ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranveer Allahbadia: ರಣವೀರ್‌ ಅಲಹಾಬಾದಿಯಾಗೆ ಮತ್ತೊಂದು ಹಿನ್ನಡೆ; ಪಾಸ್‌ಪೋರ್ಟ್‌ ಹಿಂದಿರುಗಿಸಲು ಸುಪ್ರೀಂಕೋರ್ಟ್‌ ನಕಾರ

Supreme Court: ಇಂಡಿಯಾಸ್ ಗಾಟ್ ಲ್ಯಾಟೆಂಟ್ ಶೋದಲ್ಲಿ ಅಸಭ್ಯ ಪ್ರಶ್ನೆ ಕೇಳಿ ವಿವಾದ ಹುಟ್ಟು ಹಾಕಿದ್ದ ಖ್ಯಾತ ಯುಟ್ಯೂಬರ್‌ ರಣವೀರ್‌ ಅಲಹಾಬಾದಿಯಾ ಅವರಿಗೆ ಪಾಸ್‌ಪೋರ್ಟ್‌ ಹಿಂದಿರುಗಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಅಶ್ಲೀಲ ಕಾಮೆಂಟ್‌ ಮಾಡಿದ್ದ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಪಾಸ್‌ಪೋರ್ಟ್‌ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಅಲಹಾಬಾದಿಯಾಗೆ ಪಾಸ್‌ಪೋರ್ಟ್‌ ಹಿಂದಿರುಗಿಸಲು ಸುಪ್ರೀಂ ನಕಾರ

ರಣವೀರ್‌ ಅಲಹಾಬಾದಿಯಾ.

Profile Ramesh B Apr 1, 2025 4:33 PM

ಹೊಸದಿಲ್ಲಿ: ಇಂಡಿಯಾಸ್ ಗಾಟ್ ಲ್ಯಾಟೆಂಟ್ ಶೋದಲ್ಲಿ(India's Got Latent Show) ಅಸಭ್ಯ ಪ್ರಶ್ನೆ ಕೇಳಿ ವಿವಾದ ಹುಟ್ಟು ಹಾಕಿದ್ದ ಖ್ಯಾತ ಯುಟ್ಯೂಬರ್‌ ರಣವೀರ್‌ ಅಲಹಾಬಾದಿಯಾ (Ranveer Allahbadia) ಅವರಿಗೆ ಸುಪ್ರೀಂ ಕೋರ್ಟ್‌ (Supreme Court)ನಲ್ಲಿ ಹಿನ್ನಡೆಯಾಗಿದೆ. ಪಾಸ್‌ಪೋರ್ಟ್‌ ಹಿಂದಿರುಗಿಸುವಂತೆ ಸಲ್ಲಿಸಿದ್ದ ಮನವಿಯನ್ನು (Request For Passport Return) ಮಂಗಳವಾರ (ಏ. 1) ನ್ಯಾಯಾಲಯ ತಿರಸ್ಕರಿಸಿದೆ. ಅಶ್ಲೀಲ ಕಾಮೆಂಟ್‌ ಮಾಡಿದ್ದ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಪಾಸ್‌ಪೋರ್ಟ್‌ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಅಶ್ಲೀಲ ಹೇಳಿಕೆ ನೀಡಿದ ರಣವೀರ್‌ ಅಲಹಾಬಾದಿಯಾ ವಿರುದ್ಧ ದೇಶದ ವಿವಿಧ ಕಡೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಇದರ ವಿಚಾರಣೆ ಇನ್ನೂ 2 ವಾರಗಳ ಕಾಲ ನಡೆಯಲಿದೆ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. ಇದೇ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಮತ್ತೊಬ್ಬ ಯುಟ್ಯೂಬರ್‌ ಆಶಿಷ್‌ ಚಂಚ್ಲಾನಿ ಅವರಿಗೂ ಪಾಸ್‌ಪೋರ್ಟ್‌ ನೀಡಲು ನ್ಯಾಯಾಲಯ ನಿರಾಕರಿಸಿದೆ.

ಐಎಎನ್‌ಎಸ್‌ ಸುದ್ದಿಸಂಸ್ಥೆಯ ಪೋಸ್ಟ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Ranveer Allahbadia: ವಿಚಾರಣೆಗೆ ಹಾಜರಾಗಿದ್ದ ರಣವೀರ್ ಅಲಹಾಬಾದಿಯಾ ಅವರನ್ನು ನೂಕಿದ ಪೊಲೀಸರು, ವಿಡಿಯೋ ವೈರಲ್‌

ವಿವಾದದ ಬಳಿಕ ಮಾ. 31ರಂದು ಪಾಡ್‌ಕಾಸ್ಟ್‌ಗೆ ಮರಳಿದ್ದ ರಣವೀರ್‌ ಮೊದಲ ಎಪಿಸೋಡ್‌ ಪ್ರಸಾರ ಮಾಡಿದ್ದರು. ಬೌದ್ಧ ಸನ್ಯಾಸಿ ಪಾಲ್ಗಾ ರಿಂಪೋಚೆ ಅವರೊಂದಿಗಿನ ಚರ್ಚೆ ಮೂಲಕ ಅವರು ಕಾರ್ಯಕ್ರಮ ಆರಂಭಿಸಿದ್ದರು.

ಏನಿದು ವಿವಾದ?

ಸ್ಟಾಂಡಪ್​ ಕಮಿಡಿಯನ್​ ಸಮಯ್​ ರೈನಾ ಅವರ 'ಇಂಡಿಯಾಸ್ ಗಾಟ್ ಲೇಟೆಂಟ್' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಣವೀರ್‌ ಅಲಹಾಬಾದಿಯಾ ಪೋಷಕರು ಮತ್ತು ಲೈಂಗಿಕತೆಯ ಬಗ್ಗೆ ಸ್ಪರ್ಧಿಯೊಬ್ಬರಲ್ಲಿ ಅಸಹ್ಯಕರ ಪ್ರಶ್ನೆ ಕೇಳಿದ್ದರು. “ನೀವು ನಿಮ್ಮ ಪೋಷಕರ ಲೈಂಗಿಕ ಕ್ರಿಯೆಯನ್ನು ಜೀವನಪೂರ್ತಿ ನೋಡಲು ಇಷ್ಟಪಡುತ್ತೀರಾ ಅಥವಾ ಒಮ್ಮೆ ಅದರಲ್ಲಿ ಭಾಗವಹಿಸಿ ಅದನ್ನು ಶಾಶ್ವತವಾಗಿ ಮುಗಿಸಲು ಬಯಸುತ್ತೀರಾ?” ಎಂದು ಕೇಳಿದ್ದರು. ಇದಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ದೂರೂ ಸಲ್ಲಿಕೆಯಾಗಿತ್ತು.

ರಣವೀರ್ ಜತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಮಯ್ ರೈನಾ, ಆಶಿಶ್ ಚಂಚ್ಲಾನಿ, ಜಸ್‌ಪ್ರೀತ್‌ ಸಿಂಗ್ ಮತ್ತು ಅಪೂರ್ವ ಮಖಿಜಾ ವಿರುದ್ಧವೂ ದೂರು ದಾಖಲಾಗಿತ್ತು. ಜತೆಗೆ ರಣವೀರ್ ಅಲಹಾಬಾದಿಯಾ ತಮ್ಮ ಯುಟ್ಯೂಬ್‌ ಚಾನಲ್‌ನಲ್ಲಿದ್ದ ಎಲ್ಲ ವಿಡಿಯೊಗಳನ್ನು ಡಿಲೀಟ್‌ ಮಾಡಿದ್ದರು.

ಕ್ಷಮೆ ಕೋರಿದ್ದ ರಣವೀರ್‌

ದೇಶಾದ್ಯಂತ ತಮ್ಮ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ರಣವೀರ್‌ ಕ್ಷಮೆ ಕೋರಿದ್ದರು. ಫೆ. 11ರಂದು ರಣವೀರ್‌ ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು. ʼʼಇಂಡಿಯಾಸ್‌ ಗಾಟ್‌ ಲ್ಯಾಟೆಂಟ್‌ನಲ್ಲಿ ನಾನು ಹಾಗೆ ಹೇಳಬಾರದಿತ್ತು, ಕ್ಷಮಿಸಿ. ನನ್ನ ಕಾಮೆಂಟ್‌ ಸೂಕ್ತವಾಗಿರಲಿಲ್ಲ. ಅದು ತಮಾಷೆಯೂ ಅಲ್ಲ. ಸಾಕಷ್ಟು ಜನರು ನನ್ನ ಯುಟ್ಯೂಬ್‌ ವೇದಿಕೆಯನ್ನು ಇದೇ ರೀತಿ ಬಳಕೆ ಮಾಡುತ್ತೀರಾ ಎಂದು ಕೇಳುತ್ತಿದ್ದಾರೆ. ನಾನು ಈ ರೀತಿ ಬಳಸಲು ಬಯಸುವುದಿಲ್ಲ. ಘಟನೆ ಬಗ್ಗೆ ಯಾವುದೇ ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಈ ಕುರಿತು ಕ್ಷಮೆಯಾಚಿಸುತ್ತೇನೆʼʼ ಎಂದಿದ್ದರು.

ಇತ್ತ ಸಮಯ್ ರೈನಾ ಮಾ. 24ರಂದು ನವೀ ಮುಂಬೈಯ ಮಹಾರಾಷ್ಟ್ರ ಸೈಬರ್ ಸೆಲ್ ಕಚೇರಿಗೆ ಹಾಜರಾಗಿ ತಮ್ಮ ಯುಟ್ಯೂಬ್ ಕಾರ್ಯಕ್ರಮದ ಸುತ್ತಲಿನ ವಿವಾದದ ಬಗ್ಗೆ ಹೇಳಿಕೆಯನ್ನು ದಾಖಲಿಸಿದ್ದರು.