ವೈಭವ್ ಸೂರ್ಯವಂಶಿಗೆ ದೊಡ್ಡ ಭವಿಷ್ಯವಿದೆ, ಈಗಲೇ ಒತ್ತಡ ಹಾಕಬೇಡಿ ಎಂದ ಸನತ್ ಜಯಸೂರ್ಯ!
ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಭಾರತೀಯ ಕ್ರಿಕೆಟ್‌ನ ದೊಡ್ಡ ಭವಿಷ್ಯ, ಹಾಗಾಗಿ ಅವರ ಮೇಲೆ ಪ್ಲೇಯಿಂಗ್ XI ಆಡುವ ವಿಚಾರದಲ್ಲಿ ಒತ್ತಡ ಹಾಕಬೇಡಿ ಎಂದು ಶ್ರೀಲಂಕಾ ದಿಗ್ಗಜ ಸನತ್ ಜಯಸೂರ್ಯ ಹೇಳಿದ್ದಾರೆ. ಯುವ ಬ್ಯಾಟ್ಸ್‌ಮನ್‌ಗೆ ಸಿಗಬಹುದಾದ ಅವಕಾಶಗಳನ್ನು ಟೀಮ್ ಮ್ಯಾನೇಜ್‌ಮೆಂಟ್ ನೀಡಬೇಕೆಂದು ಆಗ್ರಹಿಸಿದ್ದಾರೆ.
ವೈಭವ್ ಸೂರ್ಯವಂಶಿ ಬಗ್ಗೆ ಸನತ್ ಜಯಸೂರ್ಯ ದೊಡ್ಡ ಹೇಳಿಕೆ. -
ನವದೆಹಲಿ: ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಭಾರತ ತಂಡದಲ್ಲಿ ದೊಡ್ಡ ಭವಿಷ್ಯವಿದೆ ಎಂದು ಹೇಳಿದ ಶ್ರೀಲಂಕಾ ದಿಗ್ಗಜ ಸನತ್ ಜಯಸೂರ್ಯ (Sanat Jayasuriya), ಎಡಗೈ ಬ್ಯಾಟ್ಸ್‌ಮನ್‌ಗೆ ತ್ವರಿತವಾಗಿ ಪ್ಲೇಯಿಂಗ್ Xiನಲ್ಲಿ ಆಡಿಸಿ ಹೆಚ್ಚಿನ ಒತ್ತಡ ಹಾಕಬೇಡಿ ಎಂದು ಸಲಹೆ ನೀಡಿದ್ದಾರೆ. ವೈಭವ್ ಇನ್ನೂ ಚಿಕ್ಕ ಹುಡುಗ ಹಾಗೂ ವಿಭಿನ್ನ ಬಗೆಯ ಪ್ರತಿಭೆಯನ್ನು ಹೊಂದಿದ್ದಾರೆ. ಹಾಗಾಗಿ ಅವರು ಇನ್ನಷ್ಟು ಸುಧಾರಣೆ ಕಾಣಲು ಹೆಚ್ಚಿನ ಸಮಯ ನೀಡಬೇಕೆಂದು ಜಯಸೂರ್ಯ ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯ ಭಾರತ ತಂಡದಲ್ಲಿ ವೈಭವ್ ಸೂರ್ಯವಂಶಿ ಇದ್ದರು. ಆದರೆ, ಅವರಿಗೆ ಒಂದೇ ಒಂದು ಪಂದ್ಯದಲ್ಲಿಯೂ ಆಡಲು ಅವಕಾಶ ನೀಡಲಾಗಿರಲಿಲ್ಲ. ಟೀಮ್ ಮ್ಯಾನೇಜ್‌ಮೆಂಟ್ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಆರಂಭಿಕ ಜೋಡಿಯಾಗಿ ಕಣಕ್ಕೆ ಇಳಿಸಿತ್ತು ಹಾಗೂ ಈ ಜೋಡಿ ಈ ಸರಣಿಯಲ್ಲಿ ಯಶಸ್ವಿಯಾಯಿತು.
ಕಾರ್ಪೋರೇಟ್ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪಿಟಿಸಿ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡಿದ ಸನತ್ ಜಯಸೂರ್ಯ, "ಅವರು ವಿಭಿನ್ನ ಬಗೆಯ ಪ್ರತಿಭೆಯನ್ನು ಹೊಂದಿದ್ದಾರೆ. ಅವರು ಭಾರತೀಯ ಕ್ರಿಕೆಟ್‌ನ ದೊಡ್ಡ ಭವಿಷ್ಯ. ಈ ಹುಡುಗನಿಗೆ ಇನ್ನೂ ಸಾಕಷ್ಟು ಸಮಯವಿದೆ. ಹಾಗಾಗಿ ಅವರಿಗೆ ಅವಕಾಶ ನೀಡಿದರೆ, ಉತ್ತಮ ಪ್ರದರ್ಶನವನ್ನು ತೋರಬಲ್ಲರು," ಎಂದು ಹೇಳಿದ್ದಾರೆ.
ಮೂರನೇ ಟಿ20ಐನಲ್ಲಿ ವೈಭವ್ ಸೂರ್ಯವಂಶಿ ಆಡ್ತಾರಾ? ಬಿಗ್ ಅಪ್‌ಡೇಟ್ ನೀಡಿದ ಶ್ರೇಯಸ್ ಅಯ್ಯರ್!
ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು: ಜಯಸೂರ್ಯ
"ಅವಕಾಶಗಳನ್ನು ಬಂದೇ ಬರುತ್ತವೆ. ಅವರು ಯಾವ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಬಲ್ಲರು ಎಂದು ನಾನು ಹೇಳಲು ಸಾಧ್ಯವಿಲ್ಲ, ಇದು ಸನ್ನಿವೇಶವನ್ನು ಅವಲಂಬಿಸಿದೆ. ಆದರೆ, ಅವಕಾಶಗಳು ಸಿಕ್ಕಾಗ, ಅವುಗಳನ್ನು ವೈಭವ್ ಸೂರ್ಯವಂಶಿ ಸಂಪೂರ್ಣವಾಗಿ ಬಳಸಿಕೊಳ್ಳಬೇಕಾಗುತ್ತದೆ. ಅವರ ಪಯಣ ಹೇಗೆ ಸಾಗಲಿದೆ ಎಂದು ಕಾದು ನೋಡೋಣ," ಎಂದು ಶ್ರೀಲಂಕಾ ದಿಗ್ಗಜ ತಿಳಿಸಿದ್ದಾರೆ.
"ಭಾರತ ತಂಡದಲ್ಲಿ ಆಯ್ಕೆಯ ಬಗ್ಗೆ ಹಾಗೂ ಬ್ಯಾಟಿಂಗ್ ಲೈನ ಅಪ್ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಏಕೆಂದರೆ ವೈಭವ್ ಸೂರ್ಯವಂಶಿ ಅಸಾಧಾರಣ ಪ್ರತಿಭೆಯನ್ನು ಹೊಂದಿದ್ದಾರೆ," ಎಂದು ಹೇಳಿದ ಅವರು, ಭಾರತ ತಂಡದಲ್ಲಿ ಈಗಿನ ಸ್ಪರ್ಧೆಯ ಬಗ್ಗೆಯೂ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ಪ್ರತಿಯೊಬ್ಬ ಆಟಗಾರನೂ ತಮ್ಮದೇ ಆದ ವೈಯಕ್ತಿಕವಾಗಿ ವಿಭಿನ್ನ ಪ್ರತಿಭೆಯನ್ನು ಹೊಂದಿದ್ದಾರೆ ಹಾಗೂ ಅವರು ಅಭ್ಯಾಸ ಹಾಗೂ ತರಬೇತಿ ಸಮಯದಲ್ಲಿ ಕಠಿಣ ಪರಿಶ್ರಮವನ್ನು ಹಾಕುತ್ತಾರೆ. ಇನ್ನು ಭಾರತದಲ್ಲಿ ತಮ್ಮ ಅವಕಾಶವನ್ನು ಪಡೆದು ಉತ್ತಮ ಪ್ರದರ್ಶನವನ್ನು ತೋರಲು ಸದಾ ಸಿದ್ದರಾಗಿರುತ್ತಾರೆ. ಇಲ್ಲಿ ಸ್ಪರ್ಧೆ ತುಂಬಾ ಅಗ್ರ ದರ್ಜೆಯಲ್ಲಿದೆ," ಎಂದು ಸನತ್ ಜಯಸೂರ್ಯ ತಿಳಿಸಿದ್ದಾರೆ.
ಪಿಎಸ್‌ಎಲ್‌ನಿಂದ ಒಬ್ಬೇ ಒಬ್ಬ ವೈಭವ್ ಸೂರ್ಯವಂಶಿಯಂಥಾ ಬ್ಯಾಟರ್ ಬೆಳಕಿಗೆ ಬಂದಿಲ್ಲ: ವಸೀಮ್ ಅಕ್ರಮ್
ಭಾರತೀಯ ಕ್ರಿಕೆಟ್‌ನ ಗುಣಮಟ್ಟಕ್ಕೆ ಜಯಸೂರ್ಯ ಮೆಚ್ಚುಗೆ
"ಭಾರತದಲ್ಲಿ ಅಗ್ರ ದರ್ಜೆಯ ಕ್ರಿಕೆಟ್ ಇದೆ. ಭಾರತದಲ್ಲಿ ಎಲ್ಲಾ ಆಟಗಾರರು ಒಡಿಐ, ಟಿ20ಐ ಹಾಗೂ ಟೆಸ್ಟ್ ಸೇರಿ ಮೂರೂ ಸ್ವರೂಪದಲ್ಲಿ ಆಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ನೀವು ಎಲ್ಲಾ ಸ್ವರೂಪದಲ್ಲಿ ಆಡುವುದು ನಿಜಕ್ಕೂ ಸುಲಭವದ ಸಂಗತಿಯಲ್ಲ. ಭಾರತಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಉತ್ಸಾಹ ಅಗ್ರ ದರ್ಜೆಯಲ್ಲಿದೆ. ಈ ಕಾರಣದಿಂದಲೇ ಬಹುತೇಕ ಆಟಗಾರರು ಉತ್ತಮ ಪ್ರದರ್ಶನವನ್ನು ತೋರುತ್ತಾರೆ ಹಾಗೂ ಭಾರತವನ್ನು ಪ್ರತಿನಿಧಿಸುತ್ತಾರೆ," ಎಂದು ಹೇಳಿದ್ದಾರೆ.