ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stairs Collapse: ಅಪಾರ್ಟ್‌ಮೆಂಟ್‌ನ ಮೆಟ್ಟಿಲು ಕುಸಿತ; ಪ್ಲಾಟ್‌ನೊಳಗೆ ಸಿಲುಕಿದ 8 ಕುಟುಂಬ

ಗಾಜಿಯಾಬಾದ್‌ನ ವಸುಂಧರದಲ್ಲಿ ವಸತಿ ಸೊಸೈಟಿಯಲ್ಲಿ ಮೆಟ್ಟುಲುಗಳು ಕುಸಿತವಾಗಿದೆ. ವಸುಂಧರ ಸೆಕ್ಟರ್ -17 ರ ಗ್ರೀನ್ ವ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಇಂದು ಬೆಳಿಗ್ಗೆ ಈ ಘಟನೆ ಸಂಭವಿಸಿದೆ. ಅಪಾರ್ಟ್‌ಮೆಂಟ್‌ನಿಂದ ಹೊರ ಬರಲು ಏಕೈಕ ಮಾರ್ಗವಾಗಿದ್ದ ಮೆಟ್ಟಿಲುಗಳು ಕುಸಿತ ಕಂಡಿದ್ದರಿಂದ ಎಂಟು ಕುಟುಂಬಗಳು ತಮ್ಮ ಫ್ಲಾಟ್‌ಗಳೊಳಗೆ ಸಿಲುಕಿಕೊಂಡಿವೆ.

ಅಪಾರ್ಟ್‌ಮೆಂಟ್‌ನ ಮೆಟ್ಟಿಲು ಕುಸಿತ; ಪ್ಲಾಟ್‌ನೊಳಗೆ ಸಿಲುಕಿದ ಕುಟುಂಬ

Vishakha Bhat Vishakha Bhat Aug 3, 2025 2:39 PM

ಲಖನೌ: ಗಾಜಿಯಾಬಾದ್‌ನ ವಸುಂಧರದಲ್ಲಿ ವಸತಿ ಸೊಸೈಟಿಯಲ್ಲಿ ಮೆಟ್ಟುಲುಗಳು (Stairs Collapse) ಕುಸಿತವಾಗಿದೆ. ವಸುಂಧರ ಸೆಕ್ಟರ್ -17 ರ ಗ್ರೀನ್ ವ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಇಂದು ಬೆಳಿಗ್ಗೆ ಈ ಘಟನೆ ಸಂಭವಿಸಿದೆ. ಅಪಾರ್ಟ್‌ಮೆಂಟ್‌ನಿಂದ ಹೊರ ಬರಲು ಏಕೈಕ ಮಾರ್ಗವಾಗಿದ್ದ ಮೆಟ್ಟಿಲುಗಳು ಕುಸಿತ ಕಂಡಿದ್ದರಿಂದ ಎಂಟು ಕುಟುಂಬಗಳು ತಮ್ಮ ಫ್ಲಾಟ್‌ಗಳೊಳಗೆ ಸಿಲುಕಿಕೊಂಡಿವೆ. ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ ಎಂಟು ಕುಟುಂಬಗಳು ಮೇಲಿನ ಮಹಡಿಗಳಲ್ಲಿ ಸಿಲುಕಿಕೊಂಡಿವೆ. ಕಟ್ಟಡದ ಮುಖ್ಯ ಮೆಟ್ಟಿಲು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಸದ್ಯ ಕುಸಿತಗೊಂಡಿರುವ ಪ್ರದೇಶದ ವಿಡಿಯೋ ವೈರಲ್‌ ಆಗಿದೆ. ಕೆಳಗಿನ ಮಹಡಿಯಿಂದ ಮೇಲಿನ ಮಹಡಿಗೆ ಹೋಗುವ ಮಾರ್ಗವು ಅವಶೇಷಗಳ ಕಾರಣದಿಂದಾಗಿ ಸಂಪೂರ್ಣವಾಗಿ ಮುಚ್ಚಿಹೋಗಿದೆ. ಘಟನೆ ನಡೆದ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಫ್ಲಾಟ್‌ನಲ್ಲಿ ಸಿಲುಕಿದವರನ್ನು ಕೆಳ ತರಲು ಪ್ರಯತ್ನ ನಡೆಯುತ್ತಿದೆ.



ಪ್ರತ್ಯೇಕ ಘಟನೆಯಲ್ಲಿ, ಬಹದ್ದೂರ್‌ಪುರ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮಣ್ಣಿನ ಮನೆ ಕುಸಿದು 55 ವರ್ಷದ ಮಹಿಳೆ ಮತ್ತು ಆಕೆಯ ಹದಿಹರೆಯದ ಮಗಳು ಮೃತಪಟ್ಟಿದ್ದಾರೆ. ಮೃತರನ್ನು ಪ್ರೇಮಾ ದೇವಿ ಮತ್ತು ಅವರ 19 ವರ್ಷದ ಮಗಳು ಸಾಧನಾ ಎಂದು ಗುರುತಿಸಲಾಗಿದೆ. ಅದೇ ಮನೆಯಲ್ಲಿದ್ದ ಮತ್ತೊಂದು ಮಗಳು ಆರಾಧಾನಾ ಬದುಕುಳಿದಿದ್ದಾಳೆ.

ಸ್ಥಳಕ್ಕಾಗಮಿಸಿದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಸಿಂಗ್, ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದವು. ಮನೆ ಸಂಪೂರ್ಣವಾಗಿ ಕುಸಿದು ಹೋಗಿತ್ತು. ಮೂವರು ಅವಷೇಶಗಳ ಅಡಿಯಲ್ಲಿ ಸಿಲುಕಿದ್ದರು. ಕೂಡಲೇ ಅವರನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದೆವು. ಅಷ್ಟರಲ್ಲಾಗಲೇ ಇಬ್ಬರು ಸಾವನ್ನಪ್ಪಿದ್ದರು. ಪ್ರೇಮಾ ಅವರ ಒಬ್ಬಳು ಮಗಳು ಆರಾಧಾನಾ ಬದುಕುಳಿದಿದ್ದಾರೆ. ಸದ್ಯ ಆಕೆಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.