ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಂಜು ಸ್ಯಾಮ್ಸನ್ ಉಪನಾಯಕ?

IPL 2026: "ಈ ಋತುವಿನಲ್ಲಿ ಯಾವುದೇ ಹಂತದಲ್ಲಿ ಎಂಎಸ್ ಧೋನಿ ಸಂಜುಗೆ ಕೀಪಿಂಗ್ ಪಾತ್ರವನ್ನು ನೀಡಿದರೆ ನನಗೆ ಆಶ್ಚರ್ಯವಾಗುವುದಿಲ್ಲ. ಅವರು ನಾಯಕತ್ವದ ಗುಂಪಿನ ಭಾಗವಾಗಿರುತ್ತಾರೆ, ಮತ್ತು ಗಾಯದಿಂದಾಗಿ ಅಥವಾ ಇನ್ಯಾವುದೇ ಕಾರಣದಿಂದಾಗಿ ರುತುರಾಜ್ ಲಭ್ಯವಿಲ್ಲದಿದ್ದರೆ, ಎಂಎಸ್ ಬದಲಿಗೆ ಸಂಜು ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು" ಎಂದು ಕುಂಬ್ಳೆ ಹೇಳಿದರು.

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಂಜು ಸ್ಯಾಮ್ಸನ್ ಉಪನಾಯಕ?

Sanju Samson -

Abhilash BC
Abhilash BC Mar 19, 2026 9:55 AM

ಬೆಂಗಳೂರು, ಮಾ.19: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಹರಾಜಿಗೆ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ ಸಂಜು ಸ್ಯಾಮ್ಸನ್(Sanju Samson) ಅವರನ್ನು ಖರೀದಿಸಿದ್ದನ್ನು ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ(Anil Kumble) ಶ್ಲಾಘಿಸಿದ್ದಾರೆ ಮತ್ತು ಅವರು ತಂಡದ ಅಗತ್ಯಕ್ಕೆ ಸರಿಹೊಂದುತ್ತಾರೆ ಎಂದು ಹೇಳಿದ್ದಾರೆ. ಜತೆಗೆ ಸಂಜು ತಂಡದ ಉಪನಾಯಕನಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಜಿಯೋಸ್ಟಾರ್‌ನಲ್ಲಿ ಮಾತನಾಡಿದ ಅನಿಲ್ ಕುಂಬ್ಳೆ, ಭಾರತೀಯ ಕ್ರಿಕೆಟ್ ಪರಂಪರೆ ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿಯಂತಹ ಶ್ರೇಷ್ಠರ ಮೂಲಕ ಸಾಗಿ ಬಂದಿದೆ, ಇದು ಪೀಳಿಗೆಯ ಪರಿವರ್ತನೆಯನ್ನು ಎತ್ತಿ ತೋರಿಸುತ್ತದೆ ಎಂದರು.

ಸಂಜು ಇತ್ತೀಚೆಗೆ ಮುಕ್ತಾಯಕಂಡ ಟಿ20 ವಿಶ್ವಕಪ್‌ನಲ್ಲಿ ಸಂಜು ನೀಡಿದ ಕೊಡುಗೆಗಳನ್ನು ಕುಂಬ್ಳೆ ನೆನಪಿಸಿಕೊಂಡರು. ಮತ್ತು ಸ್ಯಾಮ್ಸನ್ ಅವರ ಕೇರಳದವರಾಗಿದ್ದರೂ, ತಮಿಳು ಮಾತನಾಡುವ ಸಾಮರ್ಥ್ಯ, ವಿಕೆಟ್ ಕೀಪರ್-ಬ್ಯಾಟರ್ ಪಾತ್ರ ಮತ್ತು ಅನುಭವವು ಅವರನ್ನು ಚೆನ್ನೈ ತಂಡಕ್ಕೆ ಸಹಜವಾಗಿಯೇ ಹೊಂದಿಕೊಳ್ಳುವಂತೆ ಮಾಡುತ್ತದೆ ಎಂದು ಹೇಳಿದರು.

"ಸಂಜು ಸೇರ್ಪಡೆ ಇದು ಫ್ರಾಂಚೈಸಿಯ ಅಭಿಮಾನಿಗಳ ಸಂಖ್ಯೆಗೆ ಖಂಡಿತವಾಗಿಯೂ ಕೊಡುಗೆ ನೀಡುತ್ತದೆ ಎಂದು ನನಗೆ ಖಚಿತವಾಗಿದೆ. ಚೆನ್ನೈ ದೃಷ್ಟಿಕೋನದಿಂದ, ಅವರು ಅವರ ಅಗತ್ಯಕ್ಕೆ ಸರಿಹೊಂದುತ್ತಾರೆ. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವದ ಅನುಭವವನ್ನು ಗಮನಿಸಿದರೆ, ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಂಭಾವ್ಯ ಉಪನಾಯಕನ ಸ್ಥಾನಕ್ಕೆ ಸೂಕ್ತ" ಎಂದು ಅನಿಲ್ ಕುಂಬ್ಳೆ ಹೇಳಿದರು.

ಐಪಿಎಲ್‌ಗಾಗಿ ಮದ್ಯಪಾನ ತ್ಯಜಿಸಿದ ಯುಜ್ವೇಂದ್ರ ಚಾಹಲ್

"ಸಂಜುಗೆ ಅದು ಸೂಕ್ತ ಪಾತ್ರ ಎಂದು ನಾನು ಭಾವಿಸುತ್ತೇನೆ, ಅವರು ರಾಜಸ್ಥಾನವನ್ನು ದೀರ್ಘಕಾಲದವರೆಗೆ ಮುನ್ನಡೆಸಿದ್ದಾರೆ. ಆದ್ದರಿಂದ ನಾಯಕತ್ವದ ಪಾತ್ರವು ಅವರಿಗೆ ಸ್ವಾಭಾವಿಕವಾಗಿ ಬರುತ್ತದೆ ಮತ್ತು ಸಿಎಸ್‌ಕೆ ಅದನ್ನು ಹುಡುಕುತ್ತದೆ. ಕಳೆದ ವರ್ಷ, ರುತುರಾಜ್ ಗಾಯಗೊಂಡಾಗ, ಎಂಎಸ್ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಯಿತು, ಮತ್ತು ಇದಕ್ಕೂ ಮೊದಲು, ರವೀಂದ್ರ ಜಡೇಜಾ ಕೂಡ ನಾಯಕರಾಗಿದ್ದಾಗ, ಎಂಎಸ್ ಧೋನಿ ಋತುವಿನ ಮಧ್ಯದಲ್ಲಿ ನಾಯಕನಾಗಿ ಮರಳಿದರು. ಆದ್ದರಿಂದ ಎಂಎಸ್‌ಗೆ ಮುಂದಿನ ನಾಯಕ ಯಾರೆಂದು ಗುರುತಿಸುವಲ್ಲಿ ಕೆಲವು ಸವಾಲುಗಳಿವೆ. ಸಂಜು ಅವರು ನಾಯಕನಾಗಿ ಮುಂದುವರಿಯುವುದು ಒಳ್ಳೆಯದು" ಎಂದು ಕುಂಬ್ಳೆ ಹೇಳಿದರು.

"ಈ ಋತುವಿನಲ್ಲಿ ಯಾವುದೇ ಹಂತದಲ್ಲಿ ಎಂಎಸ್ ಧೋನಿ ಸಂಜುಗೆ ಕೀಪಿಂಗ್ ಪಾತ್ರವನ್ನು ನೀಡಿದರೆ ನನಗೆ ಆಶ್ಚರ್ಯವಾಗುವುದಿಲ್ಲ. ಅವರು ನಾಯಕತ್ವದ ಗುಂಪಿನ ಭಾಗವಾಗಿರುತ್ತಾರೆ, ಮತ್ತು ಗಾಯದಿಂದಾಗಿ ಅಥವಾ ಇನ್ಯಾವುದೇ ಕಾರಣದಿಂದಾಗಿ ರುತುರಾಜ್ ಲಭ್ಯವಿಲ್ಲದಿದ್ದರೆ, ಎಂಎಸ್ ಬದಲಿಗೆ ಸಂಜು ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು" ಎಂದು ಕುಂಬ್ಳೆ ಹೇಳಿದರು.