ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನಲ್ಲಿ ಅಘಾತಕಾರಿ ಘಟನೆ: ಬೈಕ್ ಸವಾರಿ ಮಾಡುವಾಗ ಮರದ ಕೊಂಬೆ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ!

Viral Video: ಮರದ ಕೊಂಬೆಯೊಂದು ಬಿದ್ದ ಪರಿಣಾಮ 53 ವರ್ಷದ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು ಕೋಮಾ ಸ್ಥಿತಿಗೆ ತಲುಪಿದ್ದಾರೆ. ಇವರು ಖಾಸಗಿ ಹಣಕಾಸು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಾಲದ ಕಂತುಗಳನ್ನು ವಸೂಲಿ ಮಾಡುವುದ್ದಕ್ಕಾಗಿ ಸಂಜೆ 5 ಗಂಟೆಯ ಸುಮಾರಿಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಆದರೆ ಹೆಲ್ಮೆಟ್ ಧರಿಸಿರಿಲಿಲ್ಲ‌. ಈ ವೇಳೆ ರಸ್ತೆ ಬದಿಯ ಮರದಿಂದ ಬೃಹತ್ ಗಾತ್ರದ ಒಣಗಿದ ಕೊಂಬೆ ದಿಢೀರನೆ ಮುರಿದು ನೇರವಾಗಿ ಅವರ ತಲೆಯ ಮೇಲೆಯೇ ಬಿದ್ದಿದೆ...

ಮರದ ಕೊಂಬೆ ಬಿದ್ದು ಬೈಕ್ ಸವಾರ ಗಂಭೀರ: ಸಿಸಿಟಿವಿ ದೃಶ್ಯ ವೈರಲ್!

ಮರದ ಕೊಂಬೆ ಬಿದ್ದು ಬೈಕ್ ಸವಾರ ಗಂಭೀರ -

Profile
Pushpa Kumari Jun 27, 2026 3:18 PM

ಬೆಂಗಳೂರು,ಜೂ.27: ಬೈಕ್ ಸವಾರ ಪ್ರಯಾಣ ಮಾಡುತ್ತಿದ್ದಾಗ ಒಣಗಿದ ಮರದ ಕೊಂಬೆ ಯೊಂದು ಅನಿರೀಕ್ಷಿತವಾಗಿ ಮುರಿದು ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಚಾಲಕನು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸುರೇಶ್ ಎಂದು ಗುರುತಿಸಲಾಗಿದೆ. ಸಂಜೆ 5 ಗಂಟೆ ಸುಮಾರಿಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆಯ ದೃಶ್ಯಾವಳಿಗಳು ಸೆರೆಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದೆ.

ಮರದ ಕೊಂಬೆಯೊಂದು ಬಿದ್ದ ಪರಿಣಾಮ 53 ವರ್ಷದ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು ಕೋಮಾ ಸ್ಥಿತಿಗೆ ತಲುಪಿದ್ದಾರೆ. ಇವರು ಖಾಸಗಿ ಹಣಕಾಸು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಾಲದ ಕಂತುಗಳನ್ನು ವಸೂಲಿ ಮಾಡುವುದ್ದಕ್ಕಾಗಿ ಸಂಜೆ 5 ಗಂಟೆಯ ಸುಮಾರಿಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಆದರೆ ಹೆಲ್ಮೆಟ್ ಧರಿಸಿರಿಲಿಲ್ಲ‌. ಈ ವೇಳೆ ರಸ್ತೆ ಬದಿಯ ಮರದಿಂದ ಬೃಹತ್ ಗಾತ್ರದ ಒಣಗಿದ ಕೊಂಬೆ ದಿಢೀರನೆ ಮುರಿದು ನೇರವಾಗಿ ಅವರ ತಲೆಯ ಮೇಲೆಯೇ ಬಿದ್ದಿದೆ.

ವಿಡಿಯೊ ನೋಡಿ:



ಈ ಘಟನೆಯು ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸುರೇಶ್ ಹೆಲ್ಮೆಟ್ ಧರಿಸದೆ ರಸ್ತೆಯಲ್ಲಿ ಸವಾರಿ ಮಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದಾಗಿದೆ. ತಮ್ಮ ಮೋಟಾರ್ ಸೈಕಲ್ ನಿಯಂತ್ರಣ ಕಳೆದು ಕೊಂಡು ರಸ್ತೆಗೆ ಬಿದ್ದಿದ್ದಾರೆ. ಅವರ ತಲೆಗೆ ತೀವ್ರ ಗಾಯಗಳಾಗಿದ್ದು ಸ್ಥಳದಲ್ಲೇ ಪ್ರಜ್ಞಾಹೀನರಾಗಿದ್ದರು.

Viral Video; ವಿಶೇಷ ಚೇತನ ಮಹಿಳೆಗೆ ಕ್ಯಾಬ್ ರೈಡ್ ನಿರಾಕರಿಸಿದ ಉಬರ್ ಚಾಲಕ

ದಾರಿಹೋಕರು ತಕ್ಷಣ ಸಹಾಯ ಮಾಡಲು ಧಾವಿಸಿ ಅವರನ್ನು ರಾಜಾಜಿನಗರದ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದರು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದರು. ಅಧಿಕಾರಿಗಳು ಮರದ ಕೊಂಬೆ ಗಳನ್ನು ಕತ್ತರಿಸಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.