Self Harming: ಗೂಡ್ಸ್ ರೈಲಿನಡಿಗೆ ಹಾರಿ ಮಗುವಿನೊಂದಿಗೆ ದಂಪತಿ ಆತ್ಮಹತ್ಯೆ; ಹೃದಯಾಘಾತದಿಂದ ಅಜ್ಜಿ ಸಾವು
ಯಾವುದೋ ಕಾರಣಕ್ಕಾಗಿ ನಡೆದ ಜಗಳ ಆತ್ಮಹತ್ಯೆಯಲ್ಲಿ ಕೊನೆಯಾಗಿದೆ. ಆಂಧ್ರ ಪ್ರದೇಶದ ದಂಪತಿ ಒಂದೂವರೆ ವರ್ಷದ ಮಗುವಿನೊಂದಿಗೆ ಗೂಡ್ಸ್ ರೈಲಿನ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ಅವರು ಮನೆಯಲ್ಲಿ ತೀವ್ರವಾಗಿ ಜಗಳ ಮಾಡಿದ್ದು ಮನೆಯಲ್ಲಿದ್ದ ಅಜ್ಜಿ ಅವರನ್ನು ತಡೆದಿದ್ದಾರೆ. ಆಗ ಸಿಟ್ಟಿನಿಂದ ಎಲ್ಲರೂ ಮನೆಯಿಂದ ಹೊರ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ -

ಹೈದರಾಬಾದ್: ಜಗಳವಾಡಿದ ದಂಪತಿ ಒಂದೂವರೆ ವರ್ಷದ ಮಗುವಿನೊಂದಿಗೆ ಗೂಡ್ಸ್ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರ ಪ್ರದೇಶದಲ್ಲಿ (Andrapradesh) ಭಾನುವಾರ ನಡೆದಿದೆ. ಶ್ರೀರಾಮುಲು (35), ಸಿರಿಷಾ (30) ತಮ್ಮ ಒಂದೂವರೆ ವರ್ಷದ ಮಗ ರಿತ್ವಿಕ್ ಜತೆ ಸೇರಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಕಡಪ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆತ್ಮಹತ್ಯೆಗೆ (Crime news) ಕಾರಣವನ್ನು ತನಿಖೆ ನಡೆಸುತ್ತಿದ್ದಾರೆ.
ಶ್ರೀರಾಮುಲು ಮತ್ತು ಸಿರಿಷಾ ದಂಪತಿ ಭಾನುವಾರ ಸಂಜೆ ತೀವ್ರ ಜಗಳ ಮಾಡಿಕೊಂಡಿದ್ದಾರೆ. ಶ್ರೀರಾಮುಲು ಅವರ ಅಜ್ಜಿ ಮಧ್ಯಪ್ರವೇಶಿಸಿ ಅವರನ್ನು ಗದರಿಸಿದ್ದಾರೆ. ಇದಾದ ಬಳಿಕ ದಂಪತಿ ಕೋಪದಿಂದ ಮಗುವಿನೊಂದಿಗೆ ಮನೆಯಿಂದ ಹೊರಟು ಹೋಗಿದ್ದಾರೆ. ಅನಂತರ ಅವರು ಶವವಾಗಿ ರೈಲು ಹಳಿಯ ಮೇಲೆ ಪತ್ತೆಯಾಗಿದ್ದಾರೆ.
ಗೂಡ್ಸ್ ರೈಲು ಬರುತ್ತಿದ್ದ ವೇಳೆ ಶ್ರೀರಾಮುಲು ದಂಪತಿ ಮಗುವಿನೊಂದಿಗೆ ರೈಲು ಹಳಿಗಳ ಮೇಲೆ ನಿಂತಿದ್ದು, ರೈಲು ಅವರಿಗೆ ಡಿಕ್ಕಿಯಾಗಿದೆ. ಪರಿಣಾಮ ಶವಗಳು ಹಳಿಗಳಾದ್ಯಂತ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: Pak Woman arrest: ನೇಪಾಳ ಜೈಲಿನಿಂದ ತಪ್ಪಿಸಿಕೊಂಡ ಪಾಕ್ ಮಹಿಳೆ ಬಂಧನ
ದುರಂತವೆಂದರೆ ದಂಪತಿ ಮನೆಯಿಂದ ಹೋದ ಕೆಲಕ್ಷಣಗಳಲ್ಲಿ ಶ್ರೀರಾಮುಲು ಅವರ ಅಜ್ಜಿ ಹೃದಯಾಘಾತದಿಂದ ಸಾವನ್ನಪ್ಪಿದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಪೊಲೀಸರು ಪ್ರಸ್ತುತ ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ ಮತ್ತು ಈಗಾಗಲೇ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಒಂದೇ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾಜಸ್ಥಾನದ ರಾಜಧಾನಿ ಜೈಪುರದ ಕರ್ಣಿ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಿರಾಪುರ ಕಾಲೋನಿಯಲ್ಲಿ ನಡೆದಿದೆ. ಯಾರೂ ಮನೆಯಿಂದ ಹೊರಗೆ ಬಾರದ ಕಾರಣ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ನೋಡಿದಾಗ ಪತಿ, ಪತ್ನಿ ಮತ್ತು ಅವರ ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ರೂಪೇಂದ್ರ ಶರ್ಮಾ, ಸುಶೀಲಾ ಶರ್ಮಾ, ಪುಲ್ಕಿತ್ ಶರ್ಮಾ ಮೃತರು. ಅವರ ಶವಗಳು ಪ್ರತ್ಯೇಕ ಕೊಠಡಿಗಳಲ್ಲಿ ಪತ್ತೆಯಾಗಿದ್ದವು. ಪ್ರಾಥಮಿಕ ತನಿಖೆಯ ಪ್ರಕಾರ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೂಪೇಂದ್ರ ಶರ್ಮಾ ಇತ್ತೀಚೆಗೆ ರಾಜಸ್ಥಾನ ಬ್ಯಾಂಕಿನಿಂದ ವಿಆರ್‌ಎಸ್ ಪಡೆದಿದ್ದರೆ, ಅವರ ಮಗ ಖಾಸಗಿ ಬ್ಯಾಂಕಿನಲ್ಲಿ ಉದ್ಯೋಗದಲ್ಲಿದ್ದ ಎನ್ನಲಾಗಿದೆ.
ಒಂದು ಪುಟದ ಆತ್ಮಹತ್ಯೆ ಪತ್ರ ಸಿಕ್ಕಿದ್ದು ಅದರಲ್ಲಿ ಪರಿಚಯಸ್ಥರೊಬ್ಬರ ವಿರುದ್ಧ ಮಾನಸಿಕ ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆತ್ಮಹತ್ಯೆ ಪತ್ರವನ್ನು ಆಧರಿಸಿ ವ್ಯಕ್ತಿಯ ಮೇಲೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.