ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ತಾಯಿ-ಮಗಳ ನಡುವೆ ಭೀಕರ ಕಾದಾಟ; ಕ್ಯಾಮರಾದಲ್ಲಿ ಸೆರೆಯಾಯ್ತು ವ್ಯಾಘ್ರಗಳ ಫೈಟಿಂಗ್‌! ವಿಡಿಯೊ ನೋಡಿ

Fierce Fight Between Tigress: ಬೆಳಗ್ಗೆ ರಾಜಸ್ಥಾನದ ರಣಥಂಬೋರ್ ಹುಲಿ ಅಭಯಾರಣ್ಯದಲ್ಲಿ ಅಪರೂಪದ ಮತ್ತು ಉಗ್ರ ಹೋರಾಟ ನಡೆಯಿತು. ಈ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಇದರ ವಿಡಿಯೊ ವೈರಲ್ ಆಗಿದೆ. ಭೂಪ್ರದೇಶಕ್ಕಾಗಿ ತಾಯಿ ಮತ್ತು ಮಗಳ ನಡುವೆ ಭೀಕರ ಕಾದಾಟ ನಡೆದಿದೆ.

ಕ್ಯಾಮರಾದಲ್ಲಿ ಸೆರೆಯಾಯ್ತು ವ್ಯಾಘ್ರಗಳ ಫೈಟಿಂಗ್‌! ವಿಡಿಯೊ ನೋಡಿ

-

Priyanka P Priyanka P Oct 10, 2025 4:50 PM

ಜೈಪುರ: ಭೂಪ್ರದೇಶಕ್ಕಾಗಿ ತಾಯಿ ಮತ್ತು ಮಗಳ ನಡುವೆ ಭೀಕರ ಕಾದಾಟ ನಡೆದಿದೆ. ಇದು ಮನುಷ್ಯರ ನಡುವಿನ ಜಗಳವಲ್ಲ, ಇದು ಎರಡು ವ್ಯಾಘ್ರಗಳ ನಡುವಿನ ಕಾದಾಟ. ಮಂಗಳವಾರ ಬೆಳಗ್ಗೆ ರಾಜಸ್ಥಾನದ ರಣಥಂಬೋರ್ ಹುಲಿ (Tiger) ಅಭಯಾರಣ್ಯದಲ್ಲಿ ಅಪರೂಪದ ಮತ್ತು ಉಗ್ರ ಹೋರಾಟ ನಡೆಯಿತು. ಇದು ಪ್ರವಾಸಿಗರಿಗೆ ತಮ್ಮ ಜಂಗಲ್ ಸಫಾರಿಯ ಸಮಯದಲ್ಲಿ ಜೀವಮಾನದಲ್ಲಿ ಒಮ್ಮೆಯಾದರೂ ಸಿಗುವ ವನ್ಯಜೀವಿ ಅನುಭವವನ್ನು ನೀಡಿತು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

ಹಚ್ಚ ಹಸಿರಿನ ನಡುವೆ ಜನಪ್ರಿಯ ಹುಲಿ ರಿದ್ಧಿ ಮತ್ತು ಆಕೆಯ ಮಗಳು ಮೀರಾ ನಡುವೆ ಘರ್ಷಣೆ ನಡೆಯಿತು. ಮೀಸಲು ಪ್ರದೇಶದ 3ನೇ ವಲಯದಲ್ಲಿ ಹಂಚಿಕೆಯಾದ ಪ್ರದೇಶದ ಮೇಲೆ ನಿಯಂತ್ರಣಕ್ಕಾಗಿ ಎರಡೂ ಹುಲಿಗಳು ಹೋರಾಡಿವೆ. ಸುಮಾರು ಎರಡು ನಿಮಿಷಗಳ ಕಾಲ ತೀವ್ರವಾದ ಮುಖಾಮುಖಿ ನಡೆಯಿತು. ಅಂತಿಮವಾಗಿ ತಾಯಿ ತನ್ನ ಮಗಳನ್ನು ಸೋಲಿಸಿದಳು. ಕಾದಾಟದ ಸಮಯದಲ್ಲಿ ಎರಡೂ ಹುಲಿಗಳು ಗಾಯಗೊಂಡವು.

ಈ ಕಾಳಗದ ದೃಶ್ಯವನ್ನು ಪ್ರವಾಸಿಗರೊಬ್ಬರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಅದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಳಗ್ಗಿನ ಸಫಾರಿಯ ಸಮಯದಲ್ಲಿ ಎರಡು ಹುಲಿಗಳು ಮೊದಲು ಪರಸ್ಪರ ಹತ್ತಿರದಲ್ಲಿ ಕಾಣಿಸಿಕೊಂಡವು. ಮೀರಾ ತನ್ನ ಪ್ರದೇಶವನ್ನು ಪಡೆಯಲು ಪ್ರಯತ್ನಿಸುತ್ತಾ ರಿದ್ಧಿಗೆ ಸವಾಲೊಡ್ಡಿದ್ದಾಗ ಉದ್ವಿಗ್ನತೆ ಉಂಟಾಯಿತು.

ವಿಡಿಯೊ ವೀಕ್ಷಿಸಿ:



ನಂತರ ನಡೆದದ್ದು ಭೀಕರ ಮತ್ತು ಜೋರಾದ ಕಾದಾಟ. ಕಾಡಿನಾದ್ಯಂತ ಹುಲಿಗಳ ಪ್ರಬಲ ಘರ್ಜನೆ ಪ್ರತಿಧ್ವನಿಸಿದೆ. ಹೋರಾಟ ಅಲ್ಪಕಾಲಿಕವಾಗಿದ್ದರೂ, ಅದು ಬಹಳ ತೀವ್ರವಾಗಿತ್ತು. ಎರಡು ಬೆಕ್ಕುಗಳು ಕಾದಾಟ ಮಾಡುವಂತೆ ಹುಲಿಗಳು ಅದಕ್ಕಿನ ದೊಡ್ಡ ಪ್ರಮಾಣದಲ್ಲಿ ಕಾದಾಟ ನಡೆಸಿವೆ. ಅಂತಿಮವಾಗಿ, ತಾಯಿ ಹುಲಿ ತನ್ನ ಮಗಳನ್ನು ಸೋಲಿಸಿ, ಮೀರಾಳನ್ನು ಕಾಡಿನೊಳಗೆ ಹಿಮ್ಮೆಟ್ಟುವಂತೆ ಮಾಡಿತು.

ಇದನ್ನೂ ಓದಿ: Viral Video: ಪ್ರೇಯಸಿ ಜೊತೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿರಾಯ; ನಡುರಸ್ತೆಯಲ್ಲೇ ನಡೀತು ಜಡೆಜಗಳ- ಇಲ್ಲಿದೆ ವಿಡಿಯೊ

ಅರಣ್ಯ ಅಧಿಕಾರಿಗಳು ಇದು ಪ್ರಾದೇಶಿಕ ಹೋರಾಟ ಎಂದು ದೃಢಪಡಿಸಿದರು. ಪ್ರಾದೇಶಿಕ ಹೋರಾಟಗಳು ವನ್ಯಜೀವಿ ನಡವಳಿಕೆಯ ಸ್ವಾಭಾವಿಕ ಭಾಗವಾಗಿದೆ. ವಿಶೇಷವಾಗಿ ಮರಿಗಳು ದೊಡ್ಡದಾದಾಗ, ತಮ್ಮದೇ ಆದ ಪ್ರದೇಶಗಳನ್ನು ಸ್ಥಾಪಿಸಲು ಪ್ರಯತ್ನಿಸಿದಾಗ ಇಂತಹ ಹೋರಾಟಗಳು ನಡೆಯುತ್ತದೆ ಎಂದು ತಿಳಿಸಿದ್ದಾರೆ.

ರಿದ್ಧಿ ಹುಲಿ ಬಗ್ಗೆ ಇಲ್ಲಿದೆ ಮಾಹಿತಿ

ರಿದ್ಧಿಗೆ ಸುಮಾರು ಏಳು ವರ್ಷ ವಯಸ್ಸು. ರಣಥಂಬೋರ್‌ನ ಮತ್ತೊಂದು ಪ್ರಸಿದ್ಧ ಹುಲಿ ಆರೋಹೆಡ್‌ನ ಮಗಳು. 2023 ರಲ್ಲಿ, ರಿದ್ಧಿ ಮೂರು ಮರಿಗಳಿಗೆ ಜನ್ಮ ನೀಡಿದಳು. ಮೀರಾ ಅತ್ಯಂತ ಹಿರಿಯ ಹೆಣ್ಣು ಮರಿ. ರಿದ್ಧಿಯ ತಾಯಿ ಆರೋಹೆಡ್‌ನ ಕೊನೆಯ ದಿನಗಳು ಹೋರಾಟದಿಂದ ಗುರುತಿಸಲ್ಪಟ್ಟವು. ಜೂನ್ 19 ರಂದು, ಆರೋಹೆಡ್ ಎಂದೇ ಪ್ರಸಿದ್ಧವಾದ ಟೈಗ್ರೆಸ್ T-84, ಮೂಳೆ ಕ್ಯಾನ್ಸರ್‌ನೊಂದಿಗೆ ದೀರ್ಘಕಾಲದ ಹೋರಾಟದ ನಂತರ, 14 ವರ್ಷ ವಯಸ್ಸಿನಲ್ಲೇ ನಿಧನ ಹೊಂದಿತು.