ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Ranveer Allahbadia: ವಿಚಾರಣೆಗೆ ಹಾಜರಾಗದ ಯೂಟ್ಯೂಬರ್‌ ರಣವೀರ್‌ ತಂಡ: ಮತ್ತೆ ಸಮನ್ಸ್‌ ಜಾರಿ!

ಯೂಟ್ಯೂಬ್ ರಿಯಾಲಿಟಿ ಶೋ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಲೈಂಗಿಕತೆ ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆಗಳಿಗೆ ಸಂಬಂಧಿಸಿದಂತೆ ಯೂಟ್ಯೂಬರ್ಸ್‌ಗಳನ್ನು ರಾಷ್ಟ್ರೀಯ ಮಹಿಳಾ ಆಯೋಗವು (ಎನ್‌ಸಿಡಬ್ಲ್ಯು) ವಿಚಾರಣೆಗೆ ಕರೆದಿತ್ತು. ಆದರೆ ಅವರು ಹಾಜರಾಗಲು ವಿಫಲವಾಗಿದ್ದು, ಮತ್ತೊಮ್ಮೆ ಸಮನ್ಸ್ ಜಾರಿ ಮಾಡಲಾಗಿದೆ.

ಲೈಂಗಿಕತೆ ಕುರಿತು ಆಕ್ಷೇಪಾರ್ಹ ಹೇಳಿಕೆ- ವಿಚಾರಣೆಗೆ ಹಾಜರಾಗದ ಯೂಟ್ಯೂಬರ್ಸ್!

ಇಂಡಿಯಾಸ್ ಗಾಟ್ ಲೆಟೆಂಟ್ ಶೋನಲ್ಲಿ ಯೂಟ್ಯೂಬರ್ಸ್

Profile Deekshith Nair Feb 17, 2025 5:03 PM

ಮುಂಬೈ: ಯೂಟ್ಯೂಬರ್‌ ರಣವೀರ್‌ ಅಲ್ಲಾಬಾಡಿಯಾ(Ranveer Allahbadia) ಸೇರಿದಂತೆ ಅವರ ಜೊತೆಗಿನ ಉಳಿದ ಯೂಟ್ಯೂಬರ್ಸ್‌ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯೂಟ್ಯೂಬ್ ರಿಯಾಲಿಟಿ ಶೋ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ(India's Got Latent Show) ಪೋಷಕರು ಮತ್ತು ಲೈಂಗಿಕತೆ ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆಗಳಿಗೆ ಯೂಟ್ಯೂಬರ್ಸ್‌ ವಿರುದ್ಧ ದೇಶದಾದ್ಯಂತ ಪ್ರಕರಣ ದಾಖಲಾಗಿದೆ. ಈ ಮಧ್ಯೆ ಯೂಟ್ಯೂಬರ್ಸ್‌ ಅನ್ನು ರಾಷ್ಟ್ರೀಯ ಮಹಿಳಾ ಆಯೋಗವು (ಎನ್‌ಸಿಡಬ್ಲ್ಯು) ವಿಚಾರಣೆಗೆ ಕರೆದಿತ್ತು. ಆದರೆ ಅವರು ಹಾಜರಾಗಲು ವಿಫಲವಾಗಿದ್ದು, ಮತ್ತೊಮ್ಮೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಣವೀರ್ ಅಲ್ಲಾಬಾಡಿಯಾ ಸಮಯ್ ರೈನಾ, ಅಪೂರ್ವ ಮುಖಿಜಾ, ಜಸ್ಪ್ರೀತ್ ಸಿಂಗ್, ಆಶಿಶ್ ಚಂಚಲಾನಿ, ತುಷಾರ್ ಪೂಜಾರಿ, ಸೌರಭ್ ಬೋತ್ರಾ ಮತ್ತು ಬಲರಾಜ್ ಘಾಯ್ ವಿರುದ್ಧ ಮಹಿಳಾ ಆಯೋಗ ಫೆಬ್ರುವರಿ 17 ರಂದು ಮಧ್ಯಾಹ್ನ 12 ಗಂಟೆಗೆ ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ವೈಯಕ್ತಿಕ ಸುರಕ್ಷತೆ, ದೂರ ಪ್ರಯಾಣ ಹೀಗೆ ಸಾಕಷ್ಟು ಕಾರಣಗಳನ್ನು ನೀಡುವ ಮೂಲಕ ಅನೇಕರು ಆಯೋಗದ ಮುಂದೆ ಹಾಜರಾಗಲು ವಿಫಲರಾಗಿದ್ದಾರೆ ಎಂದು NCW ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಮತ್ತೊಮ್ಮೆ ಸಮನ್ಸ್‌ ಜಾರಿಯಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ವಿಚಾರಣೆಯನ್ನು ಮಾರ್ಚ್ 6 ಮತ್ತು 11 ರಂದು ನಿಗದಿಪಡಿಸಿದೆ.



ಕೊಲೆ ಬೆದರಿಕೆಗಳನ್ನು ಉಲ್ಲೇಖಿಸಿ ರಣವೀರ್ ಅಲ್ಲಾಬಾಡಿಯಾ ಅವರು ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡುವಂತೆ ವಿನಂತಿಸಿದ್ದಾರೆ. ಹೀಗಾಗಿ, ಆಯೋಗವು ತನ್ನ ವಿಚಾರಣೆಯನ್ನು ಮಾರ್ಚ್ 6 ಕ್ಕೆ ನಿಗದಿ ಮಾಡಿದೆ. ಸುರಕ್ಷತೆಯ ಕಾಳಜಿಯನ್ನು ವ್ಯಕ್ತಪಡಿಸಿದ ಮುಖಿಜಾ ಅವರ ವಿಚಾರಣೆಯನ್ನು ಮಾರ್ಚ್ 6ಕ್ಕೆ ಮರುನಿಗದಿ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ:Goa Murder Case: ವಿದೇಶಿ ಯುವತಿ ಮೇಲೆ ಅತ್ಯಾಚಾರ-ಕೊಲೆ; ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಇನ್ನು ಸಮಯ್ ರೈನಾ ಅವರು ಪೂರ್ವ ನಿಗದಿಯಂತೆ ಸದ್ಯ ಅಮೆರಿಕದಲ್ಲಿದ್ದು, ಅಲ್ಲಿಂದ ಹಿಂತಿರುಗಿದ ಬಳಿಕ ಎನ್‌ಸಿಡಬ್ಲ್ಯು ಮುಂದೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಹೀಗಾಗಿ, ಅವರ ವಿಚಾರಣೆಯನ್ನು ಮಾರ್ಚ್ 11ಕ್ಕೆ ನಿಗದಿಪಡಿಸಲಾಗಿದೆ. ಜಸ್ಪ್ರೀತ್ ಸಿಂಗ್ ಕೂಡ ಸದ್ಯ ಪ್ಯಾರಿಸ್ ಪ್ರವಾಸದಲ್ಲಿದ್ದು,ಮಾರ್ಚ್ 10ರೊಳಗೆ ಹಿಂತಿರುಗಲಿದ್ದಾರೆ. ಹೀಗಾಗಿ ಅವರ ವಿಚಾರಣೆಯನ್ನು ಮಾರ್ಚ್ 11ಕ್ಕೆ ನಿಗದಿಪಡಿಸಲಾಗಿದೆ. ಅನಾರೋಗ್ಯದ ಕಾರಣಕ್ಕಾಗಿ ಚಂಚಲಾನಿ ಅವರ ಪರವಾಗಿ ವಕೀಲರು ಹಾಜರಾಗಿದ್ದರು. ಅವರಿಗೂ ಮಾರ್ಚ್ 6 ರಂದು ಆಯೋಗದ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.

ಈ ಮಧ್ಯೆ, ಸಮನ್ಸ್‌ಗೆ ಪ್ರತಿಕ್ರಿಯಿಸದ ತುಷಾರ್ ಪೂಜಾರಿ, ಸೌರಭ್ ಬೋತ್ರಾ ಅವರನ್ನು ತರಾಟೆಗೆ ತೆಗೆದುಕೊಂಡ ಆಯೋಗವು, ಅವರಿಗೂ ಮಾರ್ಚ್ 6ಕ್ಕೆ ಹಾಜರಾಗುವಂತೆ ಸೂಚಿಸಿದೆ. ಬಲರಾಜ್ ಘಾಯ್ ಅವರು ಸದ್ಯ ವಿದೇಶದಲ್ಲಿದ್ದು, ಅಲ್ಲಿಂದ ಹಿಂದಿರುಗಿದ ನಂತರ ಮಾರ್ಚ್ 11 ರಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ