“ಎಷ್ಟು ಮಂದಿ ಪಕ್ಷ ಬಿಟ್ಟು ಹೋದರೂ ನನಗೆ ಖುಷಿ”: ಟಿಎಂಸಿ ಬಂಡಾಯ ನಾಯಕರಿಗೆ ಡೋಂಟ್ ಕೇರ್ ಎಂದ ಮಮತಾ ಬ್ಯಾನರ್ಜಿ ಮಮತಾ ಬ್ಯಾನರ್ಜಿ ಸಂದೇಶ
Banerjee’s Message to TMC Rebels: ಜುಲೈ 21ರಂದು ನಡೆದ ಹುತಾತ್ಮರ ದಿನದ ವಾರ್ಷಿಕ ರ‍್ಯಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧದ ಹೋರಾಟವು ವೈಯಕ್ತಿಕ ಅಥವಾ ರಾಜಕೀಯ ಭಿನ್ನಾಭಿಪ್ರಾಯಗಳಿಗಿಂತ ದೊಡ್ಡದಾಗಿದೆ ಎಂದು ಹೇಳಿದರು. ಬಿಜೆಪಿ ವಿರುದ್ಧ ಒಗ್ಗೂಡುವಂತೆ ಕರೆ ನೀಡಿದರು.
ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ) -
ಕೋಲ್ಕತಾ, ಜು. 21: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಪಶ್ಚಿಮ ಬಂಗಾಳದ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಸೇರಿ ಇಂಡಿಯಾ ಬ್ಲಾಕ್ ಸದಸ್ಯರಿಗೆ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬಿಜೆಪಿ (BJP) ವಿರುದ್ಧ ಒಗ್ಗೂಡುವಂತೆ ಕರೆ ನೀಡಿದ್ದಾರೆ. ಅದೇ ಸಮಯದಲ್ಲಿ, ತಮ್ಮ ಪಕ್ಷದೊಳಗಿನ ಬಂಡಾಯ ನಾಯಕರನ್ನು ಮತ್ತೆ ಸ್ವಾಗತಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜುಲೈ 21ರಂದು ನಡೆದ ಹುತಾತ್ಮರ ದಿನದ ವಾರ್ಷಿಕ ರ‍್ಯಾಲಿಯಲ್ಲಿ ಮಾತನಾಡಿದ ಬ್ಯಾನರ್ಜಿ, ಬಿಜೆಪಿ ವಿರುದ್ಧದ ಹೋರಾಟವು ವೈಯಕ್ತಿಕ ಅಥವಾ ರಾಜಕೀಯ ಭಿನ್ನಾಭಿಪ್ರಾಯಗಳಿಗಿಂತ ದೊಡ್ಡದಾಗಿದೆ ಎಂದು ಹೇಳಿದರು. ಟಿಎಂಸಿಯ ಕಾಲಿಘಾಟ್ ಬಣ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಬಂಗಾಳದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಎಲ್ಲರೂ ಇಂಡಿಯಾ ಮೈತ್ರಿಕೂಟದ ಅಡಿಯಲ್ಲಿ ಒಂದಾಗಬೇಕೆಂದು ನಾನು ಬಯಸುತ್ತೇನೆ. ನನಗೆ ಯಾವುದೇ ಅಹಂ ಇಲ್ಲ. ಇತರರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಾಗಿ ಹೋರಾಡಬೇಕುʼʼ ಎಂದು ಹೇಳಿದರು.
ಮಮತಾ ಬ್ಯಾನರ್ಜಿ ಭಾಷಣ:
Kolkata, West Bengal: Former Chief Minister Mamata Banerjee says, " 'Kar raha hai Loot, aur bol raha hai Jhuth' They are intimidating us; they act wrongly and speak lies. 'Sarfaroshi ki tamanna ab hamare dil mein hai, Dekhna hai zor kitna baazu-e-qaatil mein hai'... From today… pic.twitter.com/hNIZR24qC3
— IANS (@ians_india) July 21, 2026
ಹಿರಿಯ ನಾಯಕರು ಪಕ್ಷ ತೊರೆದರೂ ಸೋದರಳಿಯ ಅಭಿಷೇಕ್‌ನನ್ನು ಬಿಟ್ಟು ಕೊಡುತ್ತಿಲ್ಲ ಮಮತಾ ಬ್ಯಾನರ್ಜಿ
ಟಿಎಂಸಿ ಆಂತರಿಕವಾಗಿ ದುರ್ಬಲಗೊಂಡಿರುವ ವೇಳೆಯಲ್ಲೇ ಈ ಮನವಿ ಬಂದಿದೆ. ಬ್ಯಾನರ್ಜಿ ಅವರ ಬಣವು ಬಿರ್ಲಾ ತಾರಾಲಯದ ಬಳಿ ಹುತಾತ್ಮರ ದಿನಾಚರಣೆ ಕಾರ್ಯಕ್ರಮವನ್ನು ನಡೆಸಿದರೆ, ಋತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ನಾಯಕರು ಮಧ್ಯ ಕೋಲ್ಕತ್ತಾದ ಮೇಯೊ ರಸ್ತೆಯಲ್ಲಿ ರ‍್ಯಾಲಿಯನ್ನು ಆಯೋಜಿಸಿತು. ಈ ವರ್ಷದ ಆರಂಭದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಪಕ್ಷವನ್ನು ಆವರಿಸಿರುವ ಸಾಂಸ್ಥಿಕ ಬಿಕ್ಕಟ್ಟನ್ನು ಈ ಘಟನೆ ಮತ್ತೊಮ್ಮೆ ಎತ್ತಿ ಹಿಡಿದಿದೆ.
“ನಾನು ದೇಶದ್ರೋಹಿಗಳಿಗೆ ನೇರವಾಗಿ ಬಿಜೆಪಿಗೆ ಸೇರಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಸವಾಲು ಹಾಕುತ್ತೇನೆ” ಎಂದು ಮಮತಾ ಬ್ಯಾನರ್ಜಿ ಹೇಳಿದರು. ಅವರು ಕೇಸರಿ ಪಕ್ಷದ ಪ್ರತಿನಿಧಿಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. “ನಿಮಗೆ ಬಿಜೆಪಿಯನ್ನು ಬೆಂಬಲಿಸಲು ಇಷ್ಟವಿದ್ದರೆ ಬಿಜೆಪಿಗೆ ಹೋಗಿ. ನೀವು ಎಷ್ಟು ಹೆಚ್ಚು ಮಂದಿ ಪಕ್ಷವನ್ನು ತೊರೆಯುತ್ತೀರೋ, ಅಷ್ಟು ನನಗೆ ಸಂತೋಷ. ಖಾಲಿಯಾಗುವ ಪ್ರತಿಯೊಂದು ಸ್ಥಾನವನ್ನು ತುಂಬಲು ನನ್ನ ವಿದ್ಯಾರ್ಥಿಗಳು ಮತ್ತು ಯುವ ಕಾರ್ಯಕರ್ತರು ಇದ್ದಾರೆ. ಕಳ್ಳರು ಬಿಜೆಪಿಗೆ ಹೋಗಿದ್ದಾರೆ. ನಾನು ಅವರನ್ನು ಎಂದಿಗೂ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ” ಎಂದು ಬ್ಯಾನರ್ಜಿ ಹೇಳಿದರು. ತಮ್ಮ ಬಣವು ಹುತಾತ್ಮರ ದಿನಾಚರಣೆ ಕಾರ್ಯಕ್ರಮವನ್ನು ನಡೆಸದಂತೆ ತಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಬ್ಯಾನರ್ಜಿ ಆರೋಪಿಸಿದರು.