5 ದಿನಗಳಲ್ಲಿ 10 ಮಿಲಿಯನ್ ಫಾಲೋವರ್ಸ್: ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿಯನ್ನು ಹಿಂದಿಕ್ಕಿದ ಜಿರಳೆ ಜನತಾ ಪಕ್ಷ
ಸಾಮಾಜಿಕ ಮಾಧ್ಯಮದಲ್ಲಿ ಈಗ ಜಿರಳೆ ಜನತಾ ಪಕ್ಷದ್ದೇ ಕಾರುಬಾರು. ಮೇ 16 ರಿಂದ ಸುದ್ದಿ ಮಾಡುತ್ತಿರುವ ಕಾಕ್ರೋಚ್ ಜನತಾ ಪಾರ್ಟಿಯ ಇನ್ಸ್ಟಾಗ್ರಾಮ್ ಖಾತೆಯು ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಯುವ ರಾಜಕೀಯ ವೇದಿಕೆ ಎಂದು ಇದನ್ನು ಗುರುತಿಸಲಾಗಿದ್ದು, ಕೇವಲ 5 ದಿನಗಳಲ್ಲಿ 10 ಮಿಲಿಯನ್ ಫಾಲೋವರ್ಗಳನ್ನು ಪಡೆದಿದೆ. ಈ ಮೂಲಕ ಅದು ಬಿಜೆಪಿಗಿಂತ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಸುಪ್ರೀಂ ಕೋರ್ಟ್ (supreme court) ನಲ್ಲಿ ನಡೆದ ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿ (Chief Justice of India) ಸೂರ್ಯಕಾಂತ್ (CJI surya kanth) ಅವರ ಕೆಲವು ಹೇಳಿಕೆಗಳಿಂದ ಪ್ರೇರಿತವಾಗಿ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷ (Cockroach Janta Party) ಇನ್ಸ್ಟಾಗ್ರಾಮ್ ಖಾತೆಯು (Instagram followers) ಈಗ ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕೇವಲ ಐದು ದಿನಗಳಲ್ಲಿ 10 ಮಿಲಿಯನ್ ಫಾಲೋವರ್ಸ್ ಗಳನ್ನು ಗಳಿಸುವ ಮೂಲಕ ಅದು ಬಿಜೆಪಿಗಿಂತ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದೆ. ಕಾಕ್ರೋಚ್ ಜನತಾ ಪಕ್ಷವು ಯಾವುದೇ ರಾಜಕೀಯ ಪಕ್ಷವಲ್ಲ. ಒಂದು ವಿಡಂಬನಾತ್ಮಕ ಆನ್ಲೈನ್ ಅಭಿಯಾನವಾಗಿದೆ. ಇದನ್ನು ಯುವ ರಾಜಕೀಯ ವೇದಿಕೆ ಎನ್ನಲಾಗುತ್ತಿದೆ.
ಕಾಕ್ರೋಚ್ ಜನತಾ ಪಕ್ಷದ ಇನ್ಸ್ಟಾಗ್ರಾಮ್ ಖಾತೆಯು ದೇಶದ ಅತೀ ದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿಯ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಗಿಂತ ಹೆಚ್ಚು ಫಾಲೋವರ್ಸ್ ಗಳನ್ನು ಕೇವಲ ಐದು ದಿನಗಳಲ್ಲಿ ಗಳಿಸಿದೆ. ಬಿಜೆಪಿಯು ಸುಮಾರು 8.7 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದೆ.
''ಒಂದೇ ಒಂದು ಗುಂಡಿ ಇಲ್ಲ! ಬೆಂಗಳೂರಿಗಿಂತ ಹೈದರಾಬಾದ್ ರಸ್ತೆಗಳೇ ಪರ್ಫೆಕ್ಟ್," ವಿದೇಶಿ ಪ್ರವಾಸಿಗ ಹೇಳಿದ್ದೇನು?
ಕಾಂಗ್ರೆಸ್ ಪಕ್ಷದ @incindia ಇನ್ಸ್ಟಾಗ್ರಾಮ್ ಖಾತೆಯು ಇನ್ನೂ ಮೊದಲ ಸ್ಥಾನದಲ್ಲಿದ್ದು, ಅದು ಸುಮಾರು 13.2 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದೆ. ಆಮ್ ಆದ್ಮಿ ಪಕ್ಷದ ಇನ್ಸ್ಟಾಗ್ರಾಮ್ ಖಾತೆಯು ಸುಮಾರು 1.9 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದೆ. ಕಾಕ್ರೋಚ್ ಜನತಾ ಪಕ್ಷವು ಇನ್‌ಸ್ಟಾಗ್ರಾಮ್‌ನಲ್ಲಿ ಕೇವಲ 5 ದಿನಗಳಲ್ಲಿ 10 ಮಿಲಿಯನ್ ಫಾಲೋವರ್‌ಗಳನ್ನು ದಾಟಿದೆ.
ನಿರುದ್ಯೋಗಿ ಯುವಕರ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನೀಡಿದ ಹೇಳಿಕೆ ಬಳಿಕ ವಿಡಂಬನಾತ್ಮಕ ರಾಜಕೀಯ ಅಭಿಯಾನವಾದ ಅಭಿಜೀತ್ ದಿಪ್ಕೆ ಅವರು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದರು.
ಮೇ 16ರಂದು ಈ ಅಭಿಯಾನ ಪ್ರಾರಂಭವಾಗಿದ್ದು, ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಕೆಲವು ಹೇಳಿಕೆಗಳಿಂದ ಪ್ರೇರಿತವಾಗಿ ಯುವಕರು ಹಾಸ್ಯ ಮತ್ತು ವ್ಯಂಗ್ಯದ ರೂಪದಲ್ಲಿ ಈ ಚಳುವಳಿಯನ್ನು ಶುರು ಮಾಡಿದ್ದಾರೆ. ಇದಕ್ಕೆ ಮೊದಲು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ವ್ಯಂಗ್ಯ ಕಾಮೆಂಟ್ ಗಳು ಬಂದಿದ್ದು, ಬಳಿಕ ಇವುಗಳು ತ್ವರಿತವಾಗಿ ವೈರಲ್ ಆಗಿವೆ.
ಕಾಕ್ರೋಚ್ ಜನತಾ ಪಕ್ಷವನ್ನು ಇನ್‌ಸ್ಟಾಗ್ರಾಮ್‌ನಲ್ಲಿ @cockroachjantaparty ಹ್ಯಾಂಡಲ್ ಅಡಿಯಲ್ಲಿ ನಿರ್ವಹಿಸಲಾಗುತ್ತಿದ್ದು, ಇದು ಗುರುವಾರ 10 ಮಿಲಿಯನ್ ಫಾಲೋವರ್ಸ್ ಗಳ ಗಡಿ ದಾಟಿದೆ. ಇದನ್ನು ಸೇರಲು ಯೂಟ್ಯೂಬರ್‌ಗಳಾದ ಧ್ರುವ್ ರಾಥಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್, ಟಿಎಂಸಿ ನಾಯಕರಾದ ಮಹುವಾ ಮೊಯಿತ್ರಾ ಮತ್ತು ಕೀರ್ತಿ ಆಜಾದ್ ಸೇರಿದಂತೆ ಇನ್ನು ಅನೇಕರು ಉತ್ಸಾಹ ಹೊಂದಿರುವುದಾಗಿ ಹೇಳಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಧ್ವನಿ ಎತ್ತಲು ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಅವರು ಸಿಜೆಪಿ ತನ್ನ ಅನುಯಾಯಿಗಳನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದ್ದರು. ಈ ಕುರಿತು ಎಕ್ಸ್ ನಲ್ಲಿ ಬರೆದಿರುವ ಅವರು, ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ಧ್ವನಿ ಹೆಚ್ಚಬೇಕು. ಇದಕ್ಕಾಗಿ ಧರ್ಮೇಂದ್ರ ಪ್ರಧಾನ್ ಅವರಿಗೆ ಜವಾಬ್ದಾರಿ ನೀಡಬೇಕು ಎಂದು ತಿಳಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಉದ್ಯೋಗದ ಹಕ್ಕಿನ ಅಗತ್ಯವನ್ನು ತಿಳಿಸಿ 21 ರಿಂದ 60 ವರ್ಷದೊಳಗಿನ ಎಲ್ಲಾ ಜನರು ಕನಿಷ್ಠ ವೇತನವನ್ನು ಉದ್ಯೋಗದಲ್ಲಿ ಪಡೆಯುವ ಹಕ್ಕನ್ನು ಹೊಂದಿರಬೇಕು. ಅದು ವಿಫಲವಾದರೆ ಅವರು ನಿರುದ್ಯೋಗ ಭತ್ಯೆಯನ್ನು ಪಡೆಯಬೇಕು ಎಂದು ತಿಳಿಸಿದ್ದರು. ಇದೆಲ್ಲವೂ ಈಗ ಕಾಕ್ರೋಚ್ ಜನತಾ ಪಕ್ಷದ ಚರ್ಚೆಯ ವಿಷಯವಾಗಿದೆ.
ಸಾಲ ವಾಪಸ್ ಕೇಳಿದ್ದಕ್ಕೆ ದರ್ಪ; ಕಾರಿನ ಬಾನೆಟ್‌ನಲ್ಲಿ ವ್ಯಕ್ತಿಯನ್ನು ಎಳೆದೊಯ್ದ ಸಾಲಗಾರ, ವಿಡಿಯೋ ವೈರಲ್
‘ಯುವಕರ, ಯುವಕರಿಗಾಗಿ ಮತ್ತು ಯುವಕರಿಂದ’ ಎಂಬ ರಾಜಕೀಯ ವೇದಿಕೆಯಾಗಿ ರೂಪುಗೊಳ್ಳುತ್ತಿರುವ ಕಾಕ್ರೋಚ್ ಜನತಾ ಪಕ್ಷವು ಮುಖ್ಯವಾಗಿ ನಿರುದ್ಯೋಗ, ರಾಜಕೀಯ ಹೊಣೆಗಾರಿಕೆ ಕೊರತೆ, ಪರೀಕ್ಷಾ ಪತ್ರಿಕೆ ಸೋರಿಕೆ ಹಾಗೂ ಇತರ ಕೆಲವು ಯುವಕರ ಜೀವನಕ್ಕೆ ನೇರವಾಗಿ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತಿದೆ. ಹೀಗಾಗಿ ಇದು ಯುವಜನರನ್ನು ಹೆಚ್ಚಾಗಿ ಸಾಮಾಜಿಕ ಮಾಧ್ಯಮದಲ್ಲಿ ಸೆಳೆಯುತ್ತಿದೆ.