ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂದು ಆನ್‌ಲೈನ್‌ನಲ್ಲಿ ಫುಡ್‌ ಆರ್ಡರ್‌ ಮಾಡುವ ಮುನ್ನ ಗಮನಿಸಿ; ಡೆಲಿವರಿ ಕಾರ್ಮಿಕರಿಂದ ದೇಶವ್ಯಾಪಿ ಮುಷ್ಕರ

ತೆಲಂಗಾಣ ಗಿಗ್, ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ ಹಾಗೂ ಭಾರತೀಯ ಆ್ಯಪ್ ಆಧಾರಿತ ಸಾರಿಗೆ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಡಿಸೆಂಬರ್‌ 31ರಂದು ಮುಷ್ಕರ ನಡೆಯುತ್ತಿದ್ದು, ಝೊಮ್ಯಾಟೊ, ಸ್ವಿಗ್ಗಿ, ಬ್ಲಿಂಕ್‌ಇಟ್‌, ಜೆಪ್ಟೋ, ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್ ಸೇರಿದಂತೆ ವಿವಿಧ ಗಿಗ್ ಪ್ಲಾಟ್‌ಫಾರ್ಮ್‌ಗಳ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಬಂದ್‌ಗೆ ಕರೆ ನೀಡಿದ್ದಾರೆ. ವರ್ಷಾಂತ್ಯದ ದಿನದಂದು, ಭಾರತದ ಹಲವು ನಗರಗಳಲ್ಲಿ ಆಹಾರ ವಿತರಣೆ, ತ್ವರಿತ ವಾಣಿಜ್ಯ ಮತ್ತು ಇ-ಕಾಮರ್ಸ್ ಸೇವೆಗಳಲ್ಲಿ ಅಡಚಣೆ ಆಗಲಿದೆ. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ದೆಹಲಿ-ಎನ್‌ಸಿಆರ್, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಕೆಲವು ಪ್ರದೇಶೀಯ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿವೆ.

ಸಾಂದರ್ಭಿಕ ಚಿತ್ರ

ಹೈದರಾಬಾದ್‌, ಡಿ. 31: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಝೊಮ್ಯಾಟೋ (Zomato), ಸ್ವಿಗ್ಗಿ (Swiggy), ಬ್ಲಿಂಕ್‌ಇಟ್‌ (Blinkit), ಜೆಪ್ಟೋ (Zepto), ಅಮೇಜಾನ್ (Amazon) ಮತ್ತು ಫ್ಲಿಪ್‌ಕಾರ್ಟ್ (Flipkart‌)ಗೆ ಸಂಬಂಧಿಸಿದ ಗಿಗ್ ಕಾರ್ಮಿಕರು ಡಿಸೆಂಬರ್ 31ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ವರ್ಷಾಂತ್ಯದ ದಿನದಂದು ದೇಶದ ಹಲವು ನಗರಗಳಲ್ಲಿ ಆಹಾರ ವಿತರಣೆ, ತ್ವರಿತ ವಾಣಿಜ್ಯ ಹಾಗೂ ಇ-ಕಾಮರ್ಸ್ (E-commerce) ಸೇವೆಗಳಿಗೆ ಭಾರಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ.

ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್‌ಗಳ ಯೂನಿಯನ್ (TGPWU) ಮತ್ತು ಇಂಡಿಯನ್ ಫೆಡರೇಶನ್ ಆಫ್ ಆಪ್-ಬೇಸ್‌ಡ್ ಟ್ರಾನ್ಸ್‌ಪೋರ್ಟ್ ವರ್ಕರ್‌ಗಳು (Indian Federation of App-based Transport Workers) ಈ ಮುಷ್ಕರಕ್ಕೆ ಕರೆ ನೀಡಿದ್ದು, ಕರ್ನಾಟಕ, ಮಹಾರಾಷ್ಟ್ರ, ದೆಹಲಿ-ಎನ್‌ಸಿಆರ್, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಕೆಲವು ಭಾಗಗಳ ಪ್ರಾದೇಶಿಕ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿವೆ.

ಗಿಗ್ ವರ್ಕರ್‌ಗಳ ಪ್ರತಿಭಟನೆ ಏಕೆ?

ಯೂನಿಯನ್‌ಗಳ ಪ್ರಕಾರ, ಅಪ್ಲಿಕೇಶನ್ ಆಧಾರಿತ ವಾಣಿಜ್ಯ ವ್ಯವಸ್ಥೆಯ ಬೆನ್ನೆಲುಬಾಗಿರುವ ವಿತರಣಾ ಕಾರ್ಮಿಕರ ಆದಾಯ ಕುಸಿಯುತ್ತಿದ್ದರೂ, ಹೆಚ್ಚು ಸಮಯ ಕೆಲಸ ಮಾಡಲು ಒತ್ತಾಯಿಸಲಾಗುತ್ತಿದೆ. ಅಲ್ಲದೇ ಅಸುರಕ್ಷಿತ ವಿತರಣಾ ಗುರಿಗಳು, ಉದ್ಯೋಗ ಭದ್ರತೆಯ ಕೊರತೆ ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳಿಲ್ಲದಿರುವುದು ಪ್ರಮುಖ ಸಮಸ್ಯೆಗಳೆಂದು ಯೂನಿಯನ್‌ಗಳು ತಿಳಿಸಿವೆ.

ಪ್ರವಾಸೋದ್ಯಮದಲ್ಲಿ ಹೊಸ ದಾಖಲೆ ಬರೆದ ಉತ್ತರ ಪ್ರದೇಶ; ಈ ವರ್ಷ 137 ಕೋಟಿಗೂ ಹೆಚ್ಚು ಪ್ರವಾಸಿಗರ ಭೇಟಿ

ಹೊಸ ವರ್ಷಾಚರಣೆ ಮೇಲೆ ಪರಿಣಾಮ!

ಈ ಮುಷ್ಕರದಿಂದ ಡೆಲಿವರಿ ಎಕ್ಸಿಕ್ಯೂಟಿವ್‌ಗಳು ಆ್ಯಪ್‌ಗಳಿಂದ ಲಾಗ್ ಆಫ್ ಆಗುವ ಅಥವಾ ಕೆಲಸದ ಪ್ರಮಾಣವನ್ನು ತೀವ್ರವಾಗಿ ಕಡಿಮೆ ಮಾಡುವ ಸಾಧ್ಯತೆ ಇದೆ. ಇದರಿಂದ ಗ್ರಾಹಕರಿಗೆ ಆರ್ಡರ್‌ಗಳು ತಲುಪುವುದು ತಡವಾಗಬಹುದು ಅಥವಾ ರದ್ದಾಗುವ ಸಾಧ್ಯತೆಗಳಿವೆ. ಅಲ್ಲದೇ ಆಹಾರ ಆರ್ಡರ್‌ಗಳು, ದಿನಸಿ ಸರಕುಗಳ ಡೆಲಿವರಿ ಮತ್ತು ಕೊನೆಯ ಕ್ಷಣದ ಖರೀದಿಗಳ ಮೇಲೂ ಪರಿಣಾಮ ಬೀರುವ ನಿರೀಕ್ಷೆ ಇದೆ. ಪುಣೆ, ಬೆಂಗಳೂರು, ದೆಹಲಿ, ಹೈದರಾಬಾದ್, ಕೋಲ್ಕತ್ತಾ ಸೇರಿದಂತೆ ಹಲವು ಪ್ರಮುಖ ನಗರಗಳು ಹಾಗೂ ಕೆಲವು ಟಿಯರ್-2 ಮಾರುಕಟ್ಟೆಗಳ ಬಳಕೆದಾರರು ಇದರಿಂದ ತೊಂದರೆ ಅನುಭವಿಸಬಹುದು.

ಈ ಬಗ್ಗೆ ಮಾತನಾಡಿದ TGPWU ಸಂಸ್ಥಾಪಕ-ಅಧ್ಯಕ್ಷ ಶೈಕ್ ಸಲಾವುದ್ದೀನ್, "ಹೊಸ ವರ್ಷದ ಮುನ್ನಾದಿನ 1 ಲಕ್ಷದಿಂದ 1.5 ಲಕ್ಷ ರೈಡರ್‌ಗಳು ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ನಾವು ವಿವಿಧ ನಗರಗಳಲ್ಲಿ ಫ್ಲ್ಯಾಶ್ ಸ್ಟ್ರೈಕ್‌ಗಳನ್ನು ನಡೆಸುತ್ತೇವೆ. ಕೆಲವರು ಮಧ್ಯಾಹ್ನ ಮತ್ತು ರಾತ್ರಿಯ ಊಟದ ಸಮಯದಲ್ಲಿ ಆಹಾರ ವಿತರಣೆ ನಿಲ್ಲಿಸುತ್ತಾರೆ. ಇನ್ನೂ ಕೆಲವರು ಜನರು ದಿನಸಿ ಆರ್ಡರ್ ಮಾಡುವ ಪೀಕ್ ಸಮಯದಲ್ಲಿ ಕೆಲಸ ನಿಲ್ಲಿಸುತ್ತಾರೆ” ಎಂದು ಹೇಳಿದ್ದಾರೆ.

ಗ್ರಾಹಕರು ಏನು ಮಾಡಬೇಕು?

ಹೊಸ ವರ್ಷದ ಸಂಭ್ರಮದ ಮುನ್ನ ಡೆಲಿವರಿ ಪ್ಲಾಟ್‌ಫಾರ್ಮ್‌ಗಳು ಪ್ರಚಾರಾತ್ಮಕ ಆಫರ್‌ಗಳನ್ನು ನಡೆಸುತ್ತಿದ್ದು, ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ಮುಂಚಿತವಾಗಿ ಸಂಗ್ರಹಿಸಿಕೊಳ್ಳುವಂತೆ ಸಲಹೆ ನೀಡುತ್ತಿವೆ. ಡೆಲಿವರಿ ಖಚಿತವಲ್ಲದ ಕಾರಣ, ಕೊನೆಯ ಕ್ಷಣದ ಸಮಸ್ಯೆಗಳನ್ನು ತಪ್ಪಿಸಲು ಅಗತ್ಯ ವಸ್ತುಗಳನ್ನು ನೇರವಾಗಿ ಅಂಗಡಿಗಳಿಂದ ಖರೀದಿಸುವುದು ಉತ್ತಮ.