ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

PSLC-C62: ಇಸ್ರೋದ PSLV-C62 ಮಿಷನ್‌ಗೆ ಹಿನ್ನಡೆ; ಕಕ್ಷೆ ತಲುಪುವ ಮೊದಲೇ ಪಿಎಸ್ಎಲ್ ವಿ -ಸಿ62 ವಿಫಲ

ಹೊಸ ವರ್ಷದ ಆರಂಭದಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ಭಾರಿ ಹಿನ್ನಡೆಯಾಗಿದೆ. ಸೋಮವಾರ ಉಡಾವಣೆಯಾದ ಕೆಲವೇ ನಿಮಿಷಗಳ ಬಳಿಕ ಪಿಎಸ್ಎಲ್ ವಿ -ಸಿ62 ತೊಂದರೆಗೆ ಸಿಲುಕಿದ್ದು, ಕಕ್ಷೆ ಸೇರುವಲ್ಲಿ ವಿಫಲವಾಗಿದೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಸಂಗ್ರಹ ಚಿತ್ರ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation) ಕಳೆದ ವರ್ಷ ಮೇ ತಿಂಗಳಲ್ಲಿ ಉಡಾವಣೆ ಮಾಡಿದ್ದ ಭೂ ವೀಕ್ಷಣಾ ಉಪಗ್ರಹ EOS-09 ಅನ್ನು ಹೊತ್ತೊಯ್ಯುತ್ತಿದ್ದ PSLV-C61 ವಿಫಲವಾದ ಬಳಿಕ ಇದೀಗ ಸೋಮವಾರ ಭೂ ವೀಕ್ಷಣಾ ಉಪಗ್ರಹ (earth observation satellite) EOS-N1 ಸೇರಿದಂತೆ 15 ಉಪಗ್ರಹಗಳನ್ನು ಹೊತ್ತೊಯ್ಯುತ್ತಿದ್ದ PSLV-C62 ಕಕ್ಷೆ ಸೇರುವಲ್ಲಿ ವಿಫಲವಾಗಿದೆ. ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ರಾಕೆಟ್ (PSLV rocket) ತೊಂದರೆಗೆ ಸಿಲುಕಿದ್ದು, ಅದರ ಸಾಮಾನ್ಯ ಪಥದಿಂದ ದಾರಿ ತಪ್ಪಿತು. ಇದಕ್ಕೆ ಕಾರಣಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇಸ್ರೋ ಹೇಳಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಭೂ ವೀಕ್ಷಣಾ ಉಪಗ್ರಹ EOS-09 ಅನ್ನು ಹೊತ್ತೊಯ್ಯುತ್ತಿದ್ದ PSLV-C61 ಮೂರನೇ ಹಂತದಲ್ಲಿ ಸಮಸ್ಯೆಗಳನ್ನು ಎದುರಿಸಿ ಉದ್ದೇಶಿತ ಕಕ್ಷೆ ತಲುಪುವಲ್ಲಿ ವಿಫಲವಾಯಿತು. ಈ ವರ್ಷದ ಮೊದಲ ಉಪಗ್ರಹವನ್ನು ಹೊತ್ತ ರಾಕೆಟ್ ಸೋಮವಾರ ಬೆಳಗ್ಗೆ ಉಡಾವಣೆಯಾದ 10 ನಿಮಿಷಗಳ ಬಳಿಕ ತೊಂದರೆಗೆ ಸಿಲುಕಿತು ಉದ್ದೇಶಿತ ಕಕ್ಷೆ ತಲುಪಲು ವಿಫಲವಾಯಿತು.

ಉನ್ಮೀಲನಂ 2026 - ಶಾಲಾಕ್ಯ ತಂತ್ರ ರಾಷ್ಟ್ರೀಯ ವಿಚಾರ ಸಂಕಿರಣ

ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುವ PSLV ರಾಕೆಟ್ ಸತತ ಎರಡನೇ ಬಾರಿ ವಿಫಲಗೊಂಡಿದೆ. PSLV-C62 ರಾಕೆಟ್ ಸೋಮವಾರ ಭೂ ವೀಕ್ಷಣಾ ಉಪಗ್ರಹ EOS-N1 ಸೇರಿದಂತೆ 15 ಉಪಗ್ರಹಗಳನ್ನು ಹೊತ್ತ ಸಾಗುತ್ತಿತ್ತು. ಮೂರನೇ ಹಂತದಲ್ಲಿ ಇದು ತನ್ನ ಪಥದಿಂದ ವಿಮುಖಗೊಂಡಿತ್ತು. ಇದರಿಂದ ವಿದೇಶಗಳ ಎಂಟು ಉಪಗ್ರಹಗಳು ಸೇರಿ ಎಲ್ಲಾ ಪೇಲೋಡ್‌ಗಳು ಕಳೆದುಹೋಗಿವೆ ಎಂದು ಇಸ್ರೋ ಹೇಳಿದೆ.



ಪಿಎಸ್ಎಲ್ ವಿ ಎರಡು ಘನ ಇಂಧನ ಮತ್ತು ಎರಡು ದ್ರವ ಇಂಧನ ಹಂತಗಳನ್ನು ಹೊಂದಿದೆ. ಇದು ಬಾಹ್ಯಾಕಾಶ ಸಂಸ್ಥೆಯ ಅತ್ಯಂತ ವಿಶ್ವಾಸಾರ್ಹ ಉಪಗ್ರಹ ಸಾಗಾಟ ರಾಕೆಟ್ ಗಳಲ್ಲಿ ಒಂದಾಗಿದೆ. ಸೋಮವಾರದ ಕಾರ್ಯಾಚರಣೆ ಸೇರಿದಂತೆ ಈವರೆಗೆ ಅದು ನಡೆಸಿದ 64 ಕಾರ್ಯಾಚರಣೆಗಳಲ್ಲಿ ಕೇವಲ ನಾಲ್ಕು ಬಾರಿ ವಿಫಲವಾಗಿದೆ.

ಏನಾಯಿತು?

ಪಿಎಸ್ಎಲ್ ವಿ ರಾಕೆಟ್ ವಿಫಲವಾದ ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷ ವಿ ನಾರಾಯಣನ್, ಮೂರನೇ ಹಂತದ ಅಂತ್ಯದ ವೇಳೆಗೆ ಸ್ವಲ್ಪ ಹೆಚ್ಚು ಅಡಚಣೆ ಕಂಡು ಬಂದಿತ್ತು. ಹಾರಾಟದ ಮಾರ್ಗವು ತಪ್ಪಿದೆ. ಅಂಕಿ ಅಂಶಗಳನ್ನು ವಿಶ್ಲೇಷಿಸಲಾಗುತ್ತಿದೆ ಎಂದು ತಿಳಿಸಿದರು.

ಕಳೆದ ವರ್ಷ ಮೇ ತಿಂಗಳಲ್ಲಿ PSLV-C61 ವೈಫಲ್ಯದ ಕಾರಣಗಳನ್ನು ಅಧ್ಯಯನ ಮಾಡಿರುವ ವೈಫಲ್ಯ ವಿಶ್ಲೇಷಣಾ ಸಮಿತಿಯ (FAC) ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ. ಈ ರಾಕೆಟ್‌ನ ಒತ್ತಡ ಕೊಠಡಿಯಲ್ಲಿ ಉಂಟಾದ ಅನಿರೀಕ್ಷಿತ ಮತ್ತು ಹಠಾತ್ ಕುಸಿತವು ವೈಫಲ್ಯಕ್ಕೆ ಕಾರಣವಾಗಿತ್ತು. PSLV-C62 ರಾಕೆಟ್ ವೈಫಲ್ಯಕ್ಕೆ ಕಾರಣ ಪತ್ತೆ ಹಚ್ಚಲು ವೈಫಲ್ಯ ವಿಶ್ಲೇಷಣಾ ಸಮಿತಿ ಅನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಕನ್ನಡಿಗರಿಗೆ ಮೀಸಲಾತಿ ವಿಚಾರ ಮತ್ತೆ ಮುನ್ನೆಲೆಗೆ; ಉದ್ಯಮಿ ಕಿರಣ್‌ ಮಜುಂದಾರ್‌ ಶಾ ವಿರೋಧ

PSLV-C62 ರಾಕೆಟ್ ಅನ್ನು ಸೋಮವಾರ ಬೆಳಗ್ಗೆ 10.17ರ ಸುಮಾರಿಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್‌ನಿಂದ ಉಡಾವಣೆ ಮಾಡಲಾಯಿತು. ಸುಮಾರು ಒಂಬತ್ತು ನಿಮಿಷಗಳ ಹಾರಾಟದ ಬಳಿಕ ಅದು ತನ್ನ ಪಥವನ್ನು ಬದಲಿಸಿದೆ. ಈ ವೇಳೆ ಎಂಜಿನ್‌ಗೆ ಹಾನಿಯಾಗಿದೆ. ಇದರಲ್ಲಿ ಥೈಲ್ಯಾಂಡ್ ಮತ್ತು ಯುನೈಟೆಡ್ ಕಿಂಗ್‌ಡಮ್ (UK) ಜಂಟಿಯಾಗಿ ಅಭಿವೃದ್ಧಿಪಡಿಸಿದ ಥಿಯೋಸ್-2 ಭೂ ವೀಕ್ಷಣಾ ಉಪಗ್ರಹ, ನೇಪಾಳ, ಭಾರತ ಮತ್ತು ಸ್ಪ್ಯಾನಿಷ್ ಸ್ಟಾರ್ಟ್‌ಅಪ್ ಅಭಿವೃದ್ಧಿಪಡಿಸಿದ ಉಪಗ್ರಹ ಸೇರಿದಂತೆ 14 ಇತರ ಉಪಗ್ರಹಗಳು ಇದ್ದವು ಎಂದು ಅವರು ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author