ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WhatsApp Down:‌ ಯುಪಿಐ ಬಳಿಕ ವ್ಯಾಟ್ಸ್‌ಆ್ಯಪ್‌ ಕೂಡ ಸ್ಥಗಿತ; ಸಾವಿರಾರು ಬಳಕೆದಾರರಿಂದ ಆಕ್ರೋಶ

ಶನಿವಾರ (ಏ. 12) ಬೆಳಗ್ಗೆ ಯುಪಿಐ ಸರ್ವರ್‌ ಕೈಕೊಟ್ಟು ವಹಿವಾಟು ನಡೆಸಲಾಗದೆ ಸಾವಿರಾರು ಮಂದಿ ಪರದಾಡಿದರೆ, ಸಂಜೆ ವೇಳೆಗೆ ವ್ಯಾಟ್ಸ್‌ಆ್ಯಪ್‌ ಕೂಡ ಸ್ಥಗಿತುಕೊಂಡು ನೂರಾರು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಸೇಜ್‌ ಕಳುಹಿಸಲು, ಸ್ಟೇಟಸ್‌ ಅಪ್‌ಡೇಟ್‌ ಮಾಡಲು ಸಾಧ್ಯವಾಗದೆ ಸಾಕಷ್ಟು ಸಮಸ್ಯೆ ಎದುರಾಗಿದೆ. ಈ ಬಗ್ಗೆ ಸಾವಿರಾರು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುಪಿಐ ಬಳಿಕ ವ್ಯಾಟ್ಸ್‌ಆ್ಯಪ್‌ ಕೂಡ ಸ್ಥಗಿತ

-

Ramesh B Ramesh B Apr 12, 2025 9:13 PM

ಹೊಸದಿಲ್ಲಿ: ಶನಿವಾರ (ಏ. 12) ಬೆಳಗ್ಗೆ ಯುಪಿಐ (UPI) ಸರ್ವರ್‌ ಕೈಕೊಟ್ಟು ವಹಿವಾಟು ನಡೆಸಲಾಗದೆ ಸಾವಿರಾರು ಮಂದಿ ಪರದಾಡಿದರೆ, ಸಂಜೆ ವೇಳೆಗೆ ವ್ಯಾಟ್ಸ್‌ಆ್ಯಪ್‌ ಕೂಡ ಸ್ಥಗಿತುಕೊಂಡು ನೂರಾರು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ (WhatsApp Down). ಮೆಸೇಜ್‌ ಕಳುಹಿಸಲು, ಸ್ಟೇಟಸ್‌ ಅಪ್‌ಡೇಟ್‌ ಮಾಡಲು ಸಾಧ್ಯವಾಗದೆ ಸಾಕಷ್ಟು ಸಮಸ್ಯೆ ಎದುರಾಗಿದೆ. ಸಮಸ್ಯೆಗಳ ಪತ್ತೆ ಹಚ್ಚುವ ಡೌನ್‌ಡಿಟೆಕ್ಟರ್‌ (Downdetector) ವರದಿ ಪ್ರಕಾರ ಸಂಜೆ 5:22ರ ವೇಳೆಗೆ ವ್ಯಾಟ್ಸ್‌ಆ್ಯಪ್‌ನಲ್ಲಿ ಸಮಸ್ಯೆ ಎದುರಾಗುತ್ತಿರುವ ಬಗ್ಗೆ 597 ದೂರು ಬಂದಿದೆ. ಈ ಪೈಕಿ ಶೇ. 85ರಷ್ಟು ಮಂದಿ ಮೆಸೇಜ್‌ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. ಇನ್ನು ಶೇ. 12ರಷ್ಟು ಮಂದಿಗೆ ಆ್ಯಪ್‌ನಲ್ಲೇ ಸಮಸ್ಯೆ ಎದುರಾಗಿದೆ. ಲಾಗಿನ್‌ ಸಮಸ್ಯೆ ಎದುರಾಗಿದ್ದು ಶೇ. 3ರಷ್ಟು ಮಂದಿಗೆ. ಈ ಬಗ್ಗೆ ಹಲವರು ವಿವಿಧ ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಕ್ಸ್‌ನಲ್ಲಿ ಬಳಕೆದಾರರೊಬ್ಬರು, ʼʼವ್ಯಾಟ್ಸ್‌ಆ್ಯಪ್‌ ಡೌನ್ ಆಗಿದೆಯೇ?ʼʼ ಎಂದು ಪ್ರಶ್ನಿಸಿದ್ದಾರೆ. ʼʼಸ್ಟೇಟಸ್ ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ʼʼಮೆಸೇಜ್‌ ಕಳುಹಿಸಲು ಸಾಧ್ಯವಾಗುತ್ತಿಲ್ಲʼʼ ಎಂದು ಮಗದೊಬ್ಬರು ಉಲ್ಲೇಖಿಸಿದ್ದಾರೆ. ಅದಾಗ್ಯೂ ಈ ಸಮಸ್ಯೆ ಬಗ್ಗೆ ವ್ಯಾಟ್ಸ್‌ಆ್ಯಪ್‌ನಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜತೆಗೆ ಕೆಲವು ಬಳಕೆದಾರರು ಮೇಟಾ ಒಡೆತನದ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿಯೂ ಸಮಸ್ಯೆ ಎದುರಾಗುತ್ತಿರುವ ಬಗ್ಗೆಯೂ ತಿಳಿಸಿದ್ದಾರೆ.



ಈ ಸುದ್ದಿಯನ್ನೂ ಓದಿ: UPI App Down: ತಾಂತ್ರಿಕ ದೋಷ; ಯುಪಿಐ ಪಾವತಿ ಸಾಧ್ಯವಾಗದೆ ಗ್ರಾಹಕರ ಪರದಾಟ

ಹಿಂದೆಯೂ ಆಗಿತ್ತು

ಫೆಬ್ರವರಿಯಲ್ಲಿಯೂ ವ್ಯಾಟ್ಸ್‌ಆ್ಯಪ್‌ನಲ್ಲಿ ವ್ಯಾಪಕ ಸಮಸ್ಯೆ ಕಂಡು ಬಂದಿತ್ತು. ವಿಶ್ವಾದ್ಯಂತ ಬಳಕೆದಾರರು ಮೆಸೇಜ್‌ ಕಳುಹಿಸಲು ಸಾಧ್ಯವಾಗದೆ ಪರದಾಡಿದ್ದರು. ಜತೆಗೆ ಕರೆ ಮಾಡಲೂ ಸಾಧ್ಯವಾಗಿರಲಿಲ್ಲ. ಆ ಸಂದರ್ಭದಲ್ಲಿ ಡೌನ್‌ಡೆಟೆಕ್ಟರ್ 9,000ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿತ್ತು.

ಯುಪಿಐಯಲ್ಲಿಯೂ ಸಮಸ್ಯೆ

ಶನಿವಾರ ಮಧ್ಯಾಹ್ನ ಯುಪಿಐ ಮೂಲಕ ಡಿಜಿಟಲ್ ಪಾವತಿ ಸಾಧ್ಯವಾಗದೆ ರಾಷ್ಟ್ರವ್ಯಾಪಿ ಗ್ರಾಹಕರು ಸಮಸ್ಯೆ ಎದುರಿಸಿದರು. ಸಂಜೆ ವೇಳೆಗೆ ಆ ಸಮಸ್ಯೆ ಬಗರಹರಿದಿದೆ ಎಂದು ಮೂಲಗಳು ತಿಳಿಸಿವೆ. ಮಧ್ಯಾಹ್ನದ ವೇಳೆಗೆ ಯುಪಿಐ ಸಮಸ್ಯೆ ಬಗ್ಗೆ ಸುಮಾರು 1,168 ದೂರುಗಳು ಬಂದಿತ್ತು ಎಂದು ಡೌನ್ ಡೆಟೆಕ್ಟರ್ ತಿಳಿಸಿತ್ತು. ಗೂಗಲ್ ಪೇ ಬಳಕೆದಾರರು 96 ಸಮಸ್ಯೆಗಳನ್ನು ವರದಿ ಮಾಡಿದರೆ, ಪೇಟಿಎಂ ಬಳಕೆದಾರರು 23 ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದರು. ಯುಪಿಐ ಕೆಲವು ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿದೆ ಎಂದು ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (NPCI) ಹೇಳಿತ್ತು.

ಮಾ. 26ರ ಸಂಜೆ ಭಾರತದಲ್ಲಿ ಯುಪಿಐ ಸರ್ವರ್‌ ಸ್ಥಗಿತವಾಗಿದ್ದು, ಹಣ ಪಾವತಿ ಮಾಡಲು ಸಾಧ್ಯವಾಗದೆ ಲಕ್ಷಾಂತರ ಮಂದಿ ಪರದಾಡಿದ್ದರು. ಈ ಬಗ್ಗೆ ಹಲವರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂನಂತಹ ಜನಪ್ರಿಯ ಪೇಮೆಂಟ್ ಆಪ್ಲಿಕೇಷನ್‌ಗಳ ಹಣ ಪಾವತಿ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿತ್ತು. ಸ್ಮಾರ್ಟ್‌ ಫೋನ್ ಮೂಲಕ ಆನ್‌ಲೈನ್‌ನಲ್ಲಿ ಹಣವನ್ನು ಕಳುಹಿಸಲು ಸಾಧ್ಯವಾಗದೆ ಗ್ರಾಹಕರು ಹತಾಶರಾಗಿದ್ದರು.