ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ; ಓರ್ವ ಮಾವೋವಾದಿ ಸಾವು

Security forces operation in Chhattisgarh: ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳು ನಡೆಸಿದ ಮಾವೋವಾದಿ ವಿರೋಧಿ ಕಾರ್ಯಾಚರಣೆಯ ವೇಳೆ ಗುಂಡಿನ ಚಕಮಕಿ ಸಂಭವಿಸಿ, ಓರ್ವ ಮಾವೋವಾದಿ ಹತನಾಗಿದ್ದಾನೆ. ಕಾರ್ಯಾಚರಣೆ ಪ್ರದೇಶದಲ್ಲಿ ಶೋಧ ಮುಂದುವರಿದಿದ್ದು, ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ; ಮಾವೋವಾದಿ ಸಾವು

ಸಾಂದರ್ಭಿಕ ಚಿತ್ರ -

Priyanka P
Priyanka P Feb 5, 2026 4:32 PM

ರಾಯ್‌ಪುರ, ಫೆ. 5: ಛತ್ತೀಸ್‌ಗಢದ (Chhattisgarh) ಬಿಜಾಪುರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಗುರುವಾರ (ಫೆಬ್ರವರಿ 5) ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮಾವೋವಾದಿ (Naxalite) ಹತನಾಗಿದ್ದಾನೆ. ಇದರೊಂದಿಗೆ ಈ ವರ್ಷ ರಾಜ್ಯದಲ್ಲಿ ಸಾವನ್ನಪ್ಪಿದ ಎಡಪಂಥೀಯ ದಂಗೆಕೋರರ ಸಂಖ್ಯೆ 23ಕ್ಕೆ ತಲುಪಿದೆ. ಗುರುವಾರ ಬೆಳಗ್ಗೆ 7.30ರ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಗೀಡಾದ ಮಾವೋವಾದಿಯ ಮೃತದೇಹ ಮತ್ತು ಎಕೆ -47 ರೈಫಲ್ ಪತ್ತೆಯಾಗಿದೆ. ಸ್ಥಳದಲ್ಲಿ ಗುಂಡಿನ ದಾಳಿ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಕಾರ್ಯಾಚರಣೆ ಮುಗಿದ ನಂತರ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಧಿಕೃತವಾಗಿ ಸತ್ತ ಮಾವೋವಾದಿಯ ಗುರುತು ದೃಢೀಕರಿಸಿಲ್ಲ. ಮೂಲಗಳ ಪ್ರಕಾರ ಆತನನ್ನು ಉಧಮ್ ಸಿಂಗ್ ಎಂದು ಗುರುತಿಸಲಾಗಿದೆ. ಆತ ಮಾವೋವಾದಿ ವಿಭಾಗೀಯ ಸಮಿತಿ ಸದಸ್ಯನಾಗಿದ್ದ. ಜನವರಿ 3ರಂದು, ಬಿಜಾಪುರ ಸೇರಿದಂತೆ ಬಸ್ತಾರ್‌ ಪ್ರದೇಶದಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 14 ಮಾವೋವಾದಿಗಳನ್ನು ಗುಂಡಿಕ್ಕಿ ಕೊಲ್ಲಲಾಯಿತು. ಕಳೆದ ವರ್ಷ, ರಾಜ್ಯಾದ್ಯಂತ 285 ಮಾವೋವಾದಿಗಳು ಹತರಾಗಿದ್ದರು

ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ; ಇಬ್ಬರು ಗ್ರಾಮಸ್ಥರು ಬಲಿ

ಎಡಪಂಥೀಯ ದಂಗೆಯನ್ನು ಕೊನೆಗೊಳಿಸಲು ಕೇಂದ್ರ ಸರ್ಕಾರ ಮಾರ್ಚ್ 31ರ ಗಡುವು ಸಮೀಪಿಸುತ್ತಿದ್ದಂತೆ ಗುರುವಾರ ಬಿಜಾಪುರ್‌ದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ನಿಷೇಧಿತ ಮಾವೋವಾದಿ ಸಂಘಟನೆಯ ಉನ್ನತ ನಾಯಕತ್ವ ಕುಸಿತಕ್ಕೊಳಗಾದ ಹಿನ್ನೆಲೆಯಲ್ಲಿ, ಇತ್ತೀಚಿನ ವರ್ಷಗಳಲ್ಲಿ ನೂರಾರು ಮಾವೋವಾದಿಗಳು ಎನ್‌ಕೌಂಟರ್‌ಗಳಲ್ಲಿ ಹತರಾಗಿದ್ದು, ಹಲವರು ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ವರ್ಷ ಮೇಯಲ್ಲಿ ಮಾವೋವಾದಿ ಮುಖ್ಯಸ್ಥ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಅವರ ಹತ್ಯೆಯು ಎಡಪಂಥೀಯ ದಂಗೆಯ ವಿರುದ್ಧದ ಅತ್ಯಂತ ಮಹತ್ವದ ಕಾರ್ಯಾಚರಣೆ ಎನಿಇಕೊಂಡಿತು.

ಅಬುಜ್‌ಮರ್ ಅರಣ್ಯ ಈಗ ನಕ್ಸಲ್ ಮುಕ್ತ: ಅಮಿತ್ ಶಾ ಘೋಷಣೆ

ರಾಯ್‌ಪುರ ಪೊಲೀಸ್ ವಲಯ ನಕ್ಸಲ್ ಮುಕ್ತ

ಮಾವೋವಾದಿ ಸಿದ್ಧಾಂತ, ಕಾಡುಗಳಲ್ಲಿನ ಕಷ್ಟದ ಜೀವನ, ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯ ಕಾರಣದಿಂದ 47 ಲಕ್ಷ ರೂ. ಬಹುಮಾನ ಹೊಂದಿದ್ದ ಒಂಭತ್ತು ಮಾವೋವಾದಿಗಳು ಜನವರಿ 23ರಂದು ಪೋಲೀಸರ ಮುಂದೆ ಶರಣಾಗಿದ್ದರು. ಇವರಿಂದ ಇನ್ಸಾಸ್ ರೈಫಲ್‌ಗಳು, ಎರಡು ಎಸ್‌ಎಲ್ಆರ್‌ಗಳು, ಒಂದು ಕಾರ್ಬೈನ್, ಮಜಲ್ ಲೋಡಿಂಗ್ ಗನ್ ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಮೂಲಕ ಛತ್ತೀಸ್‌ಗಢದ ಧಮ್ತಾರಿ ಜಿಲ್ಲೆಯ ರಾಯ್‌ಪುರ ಪೊಲೀಸ್ ವಲಯ ನಕ್ಸಲ್ ಮುಕ್ತವಾಗಿದೆ.

ಶರಣಾಗಿರುವ ಮಾವೋವಾದಿಗಳಲ್ಲಿ ನಾಗ್ರಿ ಮತ್ತು ಸೀತಾನದಿ ಪ್ರದೇಶ ಸಮಿತಿ, ಒಡಿಶಾ ರಾಜ್ಯ ಮಾವೋವಾದಿಗಳ ಸಮಿತಿ, ಧಮ್ತಾರಿ, ಗರಿಯಾಬಂದ್, ನುವಾಪಾದ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈನ್‌ಪುರ್ ಸ್ಥಳೀಯ ಗೆರಿಲ್ಲಾ ಸ್ಕ್ವಾಡ್ (ಎಲ್‌ಜಿಎಸ್)ಗೆ ಸೇರಿದವರು, ಏಳು ಮಹಿಳೆಯರು ಇದ್ದರು.