ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SpiceJet Flight: ತಿರುಪತಿಗೆ ತೆರಳುತ್ತಿದ್ದ ಸ್ಪೈಸ್‌ ಜೆಟ್‌ ತುರ್ತು ಭೂಸ್ಪರ್ಶ!

ಇಂದು, ಹೈದರಾಬಾದ್-ತಿರುಪತಿ ನಡುವೆ ಹಾರಾಟ ನಡೆಸಿದ್ದ ಸ್ಪೈಸ್ ಜೆಟ್ Q400 ವಿಮಾನವು ಟೇಕ್ ಆಫ್ ಆದ ನಂತರ AFT ಬ್ಯಾಗೇಜ್ ಬಾಗಿಲ ಬಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ, ಪೈಲಟ್‌ಗಳು ಹೈದರಾಬಾದ್‌ಗೆ ಹಿಂತಿರುಗಲು ನಿರ್ಧರಿಸಿದರು. ವಿಮಾನ ಸುರಕ್ಷಿತವಾಗಿ ಲ್ಯಾಂಡ್‌ ಆಗಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.

ತಿರುಪತಿಗೆ ತೆರಳುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ!

Profile Rakshita Karkera Jun 19, 2025 1:53 PM

ಹೈದರಾಬಾದ್‌: ದೇಶದಲ್ಲಿ ಆಗಾಗ ತಾಂತ್ರಿಕ ದೋಷಗಳಿಂದ ಹೈದರಾಬಾದ್ ನಿಂದ ತಿರುಪತಿಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ನ Q400 ವಿಮಾನ(SpiceJet Flight) ತುರ್ತು ಭೂಸ್ಪರ್ಶ ಮಾಡಿದೆ. ಟೇಕ್ ಆಫ್ ಆದ ಕೆಲವೇ ಕೆಲವು ಸಮಯದ ನಂತರ, ವಿಮಾನದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಪೈಲಟ್ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂತಿರುಗಲು ನಿರ್ಧರಿಸಿದರು. ಪೈಲಟ್‌ ಸಮಯಪ್ರಜ್ಞೆಯಿಂದ ವಿಮಾನ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಅದೃಷ್ಟವಶಾತ್‌ ಭಾರೀ ಅವಘಡವೊಂದು ತಪ್ಪಿದೆ.

ಸ್ಪೈಸ್‌ ಜೆಟ್‌ ವಕ್ತಾರ ಈ ಬಗ್ಗೆ ಮಾಹಿತಿ ನೀಡಿದ್ದು, ವಿಮಾನ ಸುರಕ್ಷಿತವಾಗಿ ಇಳಿಯಿತು ಮತ್ತು ಎಲ್ಲಾ ಪ್ರಯಾಣಿಕರನ್ನು ಸಾಮಾನ್ಯವಾಗಿ ಕೆಳಗಿಳಿಸಲಾಯಿತು. ಪ್ರಯಾಣಿಕರಿಗಾಗಿ ಪರ್ಯಾಯ ವಿಮಾನವನ್ನು ವ್ಯವಸ್ಥೆ ಮಾಡಲಾಯಿತು ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ: Viral Video: ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ಡಿಜಿಟಲ್‍ ಕ್ಲಾಕ್ ಟವರ್‌; ಏನಿದು ವೈರಲ್‌ ಸ್ಟೋರಿ!

ಇಂದು, ಹೈದರಾಬಾದ್-ತಿರುಪತಿ ನಡುವೆ ಹಾರಾಟ ನಡೆಸಿದ್ದ ಸ್ಪೈಸ್ ಜೆಟ್ Q400 ವಿಮಾನವು ಟೇಕ್ ಆಫ್ ಆದ ನಂತರ AFT ಬ್ಯಾಗೇಜ್ ಬಾಗಿಲ ಬಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ, ಪೈಲಟ್‌ಗಳು ಹೈದರಾಬಾದ್‌ಗೆ ಹಿಂತಿರುಗಲು ನಿರ್ಧರಿಸಿದರು. ವಿಮಾನ ಸುರಕ್ಷಿತವಾಗಿ ಲ್ಯಾಂಡ್‌ ಆಗಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ವಿಮಾನ ತುರ್ತು ಲ್ಯಾಂಡಿಂಗ್ ಮಾಡಲಿಲ್ಲ. ತಿರುಪತಿಗೆ ಮುಂದಿನ ಪ್ರಯಾಣಕ್ಕೆ ಪರ್ಯಾಯ ವಿಮಾನವನ್ನು ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ, ”ಎಂದು ಸ್ಪೈಸ್ ಜೆಟ್ ವಕ್ತಾರರು ತಿಳಿಸಿದ್ದಾರೆ.