ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UPI Down: ಯುಪಿಐ ಸ್ಥಗಿತ; ಹಣ ಪಾವತಿಸಲು ಸಾಧ್ಯವಾಗದೆ ಲಕ್ಷಾಂತರ ಮಂದಿಯ ಪರದಾಟ

ಬುಧವಾರ (ಮಾ. 26) ಸಂಜೆ ಭಾರತದಲ್ಲಿ ಯುಪಿಐ ಸರ್ವರ್‌ ಸ್ಥಗಿತವಾಗಿದ್ದು, ಹಣ ಪಾವತಿ ಮಾಡಲು ಸಾಧ್ಯವಾಗದೆ ಲಕ್ಷಾಂತರ ಮಂದಿ ಪರದಾಡಿದ್ದಾರೆ. ಈ ಬಗ್ಗೆ ಹಲವರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಯುಪಿಐ ಸ್ಥಗಿತ; ಹಣ ಪಾವತಿಸಲು ಸಾಧ್ಯವಾಗದೆ ಪರದಾಟ

ಸಾಂದರ್ಭಿಕ ಚಿತ್ರ.

Profile Ramesh B Mar 26, 2025 8:17 PM

ಹೊಸದಿಲ್ಲಿ: ಬುಧವಾರ (ಮಾ. 26) ಸಂಜೆ ಭಾರತದಲ್ಲಿ ಯುಪಿಐ ಸರ್ವರ್‌ ಸ್ಥಗಿತವಾಗಿದ್ದು, ಹಣ ಪಾವತಿ ಮಾಡಲು ಸಾಧ್ಯವಾಗದೆ ಲಕ್ಷಾಂತರ ಮಂದಿ ಪರದಾಡಿದ್ದಾರೆ (UPI Down). ಈ ಬಗ್ಗೆ ಹಲವರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಗೂಗಲ್ ಪೇ (Google Pay), ಫೋನ್ ಪೇ (PhonePe) ಮತ್ತು ಪೇಟಿಎಂ(Paytm)ನಂತಹ ಜನಪ್ರಿಯ ಪೇಮೆಂಟ್ ಆಪ್ಲಿಕೇಷನ್‌ಗಳ ಹಣ ಪಾವತಿ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಸ್ಮಾರ್ಟ್‌ ಫೋನ್ (SmartPhone) ಮೂಲಕ ಆನ್‌ಲೈನ್‌ (Online)ನಲ್ಲಿ ಹಣವನ್ನು ಕಳುಹಿಸಲು ಸಾಧ್ಯವಾಗದೆ ಗ್ರಾಹಕರು ಹತಾಶರಾಗಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಾರೆ.

ಸಮಸ್ಯೆಗಳ ಪತ್ತೆ ಹಚ್ಚುವ ಡೌನ್‌ಡಿಟೆಕ್ಟರ್‌ (Downdetector) ಪ್ರಕಾರ, ಸಂಜೆ 7.50ರ ವೇಳೆಗೆ ಯುಪಿಐ ಸ್ಥಗಿತಕ್ಕೆ ಸಂಬಂಧಿಸಿದಂತೆ 2,750 ದೂರುಗಳು ಬಂದಿವೆ. ವರದಿ ಪ್ರಕಾರ ಗೂಗಲ್ ಪೇ ಬಳಕೆದಾರರು 296 ದೂರುಗಳನ್ನು ನೀಡಿದ್ದಾರೆ.



ಇನ್ನು ಪೇಟಿಎಂ ಅಪ್ಲಿಕೇಶನ್‌ಗೆ ಸಂಬಂಧಿಸಿದ 119 ದೂರುಗಳು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ಲಾಟ್‌ಫಾರ್ಮ್‌ ಸ್ಥಗಿತದ ಬಗ್ಗೆ 376 ಮಂದಿ ದೂರು ಸಲ್ಲಿಸಿದ್ದಾರೆ. ಹೆಚ್ಚಿನ ಎಸ್‌ಬಿಐ ಬಳಕೆದಾರರು ಹಣ ವರ್ಗಾವಣೆ ಮತ್ತು ಆನ್‌ಲೈನ್‌ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಿರುವ ಬಗ್ಗೆ ದೂರು ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Facebook, Instagram Down: ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸ್ಥಗಿತ; ಬಳಕೆದಾರರ ಪರದಾಟ

ಸಮಸ್ಯೆ ಯಾಕಾಗಿ ಕಂಡು ಬಂದಿದೆ ಎನ್ನುವ ಕಾರಣ ಇದುವರೆಗೆ ಬಹಿರಂಗವಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.