ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರಿಯಕರನ ಜತೆ ಸೇರಿ ಮಗಳ ಅಶ್ಲೀಲ ವಿಡಿಯೊ ಚಿತ್ರೀಕರಿಸಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟ ಪಾಪಿ ತಾಯಿ

Pune Horror: ಹೆತ್ತ ತಾಯಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಅಪ್ರಾಪ್ತ ಮಗಳ ಖಾಸಗಿ ವಿಡಿಯೊ ಚಿತ್ರೀಕರಿಸಿ ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟ ಘಟನೆ ಬೆಳಕಿಗೆ ಬಂದಿದೆ. ತನ್ನ ವಿವಾಹೇತರ ಸಂಬಂಧ ವನ್ನು ಮಗಳು ಬಹಿರಂಗಪಡಿಸಿದ್ದರಿಂದ ರೊಚ್ಚಿಗೆದ್ದ ಮಹಿಳೆ ಈ ಕೃತ್ಯ ಎಸಗಿದ್ದಾಳೆ.

ಮಗಳ ಖಾಸಗಿ ವಿಡಿಯೊ ವೈರಲ್‌ ಮಾಡಿದ ಪಾಪಿ ತಾಯಿ

ಆರೋಪಿಗಳೊಂದಿಗೆ ಪೊಲೀಸರು ಮತ್ತು ಅಧಿಕಾರಿಗಳು.

Profile Ramesh B Apr 14, 2025 6:24 PM

ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ಅಮಾನುಷ ಘಟನೆಯೊಂದು ನಡೆದಿದ್ದು, ಹೆತ್ತ ತಾಯಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಅಪ್ರಾಪ್ತ ಮಗಳ ಖಾಸಗಿ ವಿಡಿಯೊ ಚಿತ್ರೀಕರಿಸಿ ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟ ಘಟನೆ ಬೆಳಕಿಗೆ ಬಂದಿದೆ (Pune Horror). ಇತ್ತೀಚೆಗೆ ಪುಣೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದ್ದು, ಈ ಸಾಲಿಗೆ ಇದು ಮತ್ತೊಂದು ಸೇರ್ಪಡೆಯಾಗಿದೆ. ತನ್ನ ವಿವಾಹೇತರ ಸಂಬಂಧವನ್ನು ಮಗಳು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಆಕೆ ಪ್ರಿಯಕನೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ (Crime News). ಸದ್ಯ ಆಕೆಯ ವರ್ತನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಬಿಬ್ವೆವಾಡಿಯ ಆರೋಪಿ ಮಹಿಳೆ ಪರ ಪುರುಷನೊಂದಿಗೆ ವಿವಾಹೇತರ ಸಂಬಂಧದಲ್ಲಿ ತೊಡಗಿದ್ದಳು. ಇದನ್ನು ತಿಳಿದ 14 ವರ್ಷದ ಮಗಳು ಇತರರಿಗೆ ಇದನ್ನು ತಿಳಿಸಿದ್ದರಿಂದ ರೊಚ್ಚಿಗೆದ್ದ ಮಹಿಳೆ ಈ ಅಪರಾಧ ಎಸಗಿದ್ದಾಳೆ. ಈ ಬಗ್ಗೆ ಮಗಳು ದೂರು ದಾಖಲಿಸಿದ್ದಳು.

ಘಟನೆ ಕುರಿತಾದ ಎಕ್ಸ್‌ ಪೋಸ್ಟ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Pune Horror: ಪುಣೆಯಲ್ಲೊಂದು ಹೃದಯ ವಿದ್ರಾವಕ ಘಟನೆ; ಪತ್ನಿಯ ಶೀಲ ಶಂಕಿಸಿ 3 ವರ್ಷದ ಮಗನ ಕತ್ತು ಸೀಳಿ ಕೊಂದ ಟೆಕ್ಕಿ

ಘಟನೆ ಹಿನ್ನೆಲೆ

36 ವರ್ಷದ ಮಹಿಳೆ ಮತ್ತು 24 ವರ್ಷದ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದು ಹೇಗೋ ಮಗಳ ಗಮನಕ್ಕೆ ಬಂದಿತ್ತು. ಇದನ್ನು ಆಕೆ ಬಹಿರಂಗಪಡಿಸಿದ್ದಳು. ಇದರಿಂದ ರೊಚ್ಚಿಗೆದ್ದ ಮಹಿಳೆ ಮತ್ತು ಆಕೆಯ ಪ್ರಿಯಕರ ಬಾಲಕಿಯ ವಸ್ತ್ರವನ್ನು ಬಲವಂತವಾಗಿ ಕಿತ್ತೆಸೆದು ಅದನ್ನು ವಿಡಿಯೊ ಮಾಡಿದ್ದಳು. ಬಳಿಕ ಅಪ್ರಾಪ್ತೆಯ ಪ್ರಿಯಕರ ಈ ವಿಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟಿದ್ದ. ಈ ಘಟನೆ ಬೆಳಕಿಗೆ ಬರುತ್ತಲೇ ಆಘಾತಕ್ಕೊಳಗಾಗಿದ್ದ ಬಾಲಕಿ ದೂರು ನೀಡಿದ್ದಳು. ತಲೆ ಮರೆಸಿಕೊಂಡಿದ್ದ ಪಾಪಿಗಳು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ʼʼತನಿಖೆ ವೇಳೆ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. ತಮ್ಮ ಅಕ್ರಮ ಸಂಬಂಧವನ್ನು ಬಹಿರಂಗಪಡಿಸದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ವಿಡಿಯೊ ಹರಿಯಬಿಟ್ಟಿದ್ದಾಗಿ ಅಪರಾಧಿಗಳು ಒಪ್ಪಿಕೊಂಡಿದ್ದಾರೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಈ ವಿಚಾರ ತಿಳಿದು ಹಲವರು ಆಘಾತ ವ್ಯಕ್ತಪಡಿಸಿದ್ದಾರೆ. ಅಪ್ರಾಪ್ತರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗಿದೆ.

ಪತ್ನಿಯ ಶೀಲ ಶಂಕಿಸಿ 3 ವರ್ಷದ ಮಗನ ಕತ್ತು ಸೀಳಿ ಕೊಂದ ಟೆಕ್ಕಿ

ಮುಂಬೈ: ಪುಣೆಯಲ್ಲಿ ಕೆಲವು ದಿನಗಳ ಹಿಂದೆ ಐಟಿ ಎಂಜಿನಿಯರ್‌ ಒಬ್ಬ ಪತ್ನಿಯ ಶೀಲ ಶಂಕಿಸಿ ತನ್ನ 3 ವರ್ಷದ ಮಗನ ಕತ್ತು ಸೀಳಿ ಕೊಂದು ಮೃತದೇಹವನ್ನು ಕಾಡಿನಲ್ಲಿ ಎಸೆದಿರುವ ಘಟನೆ ಬೆಳಕಿಗೆ ಬಂದಿತ್ತು. ಮೃತ ಬಾಲಕನ್ನು ಹಿಮ್ಮತ್‌ ಮಾಧವ್‌ ಟಿಕೆಟಿ ಎಂದು ಗುರುತಿಸಲಾಗಿದೆ. ಪುಣೆಯ ಚಂದನ್‌ ನಗರದ ರತನ್‌ ಪ್ರೆಸ್ಟೀಜ್‌ ನಿವಾಸಿ ಮಾಧವ್‌ ಟಿಕೆಟಿ ಕೃತ್ಯ ಎಸಗಿದಾತ. ಕೊಲೆಯಾದ ಹಿಮ್ಮತ್‌ ಟೆಕ್ಕಿ ಮಾಧವ್‌ ಮತ್ತು ಸ್ವರೂಪಾ ದಂಪತಿಯ ಏಕಮಾತ್ರ ಪುತ್ರ. ಮೂಲತಃ ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಈ ಕುಟುಂಬ ಕೆಲವು ಸಮಯದಿಂದ ಪುಣೆಯಲ್ಲಿ ವಾಸಿಸುತ್ತಿತ್ತು. ಪ್ರಕರಣ ಬೆಳಕಿಗೆ ಬಂದ ಕೂಡಲೇ ಆರೋಪಿ 38 ವರ್ಷದ ಮಾಧವ್‌ನನ್ನು ಪೊಲೀಸರು ಬಂಧಿಸಿದ್ದರು.