ಹೂಡಿಕೆದಾರರಿಗಾಗಿ ಸೆಬಿಯಿಂದ 'ಸಾರಥಿ' ಮೊಬೈಲ್ ಅಪ್ಲಿಕೇಶನ್ ಬಿಡುಗಡೆ
ಹೂಡಿಕೆದಾರರಿಗಾಗಿ ಸೆಬಿಯಿಂದ 'ಸಾರಥಿ' ಮೊಬೈಲ್ ಅಪ್ಲಿಕೇಶನ್ ಬಿಡುಗಡೆ

ನವದೆಹಲಿ: ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ಈಗ 'ಸಾರಥಿ' ಎಂಬ ಮೊಬೈಲ್ ಅಪ್ಲಿಕೇ ಶನ್ ಅನ್ನು ಬಿಡುಗಡೆ ಮಾಡಿದೆ.
ಹೂಡಿಕೆದಾರರಿಗೆ ಭದ್ರತಾ ಮಾರುಕಟ್ಟೆಗಳ ಮೂಲಭೂತ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ, ಜ್ಞಾನವನ್ನು ಇದು ಒದಗಿಸಲಿದೆ.
ಬಂಡವಾಳ ಮಾರುಕಟ್ಟೆ ಬಗ್ಗೆ ಹೂಡಿಕೆದಾರರಲ್ಲಿ ಸುಲಭವಾಗಿ ಜಾಗೃತಿ ಮೂಡಿಸಲು ಇದನ್ನು ಅಭಿವೃದ್ದಿ ಪಡಿಸಲಾಗಿದೆ ಎಂದು ಸೆಬಿ ಅಧ್ಯಕ್ಷ ಅಜಯ್ ತ್ಯಾಗಿ ಆಯಪ್ ಬಿಡುಗಡೆ ಸಂದರ್ಭದಲ್ಲಿ ಹೇಳಿದ್ದಾರೆ.
ಷೇರು ಪೇಟೆಗಳಲ್ಲಿ ಇತ್ತೀಚೆಗೆ ಚಿಲ್ಲರೆ ಹೂಡಿಕೆದಾರರ ಸಂಖ್ಯೆ ಹೆಚ್ಚಳ ಜೊತೆಗೆ, ಹೂಡಿಕೆಯ ಒಳಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಯಪ್ ಬಿಡುಗಡೆಗೊಳಿಸ ಲಾಗಿದೆ ಎಂಬುದು ವಿಶ್ಲೇಷಕರ ಅಭಿಮತವಾಗಿದೆ. ಮೊಬೈಲ್ ಫೋನ್‌ಗಳ ಮೂಲಕ ಅತಿ ಹೆಚ್ಚು ವಹಿವಾಟು ನಡೆಯುತ್ತಿರುವು ದರಿಂದ ಆಯಪ್ ವಿನ್ಯಾಸಗೊಳಿಸ ಲಾಗಿದೆ ಎಂದು ತ್ಯಾಗಿ ವಿವರಿಸಿದ್ದಾರೆ.
ಕೆವೈಸಿ ಪ್ರಕ್ರಿಯೆ, ವಹಿವಾಟು ಮತ್ತು ಇತ್ಯರ್ಥ, ಮ್ಯೂಚುವಲ್ ಫಂಡ್, ಈಚಿನ ಮಾರುಕಟ್ಟೆ ಬೆಳವಣಿಗೆಗಳು, ಹೂಡಿಕೆದಾರರ ಸಮಸ್ಯೆ ಇತ್ಯರ್ಥಪಡಿಸುವ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳ ಬಗ್ಗೆ ಈ ಆಯಪ್ ಅರಿವು ಮೂಡಿಸಲಿದೆ. ಈ ಆಯಪ್, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದೆ. ಮುಂಬರುವ ದಿನಗಳಲ್ಲಿ ಕೆಲವು ಪ್ರಾದೇಶಿಕ ಭಾಷೆಗಳಲ್ಲಿಯೂ ಈ ಆಯಪ್ ಲಭ್ಯವಾಗಲಿದೆ ಎಂದು ತ್ಯಾಗಿ ತಿಳಿಸಿದ್ದಾರೆ. ಆಯಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಇದು ಲಭ್ಯವಿದೆ.