ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಂದೇ ಮಾತರಂ ವಿವಾದ: ಮುಖ್ಯಮಂತ್ರಿ ವಿಜಯ್ ಪಕ್ಷಕ್ಕೆ ಸವಾಲು ತಂದೊಡ್ಡಿದ ತಮಿಳು ಗೀತೆ

ಪ್ರಮಾಣ ವಚನದಲ್ಲಿ ಕೇರಳದಲ್ಲಿ ವಂದೇ ಮಾತರಂ ಹಾಡನ್ನು ಪೂರ್ತಿಯಾಗಿ ಹಾಡಿ ವಿವಾದ ಉಂಟಾದ ಬೆನ್ನಲ್ಲೇ ಈಗ ತಮಿಳುನಾಡಿನಲ್ಲಿ ಪ್ರಮಾಣ ವಚನ ಸಮಾರಂಭದಲ್ಲಿ ತಮಿಳು ಗೀತೆಯನ್ನು ಮೂರನೇ ಸ್ಥಾನದಲ್ಲಿ ಹಾಡಿ ಟಿವಿಕೆ ಸರ್ಕಾರ ಟೀಕೆಗೆ ಗುರಿಯಾಗಿತ್ತು. ಇದೀಗ ಮತ್ತೆ ಅದೇ ತಪ್ಪನ್ನು ಮಾಡಿರುವ ಟಿವಿಕೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

ಸಂಗ್ರಹ ಚಿತ್ರ

ಚೆನ್ನೈ: ಹೊಸದಾಗಿ ಸರ್ಕಾರ ರಚನೆಯಾದ ಬಳಿಕ ತಮಿಳುನಾಡಿನ ರಾಜ್ಯ ಗೀತೆಗೆ (Tamil anthem) ಮೊದಲ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದ ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷ ಇದೀಗ ಮತ್ತೆ ಗೀತೆಯನ್ನು ಮೂರನೇ ಸ್ಥಾನದಲ್ಲಿ ಹಾಡಿ ಟೀಕೆಗೆ ಗುರಿಯಾಗಿದೆ. ಒಂದೇ ವಾರದಲ್ಲಿ ಎರಡನೇ ಬಾರಿ ನಡೆದ ಈ ಘಟನೆ ವ್ಯಾಪಕ ಆಕ್ರೋಶವನ್ನು ಉಂಟು ಮಾಡಿದೆ. ವಿಧಾನ ಸಭಾ ಚುನಾವಣೆಯಲ್ಲಿ (assembly election) ಯಶಸ್ಸು ಸಾಧಿಸಿದ ಬಳಿಕ ಮುಖ್ಯಮಂತ್ರಿಯಾಗಿ ನಟ-ರಾಜಕಾರಣಿ ವಿಜಯ್ (CM Vijay) ಅವರ ಪ್ರಮಾಣ ವಚನ ಸಮಾರಂಭದಲ್ಲಿ ತಮಿಳುನಾಡಿನ ರಾಜ್ಯ ಗೀತೆಯನ್ನು ಕೊನೆಯದಾಗಿ ನೀಡಿಸಲಾಯಿತು. ಆಗಲೇ ಅದು ವಿವಾದವನ್ನು ಉಂಟು ಮಾಡಿತ್ತು.

ನಟ ವಿಜಯ್ ಅವರು ಮೇ 10 ರಂದು ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ತಮಿಳುನಾಡಿನ ರಾಜ್ಯ ಗೀತೆ 'ತಮಿಳು ತಾಯಿ ವಾಝ್ತು' ಅನ್ನು ಕೊನೆಯದಾಗಿ ನುಡಿಸಲಾಯಿತು. ಇದು ಭಾರಿ ಗದ್ದಲವನ್ನು ಉಂಟು ಮಾಡಿತ್ತು. ಇದಕ್ಕೂ ಮೊದಲು ರಾಷ್ಟ್ರ ಗೀತೆ ವಂದೇ ಮಾತರಂ ಬಳಿಕ ಜನ ಗಣ ಮನ ಗೀತೆಗಳನ್ನು ಹಾಡಲಾಯಿತು.

ಪಿಒಕೆಯಲ್ಲಿ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ

ಇದರ ಬಳಿಕ ವಿಜಯ್ ಅವರ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ತಮಿಳು ಗೀತೆಯನ್ನು ಮೊದಲು ನುಡಿಸಲಾಗುವುದು ಎಂದು ಭರವಸೆ ನೀಡಿತು.

ವಿಜಯ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ತಮಿಳು ಹಾಡನ್ನು ಮೂರನೇ ಹಾಡಾಗಿ ನುಡಿಸಲು ಕೇಂದ್ರ ಸರ್ಕಾರದ ಸುತ್ತೋಲೆ ಕಾರಣ ಎಂದು ಹೇಳಿರುವ ತಮಿಳುನಾಡು ಸಚಿವ ಆಧವ್ ಅರ್ಜುನ , ಈ ಕುರಿತು ನಾವು ರಾಜ್ಯಪಾಲರ ಬಳಿ ಮಾತನಾಡಿದೆವು. ಜವಾಬ್ದಾರಿಯುತ ಅಧಿಕಾರಿಯಾಗಿರುವ ರಾಜ್ಯಪಾಲರು ಕೇಂದ್ರ ಸರ್ಕಾರದ ಹೊಸ ಸುತ್ತೋಲೆಯ ಪ್ರಕಾರ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಹೀಗಾಗಿ ಅನಿವಾರ್ಯ ಪರಿಸ್ಥಿತಿಯಲ್ಲಿ ತಮಿಳು ಪ್ರಾರ್ಥನೆ ಹಾಡನ್ನು ಮೂರನೇ ಹಾಡಾಗಿ ನುಡಿಸಲಾಯಿತು. ಭವಿಷ್ಯದಲ್ಲಿ ಇದನ್ನು ಪಾಲಿಸಲಾಗುವುದಿಲ್ಲ ಎಂದು ಹೇಳಿದ್ದರು.

ಇದಾಗಿ ಕೇವಲ ಒಂದು ವಾರದ ಅನಂತರ ವಿಜಯ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ 23 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಕೂಡ ತಮಿಳು ಗೀತೆಯನ್ನು ಕೊನೆಯದಾಗಿ ನುಡಿಸಲಾಯಿತು. ಇದರಿಂದ ಆಕ್ರೋಶಗೊಂಡ ಜನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೂ ಟಿವಿಕೆಗೆ ಮೊದಲಿನಂತೆ ಸ್ಪಷ್ಟನೆಯನ್ನು ನೀಡಿತ್ತು.

ಟಿವಿಕೆ ನಾಯಕ ನಂಜಿಲ್ ಸಂಪತ್ ಅವರು ಪ್ರತಿಕ್ರಿಯಿಸಿ, ಇದು ಲೋಕಭವನ ಆಯೋಜಿಸಿದ್ದ ಕಾರ್ಯಕ್ರಮ. ಹೀಗಾಗಿ ತಮಿಳು ಗೀತೆಯನ್ನು ಕೊನೆಯದಾಗಿ ಹಾಡಲಾಗಿದೆ. ಇದರಲ್ಲಿ ತಮಿಳುನಾಡು ಸರ್ಕಾರದ ಯಾವುದೇ ಪಾತ್ರವಿಲ್ಲ. ವಿಧಾನಸಭೆಯಲ್ಲಿ ಮೊದಲು ತಮಿಳು ಗೀತೆಯನ್ನು ಹಾಡಲಾಗುವುದು ಎಂದು ತಿಳಿಸಿದರು.

ಪ್ರಮುಖ ವಿರೋಧ ಪಕ್ಷವಾದ ಡಿಎಂಕೆಯು ಇದರ ಕುರಿತು ಪ್ರತಿಕ್ರಿಯಿಸಿ ಹೊಸ ಸರ್ಕಾರ ಮತ್ತೊಮ್ಮೆ ವಿಫಲವಾಗಿದೆ. ಈ ಹಿಂದೆ ನೀಡಿದ್ದ ಭರವಸೆ ಏನಾಯಿತು ಎಂದು ಪ್ರಶ್ನಿಸಿದೆ. ವಿಜಯ್ ನೇತೃತ್ವದ ಸರ್ಕಾರವನ್ನು ಈ ವೈಫಲ್ಯದ ಬಗ್ಗೆ ಮಿತ್ರ ಪಕ್ಷಗಳು ಕೂಡ ಪ್ರಶ್ನಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ತಮಿಳು ಹಾಡನ್ನು ಕೊನೆಯದಾಗಿ ನುಡಿಸುವುದನ್ನು ತುಂಬಾ ಅನ್ಯಾಯ. ಇದಕ್ಕೆ ಬಿಜೆಪಿಯೇ ಕಾರಣ ಎಂದು ಆರೋಪಿಸಿದೆ. ತಮಿಳು ನಾಡಿನ ರಾಜ್ಯ ಗೀತೆಯನ್ನು ಕೊನೆಯದಾಗಿ ಹಾಡಿರುವುದಕ್ಕೆ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಕೂಡ ವಿರೋಧ ವ್ಯಕ್ತಪಡಿಸಿದೆ.

5 ದಿನಗಳಲ್ಲಿ 10 ಮಿಲಿಯನ್ ಫಾಲೋವರ್ಸ್: ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿಯನ್ನು ಹಿಂದಿಕ್ಕಿದ ಜಿರಳೆ ಜನತಾ ಪಕ್ಷ

ಕೇಂದ್ರ ಸಚಿವಾಲಯವು ವಂದೇ ಮಾತರಂ ಗೀತೆ 150 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಔಪಚಾರಿಕ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಇದರ ಪೂರ್ಣ ಆವೃತ್ತಿಯನ್ನು ನುಡಿಸುವುದನ್ನು ಕಡ್ಡಾಯಗೊಳಿಸಿದೆ. ಹೀಗಾಗಿ ಈ ಬಾರಿ ವಿಧಾನ ಸಭಾ ಚುನಾವಣೆ ಬಳಿಕ ಎಲ್ಲ ರಾಜ್ಯಗಳಲ್ಲೂ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡಲಾಯಿತು. ಇದು ಕೇರಳದಲ್ಲೂ ಕೂಡ ವಿವಾದಕ್ಕೆ ಕಾರಣವಾಗಿತ್ತು.

ವಿದ್ಯಾ ಇರ್ವತ್ತೂರು

View all posts by this author