ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶಾಲೆಯಲ್ಲಿಯೇ ಬ್ಲೇಡ್‌ನಿಂದ ಕೈ ಕೊಯ್ದುಕೊಂಡ 35 ವಿದ್ಯಾರ್ಥಿಗಳು! ಏನಿದರ ನಿಗೂಢ ರಹಸ್ಯ?

School Students Injure Their Hands: 35 ಮಂದಿ ವಿದ್ಯಾರ್ಥಿಗಳು ಶಾಲಾ ಆವರಣದೊಳಗೆ ಬ್ಲೇಡ್‌ನಿಂದ ತಮ್ಮ ಕೈಗಳನ್ನು ಕತ್ತರಿಸಿರುವ ನಿಗೂಢ ಘಟನೆ ಛತ್ತೀಸ್‌ಗಢದ ಹಳ್ಳಿಯೊಂದರಲ್ಲಿ ನಡೆದಿದೆ. 6 ರಿಂದ 8 ನೇ ತರಗತಿಯ 21 ಬಾಲಕರು ಮತ್ತು 14 ಬಾಲಕಿಯರು ಒಬ್ಬರನ್ನೊಬ್ಬರು ನಕಲು ಮಾಡಿ ತಮ್ಮನ್ನು ತಾವು ಗಾಯಗೊಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ರಾಯ್ಪುರ, ಫೆ.18: 35 ವಿದ್ಯಾರ್ಥಿಗಳು ಶಾಲಾ ಆವರಣದೊಳಗೆ ಬ್ಲೇಡ್‌ನಿಂದ ತಮ್ಮ ಕೈಗಳನ್ನು ಕತ್ತರಿಸಿರುವ ನಿಗೂಢ ಘಟನೆ ಛತ್ತೀಸ್‌ಗಢದ (Chhattisgarh) ಹಳ್ಳಿಯೊಂದರಲ್ಲಿ ನಡೆದಿದೆ. ಧಮತರಿ ಜಿಲ್ಲೆಯ ಕುರುದ್ ಬ್ಲಾಕ್‌ನಲ್ಲಿರುವ ದಹ್ದಾಹಾ ಗ್ರಾಮದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಗೆ ಏನು ಕಾರಣ ಎಂಬುದು ತಿಳಿದುಬಂದಿಲ್ಲ. ಈ ಘಟನೆಯು ಪೋಷಕರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ್ದು, ಶಾಲೆಯ ಮೇಲ್ವಿಚಾರಣೆ ಮತ್ತು ಮಕ್ಕಳ ಸುರಕ್ಷತೆಯ (child safety) ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮೂಲಗಳ ಪ್ರಕಾರ, 6 ರಿಂದ 8 ನೇ ತರಗತಿಯ 21 ಬಾಲಕರು ಮತ್ತು 14 ಬಾಲಕಿಯರು ಒಬ್ಬರನ್ನೊಬ್ಬರು ನಕಲು ಮಾಡಿ ತಮ್ಮನ್ನು ತಾವು ಗಾಯಗೊಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಆತಂಕಕಾರಿ ಪ್ರವೃತ್ತಿ ಸುಮಾರು ಒಂದು ತಿಂಗಳ ಕಾಲ ಮುಂದುವರೆದಿದ್ದು, ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಫೆಬ್ರವರಿ 13 ರಂದು ಪೋಷಕರು ತಮ್ಮ ಮಕ್ಕಳ ಕೈಗಳಲ್ಲಿರುವ ಗುರುತುಗಳನ್ನು ಗಮನಿಸಿ ಶಾಲಾ ಆಡಳಿತಕ್ಕೆ ತಿಳಿಸಿದ ಬಳಿಕ ವಿಚಾರ ಬೆಳಕಿಗೆ ಬಂದಿತು. ನಂತರ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಘಟನೆ ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಕ್ಯಾಂಪಸ್ ಒಳಗೆ ಬ್ಲೇಡ್‌ಗಳು ವಿದ್ಯಾರ್ಥಿಗಳಿಗೆ ಹೇಗೆ ಸಿಕ್ಕಿತು? ಶಿಕ್ಷಕರು ವಾರಗಳವರೆಗೆ ಗಾಯಗಳನ್ನು ಏಕೆ ಗಮನಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಗ್ರಾಮದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆ ಸೇರಿದಂತೆ ಹಲವು ಕಳವಳ ವ್ಯಕ್ತವಾಗುತ್ತಿದೆ.

ಸಹೋದರಿಯರ ಆತ್ಮಹತ್ಯೆ ಕೇಸ್‌; ಬಾಲಕಿಯರ ತಂದೆಗೆ ಮೂವರು ಪತ್ನಿಯರು! ಬಗೆದಷ್ಟು ಬಯಲಾಗ್ತಿದೆ ರಹಸ್ಯ

ಶಾಲಾ ಅಧಿಕಾರಿಗಳು ಸುರಕ್ಷತಾ ಕ್ರಮಗಳನ್ನು ಬಲಪಡಿಸುತ್ತಿರುವುದಾಗಿ ಹೇಳಿದ್ದಾರೆ. ಆದರೆ, ಮಕ್ಕಳ ಕೈಯಲ್ಲಿನ ಗಾಯದ ಗುರುತುಗಳನ್ನು ಪತ್ತೆಹಚ್ಚದಿರುವುದು ಟೀಕೆಗಳನ್ನು ತೀವ್ರಗೊಳಿಸಿದೆ. ಈ ಘಟನೆಯು ಸರ್ಕಾರಿ ಶಾಲೆಗಳಲ್ಲಿನ ಮೇಲ್ವಿಚಾರಣೆ ಮತ್ತು ಮಕ್ಕಳ ಒಟ್ಟಾರೆ ಸುರಕ್ಷತೆಯ ಮೇಲೆ ಪ್ರಶ್ನೆ ಮೂಡಿಸಿದೆ. ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ನಭ್ ಸಿಂಗ್ ಅವರು ಮಕ್ಕಳ ಆನ್ಲೈನ್ ಗೇಮಿಂಗ್ ಚಟ ಹಾಗೂ ಮಾದಕದ್ರವ್ಯ ಸೇವನೆ ಬಗ್ಗೆ ತಳ್ಳಿ ಹಾಕಿದರು.

ಫೆಬ್ರವರಿ 13 ರಂದು ಘಟನೆಯ ಬಗ್ಗೆ ನಮಗೆ ತಿಳಿದಾಗ, ಇದರಲ್ಲಿ ಭಾಗವಾಗಿದ್ದ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್‌ಗಾಗಿ ನಾವು ತಂಡವನ್ನು ಕಳುಹಿಸಿದ್ದೇವೆ. ಪೋಷಕರ ಮೊಬೈಲ್ ಫೋನ್‌ಗಳನ್ನು ಸಹ ಪರಿಶೀಲಿಸಿದ್ದೇವೆ. ಮಕ್ಕಳು ಯಾವುದೇ ಗೇಮಿಂಗ್ ವ್ಯಸನಕ್ಕೆ ಒಳಗಾಗಿಲ್ಲ. ನಾವು ವಿದ್ಯಾರ್ಥಿಗಳೊಂದಿಗೆ ಮಾತನಾಡಿದಾಗ, ಪ್ರಾಥಮಿಕ ವಿಚಾರಣೆಯ ಪ್ರಕಾರ ಮಾದಕದ್ರವ್ಯ ಸೇವನೆಯನ್ನು ತಳ್ಳಿಹಾಕಲಾಗಿದೆ ಎಂದು ಅವರು ಹೇಳಿದರು.

ಇತ್ತೀಚೆಗೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿತ್ತು. ಆನ್‌ಲೈನ್ ಗೇಮ್ ವ್ಯಸನಕ್ಕೆ ಬಲಿಯಾದ ಮೂವರು ಅಪ್ರಾಪ್ತ ಸಹೋದರಿಯರು ತಮ್ಮ ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಗೆ ದೇಶವೇ ಬೆಚ್ಚಿಬಿದ್ದಿತ್ತು. ಈ ದುರ್ಘಟನೆ ಫೆಬ್ರವರಿ 4ರ ತಡರಾತ್ರಿ ಸುಮಾರು 2 ಗಂಟೆಗೆ ನಡೆದಿತ್ತು. ಆನ್‌ಲೈನ್ ಗೇಮಿಂಗ್ ಚಟವು ಇಂದಿನ ಯುವಜನತೆ ಮೇಲೆ ಎಷ್ಟು ಗಂಭೀರ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇದು ತಾಜಾ ಉದಾಹರಣೆ.