ಪಾನ್ ಮಸಾಲಾ ಉದ್ಯಮದ ದೊರೆ ಕಮಲ್ ಕಿಶೋರ್ ಚೌರಾಸಿಯಾ ಸೊಸೆ ನೇಣು ಬಿಗಿದು ಆತ್ಮಹತ್ಯೆ
Pan Masala: ಪಾನ್ ಮಸಾಲಾ ಉದ್ಯಮಿ ಕಮಲ್ ಕಿಶೋರ್ ಚೌರಾಸಿಯಾ ಅವರ ಸೊಸೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅವರು ತಮ್ಮ ಜೀವನವನ್ನು ಅಂತ್ಯ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಪಾನ್ ಮಸಾಲಾ ಉದ್ಯಮಿಯ ಸೊಸೆ ನೇಣು ಬಿಗಿದು ಆತ್ಮಹತ್ಯೆ (ಸಂಗ್ರಹ ಚಿತ್ರ) -
ನವದೆಹಲಿ: ಕಮಲಾ ಪಸಂದ್ ಮತ್ತು ರಾಜಶ್ರೀ ಬ್ರ್ಯಾಂಡ್‌ಗಳ ಖ್ಯಾತಿಯ ಪಾನ್ ಮಸಾಲಾ (Pan Masala) ದೊರೆ ಕಮಲ್ ಕಿಶೋರ್ ಚೌರಾಸಿಯಾ (Kishore Chaurasia) ಅವರ ಸೊಸೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಕ್ಷಿಣ ದೆಹಲಿಯ ಐಷಾರಾಮಿ ವಸಂತ್ ವಿಹಾರ್‌ನಲ್ಲಿರುವ ಕುಟುಂಬದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಕಮಲ್ ಕಿಶೋರ್ ಅವರ ಪುತ್ರ ಹರ್‌ಪ್ರೀತ್ ಅವರನ್ನು ವಿವಾಹವಾಗಿದ್ದ 40 ವರ್ಷದ ದೀಪ್ತಿ ಚೌರಾಸಿಯಾ ಮಂಗಳವಾರ ಮಧ್ಯಾಹ್ನ ಕುಟುಂಬದ ಐಷಾರಾಮಿ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ, ಅವರು ದುಪ್ಪಟ್ಟಾ ಬಳಸಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಅವರ ಕೋಣೆಯಲ್ಲಿ ದೊರೆತ ಒಂದು ಪತ್ರದಲ್ಲಿ ತನ್ನ ಸಾವಿಗೆ ಯಾರನ್ನೂ ದೂಷಿಸುವುದಿಲ್ಲ ಎಂದು ಬರೆದಿದ್ದಾರೆ.
Robbery Case: 50 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕದ್ದು ವೃದ್ಧ ಎಸ್ಕೇಪ್
ಸಂಬಂಧದಲ್ಲಿ ಪ್ರೀತಿ ಮತ್ತು ವಿಶ್ವಾಸವಿಲ್ಲದಿದ್ದರೆ, ಜೀವನಕ್ಕೆ ಅರ್ಥವೇನಿದೆ? ಎಂದು ಆತ್ಮಹತ್ಯಾ ಪತ್ರದಲ್ಲಿ ಬರೆದಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಕೌಟುಂಬಿಕ ಸಮಸ್ಯೆಗಳು ದೀಪ್ತಿಯನ್ನು ಸಾವಿನ ಅಂಚಿಗೆ ತಳ್ಳಿವೆ ಎಂದು ಪೊಲೀಸರು ಶಂಕಿಸಿದ್ದು, ಈ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ. ದೀಪ್ತಿ ಮತ್ತು ಹರ್‌ಪ್ರೀತ್ 2010ರಲ್ಲಿ ವಿವಾಹವಾದರು. ಈ ದಂಪತಿಗೆ 14 ವರ್ಷದ ಮಗನಿದ್ದಾನೆ. ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ವೈದ್ಯರ ತಂಡವು ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಿದೆ. ಈ ದುರಂತ ಪ್ರಕರಣದ ಬಗ್ಗೆ ಪೊಲೀಸರು ಇನ್ನೂ ಯಾವುದೇ ಸಾರ್ವಜನಿಕ ಹೇಳಿಕೆ ನೀಡಿಲ್ಲ.
ಪತಿ ಮನೆಯಲ್ಲಿ ಕಿರುಕುಳ; ನವವಿವಾಹಿತೆ ಆತ್ಮಹತ್ಯೆ
ನವವಿವಾಹಿತೆಯೊಬ್ಬಳು ಪತಿಯ ಹಾಗೂ ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಮದುವೆಯಾದ 6 ತಿಂಗಳಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮದ ಬಳಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ನವವಿವಾಹಿತೆಯನ್ನು ಲತಾ (25) ಎಂದು ಗುರುತಿಸಲಾಗಿದೆ. ವಾಟ್ಸಪ್‌ನಲ್ಲಿ ಡೆತ್ ನೋಟ್ ಬರೆದಿಟ್ಟಿರುವ ಲತಾ, ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
Viral Video: ಥಾರ್‌ಗೆ ಹಗ್ಗ ಕಟ್ಟಿ ಎಟಿಎಂ ರಾಬರಿಗೆ ಯತ್ನ
2025ರ ಏಪ್ರಿಲ್ 14ರಂದು ಶಿಕಾರಿಪುರದ ಗುರುರಾಜ್ ಜೊತೆಗೆ ಲತಾ ವಿವಾಹವಾಗಿತ್ತು. ಭದ್ರಾವತಿಯ ಹಂಚಿನ ಸಿದ್ದಾಪುರದ ನಿವಾಸಿಯಾಗಿರುವ ಲತಾ ಬಿಎಸ್‌ಸಿ ಮತ್ತು ಬಿಎಡ್ ಪದವೀಧರೆ ಆಗಿದ್ದರು. ಪತಿ ಗುರುರಾಜ್ ಬಿಆರ್‌ಪಿಯ ಕೆಪಿಸಿಎಲ್‌ನಲ್ಲಿ ಎಇಇ ಆಗಿದ್ದಾರೆ. ಆರು ತಿಂಗಳ ಹಿಂದೆಯಷ್ಟೇ ಲತಾ ಗುರುರಾಜ್‍ನನ್ನು ಮದುವೆಯಾಗಿದ್ದರು. ಪತಿ ಹಾಗೂ ಮನೆಯವರ ಕಿರುಕುಳದ ಬಗ್ಗೆ ಡೆತ್‌ನೋಟ್‍ನಲ್ಲಿ ಬರೆದಿದ್ದಾರೆ. ಕಿರುಕುಳದಿಂದ ಬೇಸತ್ತು ಲತಾ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ.
ನವೆಂಬರ್ 23ರಂದು ಲತಾ ನಾಲೆಗೆ ಹಾರಿದ್ದಾರೆ. ಸದ್ಯ ಶವಕ್ಕಾಗಿ ಇದೀಗ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನೆ ಕುರಿತಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬಳಿಕ ಲತಾ ಅವರ ಪತಿ ಹಾಗೂ ಆತನ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ.