Sabarimala Gold Theft: ಶಬರಿಮಲೆ ದೇಗುಲದಲ್ಲಿ ಚಿನ್ನಾಭರಣ ಕಳವು; ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಅರೆಸ್ಟ್
Sabarimala Former Executive Officer : ಶಬರಿಮಲೆ ದೇವಸ್ಥಾನದಲ್ಲಿ ಕಳ್ಳತನ ಪ್ರಕರಣದ ತನಿಖೆ ತೀವ್ರಗೊಳಿಸಿರುವ, ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್ ಕುಮಾರ್ ಅವರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಶಬರಿಮಲೆ ದೇವಸ್ಥಾನದ ನಿರ್ವಹಣೆಯ ಜವಾಬ್ದಾರಿ ಟಿಡಿಬಿ ಸಂಸ್ಥೆಯಾದ್ದಾಗಿದೆ. 2019 ರಲ್ಲಿ ಬೆಟ್ಟದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಕುಮಾರ್ ಅವರನ್ನು ತಿರುವನಂತಪುರಂನ ಅಪರಾಧ ಶಾಖೆಯ ಕಚೇರಿಯಲ್ಲಿ ವಿಚಾರಣೆ ನಡೆಸಿದ ನಂತರ ವಶಕ್ಕೆ ಪಡೆಯಲಾಯಿತು.
-
Rakshita Karkera
Nov 1, 2025 12:34 PM
ತಿರುವನಂತಪುರಂ: ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ನಡೆದಿದೆ ಎನ್ನಲಾದ ಚಿನ್ನದ ಕಳ್ಳತನ ಪ್ರಕರಣ(Sabarimala Gold Theft) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕಳ್ಳತನ ಪ್ರಕರಣದ ತನಿಖೆ ತೀವ್ರಗೊಳಿಸಿರುವ, ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್ ಕುಮಾರ್ ಅವರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಶಬರಿಮಲೆ ದೇವಸ್ಥಾನದ ನಿರ್ವಹಣೆಯ ಜವಾಬ್ದಾರಿ ಟಿಡಿಬಿ ಸಂಸ್ಥೆಯಾದ್ದಾಗಿದೆ. 2019 ರಲ್ಲಿ ಬೆಟ್ಟದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಕುಮಾರ್ ಅವರನ್ನು ತಿರುವನಂತಪುರಂನ ಅಪರಾಧ ಶಾಖೆಯ ಕಚೇರಿಯಲ್ಲಿ ವಿಚಾರಣೆ ನಡೆಸಿದ ನಂತರ ವಶಕ್ಕೆ ಪಡೆಯಲಾಯಿತು. ದ್ವಾರಪಾಲಕ (ರಕ್ಷಕ ದೇವರು) ವಿಗ್ರಹಗಳು ಚಿನ್ನದ ಲೇಪಿತವಾಗಿವೆ ಎಂಬ ಅಂಶವನ್ನು ಮರೆಮಾಚಿ, ಬದಲಿಗೆ ಅಧಿಕೃತ ದೇವಾಲಯದ ದಾಖಲೆಗಳಲ್ಲಿ ಅವುಗಳನ್ನು ತಾಮ್ರದ ಹಾಳೆಗಳಾಗಿ ದಾಖಲಿಸಿದ ಆರೋಪ ಅವರ ಮೇಲಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಹಲವು ದಶಕಗಳಿಂದ ಶಬರಿಮಲೆ ದೇಗುಲದ ಜೊತೆಗೆ ನಂಟು ಹೊಂದಿರುವ ಕುಮಾರ್‌ಗೆ, 1998-99ರ ಅವಧಿಯಲ್ಲಿ ಗರ್ಭಗುಡಿ ಮತ್ತು ದ್ವಾರಪಾಲಕ ವಿಗ್ರಹಗಳು ಸ್ವರ್ಣ ಲೇಪಿತ ಎಂಬುದು ತಿಳಿದಿತ್ತು. ಆದಾಗ್ಯೂ, 2019 ರಲ್ಲಿ ದ್ವಾರಪಾಲಕ ತಟ್ಟೆಗಳನ್ನು ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಗೆ ಚಿನ್ನದ ಲೇಪನಕ್ಕಾಗಿ ಹಸ್ತಾಂತರಿಸಿದಾಗ, ಕುಮಾರ್ ಅವುಗಳನ್ನು ತಾಮ್ರ ತಟ್ಟೆಗಳೆಂದು ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಭಾರೀ ಮೊತ್ತದ ಚಿನ್ನಾಭರ ಕಳವಿಗೆ ಅನುವು ಮಾಡಿಕೊಟ್ಟಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ: Droupadi Murmu : ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಿದ ರಾಷ್ಟ್ರಪತಿ
ಇನ್ನು ಈ ಪ್ರಕಣಕ್ಕೆ ಸಂಬಂಧಿಸಿದಂತೆ ಉನ್ನಿಕೃಷ್ಣನ್ ಪೊಟ್ಟಿ ಮತ್ತು ಮಾಜಿ ಆಡಳಿತ ಅಧಿಕಾರಿ ಬಿ. ಮುರಾರಿ ಬಾಬು ಅವರನ್ನೂ ಅರೆಸ್ಟ್ ಮಾಡಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ಪೊಟ್ಟಿಯ ಆಪ್ತ ಸಹಾಯಕ ವಾಸುದೇವನ್ ಅವರನ್ನೂ ಎಸ್‌ಐಟಿ ಪ್ರಶ್ನಿಸಿದೆ. ದ್ವಾರಪಾಲಕ ವಿಗ್ರಹಗಳ ಹೆಚ್ಚುವರಿ ಚಿನ್ನದ ಹೊದಿಕೆಯ ಪೀಠವನ್ನು ಅವರು ತಮ್ಮ ವಶದಲ್ಲಿಟ್ಟುಕೊಂಡಿದ್ದರು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ನಂತರ ಕಳೆದ ತಿಂಗಳು ತಿರುವನಂತಪುರದಲ್ಲಿರುವ ಪಾಟಿಯ ಸಂಬಂಧಿಯೊಬ್ಬರ ಮನೆಯಿಂದ ಪೀಠವನ್ನು ವಶಪಡಿಸಿಕೊಳ್ಳಲಾಗಿದೆ.
ಎಸ್‌ಐಟಿ ಎರಡು ಸಂಬಂಧಿತ ಪ್ರಕರಣಗಳನ್ನು ತನಿಖೆ ನಡೆಸುತ್ತಿದೆ - ಒಂದು ದ್ವಾರಪಾಲಕ ವಿಗ್ರಹಗಳಿಂದ ಚಿನ್ನ ಕಳೆದುಹೋದ ಪ್ರಕರಣ ಮತ್ತು ಇನ್ನೊಂದು ಶ್ರೀಕೋವಿಲ್ (ಗರ್ಭಗುಡಿ) ಬಾಗಿಲಿನ ಚೌಕಟ್ಟುಗಳಿಂದ ಚಿನ್ನ ಕಾಣೆಯಾದ ಪ್ರಕರಣ. ಎರಡೂ ಸೆಟ್ ವಸ್ತುಗಳನ್ನು 2019 ರಲ್ಲಿ ಎಲೆಕ್ಟ್ರೋಪ್ಲೇಟಿಂಗ್‌ಗಾಗಿ ಪೊಟ್ಟಿಗೆ ಹಸ್ತಾಂತರಿಸಲಾಗಿತ್ತು. ಅಲ್ಲಿಂದ ನಂತರ ಈ ಚಿನ್ನಾಭರಣಗಳು ಕಾಣೆಯಾಗಿದ್ದವು.