Andhra Sheeshmahal: ಆಂಧ್ರದಲ್ಲಿ ಜಗನ್ ಮೋಹನ ರೆಡ್ಡಿ "ಶೀಶ್‌ಮಹಲ್" ; ಸರ್ಕಾರಿ ವೆಚ್ಚದಲ್ಲಿ ನಿರ್ಮಾಣವಾದ ಬಂಗಲೆ ಹೇಗಿದೆ ಗೊತ್ತಾ?
ದೆಹಲಿಯ ಶೀಶ್‌ಮಹಲ್ ಪ್ರಕರಣ ಸುದ್ದಿಯಾದ ನಂತರ ಇದೀಗ ಆಂಧ್ರಪ್ರದೇಶದ ಸಿಎಂ ಆಗಿದ್ದ ಜಗನ್ ರೆಡ್ಡಿಯವರ ಅಧಿಕೃತ ಸರ್ಕಾರಿ ಕಚೇರಿ ಹಾಗೂ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಎಂಬ ಪರಿಕಲ್ಪನೆಯಡಿ, ವಿಜಯವಾಡದ ಋಷಿಕೊಂಡದಲ್ಲಿ ನಿರ್ಮಿಸಲಾಗಿರುವ ಭವ್ಯ ಬಂಗಲೆಯೀಗ ವಿವಾದಕ್ಕೆ ಕಾರಣವಾಗಿದೆ.

ಬಂಗಲೆಯ ದೃಶ್ಯ

ಹೈದರಾಬಾದ್: ದೆಹಲಿಯ ಶೀಶ್‌ಮಹಲ್ ಪ್ರಕರಣ ಸುದ್ದಿಯಾದ ನಂತರ ಇದೀಗ ಆಂಧ್ರಪ್ರದೇಶದ ಸಿಎಂ ಆಗಿದ್ದ ಜಗನ್ ರೆಡ್ಡಿಯವರ (Jagan Reddy) ಅಧಿಕೃತ ಸರ್ಕಾರಿ ಕಚೇರಿ ಹಾಗೂ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಎಂಬ ಪರಿಕಲ್ಪನೆಯಡಿ, ವಿಜಯವಾಡದ ಋಷಿಕೊಂಡದಲ್ಲಿ ನಿರ್ಮಿಸಲಾಗಿರುವ ಭವ್ಯ ಬಂಗಲೆಯೀಗ (Andhra Sheeshmahal) ವಿವಾದಕ್ಕೆ ಕಾರಣವಾಗಿದೆ. ಸದ್ಯ ಆಂಧ್ರ ಪ್ರದೇಶದ ಶೀಶ್‌ಮಹಲ್‌ನ ಒಳಾಂಗಣದ ಚಿತ್ರ ಲಭ್ಯವಾಗಿದ್ದು, ಎಲ್ಲೆಡೆ ವೈರಲ್ ಆಗಿದೆ. ಆಂಧ್ರದ ಶೀಶ್‌ಮಹಲ್ ಎಂದು ಕರೆಯಲ್ಪಡುವ ಈ ಕಟ್ಟಡವು 10 ಎಕರೆ ಪ್ರದೇಶದಲ್ಲಿ ನಾಲ್ಕು ವಿಸ್ತಾರವಾದ ಬ್ಲಾಕ್‌ಗಳನ್ನು ಒಳಗೊಂಡಿದೆ ಎಂದು ತಿಳಿದು ಬಂದಿದೆ.
ಈ ಬಂಗಲೆ ವಿಜಯವಾಡ ನಗರದ ಹೊರವಲಯದಲ್ಲಿರುವ ಋಷಿಕೊಂಡದಲ್ಲಿದೆ. ಈ ಋಷಿಬೆಟ್ಟ ವಿಶಾಖಪಟ್ಟಣಂ ಬೀಚ್ ಗೆ ಅಭಿಮುಖವಾಗಿದೆ. ಈ ಬೆಟ್ಟದ ಮೇಲೆ ನಿಂತರೆ ಅನತಿ ದೂರದಲ್ಲಿರುವ ಅರಬ್ಬೀ ಸಮುದ್ರದ ಸುಂದರ ದೃಶ್ಯ ಕಾಣುತ್ತದೆ. ಇದನ್ನು 10 ಎಕರೆ ವಿಸ್ತೀರ್ಣದಲ್ಲಿ ಆಧುನಿಕ ಶೈಲಿಯಲ್ಲಿ ಕಟ್ಟಲಾಗಿದೆ. ಜೊತೆಗೆ, ಅತ್ಯುತ್ತಮ ಇಂಟೀರಿಯರ್ಸ್, ಬಾಗಿಲುಗಳ ಹಿಡಿಗಳಿಗೆ, ಕರ್ಟನ್ಸ್ ರೈಲಿಂಗ್ಸ್ ಗಳು ಮುಂತಾದವುಗಳಿಗೆ ಚಿನ್ನದ ಲೇಪನಗಳು, ಇಟಾಲಿಯನ್ ಮಾರ್ಬಲ್ ಫ್ಲೋರಿಂಗ್, ಐಷಾರಾಮಿ ಪೀಠೋಪಕರಣಗಳನ್ನು ಈ ಬಂಗಲೆ ಹೊಂದಿದೆ.
#WATCH | Outside visuals from former Andhra Pradesh Chief Minister YS Jagan Mohan Reddy's sea-facing mansion built on Rushikonda hill in Visakhapatnam.
— ANI (@ANI) March 13, 2025
The mansion comprises four sprawling blocks spread over 10 acres in Rushikonda pic.twitter.com/GRHmUPPwWQ
ಬಂಗಲೆ ಆವರಣದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ, ಅಧಿಕಾರಿಗಳಿಗೆ ಕ್ವಾರ್ಟಸ್ ಹಾಗೂ ತಾತ್ಕಾಲಿಕ ರೆಸ್ಟಿಂಗ್ ರೂಂಗಳನ್ನು ನಿರ್ಮಿಸಲಾಗಿದೆ. ಉತ್ತಮ ರಸ್ತೆಗಳು, ಡ್ರೈನೇಜ್ ಸಿಸ್ಟಂ, ವಿಪುಲವಾದ ನೀರಿನ ಸರಬರಾಜು ವ್ಯವಸ್ಥೆ, ಈ ಬಂಗಲೆಗಾಗಿಯೇ 100 ಕಿಲೋವ್ಯಾಟ್ ನಷ್ಟು ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೇ 2021 ರಲ್ಲಿ ಕೇಂದ್ರ ಸರ್ಕಾರದಿಂದ CRZ (ಕರಾವಳಿ ನಿಯಂತ್ರಣ ವಲಯ) ಅನುಮತಿಯನ್ನು ಪಡೆದಿದ್ದರೂ, ಅದರ ನಿರ್ಮಾಣಕ್ಕಾಗಿ ಋಷಿಕೊಂಡ ಬೆಟ್ಟದ ಅರ್ಧದಷ್ಟು ಭಾಗವನ್ನು ಕೆಡವಲಾಗಿದೆ ಎಂಬ ಆರೋಪಗಳಿವೆ. ಮುಖ್ಯಮಂತ್ರಿಯವರ ಶಿಬಿರ ಕಚೇರಿಯಾಗಿ ನಿರ್ಮಿಸುವ ಮೊದಲು, ಇದನ್ನು 91 ಕೋಟಿ ರೂ. ಬಜೆಟ್‌ನಲ್ಲಿ ಸ್ಟಾರ್ ಹೋಟೆಲ್ ಆಗಿ ಪ್ರಾರಂಭಿಸಲಾಯಿತು. ಇದರ ಪೂರ್ಣಗೊಳ್ಳುವ ವೇಳೆಗೆ ಒಟ್ಟು ವೆಚ್ಚ 500 ಕೋಟಿ ರೂ.ಗಳನ್ನು ಮೀರಿದೆ ಎಂದು ಟಿಡಿಪಿ ಹೇಳಿಕೊಂಡಿದೆ.
#WATCH | In visuals, inside of YS Jagan Mohan Reddy's, former Andhra Pradesh Chief Minister, sea-facing mansion
— ANI (@ANI) March 13, 2025
Built on Rushikonda hill in Visakhapatnam, the mansion comprises four sprawling blocks spread over 10 acres in Rushikonda. pic.twitter.com/FHa4Lk8Fvg
ಈ ಸುದ್ದಿಯನ್ನೂ ಓದಿ: Richest CM list: ಚಂದ್ರಬಾಬು ನಾಯ್ಡು ದೇಶದಲ್ಲೇ ಅತ್ಯಂತ ಶ್ರೀಮಂತ ಸಿಎಂ; ಸಿದ್ದರಾಮಯ್ಯಗೆ ಎಷ್ಟನೇ ಸ್ಥಾನ?
ಮುಖ್ಯಮಂತ್ರಿ ನಾಯ್ಡು ಅವರು ಈಗ ಕಟ್ಟಡದ ಬಳಕೆಯ ಕುರಿತು ಚರ್ಚೆಗೆ ಕರೆ ನೀಡಿದ್ದಾರೆ. ಅದನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಿದ್ದಾರೆ.ಈಗ, ಕಟ್ಟಡಗಳನ್ನು ಹೇಗೆ ಬಳಸಿಕೊಳ್ಳುವುದು ಮತ್ತು ಅವುಗಳಿಂದ ಸರ್ಕಾರಕ್ಕೆ ಆದಾಯ ಗಳಿಸುವುದು ಎಂಬುದರ ಬಗ್ಗೆ ನನಗೆ ಯಾವುದೇ ಕಲ್ಪನೆ ಇಲ್ಲ. ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ನಾಯ್ಡು ಹೇಳಿದ್ದಾರೆ. , ಸರ್ಕಾರಿ ಬಂಗಲೆ ಎಂದು ನಿರ್ಮಾಣ ಮಾಡಿ, ಆನಂತರ ಜಗನ್ ರೆಡ್ಡಿಯವರು ಇದನ್ನು ತಮ್ಮದೇ ಸ್ವಂತ ಬಂಗಲೆಯಂತೆ ಬಳಸುತ್ತಿದ್ದರು. ಅಲ್ಲಿ ಯಾವುದೇ ಸರ್ಕಾರಿ ಸಭೆಗಳನ್ನಾಗಲೀ, ಕ್ಯಾಬಿನೆಟ್ ಮೀಟಿಂಗ್ ಆಗಲೀ ನಡೆಸಿಲ್ಲ ಎಂದು ಅವರು ಆರೋಪಿಸಿದ್ದಾರೆ.