ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ ಸತ್ಯಕಿ ಸಾವರ್ಕರ್: ಏನಿದು ವೀರ ಸಾವರ್ಕರ್ ಗೆ ಸಂಬಂಧಿಸಿದ ಪ್ರಕರಣ ?
ವಿನಾಯಕ ದಾಮೋದರ್ ಸಾವರ್ಕರ್ ಅವರು ಬ್ರಿಟಿಷ್ ಸರ್ಕಾರಕ್ಕೆ ಕ್ಷಮಾದಾನ ಕೋರಿ ಅರ್ಜಿ ಬರೆದಿದ್ದು, ಇದರಿಂದಾಗಿ ಅವರು ಜೈಲಿನಿಂದ ಬಿಡುಗಡೆಯಾದರು ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಂಡನ್ ನಲ್ಲಿ ಹೇಳಿಕೆ ನೀಡಿದ್ದರು. ಇದು ಸುಳ್ಳು ಎಂದು ಹೇಳಿರುವ ವಿನಾಯಕ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಅವರು ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಕಾಂಗ್ರೆಸ್ ನಾಯಕ (Congress leader) ರಾಹುಲ್ ಗಾಂಧಿ (Rahul Gandhi) ವಿರುದ್ಧ ವಿನಾಯಕ ದಾಮೋದರ್ ಸಾವರ್ಕರ್ (Vinayak Damodar Savarkar) ಅವರ ಮೊಮ್ಮಗ ಸತ್ಯಕಿ ಸಾವರ್ಕರ್ (Satyaki Savarkar) ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ (criminal defamation case) ಹೂಡಿದ್ದಾರೆ. ರಾಹುಲ್ ಗಾಂಧಿ ಅವರು ಲಂಡನ್ ನಲ್ಲಿ 2023ರಲ್ಲಿ ನೀಡಿರುವ ಹೇಳಿಕೆಗೆ ಸಂಬಂಧಿಸಿ ದೂರು ದಾಖಲಿಸಿರುವ ಅವರು ವಿನಾಯಕ ದಾಮೋದರ್ ಸಾವರ್ಕರ್ ಅವರು ಬ್ರಿಟಿಷ್ ಜೈಲಿನಿಂದ ಬಿಡುಗಡೆಯಾದದ್ದು ಕ್ಷಮಾದಾನ ಅರ್ಜಿಯಿಂದಾಗಿ ಅಲ್ಲ. ಅದು ರಾಜಕೀಯ ಪ್ರಯತ್ನಗಳ ಫಲ ಎಂದು ಸತ್ಯಕಿ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಮೋಲ್ ಶಿಂಧೆ ಅವರ ಮುಂದೆ ಬುಧವಾರ ಪುಣೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಸತ್ಯಕಿ ಸಾವರ್ಕರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವೀರ ಸಾವರ್ಕರ್ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದರು.
ಕೊಲೆ ಮಾಡಿದರೂ ಪಶ್ಚಾತಾಪವೇ ಇಲ್ಲ; ಮಾಧ್ಯಮದತ್ತ ಮಧ್ಯ ಬೆರಳು ತೋರಿಸಿ ಅಸಭ್ಯ ವರ್ತನೆ ತೋರಿದ ಸಿಯಾ ಗೋಯಲ್
ರಾಹುಲ್ ಗಾಂಧಿ ಅವರ ಭಾಷಣದ ಕುರಿತು ಅರ್ಜಿಯಲ್ಲಿ ಉಲ್ಲೇಖಿಸಿರುವ ಅವರು, ಸಾವರ್ಕರ್ ಅವರ ಬಿಡುಗಡೆಗೆ ಇವು ಕಾರಣವಲ್ಲ ಎಂದು ಸತ್ಯಕಿ ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದರು.
ಅಮೃತಕಾಲ ವೆಬ್‌ಸೈಟ್ ಮಾಹಿತಿ ಪ್ರಕಾರ ಸಾವರ್ಕರ್ ಅವರನ್ನು 1911 ರಿಂದ 12 ವರ್ಷಗಳ ಕಾಲ ಅಂಡಮಾನ್‌ನ ಸೆಲ್ಯುಲಾರ್ ಜೈಲಿನಲ್ಲಿ ಇರಿಸಲಾಗಿತ್ತು. 1924ರಲ್ಲಿ, ಅವರನ್ನು ಭಾರತದ ಮುಖ್ಯ ಭೂಭಾಗದಲ್ಲಿರುವ ಜೈಲಿಗೆ ವರ್ಗಾಯಿಸಲಾಯಿತು. 1937ರಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕ ಒತ್ತಡದ ಹಿನ್ನೆಲೆಯಲ್ಲಿ 1923ರಲ್ಲಿ ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಅಧ್ಯಕ್ಷತೆಯಲ್ಲಿ ನಡೆದ ಕಾಕಿನಾಡ ಕಾಂಗ್ರೆಸ್ ಅಧಿವೇಶನದಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸುವ ಮೊದಲು ಕಾಂಗ್ರೆಸ್ ಇದೇ ರೀತಿಯ ನಿರ್ಣಯ ಅಥವಾ ಮಸೂದೆಯನ್ನು ಅಂಗೀಕರಿಸಿದ್ದರೆ ಅವರೊಂದಿಗೆ ಸುಖದೇವ್ ಮತ್ತು ರಾಜಗುರು ಗಲ್ಲಿಗೇರಿಸುವುದನ್ನು ತಪ್ಪಿಸಬಹುದಿತ್ತು ಎಂದು ಸತ್ಯಕಿ ತಿಳಿಸಿದ್ದಾರೆ.
1937ರಲ್ಲಿ ರಾಷ್ಟ್ರೀಯ ಅಸೆಂಬ್ಲಿ ಮಾಡಿದ ಪ್ರಯತ್ನಗಳ ಕಾರಣದಿಂದಾಗಿ ಸಾವರ್ಕರ್ ಅವರನ್ನು ಬಿಡುಗಡೆ ಮಾಡಲಾಯಿತು. ಈ ಸಭೆಯನ್ನು ಕಾಂಗ್ರೆಸ್ ನಡೆಸಿರಲಿಲ್ಲ ಎಂದು ನ್ಯಾಯಾಲಯವು ಹೇಳಿದೆ. ಕ್ಷಮಾದಾನ ಅರ್ಜಿಯ ಕುರಿತು ನ್ಯಾಯಾಲಯ ಸತ್ಯಕಿ ಅವರನ್ನು ಪ್ರಶ್ನಿಸಿದ್ದು, ಈ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 7ರಂದು ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.
ಏನಿದು ಪ್ರಕರಣ?
2023ರ ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ಮಾಡಿದ ಭಾಷಣದಲ್ಲಿ ಸಾವರ್ಕರ್ ಮತ್ತು ಅವರ ಕೆಲವು ಸಹಚರರು ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿ ಸಾವರ್ಕರ್ ಅವರ ಬರಹಗಳನ್ನು ಉಲ್ಲೇಖಿಸಿದ್ದರು.
ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿರುವ ಸತ್ಯಕಿ ಸಾವರ್ಕರ್, ಸಾವರ್ಕರ್ ಅವರ ಪ್ರಕಟಿತ ಕೃತಿಗಳು ಅಥವಾ ಬರಹಗಳಲ್ಲಿ ಅಂತಹ ಯಾವುದೇ ಘಟನೆಯ ಉಲ್ಲೇಖವಿಲ್ಲ. ಇತಿಹಾಸವನ್ನು ವಿರೂಪಗೊಳಿಸುವ ಮೂಲಕ ಸಾವರ್ಕರ್ ಅವರ ಪ್ರತಿಷ್ಠೆಗೆ ಕಳಂಕ ತರಲು ರಾಹುಲ್ ಗಾಂಧಿ ಆಧಾರ ರಹಿತ, ಮಾನನಷ್ಟಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು.
ಮೇಘಾಲಯ ಹನಿಮೂನ್ ಮರ್ಡರ್ ಕೇಸ್; ಸೋನಂ ರಘುವಂಶಿ ಜಾಮೀನು ರದ್ಧತಿಗೆ ಸುಪ್ರೀಂ ನಿರಾಕರಣೆ
ಇದಕ್ಕೆ ಸಂಬಂಧಿಸಿ ಅವರು ರಾಹುಲ್ ಗಾಂಧಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 500 ರ ಅಡಿಯಲ್ಲಿ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ.