Viral Video: ಕೋಪಗೊಂಡ ʼಮೊನಾಲಿಸಾʼ ಹೀಗಾ ಮಾಡೋದು? ವಿಡಿಯೊ ನೋಡಿ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಹೂಮಾಲೆ ಮಾರುವ ಹುಡುಗಿ ಮೊನಾಲಿಸಾ ತನ್ನ ಕಣ್ನೋಟದಿಂದ ಸಿಕ್ಕಾಪಟ್ಟೆ ವೈರಲ್(Viral Video) ಆಗಿದ್ದಳು.ಆದರೆ ಅವಳ ಈ ಸೌಂದರ್ಯವೇ ಅವಳಿಗೆ ಮುಳುವಾಗಿದೆಯಂತೆ.
ಲಖನೌ: ಸೌಂದರ್ಯ ಕೆಲವೊಮ್ಮೆ ವರವೂ ಹೌದು ಶಾಪವೂ ಹೌದು! ಇದಕ್ಕೆ ಜ್ವಲಂತ ಉದಾಹರಣೆಯೆಂದರೆ ಉತ್ತರ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಹೂಮಾಲೆ ಮಾರುವ ಹುಡುಗಿ ಮೊನಾಲಿಸಾ. ಈಕೆ ತನ್ನ ಸುಂದರವಾದ ಕಣ್ಣು ಹಾಗೂ ನಗುವಿನ ಮೂಲಕ ಸಿಕ್ಕಾಪಟ್ಟೆ ವೈರಲ್(Viral Video) ಆಗಿದ್ದಳು.ಸೋಶಿಯಲ್ ಮೀಡಿಯಾ ತೆರೆದರೆ ಈಕೆಯ ಕುರಿತಾದ ಸಾಲು ಸಾಲು ರೀಲ್ಸ್‌ಗಳು ಕಣ್ಮುಂದೆ ಬರುತ್ತವೆ.
ಈ ವೈರಲ್ ಹುಡುಗಿ ಮೊನಾಲಿಸಾಳನ್ನು ವಿಡಿಯೊದಲ್ಲಿ ಸೆರೆ ಹಿಡಿಯಲು ವ್ಲಾಗರ್‌ಗಳು, ವರದಿಗಾರರು ಆಕೆಯ ಬೆನ್ನ ಹಿಂದೆ ಬಿದ್ದಿದ್ದಾರೆ. ಇದರಿಂದ ಆಕೆ ಕೂಡ ಸಿಕ್ಕಾಪಟ್ಟೆ ಬೇಸರಗೊಂಡಿದ್ದಾಳೆ.ಇದೇ ಬೇಸರದಿಂದ ಆಕೆ ಕಾರ್ಯಕ್ರಮದ ಆವರಣದಿಂದ ಹೊರಹೋಗುವಾಗ ವ್ಯಕ್ತಿಯೊಬ್ಬ ತನ್ನ ವಿಡಿಯೊ ಮಾಡುತ್ತಿರುವುದನ್ನು ಕಂಡು ಕೋಪದಿಂದ ಆತನ ಫೋನ್ ಕಸಿದುಕೊಂಡು ನೆಲಕ್ಕೆ ಎಸೆದು ಪುಡಿಮಾಡಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಪ್ರಯಾಗ್‌ರಾಜ್‌ನ ಬೀದಿಗಳಲ್ಲಿ ಆಕೆ ಮುಖ ಮುಚ್ಚಿಕೊಂಡು ನಡೆದುಕೊಂಡು ಹೋಗಿದ್ದಾಳೆ. ಆ ವೇಳೆ ವರದಿಗಾರರು ಮತ್ತು ಸೋಶಿಯಲ್ ಮೀಡಿಯಾ ವ್ಲಾಗರ್‌ಗಳು ಸೇರಿದಂತೆ ಅನೇಕರು ಅವಳ ವಿಡಿಯೊ ಮಾಡುವುದಕ್ಕೆ ಮುಂದಾಗಿದ್ದಾರೆ. ಇದರಿಂದ ಕೋಪಗೊಂಡ ಆಕೆ ಅವರ ಫೋನ್‍ಗಳಲ್ಲಿ ಒಂದನ್ನು ಕಸಿದುಕೊಂಡು ಕೋಪದಿಂದ ನೆಲಕ್ಕೆ ಎಸೆದಿದ್ದಾಳೆ.
ಮಹಾ ಕುಂಭ ಮೇಳ 2025 ರ ಮೊನಾಲಿಸಾ ಯಾರು?
ಮಹಾ ಕುಂಭ ಮೇಳ 2025 ರಲ್ಲಿ ರುದ್ರಾಕ್ಷಿ ಹೂಮಾಲೆ ಮಾರಾಟಗಾರ್ತಿ ಮೊನಾಲಿಸಾ ತನ್ನ ಆಕರ್ಷಕ ನೋಟದಿಂದಲೇ ಸಖತ್ ವೈರಲ್ ಆಗಿದ್ದಳು. ಕುಂಭಮೇಳದಲ್ಲಿ ಮಾಲೆ ಮಾರಲು ಬಂದ ಆಕೆಯನ್ನು ಜನ ಫೋಟೋ ಹಾಗೂ ವಿಡಿಯೊಗಳಿಗಾಗಿ ಬೆನ್ನತ್ತಿದ್ದಾರೆ ಹೊರತು ಆಕೆಯಿಂದ ಹೂಮಾಲೆಗಳನ್ನು ಖರೀದಿಸಲಿಲ್ಲವಂತೆ. ಹೀಗಾಗಿ ಅವಳನ್ನು ಇಂಧೋರ್‌ನಲ್ಲಿರುವ ಮನೆಗೆ ಕಳುಹಿಸಲಾಗಿತ್ತು.