ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shilpa Shetty: 60 ಕೋಟಿ ರೂ. ವಂಚನೆ ಪ್ರಕರಣ; ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ನಟಿ ಶಿಲ್ಪಾ ಶೆಟ್ಟಿ

ವಿದೇಶ ಪ್ರಯಾಣಕ್ಕೆ ತೆರಳಲು ಅವಕಾಶ ನೀಡಬೇಕು ಎಂದು ಕೋರಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿ ಅರ್ಜಿಯನ್ನು ಸಲ್ಲಿಸಿದ್ದರು. ಇದಕ್ಕೆ ಬಾಂಬೆ ಹೈಕೋರ್ಟ್, ವಿದೇಶಕ್ಕೆ ತೆರಳಬೇಕು ಎಂದರೆ ಸಂಪೂರ್ಣ 60 ಕೋಟಿ ರೂಪಾಯಿ ಹಣವನ್ನು ಠೇವಣಿ ಇಡಬೇಕಾಗುತ್ತದೆ ಎಂದು ಹೇಳಿತ್ತು. ಈ ಆದೇಶದ ಬೆನ್ನಲ್ಲೇ ನಟಿ ಶಿಲ್ಪಾ ಶೆಟ್ಟಿ ತಮ್ಮ ಅರ್ಜಿಯನ್ನು ಹಿಂಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ವಿದೇಶಿ ಪ್ರಯಾಣ ಕ್ಯಾನ್ಸಲ್ ಮಾಡಿದ ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ -

Profile Sushmitha Jain Oct 16, 2025 9:25 PM

ಮುಂಬೈ: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ (Shilpa Shetty) ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಬಾಂಬೆ ಹೈಕೋರ್ಟ್‌ಗೆ ಸಲ್ಲಿದ್ದ ಅರ್ಜಿಯನ್ನು ಗುರುವಾರ ಹಿಂಪಡೆದಿದ್ದಾರೆ. ವಿದೇಶ ಪ್ರವಾಸದ ಯೋಜನೆಗಳು ಕಾರ್ಯರೂಪಕ್ಕೆ ಬಾರದ ಹಿನ್ನೆಲೆ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ (Raj Kundra) ಉದ್ಯಮಿಯೊಬ್ಬರು ದಾಖಲಿಸಿರುವ 60 ಕೋಟಿ ರೂಪಾಯಿ ವಂಚನೆ ಪ್ರಕರಣವನ್ನು ಎದುರಿಸುತ್ತಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್(Shree Chandrashekhar) ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ (Gautam Ankhad) ಅವರನ್ನೊಳಗೊಂಡ ಪೀಠಕ್ಕೆ ಶಿಲ್ಪಾ ಶೆಟ್ಟಿ ಪರ ವಕೀಲ ನಿರಂಜನ್ ಮುಂಡರಗಿ (Niranjan Mundargi) ಈ ಕುರಿತು ಮಾಹಿತಿ ನೀಡಿದ್ದು, “ಅನಿವಾರ್ಯ ಕಾರಣಗಳಿಂದ ಶಿಲ್ಪಾ ಶೆಟ್ಟಿ ಕೈಗೊಳ್ಳಬೇಕಿದ್ದ ವಿದೇಶ ಪ್ರಯಾಣ ರದ್ದಾಗಿದ್ದು, ಕಾರ್ಯಕ್ರಮಕ್ಕೆ ಆಹ್ವಾನಿಸಲ್ಪಟ್ಟ ಏಕೈಕ ಭಾರತೀಯ ನಟಿ ಅವರಾಗಿದ್ದರು. ಆದರೆ ಅವರು ತೆರಳಲು ಸಾಧ್ಯವಾಗುತ್ತಿಲ್ಲ” ಎಂದಿದ್ದಾರೆ

ಈ ಸುದ್ದಿಯನ್ನು ಓದಿ:Viral Video: ವರ್ಚುವಲ್ ವಿಚಾರಣೆ ವೇಳೆ ಮಹಿಳೆಗೆ 'ಚುಂಬಿಸಿದ ಪೋಲಿ ಲಾಯರ್ '- ವೈರಲಾಯ್ತುಈ ವಿಡಿಯೊ

ʼʼಭವಿಷ್ಯದಲ್ಲಿ ಶಿಲ್ಪಾ ಶೆಟ್ಟಿ ಅಥವಾ ಅವರ ಪತಿ ರಾಜ್ ಕುಂದ್ರಾ ವಿದೇಶಕ್ಕೆ ಪ್ರಯಾಣಿಸಲು ಬಯಸಿದರೆ, ಅನುಮತಿ ಕೋರಿ ಹೊಸದಾಗಿ ಅರ್ಜಿ ಸಲ್ಲಿಸಲಿದ್ದಾರೆ. ಶಿಲ್ಪಾ ಶೆಟ್ಟಿ ಪ್ರಸ್ತುತ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆಯಲು ತೀರ್ಮಾನಿಸಿದ್ದಾರೆ" ಎಂದು ವಕೀಲ ನಿರಂಜನ್ ಮುಂಡರಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

2015-2023 ಅವಧಿಯಲ್ಲಿ ಶಿಲ್ಪಾ ಶೆಟ್ಟಿ ದಂಪತಿ ತಮ್ಮ ಕಂಪನಿಯಾದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ (Best Deal TV Pvt Ltd )ನಲ್ಲಿ 60 ಕೋಟಿ ರೂಪಾಯಿ ಹೂಡಿಕೆ ಮಾಡುವಂತೆ ಉದ್ಯಮಿ ದೀಪಕ್ ಕೊಠಾರಿ (Deepak Kothari) ಅವರನ್ನು ಪ್ರೇರೇಪಿಸಿದ್ದರು. ಆದರೆ ಈ ಹಣವನ್ನು ದಂಪತಿಯು ವೈಯಕ್ತಿಕ ಉದ್ದೇಶಗಳಿಗಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ದೀಪಕ್ ಕೊಠಾರಿ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲುಕ್ ಔಟ್ ನೋಟಿಸ್ (LOC) ಹೊರಡಿಸಲಾಗಿತ್ತು.

ತಮ್ಮ ವಿರುದ್ಧ ಹೊರಡಿಸಲಾದ LOC ಅನ್ನು ವಜಾಗೊಳಿಸುವಂತೆ ಶೆಟ್ಟಿ ದಂಪತಿಯು ಕಳೆದು ತಿಂಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಯುತ್ತಿರುವಾಗಲೇ ದಂಪತಿಯು ವಿರಾಮ ಮತ್ತು ವೃತ್ತಿಪರ ಚಿತ್ರೀಕರಣಕ್ಕಾಗಿ ಅಕ್ಟೋಬರ್‌ನಿಂದ 2026ರ ಜನವರಿಯವರೆಗೆ ವಿದೇಶಕ್ಕೆ ತೆರಳಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಬಳಿಕ ಕುಂದ್ರಾ ತಮ್ಮ ಪ್ರಯಾಣದ ಪ್ಲಾನ್‌ ರದ್ದುಗೊಳಿಸಿದ್ದು, ಶಿಲ್ಪಾ ಶಿಟ್ಟಿ ಮಾತ್ರ ತಮ್ಮ ಮಗನೊಂದಿಗೆ ಲಾಸ್ ಏಂಜೆಲಿಸ್‌ಗೆ ತೆರಳು ಅನುಮತಿ ಕೋರಿದ್ದರು. ಇದೀಗ ಅವರೂ ತಮ್ಮ ಅರ್ಜಿಯನ್ನು ಹಿಂಪಡೆಯಲು ತೀರ್ಮಾನಿಸಿದ್ದಾರೆ.

ಗುರುವಾರ, ನ್ಯಾಯಾಲಯವು ಶಿಲ್ಪಾ ಶೆಟ್ಟಿ ಅವರ ಅರ್ಜಿ ಹಿಂಪಡೆಯುವ ಮನವಿಯನ್ನು ಅಂಗೀಕರಿಸಿದೆ ಮತ್ತು LOC ರದ್ದತಿ ಕೋರಿ ದಂಪತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನವೆಂಬರ್ 17ಕ್ಕೆ ಮೂಂದೂಡಿದೆ.

ಹಿಂದಿನ ವಿಚಾರಣೆಯಲ್ಲಿ ಶೆಟ್ಟಿ ದಂಪತಿಯು ವಿದೇಶಕ್ಕೆ ಪ್ರಯಾಣ ಬೆಳೆಸುವುದಾದರೆ 60 ಕೋಟಿ ರೂಪಾಯಿ ಠೇವಣಿ ಇಡುವಂತೆ ನ್ಯಾಯಾಲಯ ಸೂಚಿಸಿತ್ತು.