ತಮಿಳುನಾಡು ರಾಜಕೀಯವನ್ನೇ ತಿದ್ದಿ ಬರೆದ ಟಿವಿಕೆ; ಚೊಚ್ಚಲ ಪ್ರಯತ್ನದಲ್ಲೇ ಸರ್ಕಾರ ರಚನೆಯತ್ತ ದಳಪತಿ ವಿಜಯ್
Vijay: ಕಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದು ದಿಢೀರ್ ನಿವೃತ್ತಿ ಪಡೆದು ರಾಜಕೀಯಕ್ಕೆ ಧುಮ್ಮಿಕ್ಕಿ ಟಿವಿಕೆ ಪಕ್ಷ ಸ್ಥಾಪಿಸಿ ಚುನಾವಣೆಗೆ ಸ್ಪರ್ಧಿಸಿದ್ದ ದಳಪತಿ ವಿಜಯ್ ಇದೀಗ ತಮಿಳುನಾಡಿನಲ್ಲಿ ಮ್ಯಾಜಿಕ್ ಮಾಡಿದ್ದಾರೆ. ಎಲ್ಲರ ಊಹೆಯನ್ನೂ ತಲೆಕೆಳಗಾಗಿಸಿ ಟಿವಿಕೆ ಇದೀಗ ಸರ್ಕಾರ ರಚನೆಯತ್ತ ಸಾಗುತ್ತಿದೆ. ಈಗಾಗಲೇ ಟಿವಿಕೆ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ವಿಜಯ್ (ಸಂಗ್ರಹ ಚಿತ್ರ) -
ಚೆನ್ನೈ, ಮೇ 4: ತಮಿಳುನಾಡಿನಾದ್ಯಂತ ಸದ್ಯ ವಿಷಲ್‌ನದ್ದೇ ಸದ್ದು. ಹೌದು, ಕಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದು ದಿಢೀರ್ ನಿವೃತ್ತಿ ಪಡೆದು ರಾಜಕೀಯಕ್ಕೆ ಧುಮ್ಮಿಕ್ಕಿ ಟಿವಿಕೆ (TVK) ಪಕ್ಷ ಸ್ಥಾಪಿಸಿ ಚುನಾವಣೆಗೆ ಸ್ಪರ್ಧಿಸಿದ್ದ ದಳಪತಿ ವಿಜಯ್ (Vijay) ಇದೀಗ ತಮಿಳುನಾಡಿನಲ್ಲಿ ಮ್ಯಾಜಿಕ್ ಮಾಡಿದ್ದಾರೆ (Tamil Nadu Assembly Election Results). ತಮಿಳುನಾಡಿನ ರಾಜೀಯದಲ್ಲಿ ಹೊಸ ಭಾಷ್ಯ ನಬರೆದಿದ್ದು, ಸಿನಿಮೀಯ ತಿರುವು ನೀಡಿದ್ದಾರೆ. ಎಲ್ಲರ ಊಹೆಯನ್ನೂ ತಲೆಕೆಳಗಾಗಿಸಿ ಟಿವಿಕೆ ಇದೀಗ ಸರ್ಕಾರ ರಚನೆಯತ್ತ ಸಾಗುತ್ತಿದೆ.
ಏಪ್ರಿಲ್ 23ರಂದು ತಮಿಳುನಾಡಿನ 234 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ದಾಖಲೆಯ ಮಟ್ಟದ ಮತದಾನವಾಗಿದ್ದು, ರಾಜಕೀಯ ಚಿತ್ರಣವೇ ಬದಲಾಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಅದರಂತೆ ಇದೀಗ ಅಚ್ಚರಿಯ ಫಲಿತಾಂಶ ಹೊರ ಬೀಳುತ್ತಿದೆ. ಅದಾಗ್ಯೂ ಇಷ್ಟರಮಟ್ಟಿಗೆ ಟಿವಿಕೆ ಪ್ರಭಾವ ಬೀರಲಿದೆ ಎನ್ನುವುದನ್ನು ಯಾರೂ ಊಹಿಸಿರಲಿಲ್ಲ.
ವಿಜಯ್ ಮನೆಗೆ ಬಿಗಿ ಭದ್ರತೆ:
#WATCH | Tamil Nadu Elections 2026 | Security increased outside the residence of TVK chief and actor Vijay, in Chennai.
— ANI (@ANI) May 4, 2026
Official EC trends show TVK leading on 68 of the total 234 seats in the state; counting is still underway. pic.twitter.com/LQXfCO1f8S
ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಅಗತ್ಯವಾದ ಮ್ಯಾಜಿಕ್ ನಂಬರ್ 118. ಈಗಾಗಲೇ ಟಿವಿಕೆ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ವಿಜಯ್ ಸ್ಪರ್ಧಿಸಿರುವ ಪೆರಂಬೂರ್ ಮತ್ತು ತಿರುಚಿರಪಳ್ಳಿ ಎರಡೂ ಕ್ಷೇತ್ರಗಳಲ್ಲಿ ಮುಂದಿದ್ದಾರೆ.
ಆಡಳಿತರೂಢ ಡಿಎಂಕೆ ಭಾರಿ ಹಿನ್ನಡೆ
ಇತ್ತ ಆಡಳಿತರೂಢ ಡಿಎಂಕೆ ಭಾರಿ ಹಿನ್ನಡೆಯಲ್ಲಿದ್ದು 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇಲ್ಲಿ ಎಐಎಡಿಎಂಕೆ ಕೂಡ ಕಮಾಲ್ ಮಾಡಿದ್ದು, 75 ಕಡೆಗಳಲ್ಲಿ ಮುನ್ನಡೆ ಸಾಧಿಸಿದೆ. ಡಿಎಂಕೆ 49ರಲ್ಲಿ ಮಾತ್ರ ಮುಂದಿದೆ. ಡಿಎಂಕೆ ಚುನಾವಣಾ ಪ್ರಚಾರದುದ್ದಕ್ಕೂ ವಿಜಯ್ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ್ದು ಸಾಕಷ್ಟು ಹಿನ್ನಡೆಯಾಗಿದೆ ಎನ್ನಲಾಗಿದೆ.
ಚೊಚ್ಚಲ ಪ್ರಯತ್ನದಲ್ಲೇ ತಮಿಳುನಾಡಿನಲ್ಲಿ ದಳಪತಿ ವಿಜಯ್ ಕಮಾಲ್; ಟಿವಿಕೆಗೆ ಭಾರಿ ಮುನ್ನಡೆ
2 ವರ್ಷಗಳ ಹಿಂದೆ ಟಿವಿಕೆ ಸ್ಥಾಪನೆ
51 ವರ್ಷದ ವಿಜಯ್ ಕಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದವರು. ಪ್ರತಿ ಚಿತ್ರಕ್ಕೂ ಕೋಟಿ ಕೋಟಿ ರುಪಾಯಿ ಸಂಭಾವನೆ ಪಡೆಯುವ ಅವರ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದ್ದವು. ಇಂತಹ ಸೂಪರ್ ಸ್ಟಾರ್ 2023ರಲ್ಲಿ ಇದ್ದಕ್ಕಿದ್ದಂತೆ ತಾವು ಚಿತ್ರರಂಗದಿಂದ ನಿವೃತ್ತಿ ಪಡೆದು ರಾಜಕೀಯಕ್ಕೆ ಧುಮ್ಮಿಕ್ಕುವುದಾಗಿ ಘೋಷಿಸುವ ಮೂಲಕ ಲಕ್ಷಾಂತರ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ʼಜನನಾಯಗನ್ʼ ತಮ್ಮ ಕೊನೆಯ ಚಿತ್ರ ಎಂದು ಪ್ರಕಟಿಸುವ ಮೂಲಕ ಸಕ್ರಿಯ ರಾಜಕೀಯಕ್ಕೆ ತೆರಳುವ ಸೂಚನೆ ನೀಡಿದ್ದರು.
2024ರಲ್ಲಿ ಟಿವಿಕೆ ಪಕ್ಷ ಸ್ಥಾಪನೆ
ಅದರಂತೆ 2024ರ ಫೆಬ್ರವರಿ 2ರಂದು ತಮಿಳಿಗ ವೆಟ್ರಿ ಕಝಗಂ (ಟಿವಿಕೆ) ಪಕ್ಷ ಸ್ಥಾಪಿಸಿ 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಪಕ್ಷದ ಚಿಹ್ನೆ ವಿಷಲ್. ನಟನೊಬ್ಬ ರಾಜಕೀಯದಲ್ಲಿ ಏನು ಕ್ರಾಂತಿ ಮಾಡುತ್ತಾನೆ ಎಂದು ಆರಂಭದಲ್ಲಿ ಆಡಿಕೊಂಡವರೇ ಹೆಚ್ಚು. ರಾಜಕೀಯದ ಅನುಭವವೇ ಇಲ್ಲದ ವಿಜಯ್ ತಮಿಳುನಾಡಿನಲ್ಲಿ ಯಾವುದೇ ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ ಎಂದು ಕಾಲೆಳೆದುಕೊಂಡವರು ಈ ಗಪ್‌ಚುಪ್ ಆಗಿದ್ದಾರೆ. ಇದೀಗ ಟಿವಿಕೆ ಏಕಪಕ್ಷವಾಗಿ ಸರ್ಕಾರ ರಚಿಸಲು ಮುಂದಾಗಿದೆ. ಎಂಜಿಆರ್, ಜಯಲಲಿತಾ ಬಳಿಕ ವಿಜಯ್ ಇದೀಗ ಮುಖ್ಯಮಂತ್ರಿಯಾಗುತ್ತಾರಾ ಎನ್ನುವ ಕುತೂಹಲ ಮನೆ ಮಾಡಿದೆ.