Astro Tips: ಮುಂಜಾನೆ ಈ 7 ಮಂತ್ರಗಳನ್ನು ಪಠಿಸಿದರೆ ಅದೃಷ್ಟ ಹುಡುಕಿ ಬರುವುದು..!
ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ ಮುಂಜಾನೆ, ವಿಶೇಷವಾಗಿ ಬ್ರಾಹ್ಮೀ ಮುಹೂರ್ತದಲ್ಲಿ ದೇವರ ಆರಾಧನೆ ಹಾಗೂ ಮಂತ್ರ ಪಠಣ ಮಾಡಿದರೆ ಆರೋಗ್ಯ ಸುಧಾರಣೆ, ಮನಸ್ಸಿನ ಶಾಂತಿ, ಐಶ್ವರ್ಯ ಮತ್ತು ಅದೃಷ್ಟ ವೃದ್ಧಿಯಾಗುತ್ತದೆ. ಆ ಪವಿತ್ರ, ಉಪಯೋಗಕರ ಮಂತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಮುಂಜಾನೆ ಅದರಲ್ಲೂ ಬ್ರಾಹ್ಮೀ ಮುಹೂರ್ತದಲ್ಲಿ ದೇವರ ಆರಾಧನೆ, ಮಂತ್ರಗಳ ಪಠಣ ಮಾಡುವುದುರಿಂದ ಉತ್ತಮ ಆರೋಗ್ಯ, ಐಶ್ವರ್ಯ ಹಾಗೂ ಅದೃಷ್ಟ ಲಭಿಸುತ್ತದೆ. ಜ್ಯೋತಿಷ್ಯ ಶಾಸ್ತ್ರ ಸಲಹೆ(Astro Tips) ಪ್ರಕಾರ ವಿಶೇಷವಾಗಿ ಬೆಳಗಿನ ಸಮಯದಲ್ಲಿ ಯಾವ ಮಂತ್ರಗಳನ್ನು ಪಠಣ ಮಾಡಬೇಕು? ಅದರಿಂದಾಗುವ ಲಾಭಗಳೇನು ಎಂಬುದನ್ನು ಎಂದು ತಿಳಿಯೋಣ ಬನ್ನಿ.
ದೇವರ ದರ್ಶನಕ್ಕಾಗಿ ಮೊದಲ ಮಂತ್ರ:
ಕರಾಗ್ರೇ ವಸತಿ ಲಕ್ಷ್ಮಿಃ ಕರ ಮಧ್ಯೆ ಸರಸ್ವತೀ|
ಕರ ಮೂಲೇ ತೂ ಗೋವಿಂದಾ, ಪ್ರಭಾತೇ ಕರ ದರ್ಶನಂ||
ನೀವು ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ನಿಮ್ಮ ಅಂಗೈಗಳನ್ನು ಜೋಡಿಸಿ ಮತ್ತು ಅದನ್ನು ನೋಡುತ್ತಾ ಈ ಮಂತ್ರವನ್ನು ಪಠಿಸಬಹುದು. ಈ ಮಂತ್ರದಲ್ಲಿ ಹೇಳಿರುವಂತೆ ಅಂಗೈಯ ಮುಂಭಾಗದಲ್ಲಿ ಲಕ್ಷ್ಮಿ, ಮಧ್ಯದಲ್ಲಿ ಸರಸ್ವತಿ ಮತ್ತು ಮೂಲ ಭಾಗದಲ್ಲಿ ಪರಮಬ್ರಹ್ಮ ಗೋವಿಂದ ನೆಲೆಸಿದ್ದಾರೆ. ಬೆಳಿಗ್ಗೆ ಎದ್ದು ನಿಮ್ಮ ಅಂಗೈಗಳನ್ನು ನೋಡುತ್ತಾ ಈ ಮಂತ್ರ ಹೇಳುವ ಮೂಲಕ ಈ ದೇವರ ದರ್ಶನ ಪಡೆಯಬಹುದು.
ಆರೋಗ್ಯಕರ ದೇಹಕ್ಕಾಗಿ- ಎರಡನೇ ಮಂತ್ರ:
ಸರ್ವಬಾಧಾವಿನಿರ್ಮುಕ್ತೋ ಧನಧಾನ್ಯಸುತಾನ್ವಿತಃ|
ಮನುಷ್ಯೋಂ ಮತ್ಪ್ರಸಾದೇನ್ ಭವಿಷ್ಯತಿ ನ ಸಂಶಯ||
ಓ ಮಾತೆಯೇ, ನನಗೆ ಅದೃಷ್ಟ ಮತ್ತು ಆರೋಗ್ಯವನ್ನು ನೀಡು...ಪರಮ ಸುಖ, ರೂಪವನ್ನು ನೀಡಿ, ಜಯಶಾಲಿಯನ್ನಾಗಿಸು. ಕಾಮ, ಕ್ರೋಧ, ಮದ, ಮತ್ಸರಗಳನ್ನು ತೊಡೆದು ಹಾಕು ಎಂಬುವುದೇ ಈ ಮಂತ್ರದ ತಾತ್ಪರ್ಯ.
Astro Tips: ಈ 5 ರಾಶಿಯವರು ನಾಯಕತ್ವ ಗುಣದಲ್ಲಿ ನಿಸ್ಸೀಮರು; ನಿಮ್ಮ ರಾಶಿ ಇದ್ಯಾ ಚೆಕ್ ಮಾಡಿ
ಅಷ್ಟೈರ್ಯಕ್ಕಾಗಿ ಮೂರನೇ ಮಂತ್ರ:
ಸರ್ವಬಾಧಾವಿನಿರ್ಮುಕ್ತೋ ಧನಧಾನ್ಯಸುತಾನ್ವಿತಃ|
ಮನುಷ್ಯೋಂ ಮತ್ಪ್ರಸಾದೇನ್ ಭವಿಷ್ಯತಿ ನ ಸಂಶಯಃ||
ಓ ಜಗನ್ಮಾತೆಯೇ, ನಿನ್ನ ಈ ಪ್ರಸಾದದಿಂದ ಮನುಷ್ಯನ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ. ಅಷ್ಟೈರ್ಯ, ಸಂತಾನವನ್ನು ಹೊಂದಿ ಸುಖ ಜೀವನ ನಡೆಸುತ್ತಾರೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುವುದೇ ಈ ಮಂತ್ರದ ಅರ್ಥ.
ಪ್ರತಿಷ್ಠೆ ಮತ್ತು ಗೌರವಕ್ಕಾಗಿ ನಾಲ್ಕನೇ ಮಂತ್ರ:
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ||
ಎಲ್ಲಾ ರೀತಿಯ ಅದೃಷ್ಟವನ್ನು ನೀಡುವ ತಾಯಿ ಭಗವತಿ ನಾರಾಯಣಿಯೇ, ಪ್ರಯತ್ನಗಳಿಗೆ ತಕ್ಕ ಫಲವನ್ನು ನೀಡುವ ತಾಯಿಯೇ ನಿನಗಿದೋ ನಮಸ್ಕಾರ ಎಂಬುವುದೇ ಈ ಮಂತ್ರದ ಅರ್ಥವಾಗಿದೆ.
ಶತ್ರುಗಳ ನಾಶಕ್ಕಾಗಿ ಐದನೇ ಮಂತ್ರ:
ಓಂ ಹ್ರೀಂ ಲ್ರೀ ಬಾಗಲಮುಖೀ ಮಮ ಸರ್ವದುಷ್ಟಾನಾಂ ವಾಚಂ ಮುಖಂ ಪದಂ|
ಸ್ತಂಭ್ಯ ಜಿವ್ಹಾಂ ಕೀಳಯ ಬುದ್ಧಿಂ ವಿನಾಶಾಯ ಹ್ರೀಂ ಲ್ರೀ ಓಂ ಸ್ವಾಹಾ||
ಕನಿಷ್ಠ 10 ಸಾವಿರ ಬಾರಿ ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಶತ್ರುಗಳಿಂದಾಗುತ್ತರಿವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಯಾವುದೋ ಪ್ರಮುಖ ಕೆಲಸದಲ್ಲಿ ಅಡಚಣೆಯಾಗುತ್ತಿದ್ದರೆ ಕನಿಷ್ಟ 1 ಲಕ್ಷ ಬಾರಿಯಾದರೂ ಈ ಮಂತ್ರವನ್ನು ಪಠಿಸಬೇಕು.
ಸಾಲದಿಂದ ಮುಕ್ತಿಗಾಗಿ ಆರನೇ ಮಂತ್ರ:
ಓಂ ಗಂ ಋಣಹರ್ತಾಯೈ ನಮಃ ಅಥವಾ ಓಂ ಛಿಂದಿ ಛಿಂದಿ ವರೈಣ್ಯಂ ಸ್ವಾಹಾ
ಸಾಲ, ವಿಘ್ನಗಳಿಂದ ಮುಕ್ತಿ ನೀಡುವ ವಿಘ್ನನಿವಾರಕನೇ ನಿನಗೆ ನಮಸ್ಕಾರಗಳು. ಈ ಮಂತ್ರದ ದೈನಂದಿನ ಪಠಣದಿಂದ ಭಗವಾನ್ ಗಣೇಶನು ಪ್ರಸನ್ನನಾಗಿ, ಬಹು ಬೇಗ ನೀವು ಸಾಲದಿಂದ ಮುಕ್ತಿಯಾಗುವಂತೆ ಮಾಡುತ್ತಾನೆ.
ಜ್ಞಾನದ ಸಾಧನೆಗಾಗಿ ಏಳನೇ ಮಂತ್ರ:
ವಿದ್ಯಾಃ ಸಮಸ್ತಾಸ್ತವ ದೇವಿ ಭೇದಾಃ ಸ್ತ್ರೀಯಃ ಸಮಸ್ತಾಃ ಸಕಲ ಜಗಸ್ತು|
ತ್ವೈಕ್ಯಾ ಪೂರಿತಮಂಬಯೈತತ್ ಕಾ ತೇ ಸ್ತುತಿಃ ಸ್ತವ್ಯಪರಾ ಪರೋಕ್ತಿಃ||
ಹೇ ತಾಯಿಯೇ! ಪ್ರಪಂಚದ ಸಕಲ ವಿದ್ಯೆಗಳೂ ನಿನ್ನ ವಿಭಿನ್ನ ರೂಪಗಳು. ಸ್ತ್ರೀ ಸಮಾಜದ ಆರಾಧ್ಯ ದೇವಿ ನೀನು, ಪ್ರಪಂಚದಾದ್ಯಂತ ನಿನ್ನನ್ನು ವಿಶೇಷವಾಗಿ ಆರಾಧಿಸುವ ಅನೇಕ ಮಂದಿ ಆರಾಧಕರಿದ್ದಾರೆ ಎಂಬುವುದೇ ಈ ಮಂತ್ರದ ತಾತ್ಪರ್ಯವಾಗಿದೆ.