ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಭಾರತದ ಕ್ಷಿಪಣಿ ದಾಳಿ ಏಕೆ ತಡೆಯಲಿಲ್ಲ? ಪಾಕ್‌ ರಕ್ಷಣಾ ಮಂತ್ರಿ ಹೇಳಿದ್ದೇನು ಗೊತ್ತಾ? ವಿಡಿಯೋ ನೋಡಿ

ವಿದೇಶಿ ಮಾಧ್ಯಮಗಳಿಗೆ ಇತ್ತೀಚೆಗೆ ನೀಡಿದ (Operation Sindoor) ಸಂದರ್ಶನದಲ್ಲಿ ಮುಜುಗರ ಅನುಭವಿಸಿದ ನಂತರ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಶುಕ್ರವಾರ ಮತ್ತೊಂದು ಬಾರಿ ಟ್ರೋಲ್‌ ಆಗಿದ್ದಾರೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಖಾಸಗಿ ಸಂದರ್ಶನದಲ್ಲಿ ನಾವು ಭಾರತದ ಕ್ಷಿಪಣಿ ದಾಳಿಗಳನ್ನು ಏಕೆ ತಡೆಯಲಿಲ್ಲ ಎಂದು ಇದೀಗ ಸ್ಪಷ್ಟನೆ ನೀಡಿದ್ದಾರೆ.

ಭಾರತ ದಾಳಿ ಏಕೆ ತಡೆಯಲಿಲ್ಲ? ಪಾಕ್‌ ರಕ್ಷಣಾ ಮಂತ್ರಿ ಹೇಳಿದ್ದೇನು?

Profile Vishakha Bhat May 9, 2025 4:05 PM

ಇಸ್ಲಾಮಾಬಾದ್:‌ ವಿದೇಶಿ ಮಾಧ್ಯಮಗಳಿಗೆ ಇತ್ತೀಚೆಗೆ ನೀಡಿದ (Operation Sindoor) ಸಂದರ್ಶನದಲ್ಲಿ ಮುಜುಗರ ಅನುಭವಿಸಿದ ನಂತರ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಶುಕ್ರವಾರ ಮತ್ತೊಂದು ಬಾರಿ ಟ್ರೋಲ್‌ ಆಗಿದ್ದಾರೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಖಾಸಗಿ ಸಂದರ್ಶನದಲ್ಲಿ ನಾವು ಭಾರತದ ಕ್ಷಿಪಣಿ ದಾಳಿಗಳನ್ನು ಏಕೆ ತಡೆಯಲಿಲ್ಲ ಎಂದು ಇದೀಗ ಸ್ಪಷ್ಟನೆ ನೀಡಿದ್ದಾರೆ. ನಮಗೆ ದಾಳಿ ತಡೆಯುವ ಶಕ್ತಿ ಇದೆ. ಆದರೆ ನಾವು ವಿರೋಧ ಒಡ್ಡಿದರೆ ನಮ್ಮ ಶಸ್ತ್ರಾಸ್ತ್ರಗಳ ಸ್ಥಳವನ್ನು ಬಹಿರಂಗಪಡಿಸಿದಂತಾಗುತ್ತದೆ. ಇದು ದೇಶದ ಭದ್ರತೆಗೆ ಧಕ್ಕೆ ಬರುತ್ತದೆ ಎಂದು ಅವರು ಹೇಳಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಭಾರತ ಸಿಯಾಲ್‌ಕೋಟ್ ಮತ್ತು ಲಾಹೋರ್‌ನಲ್ಲಿರುವ ಪಾಕಿಸ್ತಾನ ಸೇನೆಯ ವಾಯು ರಕ್ಷಣಾ ಘಟಕದ ಮೇಲೆ ಭಾರತ ಮತ್ತೆ ದಾಳಿ ನಡೆಸಿದೆ. ಭಾರತದ 15 ನಗರಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಪ್ಲ್ಯಾನ್ ಮಾಡಿದ್ದು, ಆದರೆ ಭಾರತೀಯ ಸೇನೆಯು ಇದನ್ನು ವಿಫಲಗೊಳಿಸಿದೆ. ಪಾಕಿಸ್ತಾನದ ಡಿಫೆನ್ಸ್ ಸಿಸ್ಟಮ್ HQ-9 ಧ್ವಂಸಗೊಳಿಸಿದೆ ಎಂದು ತಿಳಿದು ಬಂದಿದೆ.



ಲಾಹೋರ್ ಮತ್ತು ಕರಾಚಿ ಮೇಲೆ ದಾಳಿ ಬಳಿಕ ಇದೀಗ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಹೊಸ ಸ್ಫೋಟಗಳು ವರದಿಯಾಗಿವೆ. ಪಾಕಿಸ್ತಾನದ ಮಿಲಿಟರಿ ಪ್ರಧಾನ ಕಚೇರಿ ಬಳಿ ಸ್ಪೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ರಾವಲ್ಪಿಂಡಿಯ ಹೊರತಾಗಿ, ಗುಜ್ರಾನ್‌ವಾಲಾ, ಚಕ್ವಾಲ್, ಅಟ್ಟಾಕ್, ಬಹಾವಲ್ಪುರ್, ಮಿಯಾನೋ ಮತ್ತು ಚೋರ್‌ಗಳಲ್ಲಿಯೂ ಸ್ಫೋಟಗಳು ವರದಿಯಾಗಿವೆ. ರಾವಲ್ಪಂಡಿ ಕ್ರಿಕೆಟ್‌ ಮೈದಾನದ ಬಳಿಯೇ ಸ್ಪೋಟ ಸಂಭವಿಸಿತ್ತು.

ಈ ಸುದ್ದಿಯನ್ನೂ ಓದಿ: Attack on Pakistan: ಪಾಕಿಸ್ತಾನಕ್ಕೆ ಇನ್ನೂ ಬಿಟ್ಟಿಲ್ಲ ಗ್ರಹಚಾರ; TTP ಯಿಂದ 20 ಪಾಕ್‌ ಸೈನಿಕರ ಹತ್ಯೆ

ಭಾರತ ತನ್ನ ಮೇಲಿನ ದಾಳಿಯನ್ನು ತಡೆ ಹಿಡಿದಿದೆ. ಪ್ರತಿದಾಳಿಯಲ್ಲಿ ಭಾರತ ಪಾಕಿಸ್ತಾನದ ಪ್ರಮುಖ 16 ನಗರಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿತ್ತು. LoC ಬಳಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಇದೀಗ ಜಮ್ಮುವಿನ ಸಾಂಬಾ ಜಿಲ್ಲೆಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಂತರರಾಷ್ಟ್ರೀಯ ಗಡಿಯಲ್ಲಿ ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ತಿಳಿದು ಬಂದಿದೆ.