ನವದೆಹಲಿ: ವಂದೇ ಮಾತರಂ (Vande Mataram 150 Years) ಗೀತೆಯು ದೇಶದ ಏಕತೆ ಮತ್ತು ಧೈರ್ಯದ ಮಂತ್ರ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಉಲ್ಲೇಖಿಸಿದ್ದರೆ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು (Jawaharlal Nehru) ಅವರು ಈ ಗೀತೆಯಲ್ಲಿ ಬರುವ ದುರ್ಗಾದೇವಿಯನ್ನು ಹೊಗಳಿದ ಸಾಲುಗಳನ್ನು ಕತ್ತರಿಸಿ ಪಾಪ ಮಾಡಿದ್ದಾರೆ ಎಂದು ಬಿಜೆಪಿ (BJP) ಆರೋಪಿಸಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ (BJP spokesperson C.R. Keshavan), 1937ರ ಫೈಜ್‌ಪುರ ಅಧಿವೇಶನದಲ್ಲಿ ಕಾಂಗ್ರೆಸ್ ಮೊಟಕುಗೊಳಿಸಿದ ವಂದೇ ಮಾತರಂ ಅನ್ನು ಪಕ್ಷದ ರಾಷ್ಟ್ರೀಯ ಗೀತೆಯಾಗಿ ಅಳವಡಿಸಿಕೊಂಡಿತು ಎಂದು ಅವರು ತಿಳಿಸಿದ್ದಾರೆ.
ನೆಹರು ಅವರು ಈ ಕುರಿತು ಸುಭಾಷ್ ಚಂದ್ರ ಬೋಸ್ ಅವರಿಗೆ ಬರೆದ ಪತ್ರದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ವಂದೇ ಮಾತರಂ ಗೀತೆಗೂ ದುರ್ಗಾದೇವಿಗು ಯಾವುದೇ ಸಂಬಂಧವಿಲ್ಲ. ಅಲ್ಲದೇ ವಂದೇ ಮಾತರಂ ರಾಷ್ಟ್ರೀಯ ಗೀತೆಯಾಗಲು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Sugarcane Farmers Protest: ಕಬ್ಬು ರಿಕವರಿ ಆಧಾರದಲ್ಲಿ ದರ ಹೆಚ್ಚಳ ಮಾಡಿ; ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸಿಎಂ ಸೂಚನೆ
ಫೈಜ್‌ಪುರದಲ್ಲಿ 1937ರಲ್ಲಿ ನಡೆದ ಅಧಿವೇಶನದಲ್ಲಿ ಮೊಟಕುಗೊಳಿಸಿದ ವಂದೇ ಮಾತರಂ ಅನ್ನು ಮಾತ್ರ ಪಕ್ಷದ ರಾಷ್ಟ್ರೀಯ ಗೀತೆಯಾಗಿ ಹೇಗೆ ಅಳವಡಿಸಿಕೊಂಡಿತು ಎಂಬುದನ್ನು ನಮ್ಮ ಯುವ ಪೀಳಿಗೆ ತಿಳಿದುಕೊಳ್ಳುವುದು ಅತ್ಯಗತ್ಯ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಮಾತರಂ ಗೀತೆಯ 150 ನೇ ವರ್ಷದ ಸ್ಮರಣಾರ್ಥ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ ಎಂದು ಕೇಶವನ್ ಹೇಳಿದ್ದಾರೆ.
ವಂದೇ ಮಾತರಂ ರಾಷ್ಟ್ರದ ಏಕತೆ ಮತ್ತು ಒಗ್ಗಟ್ಟಿನ ಧ್ವನಿಯಾಗಿದೆ. ಇಂದು ದೇಶಾದ್ಯಂತ ಇದನ್ನು ಆಚರಿಸಲಾಯಿತು. ಇದು ರಾಷ್ಟ್ರೀಯತಾವಾದಿ ಮನೋಭಾವವನ್ನು ದೇಶಾದ್ಯಂತ ತುಂಬಿತ್ತು. ಇದನ್ನು ಹೇಳುವುದು ಬ್ರಿಟಿಷರು ಕ್ರಿಮಿನಲ್ ಅಪರಾಧವನ್ನಾಗಿ ಮಾಡಿದ್ದರು. ಆದರೆ ಅದು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಭಾಷೆಗೆ ಸೇರಿರಲಿಲ್ಲ. ಕಾಂಗ್ರೆಸ್ ಈ ಹಾಡನ್ನು ಧರ್ಮದೊಂದಿಗೆ ಜೋಡಿಸುವ ಐತಿಹಾಸಿಕ ಪಾಪವನ್ನು ಮಾಡಿದೆ. ಹೀಗಾಗಿಯೇ ನೆಹರೂ ಅವರು ಉದ್ದೇಶಪೂರ್ವಕವಾಗಿ ಮಾ ದುರ್ಗಾ ದೇವಿಯನ್ನು ಸ್ತುತಿಸಿದ ವಂದೇ ಮಾತರಂನ ಚರಣಗಳನ್ನು ತೆಗೆದುಹಾಕಿತು ಎಂದು ಅವರು ತಿಳಿಸಿದರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ವಂದೇ ಮಾತರಂನ ಪೂರ್ಣ ಮೂಲ ಆವೃತ್ತಿಯನ್ನು ಬಲವಾಗಿ ಪ್ರತಿಪಾದಿಸಿದ್ದರು. ಆದರೆ ನೆಹರು ಅವರು 1937ರ ಸೆಪ್ಟೆಂಬರ್ 1ರಂದು ಅವರಿಗೆ ಪತ್ರ ಬರೆದು ವಂದೇ ಮಾತರಂನ ಹಿನ್ನೆಲೆ ಮುಸ್ಲಿಮರನ್ನು ಕೆರಳಿಸುವ ಸಾಧ್ಯತೆಯಿದೆ ಎಂದು ಹೇಳಿದ್ದರು.
ಇದನ್ನೂ ಓದಿ: Viral News: ತನಗೆ ಕಚ್ಚಿದ ನಾಗರಹಾವಿಗೇ ಕಚ್ಚಿದ ಭೂಪ- ಸತ್ತು ಬಿದ್ದ ವಿಷಸರ್ಪ! ವಿಡಿಯೊ ನೋಡಿ
2024ರ ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಿಂದೂ ಧರ್ಮದಲ್ಲಿ ಶಕ್ತಿ ಎಂಬ ಪದವಿದೆ. ನಾವು ಶಕ್ತಿಯ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಹೇಳಿದ್ದರು. ಪವಿತ್ರ ಛತ್ ಪೂಜೆಯನ್ನು ನಾಟಕವೆಂದು ಅವಮಾನಿಸಿದ ಅವರಲ್ಲಿ ನೆಹರು ಅವರ ಹಿಂದೂ ವಿರೋಧಿ ಮನಸ್ಥಿತಿ ಇದೆ. ಇದು ಕೋಟ್ಯಂತರ ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಸಿ.ಆರ್. ಕೇಶವನ್ ತಿಳಿಸಿದ್ದಾರೆ.