಂದು ರಾಹುಲ್ ಗಾಂಧಿ ಹೇಳಿದರು.

ಕದನ ವಿರಾಮದಂತೆ ಅಮೆರಿಕ- ಭಾರತ ವ್ಯಾಪಾರ ಒಪ್ಪಂದದ ಘೋಷಣೆ: ಮೋದಿ ವಿರುದ್ಧ ಕಾಂಗ್ರೆಸ್ ಟೀಕೆ

ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ವೇಳೆ ಸತತ ಎರಡನೇ ದಿನವೂ ಚೀನಾ ವಿಷಯವನ್ನು ಪದೇ ಪದೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡದ ಕಾರಣ ಆಕ್ರೋಶಗೊಂಡರು. ಭಾರತ-ಚೀನಾ ಸಂಬಂಧಗಳ ಕುರಿತಾದ ಲೇಖನವನ್ನು ಉಲ್ಲೇಖಿಸಿದ್ದಕ್ಕಾಗಿ ಹಿಂದಿನ ತೀರ್ಪು ಮತ್ತು ನಿಯಮಗಳ ಉಲ್ಲಂಘನೆ ಎಂದು ಹೇಳಿ ರಾಹುಲ್ ಗಾಂಧಿ ಅವರ ಭಾಷಣವನ್ನು ಸಭಾಧ್ಯಕ್ಷರು ತಡೆದರು.

ಮುಖ್ಯ ವಿಷಯವೆಂದರೆ ನಮ್ಮ ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ಇದರ ಬಗ್ಗೆ ಯೋಚಿಸಬೇಕು. ನರೇಂದ್ರ ಮೋದಿ ಈ ವ್ಯಾಪಾರ ಒಪ್ಪಂದದಲ್ಲಿ ನಿಮ್ಮ ಕಠಿಣ ಪರಿಶ್ರಮವನ್ನು ಮಾರಿದ್ದಾರೆ. ಏಕೆಂದರೆ ಅವರು ರಾಜಿ ಮಾಡಿಕೊಂಡಿದ್ದಾರೆ. ಅವರು ದೇಶವನ್ನೇ ಮಾರಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಹೆಚ್ಚಿನ ಸುಂಕ, ಬೆದರಿಕೆ, ಒಪ್ಪಂದ; ಅಮೆರಿಕ-ಭಾರತ ವ್ಯಾಪಾರ ಡೀಲ್‌ ಸಾಗಿ ಬಂದ ಉದ್ವಿಗ್ನತೆಯ ಹಾದಿ

ನರೇಂದ್ರ ಮೋದಿ ಭಯಭೀತರಾಗಿದ್ದಾರೆ. ಏಕೆಂದರೆ ಅವರ ಪ್ರತಿಷ್ಠೆಯನ್ನು ರೂಪಿಸಿದವರೇ ಈಗ ಅದಕ್ಕೆ ಧಕ್ಕೆ ತರುತ್ತಿದ್ದಾರೆ. ಅಮೆರಿಕದಲ್ಲಿ ಅದಾನಿ ಅವರ ಮೇಲೆ ಒಂದು ಪ್ರಕರಣವಿದೆ. ಅದು ವಾಸ್ತವವಾಗಿ ಮೋದಿ ಮೇಲಿರುವ ಪ್ರಕರಣವಾಗಿದೆ. ಎಪ್ಸ್ಟೈನ್ ಫೈಲ್ಸ್‌ಗಳಲ್ಲಿ ಅಮೆರಿಕ ಇನ್ನೂ ಬಹಿರಂಗಪಡಿಸದ ಅನೇಕ ಮಾಹಿತಿಗಳು ಅದರಲ್ಲಿವೆ. ಇವುಗಳೇ ಎರಡು ಪ್ರಮುಖ ಒತ್ತಡದ ಅಂಶಗಳು. ದೇಶವು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಗಾಂಧಿ ಹೇಳಿದರು.

ಜನವರಿ 31ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ವಿದೇಶಾಂಗ ಸಚಿವಾಲಯದ ವಕ್ತಾರರು, ಎಪ್ಸ್ಟೈನ್ ಫೈಲ್‌ಗಳಿಗೆ ಸಂಬಂಧಿಸಿದೆ ಎಂದು ಹೇಳಲಾದ ಇಮೇಲ್ ಸಂದೇಶವು ಪ್ರಧಾನ ಮಂತ್ರಿ ಅವರ ಇಸ್ರೇಲ್ ಭೇಟಿಯನ್ನು ಉಲ್ಲೇಖಿಸಿರುವುದನ್ನು ಸರ್ಕಾರ ಗಮನಿಸಿದೆ ಎಂದು ಹೇಳಿದರು.