ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Astro Tips: ಶನಿವಾರ ಕಪ್ಪು ಹಸು ಎದುರಿಗೆ ಬಂದರೆ ಏನರ್ಥ ಗೊತ್ತಾ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರದಂದು ಕೆಲವು ವಿಶೇಷ ಶುಭ ಸೂಚನೆಗಳು ಕಾಣಿಸಿಕೊಂಡರೆ, ಅದನ್ನು ಶನಿದೇವರ ಕೃಪೆಯ ಲಕ್ಷಣವೆಂದು ಭಾವಿಸಲಾಗುತ್ತದೆ. ಹಾಗಾದ್ರೆ ಶನಿವಾರ ಯಾವ ವಸ್ತುಗಳು ಕಣ್ಣಿಗೆ ಬಿದ್ದರೆ ಒಳ್ಳೆಯದು ಎಂದು ತಿಳಿದುಕೊಳ್ಳಬೇಕು? ಹಾಗಾದ್ರೆ ಈ ಸುದ್ದಿ ಓದಿ.

ಶನಿ

ಬೆಂಗಳೂರು: ಹಿಂದೂ ಧಾರ್ಮಿಕ (Hindu Religion) ನಂಬಿಕೆಯ ಪ್ರಕಾರ ಶನಿದೇವರನ್ನು (Shani Deva) ಕರ್ಮಫಲದ ಅಧಿಪತಿಯಾಗಿ ಪರಿಗಣಿಸಲಾಗುತ್ತದೆ. ಮನುಷ್ಯನು ಮಾಡಿದ ಪ್ರತಿಯೊಂದು ಕಾರ್ಯಕ್ಕೂ ನ್ಯಾಯಸಮ್ಮತ ಫಲವನ್ನು ನೀಡುವವನು ಶನಿ ದೇವನೆಂದು ಶಾಸ್ತ್ರಗಳು ಹೇಳುತ್ತವೆ. ವಾರದ ಏಳು ದಿನಗಳಲ್ಲಿ ಶನಿವಾರವು ಶನಿದೇವರಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ. ಈ ದಿನ ಶನಿದೇವರ ಆರಾಧನೆ ಮಾಡಿದರೆ ಜೀವನದಲ್ಲಿನ ಸಂಕಷ್ಟಗಳು ಕಡಿಮೆಯಾಗುತ್ತವೆ ಎನ್ನುವ ನಂಬಿಕೆಯಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ (Astro Tips) ಶನಿವಾರದಂದು ಕೆಲವು ವಿಶೇಷ ಶುಭ ಸೂಚನೆಗಳು ಕಾಣಿಸಿಕೊಂಡರೆ, ಅದನ್ನು ಶನಿದೇವರ ಕೃಪೆಯ ಲಕ್ಷಣವೆಂದು ಭಾವಿಸಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದವುಗಳೇನು ಎಂದು ತಿಳಿದುಕೊಳ್ಳಬೇಕಾ??? ಹಾಗಾದ್ರೆ ಈ ಸುದ್ದಿಯನ್ನು ಓದಿ

ಕಪ್ಪು ನಾಯಿಯ ದರ್ಶನ

ಕಪ್ಪು ನಾಯಿಯನ್ನು ಕಾಲಭೈರವ ಹಾಗೂ ಶನಿದೇವರ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಶನಿವಾರದಂದು ಕಪ್ಪು ನಾಯಿಯನ್ನು ಕಾಣುವುದು ಅತ್ಯಂತ ಮಂಗಳಕರ ಸೂಚನೆಯಾಗಿದೆ. ಆ ದಿನ ಕಪ್ಪು ನಾಯಿಗೆ ಆಹಾರ ನೀಡುವುದರಿಂದ ಶನಿದೇವರು ಸಂತುಷ್ಟನಾಗಿ ಆಶೀರ್ವಾದ ಮಾಡುತ್ತಾರೆ. ವಿಶೇಷವಾಗಿ ಎಣ್ಣೆ ಸವರಿದ ರೊಟ್ಟಿಯನ್ನು ತಿನ್ನಿಸಿದರೆ ರಾಹು–ಕೇತುಗಳ ಅನುಗ್ರಹವೂ ದೊರೆಯುತ್ತದೆ ಎನ್ನಲಾಗುತ್ತದೆ.

Astro Tips: ಮುಂಜಾನೆ ಈ 7 ಮಂತ್ರಗಳನ್ನು ಪಠಿಸಿದರೆ ಅದೃಷ್ಟ ಹುಡುಕಿ ಬರುವುದು..!

ಬಡವರಿಗೆ ದಾನ

ಶನಿದೇವರು ದಾನ ಹಾಗೂ ಸೇವೆಯನ್ನು ಅತ್ಯಂತ ಇಷ್ಟಪಡುವ ದೇವರು. ಶನಿವಾರದಂದು ಭಿಕ್ಷುಕ ಅಥವಾ ಅಗತ್ಯವಿರುವ ವ್ಯಕ್ತಿಯನ್ನು ನೋಡಿದರೆ, ಸಾಧ್ಯವಾದಷ್ಟು ಸಹಾಯ ಮಾಡಬೇಕು. ಬರಿಗೈಯಲ್ಲಿ ಕಳುಹಿಸದೇ ದಾನ ಮಾಡಿದರೆ ಶನಿದೇವರ ಕೃಪೆಗೆ ಪಾತ್ರರಾಗಬಹುದು.

ಕಪ್ಪು ಹಸುವಿನ ದರ್ಶನ

ಶನಿವಾರದಂದು ಕಪ್ಪು ಬಣ್ಣದ ಹಸುವನ್ನು ನೋಡುವುದು ಕೂಡ ಶುಭ ಸೂಚನೆಯಾಗಿದೆ. ಇದು ಶನಿದೇವನು ನಿಮ್ಮ ಮೇಲೆ ಸಂತೋಷಗೊಂಡಿದ್ದಾನೆ ಎಂಬ ಸಂಕೇತವಾಗಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ ಎಂದು ಅರ್ಥೈಸಲಾಗುತ್ತದೆ.

ಕಾಗೆ ಕಾಣಿಸಿಕೊಂಡರೆ ಏನರ್ಥ

ಕಪ್ಪು ಕಾಗೆಯು ಶನಿದೇವರ ವಾಹನವಾಗಿದೆ. ಶನಿವಾರದಂದು ಕಾಗೆಯನ್ನು ಕಾಣುವುದು ಮಂಗಳಕರವೆಂದು ಶಾಸ್ತ್ರಗಳು ಹೇಳುತ್ತವೆ. ವಿಶೇಷವಾಗಿ ಕಾಗೆ ನೀರು ಕುಡಿಯುತ್ತಿರುವುದನ್ನು ನೋಡಿದರೆ ಅದು ಅದೃಷ್ಟದ ಸೂಚನೆ ಎಂದು ನಂಬಲಾಗುತ್ತದೆ. ಇಂತಹವರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ದೊರೆಯುತ್ತವೆ.

ಶನಿದೇವರ ಕೃಪೆ ಪಡೆಯಲು ಮಾಡಬೇಕಾದ ಕ್ರಮಗಳು

ಶನಿವಾರ ಉಪವಾಸವಿದ್ದು ಶನಿ ದೇವಾಲಯದಲ್ಲಿ ಎಣ್ಣೆ ಅರ್ಪಿಸಿ ಪ್ರಾರ್ಥನೆ ಮಾಡಬೇಕು.

ಪೂಜೆ ಮಾಡುವಾಗ ಶನಿದೇವರ ದೃಷ್ಟಿಗೆ ನೇರವಾಗಿ ಎದುರಾಗಿ ನಿಲ್ಲಬಾರದು.

ಶನಿ ಮಂತ್ರಗಳನ್ನು ಜಪಿಸಬೇಕು.
ಹಸಿದವರಿಗೆ ಅನ್ನದಾನ ಮಾಡಬೇಕು.

ನಿರ್ಗತಿಕರಿಗೆ ಕಪ್ಪು ಅಥವಾ ಗಾಢ ನೀಲಿ ವಸ್ತ್ರಗಳನ್ನು ದಾನ ಮಾಡಬೇಕು.

ಹಿರಿಯರನ್ನು ಗೌರವಿಸಿ, ಸೇವೆ ಮಾಡಬೇಕು.
ಈ ನಿಯಮಗಳನ್ನು ನಿಷ್ಠೆಯಿಂದ ಪಾಲಿಸಿದರೆ ಶನಿದೇವರ ಅನುಗ್ರಹ ಲಭಿಸಿ, ಜೀವನದಲ್ಲಿ ಶಾಂತಿ, ಸ್ಥಿರತೆ ಹಾಗೂ ಯಶಸ್ಸು ದೊರೆಯುತ್ತದೆ ಎಂಬ ನಂಬಿಕೆಯಿದೆ.