ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇರಾನ್-ಇಸ್ರೇಲ್ ಯುದ್ಧ: ದುಬೈಯ ಬುರ್ಜ್ ಅಲ್ ಅರಬ್ ಐಷಾರಾಮಿ ಹೋಟೆಲ್‌ಗೆ ಹಾನಿ

Iran-Israel War: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸಿದೆ. ಈ ದಾಳಿಗೆ ಇರಾನ್ ಪ್ರತೀಕಾರ ತೀರಿಸಿಕೊಂಡಿದೆ. ದುಬೈಯಲ್ಲಿರುವ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾಗೂ ಆಟ್ಯಾಕ್ ಮಾಡಿದೆ. ಬುರ್ಜ್ ಅಲ್ ಅರಬ್ ಐಷಾರಾಮಿ ಹೋಟೆಲ್ ಮೇಲೆ ಡ್ರೋನ್ ಅವಶೇಷಗಳು ಬಿದ್ದಿದ್ದು, ಕಟ್ಟಡದ ಹೊರಭಾಗಕ್ಕೆ ಹಾನಿಯಾಗಿದೆ.

ಇರಾನ್-ಇಸ್ರೇಲ್ ಯುದ್ಧ: ದುಬೈಯ ಐಷಾರಾಮಿ ಹೋಟೆಲ್‌ ಮೇಲೆ ದಾಳಿ

ಬುರ್ಜ್ ಅಲ್ ಅರಬ್‌ ಹೋಟೆಲ್‌ -

Profile
Pushpa Kumari Mar 1, 2026 8:28 PM

ದುಬೈ, ಮಾ. 1: ದುಬೈಯ ನೌಕಾಯಾನ ಆಕಾರದ ಐಷಾರಾಮಿ ಹೋಟೆಲ್ ಬುರ್ಜ್ ಅಲ್ ಅರಬ್‌ ಬಹಳ ಹಿಂದಿನಿಂದಲೂ ಎಂಜಿನಿಯರಿಂಗ್ ಫ್ಯಾಂಟಸಿಗೆ ಖ್ಯಾತಿ ಪಡೆದಿದೆ.‌ ದುಬೈಯಲ್ಲಿ ಮಾನವ ನಿರ್ಮಿತ ದ್ವೀಪದಲ್ಲಿ ನಿರ್ಮಿಸಲಾದ ಐಷಾರಾಮಿ ಕೋಟೆ ಇದಾಗಿದ್ದು, ಇದರ ವಿನ್ಯಾಸ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ ಈಗ ಇದರ ರೂಪವೇ ಬದಲಾಗಿದೆ.‌ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇರಾನ್ ಮತ್ತು ಇಸ್ರೇಲ್ (Iran-Israel War) ನಡುವಿನ ಯುದ್ಧ ಈಗ ಈ ಐಷಾರಾಮಿ ತಾಣ ದುಬೈ ಮೇಲೂ ಪರಿಣಾಮ ಬೀರಿದೆ.

ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸಿದೆ. ಈ ದಾಳಿಗಳಿಗೆ ಇರಾನ್ ಪ್ರತೀಕಾರ ತೀರಿಸಿಕೊಂಡಾಗ ದುಬೈಯಲ್ಲಿರುವ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾಗೂ ಆಟ್ಯಾಕ್ ಆಗಿದೆ. ಬುರ್ಜ್ ಅಲ್ ಅರಬ್ ಹೋಟೆಲ್ ಮೇಲೆ ಡ್ರೋನ್ ಅವಶೇಷ ಬಿದ್ದಿದ್ದು, ಕಟ್ಟಡದ ಹೊರಭಾಗಕ್ಕೆ ಹಾನಿಯಾಗಿದೆ.

ದುಬೈಯ ಬುರ್ಜ್ ಅಲ್ ಅರಬ್‌ ಹೋಟೆಲ್‌ ಮೇಲೆ ನಡೆದ ದಾಳಿ:



2026ರ ಫೆಬ್ರವರಿ 28ರಂದು ಟೆಹರಾನ್‌ ಮೇಲೆ ಇಸ್ರೇಲ್ ನಡೆಸಿದ ಪೂರ್ವಭಾವಿ ದಾಳಿಯ ನಂತರ ಇರಾನ್ ನಡೆಸಿದ ಸರಣಿ ವಾಯುದಾಳಿಗಳ ಸಂದರ್ಭದಲ್ಲಿ ಈ ಅವಘಡ ಉಂಟಾಗಿದೆ.‌ ಹಾರಾಡುತ್ತಿದ್ದ ಡ್ರೋನ್ ಒಂದನ್ನು ಉರುಳಿಸಲು ಹೋದಾಗ ಅದರ ಅವಶೇಷಗಳು ನೇರವಾಗಿ ಬುರ್ಜ್ ಅಲ್ ಅರಬ್ ಹೋಟೆಲ್‌ನ ಮೇಲ್ಭಾಗಕ್ಕೆ ಬಿದ್ದಿದೆ. ಇದು ಹೋಟೆಲ್‌ನ ಮೇಲ್ಭಾಗದ ಹೊರಭಾಗದಲ್ಲಿ ಸಣ್ಣ ಬೆಂಕಿಯನ್ನು ಉಂಟು ಮಾಡಿತು.

ಭಾರತೀಯ ಸಿಬ್ಬಂದಿಯನ್ನೊಳಗೊಂಡ ಹಡಗಿನ ಮೇಲೆ ದಾಳಿ; ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಪ್ರಕ್ಷುಬ್ಧ

ಈ ಘಟನೆಯು ಮುಖ್ಯವಾಗಿ ಹೋಟೆಲ್‌ನ ಸೌಂದರ್ಯಕ್ಕೆ ಹಾನಿಯುಂಟು ಮಾಡಿದ್ದು ಯಾವುದೇ ಪ್ರಮುಖ ಗಾಯ ನಡೆದಿರುವ ಬಗ್ಗೆ ವರದಿಯಾಗಿಲ್ಲ. ಬಾಹ್ಯ ವಿನ್ಯಾಸಕ್ಕೆ ಮಾತ್ರ ಹಾನಿಯಾಗಿದ್ದು, ಒಳಗಿನ ಕಾರ್ಯಚಟುವಟಿಕೆಗಳು ಎಂದಿನಂತೆ ಮುಂದುವರಿದಿವೆ. ಆದರೂ, ವಿಶ್ವದ ಐಷಾರಾಮಿ ಹೋಟೆಲ್ ಮೇಲೆ ಯುದ್ಧದ ಗುರುತು ಮೂಡಿರುವುದು ಬಹಳಷ್ಟು ಆತಂಕಕ್ಕೆ ಕಾರಣವಾಗಿದೆ.

ಐಷಾರಾಮಿ ಸೌಕರ್ಯದಿಂದಾಗಿ ಇದು 10-ಸ್ಟಾರ್​​ಗಳನ್ನು ಈ ಹೋಟೆಲ್ ಪಡೆದುಕೊಂಡಿದೆ. ಅತೀ‌ ಎತ್ತರದ ಹಾಗೂ ಕೃತಕ ದ್ವೀಪಗಳನ್ನು ಒಳಗೊಂಡ ಹೋಟೆಲ್​​​ ಇದಾಗಿದ್ದುಇಲ್ಲಿನ ಪ್ರತಿಯೊಂದು ರೂಮ್‌ನಲ್ಲೂ 24 ಕ್ಯಾರೆಟ್ ಚಿನ್ನದ ಲೇಪನವಿದೆ. ಅತಿಥಿಗಳಿಗೆ ಐಷಾರಾಮಿ ಸೌಲಭ್ಯ ಇಲ್ಲಿ ಸಿಗಲಿದೆ.