ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಮತ್ತು ಅವರ ಪತಿ ರಾಜ್ ಕುಂದ್ರಾ (Raj Kundra) ಲಂಡನ್‌ಗೆ ಪ್ರಯಾಣಿಸಲು ಅನುಮತಿ ನೀಡುವಂತೆ ಬಾಂಬೆ ಹೈಕೋರ್ಟ್‌ಗೆ (Bombay High Court) ಅರ್ಜಿ ಸಲ್ಲಿಸಿದ್ದಾರೆ. ಕುಂದ್ರಾ ಅವರ ತಂದೆಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುವುದರಿಂದ ಈ ಮನವಿ ಮಾಡಲಾಗಿದೆ. ಉದ್ಯಮಿ ದೀಪಕ್ ಕೋಠಾರಿ ನಡೆಸಿದ 60 ಕೋಟಿ ರೂ. ವಂಚನೆ ಪ್ರಕರಣವನ್ನು ತನಿಖೆ ಮಾಡುವ ವೇಳೆ, ಮುಂಬೈ ಪೊಲೀಸರು ಹೊರಡಿಸಿರುವ ಲುಕ್‌ಔಟ್ ಸರ್ಕ್ಯುಲರ್ (LOC)ಗೆ ತಡೆ ನೀಡುವಂತೆ ದಂಪತಿ ಮನವಿ ಮಾಡಿದ್ದಾರೆ.
ದಂಪತಿ ಮೊದಲಿನಿಂದಲೇ LOC ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರೂ, ಈ ಬಾರಿ ಅವರು ತಮ್ಮ ವಕೀಲ ಪ್ರಶಾಂತ್ ಪಿ. ಪಾಟೀಲ್ ಮೂಲಕವಲ್ಲದೆ ತುರ್ತು ಅರ್ಜಿಯನ್ನು ಸಲ್ಲಿಸಿದ್ದಾರೆ. 2025ರ ನವೆಂಬರ್ 10ರಂದು ಕುಂದ್ರಾ ಅವರ ತಂದೆಗೆ ದೀರ್ಘಕಾಲದ ಮತ್ತು ಕಬ್ಬಿಣದ ಅಮೋನಿಯ ಕೊರತೆ ಇರುವುದು ಪತ್ತೆಯಾಯಿತು. ಇದರಿಂದಾಗಿ ವಿವಿಧ ಆರೋಗ್ಯ ಸಮಸ್ಯೆ ಆರಂಭವಾಯಿತು. ಹೀಗಾಗಿ ಅವರಿಗೆ ಪುನಃ ಕ್ಯಾಪ್ಸುಲ್ ಎಂಡೋಸ್ಕೋಪಿ ಅಥವಾ ಡಬಲ್-ಬಲೂನ್ ಎಂಟೆರೋಸ್ಕೋಪಿ ನಡೆಸುವಂತೆ ವೈದ್ಯರು ಸಲಹೆ ನೀಡಿರುವುದನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
60 ಕೋಟಿ ರೂ. ವಂಚನೆ ಪ್ರಕರಣ; ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ನಟಿ ಶಿಲ್ಪಾ ಶೆಟ್ಟಿ
ಅವರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ ಮತ್ತು ಸ್ಥಿತಿ ಇನ್ನೂ ಹದಗೆಡುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಆದ್ದರಿಂದ ಕುಂದ್ರಾ ಮತ್ತು ಶೆಟ್ಟಿ ಇಬ್ಬರೂ ಅವರಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡಲು ತುರ್ತಾಗಿ ಲಂಡನ್‌ಗೆ ಪ್ರಯಾಣಿಸಬೇಕಾಗಿದೆ. ಅರ್ಜಿದಾರರು ಕುಂದ್ರಾ ಅವರ ತಂದೆಯನ್ನು ಮಾತ್ರ ಭೇಟಿ ಮಾಡುತ್ತಾರೆ. ಅನುಮತಿ ನೀಡಿದರೆ ನಿಗದಿಯಂತೆ ಭಾರತಕ್ಕೆ ಹಿಂತಿರುಗುತ್ತಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
LOC ಎಂಬುದು ಭಾರತ ವಲಸೆ ಕಚೇರಿ ಜಾರಿಗೊಳಿಸುವ ಸೂಚನೆಯಾಗಿದ್ದು, ವಿಚಾರಣೆ ಎದುರಿಸುತ್ತಿರುವ ವ್ಯಕ್ತಿಗಳ ವಿದೇಶ ಪ್ರವಾಸವನ್ನು ನಿಯಂತ್ರಿಸುವುದು ಇದರ ಉದ್ದೇಶ. ದೇಶದಿಂದ ಹೊರಡದಂತೆ ತಡೆಹಿಡಿಯಲು ಅಥವಾ ಅಗತ್ಯವಿದ್ದರೆ ಆ ವ್ಯಕ್ತಿಯನ್ನು ವಶಕ್ಕೆ ಪಡೆಯಲು ಈ ಸೂಚನೆ ಬಳಸಲಾಗುತ್ತದೆ. ಸಾಮಾನ್ಯವಾಗಿ ತನಿಖಾ ಸಂಸ್ಥೆಯ ವಿನಂತಿಯ ಮೇರೆಗೆ LOC ಜಾರಿಗೊಳಿಸಲಾಗುತ್ತದೆ.
ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ಗೆ ಸಂಬಂಧಿಸಿದ 60 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಲ್ಪಾ ದಂಪತಿಯ ವಿರುದ್ಧ LOC ಹೊರಡಿಸಲಾಗಿದೆ. 2015 ಮತ್ತು 2023ರ ನಡುವೆ ಕುಂದ್ರಾ ಮತ್ತು ಶೆಟ್ಟಿ ಈ ಉದ್ಯಮದಲ್ಲಿ ಹೂಡಿಕೆ ಮಾಡಲು ತಮ್ಮನ್ನು ಪ್ರೇರೇಪಿಸಿದ್ದಾರೆ ಎಂದು ಆರೋಪಿಸಿ ಯುವೈ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ದೀಪಕ್ ಕೊಠಾರಿ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
Shilpa Shetty: 60 ಕೋಟಿ ವಂಚನೆ ಪ್ರಕರಣ; ಶಿಲ್ಪಾ ಶೆಟ್ಟಿ ದಂಪತಿಗೆ ಲುಕ್‌ಔಟ್ ನೋಟೀಸ್ ಜಾರಿ
ದೂರಿನ ಪ್ರಕಾರ, ಕೊಠಾರಿ ಹೂಡಿಕೆ ಒಪ್ಪಂದದಡಿ ಸಾಲದ ರೂಪದಲ್ಲಿ ಒಟ್ಟು 60.48 ಕೋಟಿ ರೂ. ಹೂಡಿಕೆ ಮಾಡಿದ್ದರು. ಈ ಹೂಡಿಕೆಗೆ ಸಂಬಂಧಿಸಿ ಶಿಲ್ಪಾ ಶೆಟ್ಟಿ ವೈಯಕ್ತಿಕ ಗ್ಯಾರಂಟಿಯನ್ನೂ ನೀಡಿದ್ದರೆಂದು ದೂರಿನಲ್ಲಿ ಹೇಳಲಾಗಿದೆ. ಆದರೆ, ಅರ್ಜಿದಾರರ ಮೇಲೆ ಸೇಡು ತೀರಿಸಿಕೊಳ್ಳುವ ಮತ್ತು ಹಣವನ್ನು ಸುಲಿಗೆ ಮಾಡುವ ಮತ್ತು ದೂರುದಾರರಿಗೆ ದೊಡ್ಡ ಮೊತ್ತದ ಹಣವನ್ನು ಪಾವತಿಸಲು ಅರ್ಜಿದಾರರನ್ನು ಒತ್ತಾಯಿಸುವ ಉದ್ದೇಶದಿಂದ ದುರುದ್ದೇಶಪೂರ್ವಕವಾಗಿ ಕ್ರಿಮಿನಲ್ ಮೊಕದ್ದಮೆಯನ್ನು ಪ್ರಾರಂಭಿಸಲಾಗಿದೆ ಎಂದು ದಂಪತಿ ಆರೋಪಿಸಿದ್ದಾರೆ.
ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಖಾಸಗಿ ಕಂಪನಿಯನ್ನು ಸ್ಥಾಪಿಸಲಾಗಿತ್ತು. ಈ ಕಂಪನಿಯನ್ನು ಮುಂಬೈ ಕಂಪನಿ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿತವಾಗಿದ್ದು, 24×7 ಆನ್‌ಲೈನ್ ಹೋಮ್ ಶಾಪಿಂಗ್ ಟೆಲಿವಿಶನ್ ಚಾನೆಲ್ ಮೂಲಕ ಉಡುಪುಗಳು, ಗೃಹೋಪಯೋಗಿ ಉಪಕರಣಗಳು ಮತ್ತು ಇತರ ವಸ್ತುಗಳ ಮಾರಾಟದಲ್ಲಿ ತೊಡಗಿಸಿಕೊಂಡಿತ್ತು.
ಕಂಪನಿ ಲಾಭದತ್ತ ಸಾಗುತ್ತಿದ್ದ ಸಮಯದಲ್ಲಿ 2016ರ ನವೆಂಬರ್‌ನಲ್ಲಿ ಭಾರತ ಸರ್ಕಾರ ನೋಟು ಅಮಾನ್ಯೀಕರಣವನ್ನು ಘೋಷಿಸಿತು. ಈ ಕ್ರಮವು ಕಂಪನಿಯ ವ್ಯವಹಾರಕ್ಕೆ ತೀವ್ರ ಹೊಡೆತ ನೀಡಿತು. ಕಂಪನಿಯ ವ್ಯಾಪಾರ ಬಹುಪಾಲು ಕ್ಯಾಶ್ ಆನ್ ಡೆಲಿವರಿ ಮಾದರಿಯ ಮೇಲೆ ಅವಲಂಬಿತವಾಗಿತ್ತು.
ಮಾರುಕಟ್ಟೆಯಲ್ಲಿ ಹಠಾತ್ ನಗದು ಕೊರತೆಯಿಂದಾಗಿ, ಅದು ಭಾರಿ ನಷ್ಟವನ್ನು ಅನುಭವಿಸಿತು. ಮಾರಾಟಗಾರರು ಮತ್ತು ಸಾಲಗಾರರಿಗೆ ತನ್ನ ಹಣಕಾಸಿನ ಬಾಧ್ಯತೆಗಳನ್ನು ಪೂರೈಸುವಲ್ಲಿ ತೊಂದರೆಗಳನ್ನು ಎದುರಿಸಿತು. ಅವುಗಳಲ್ಲಿ ಕೆಲವು ದಿವಾಳಿತನಕ್ಕೆ ಒಳಗಾದವು. ದಂಪತಿ ಸಹ ಭಾರಿ ಆರ್ಥಿಕ ನಷ್ಟವನ್ನು ಅನುಭವಿಸಿದರು.
ಕೊಠಾರಿಗೆ ತಮ್ಮ ಕುಟುಂಬದ ಪರಿಸ್ಥಿತಿಯ ಬಗ್ಗೆ ಪೂರ್ಣವಾಗಿ ತಿಳಿದಿದ್ದರೂ, ಬೆದರಿಕೆ ಒಡ್ಡುತ್ತಿದ್ದರೆಂದು ಶಿಲ್ಪಾ ದಂಪತಿಯ ಪರ ವಕೀಲರು ಆರೋಪಿಸಿದ್ದಾರೆ. ಕಂಪನಿ ಲಿಕ್ವಿಡೇಶನ್‌ಗೆ ಒಳಗಾಗಿ ಸುಮಾರು 10 ವರ್ಷಗಳಾದ ನಂತರ ಕಿರುಕುಳ ನೀಡುವ ಉದ್ದೇಶದಿಂದಲೇಎಫ್‌ಐಆರ್ ದಾಖಲಿಸಲಾಗಿದೆ ಎಂದು ದಂಪತಿ ದೂರಿದ್ದಾರೆ. ಸಾರ್ವಜನಿಕ ಮತ್ತು ಮಾಧ್ಯಮಗಳ ಮುಂದೆ ತಮ್ಮ ಹೆಸರು ಹಾಗೂ ಪ್ರತಿಷ್ಠೆಗೆ ಕಳಂಕ ತರುವ ಉದ್ದೇಶದಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.