ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranveer Allahbadia: ವಿಚಾರಣೆಗೆ ಹಾಜರಾಗಿದ್ದ ರಣವೀರ್ ಅಲಹಾಬಾದಿಯಾ ಅವರನ್ನು ನೂಕಿದ ಪೊಲೀಸರು, ವಿಡಿಯೋ ವೈರಲ್‌

ರಣವೀರ್‌ ಅಲಹಾಬಾದಿಯಾ ತನಿಖೆಯ ಅಂಗವಾಗಿ ಶುಕ್ರವಾರ ಗುವಾಹಟಿಯಲ್ಲಿ ಅಸ್ಸಾಂ ಪೊಲೀಸರ ಮುಂದೆ ಹಾಜರಾಗಿದ್ದರು. ಆ ದಿನದ ವೀಡಿಯೊವೊಂದು ವೈರಲ್ ಆಗಿದ್ದು, ಅದರಲ್ಲಿ ಪೊಲೀಸ್ ಸಿಬ್ಬಂದಿ ತಳ್ಳಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ರಣವೀರ್ ಅಲಹಾಬಾದಿಯಾ ಅವರನ್ನು ನೂಕಿದ ಪೊಲೀಸರು!

ರಣವೀರ್ ಅಲಹಾಬಾದಿಯಾ

Profile Vishakha Bhat Mar 8, 2025 11:27 AM

ದಿಸ್ಪುರ್‌: ಕಾಮಿಡಿಯನ್‌ ಸಮಯ್ ರೈನಾ ಅವರ ಯೂಟ್ಯೂಬ್ ಕಾರ್ಯಕ್ರಮ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ನಲ್ಲಿ( India's Got Latent Show) ಅಶ್ಲೀಲ ಹೇಳಿಕೆಗಳನ್ನು ಹೇಳಿಕೆ ನೀಡಿದ ಆರೋಪ ಮೇಲೆ ಯೂಟ್ಯೂಬರ್ ರಣವೀರ್‌ ಅಲ್ಲಾಬಾಡಿಯಾ (Ranveer Allahbadia) ವಿರುದ್ಧ ಹಲವು ಕಡೆ ದೂರು ದಾಖಲಾಗಿವೆ. ತನಿಖೆಯ ಅಂಗವಾಗಿ ಶುಕ್ರವಾರ ಗುವಾಹಟಿಯಲ್ಲಿ ಅಸ್ಸಾಂ ಪೊಲೀಸರ ಮುಂದೆ ಹಾಜರಾಗಿದ್ದರು. ಆ ದಿನದ ವೀಡಿಯೊವೊಂದು ವೈರಲ್ ಆಗಿದ್ದು, ಅದರಲ್ಲಿ ಪೊಲೀಸ್ ಸಿಬ್ಬಂದಿ ತಳ್ಳಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಗುವಾಹಟಿ ಪೊಲೀಸರು ಅಲ್ಲಾಬಾಡಿಯಾ ಅವರನ್ನು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ ಅವರನ್ನು ಕೆಲವು ಪೊಲೀಸ್ ಅಧಿಕಾರಿಗಳು ಮೆಟ್ಟಿಲುಗಳ ಮೇಲೆ ಕರೆದೊಯ್ಯುತ್ತಿರುವುದು ಕಂಡು ಬಂದಿದೆ. ವಿಡಿಯೋದಲ್ಲಿ ಪೊಲೀಸರು ರಣವೀರ್‌ ಅವರನ್ನು ತಳ್ಳುತ್ತಿರುವುದು ಕಂಡು ಬಂದಿದೆ.



ಗುರುವಾರ ರಾತ್ರಿ ನಗರಕ್ಕೆ ತಲುಪಿದ ಅಲಹಾಬಾದಿಯಾ, ಅಪರಾಧ ವಿಭಾಗದ ಮುಂದೆ ಹಾಜರಾದರು, ಪೊಲೀಸರು ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಅಲಹಾಬಾದಿಯಾ ಜೊತೆಗೆ ಅವರ ವಕೀಲ ಕೂಡ ಹಾಜರಿದ್ದರು. ಪೊಲೀಸರಿಗೆ ತನಿಖೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಮತ್ತು ಪ್ರಕರಣಕ್ಕೆ ಕರೆದಾಗಲೆಲ್ಲಾ ಗುವಾಹಟಿಗೆ ಬರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Ranveer Allahbadia : ಸಭ್ಯತೆ ಕಾಪಾಡಿಕೊಳ್ಳಿ' ಷರತ್ತು ವಿಧಿಸಿ ರಣವೀರ್‌ ಅಲಹಬಾದಿಯಾ ಶೋಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್‌

ರಣವೀರ್ ಅಲ್ಲಾಬಾಡಿಯಾ ಅವರು ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ತಮಾಷೆಯಾಗಿ ಮಾತನಾಡುವ ಭರದಲ್ಲಿ ಅವರು ಪೋಷಕರ ಲೈಂಗಿಕ ಕ್ರಿಯೆ ಬಗ್ಗೆ ಮಾತಾಡಿದ್ದರು. ನಿಮ್ಮ ಪೋಷಕರು ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡ್ತೀರಾ? ? ಅಥವಾ ಒಮ್ಮೆ ಈ ಸೆಕ್ಸ್‌ನಲ್ಲಿ ಭಾಗಿಯಾಗುವ ಮೂಲಕ ಅವರ ನಡುವಿನ ಸೆಕ್ಸ್‌ಅನ್ನು ಶಾಶ್ವತವಾಗಿ ಬಂದ್‌ ಮಾಡಲು ಇಷ್ಟಪಡುತ್ತೀರಾ? ಎಂದು ಕೇಳಿದ್ದರು. ಅದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ರಣವೀರ್ ಅಲ್ಲಾಬಾಡಿಯಾ, ಸಮಯ್‌ ರೈನಾ, ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್ ಮತ್ತು ಅಪೂರ್ವ ಮಖಿಜಾ ಮೇಲೆ ದೂರು ದಾಖಲಾಗಿತ್ತು.ಇಂಡಿಯಾಸ್ ಗಾಟ್ ಲೇಟೆಂಟ್' ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ಮೇಲೆ ಮಹಾರಾಷ್ಟ್ರ ಸೈಬರ್ ಇಲಾಖೆ, ಗುವಾಹಟಿ, ಜೈಪುರ ಸೇರಿದಂತೆ ಹಲವು ಕಡೆ ಎಫ್‌ಐಆರ್‌ ದಾಖಲಾಗಿದೆ.