ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokayukta Raid: ನಿವೃತ್ತ ಎಂಜಿನಿಯರ್‌ ಮನೆ ಮೇಲೆ ಲೋಕಾಯುಕ್ತ ದಾಳಿ; ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಪತ್ತೆ

ನಿವೃತ್ತ ಪಿಡಬ್ಲ್ಯುಡಿ ಮುಖ್ಯ ಎಂಜಿನಿಯರ್ ಜಿ.ಪಿ. ಮೆಹರಾ ಅವರ ಮನೆ ಮತ್ತು ಆಸ್ತಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದು, ಕೋಟ್ಯಂತರ ರೂ. ಮೌಲ್ಯದ ಅಕ್ರಮ ಸಂಪತ್ತನ್ನು ವಶ ಪಡಿಸಿಕೊಂಡಿದ್ದಾರೆ .ಜಿ.ಪಿ.ಮೆಹರಾ ಅವರಿಗೆ ಸೇರಿದ ನಾಲ್ಕು ಸ್ಥಳಗಳಲ್ಲಿ ಬೆಳಗಿನ ಜಾವ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಜಿ.ಪಿ. ಮೆಹ್ರಾ

ಭೋಪಾಲ್: ಮಧ್ಯ ಪ್ರದೇಶದ ಭೂಪಾಲದಲ್ಲಿರುವ ನಿವೃತ್ತ ಲೋಕೋಪಯೋಗಿ ಇಲಾಖೆ (PWD) ಮುಖ್ಯ ಎಂಜಿನಿಯರ್ ಜಿ.ಪಿ. ಮೆಹ್ರಾ (GP Mehra) ಅವರ ನಿವಾಸ ಮತ್ತು ಆಸ್ತಿಗಳ ಮೇಲೆ ಗುರುವಾರ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಸಂಪತ್ತನ್ನು ವಶಪಡಿಸಿಕೊಂಡಿದ್ದಾರೆ. ಭೋಪಾಲ್ ಮತ್ತು ನರ್ಮದಾಪುರಂನಲ್ಲಿರುವ ಜಿ.ಪಿ. ಮೆಹರಾ ಅವರಿಗೆ ಸೇರಿದ ನಾಲ್ಕು ಸ್ಥಳಗಳಲ್ಲಿ ಬೆಳಗಿನ ಜಾವ ಅಧಿಕಾರಿಗಳು ದಾಳಿ ನಡೆಸಿದ್ದು, 3 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನ (Gold) ಮತ್ತು ಕೆಜಿಗಟ್ಟಲೆ ಬೆಳ್ಳಿ (Sliver), ಲಕ್ಷಾಂತರ ರೂ. ನಗದು ಪತ್ತೆಯಾಗಿದೆ.

ಇಷ್ಟೇ ಅಲ್ಲದೇ ಅವರ ತೋಟದ ಮನೆಯೊಂದರಲ್ಲಿ 17 ಟನ್ ಜೇನುತುಪ್ಪ (Honey) ಸಿಕ್ಕಿದ್ದು, ಎಲ್ಲರನ್ನು ಅಚ್ಚರಿಗೊಳಿಸಿದೆ.

ಈ ಸುದ್ದಿಯನ್ನು ಓದಿ: Viral Video: ತಾಯಿ-ಮಗಳ ನಡುವೆ ಭೀಕರ ಕಾದಾಟ; ಕ್ಯಾಮರಾದಲ್ಲಿ ಸೆರೆಯಾಯ್ತು ವ್ಯಾಘ್ರಗಳ ಫೈಟಿಂಗ್‌! ವಿಡಿಯೊ ನೋಡಿ

ಮೆಹ್ರಾ ಅವರ ಮಣಿಪುರಂ ಕಾಲೊನಿಯಲ್ಲಿರುವ ಐಷಾರಾಮಿ ಮನೆಯಲ್ಲಿ 8.79 ಲಕ್ಷ ರೂ. ನಗದು, ಸುಮಾರು 50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 56 ಲಕ್ಷ ರೂ. ಮೌಲ್ಯದ ಎಫ್‌ಡಿಗಳು (fixed deposits) ಪತ್ತೆಯಾಗಿವೆ. ಡಾನಾ ಪಾನಿ ಬಳಿಯ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿರುವ ಅವರ ಎರಡನೇ ಮನೆಯಲ್ಲಿ 26 ಲಕ್ಷ ರೂ. ನಗದು, 3.05 ಕೋಟಿ ರೂ. ಮೌಲ್ಯದ 2.6 ಕೆ.ಜಿ ಚಿನ್ನಭರಣ ಮತ್ತು 5.5 ಕೆಜಿ ಬೆಳ್ಳಿ ಸಿಕ್ಕಿದೆ.

ಇಷ್ಟೇ ಅಲ್ಲದೇ ಸೈನಿ ಗ್ರಾಮದಲ್ಲಿ ಫಾರ್ಮ್‌ಹೌಸ್‌ ಹಾಗೂ ನರ್ಮದಪುರಂನಲ್ಲಿ 7 ಟನ್ ಜೇನುತುಪ್ಪ, 6 ಟ್ರ್ಯಾಕ್ಟರ್‌ಗಳು, 32 ನಿರ್ಮಾಣ ಹಂತದ ಕಟ್ಟಡಗಳು, 7 ಪೂರ್ಣಗೊಂಡ ಕಟ್ಟಡಗಳು, ಮೀನು ಸಾಕಾಣೆ ಸೌಲಭ್ಯ ಹೊಂದಿರುವ ಖಾಸಗಿ ಕೆರೆ, ಗೋಶಾಲೆ, ದೇವಸ್ಥಾನ ಹಾಗೂ ಫೋರ್ಡ್ ಎಂಡೀವರ್, ಸ್ಕೋಡಾ ಸ್ಲಾವಿಯಾ ಸೇರಿದಂತೆ ಅನೇಕ ಐಶಾರಾಮಿ ಕಾರುಗಳು ಪತ್ತೆಯಾಗಿವೆ.

ಅಲ್ಲದೇ ಗೋವಿಂದಪುರ ಕೈಗಾರಿಕಾ ಪ್ರದೇಶದಲ್ಲಿ 1.25 ಲಕ್ಷ ರೂ. ನಗದು, ಯಂತ್ರೋಪಕರಣಗಳು ಸೇರಿದಂತೆ ಸ್ನೇಹಿತರು ಹಾಗೂ ಸಂಬಂಧಿಕರ ಹೆಸರುಗಳಲ್ಲಿ ಕಂಪನಿಯ ಪಾಲುದಾರಿಕೆ ಇರುವ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇನ್ನು "ದಾಳಿಯಲ್ಲಿ ಪತ್ತೆಯಾದ ಚಿನ್ನಾಭರಣ, ನಗದು ಸೇರಿದಂತೆ ಎಲ್ಲ ಸ್ಥಿರ-ಚರಾಸ್ತಿಯ ಮೌಲ್ಯಮಾಪನ ನಡೆಯುತ್ತಿದ್ದು, ಇದರ ಒಟ್ಟು ಅಂದಾಜು ಮೌಲ್ಯ ಕೋಟ್ಯಂತರ ರೂಪಾಯಿಗಳಲ್ಲಿದೆ ಎಂಬುದು ಸ್ಪಷ್ಟ. ಈ ದಾಖಲೆಗಳನ್ನು ಪರಿಶೀಲಿಸಲು ಫಾರೆನ್ಸಿಕ್ ತಂಡಗಳನ್ನು ನಿಯೋಜಿಸಲಾಗಿದೆ. ಡಿಜಿಟಲ್ ಫೈಲ್‌ಗಳು, ಬ್ಯಾಂಕ್ ದಾಖಲೆಗಳು ಸಹ ಪರಿಶೀಲಿಸಲಾಗುತ್ತಿದ್ದು, ಬೇನಾಮಿ ಹೂಡಿಕೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿ.ಪಿ. ಮೆಹ್ರಾ 1984ರ ಬ್ಯಾಚ್‌ನ ಸಿವಿಲ್ ಎಂಜಿನಿಯರ್ ಆಗಿದ್ದು, 2024ರ ಫೆಬ್ರವರಿಯಲ್ಲಿ ಮುಖ್ಯ ಎಂಜಿನಿಯರ್ ಹುದ್ದೆಯಿಂದ ನಿವೃತ್ತರಾಗಿದ್ದರು. ತಮ್ಮ ಸೇವಾ ಅವಧಿಯಲ್ಲಿ ಪಿಡಬ್ಲ್ಯುಡಿ (PWD) ಇಲಾಖೆಯಲ್ಲಿನ ಪ್ರಮುಖ ಹುದ್ದಿಗಳಲ್ಲಿ ಕಾರ್ಯ ನಿರ್ವಹಿಸಿದ್ದರು.