'ನಥಿಂಗ್ ಈಸ್ ಇಂಪಾಸಿಬಲ್' ಎನ್ನುವ ಮಾತನ್ನು ದಿಟ ಮಾಡಿದ ವೈಭವ್ ಸೂರ್ಯವಂಶಿ!
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತನ್ನ ಆಕರ್ಷಕ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆದು ದಾಖಲೆಗಳನ್ನು ಪುಡಿಗಟ್ಟುತ್ತಿರುವ ಬಿಹಾರದ ಹದಿನಾಲ್ಕರ ವಯಸ್ಸಿನ ವೈಭವ್ ಸೂರ್ಯವಂಶಿ ಇದೀಗ ಜಾಗತಿಕ ಕ್ರಿಕೆಟ್ ಲೋಕವನ್ನೇ ತನ್ನತ್ತ ಸೆಳೆದಿದ್ದಾರೆ. ಐಪಿಎಲ್ ವೇದಿಕೆಯಲ್ಲಿ ಸಿಕ್ಕ ಅವಕಾಶವನ್ನು ಬಾಚಿ ತಬ್ಬಿಕೊಂಡು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ ಈತ ಭಾರತೀಯ ಕ್ರಿಕೆಟ್‌ನಲ್ಲಿ ಬೆಳೆಯುತ್ತಿರುವ ದೈತ್ಯ ಪ್ರತಿಭೆ.
ಅದ್ಭುತ ಲಯದಲ್ಲಿ ಆಡುತ್ತಿರುವ ವೈಭವ್ ಸೂರ್ಯವಂಶಿ. -
ಅಂಕಣ: ಕೆ ಎನ್ ರಂಗನಾಥ್, ಚಿತ್ರದುರ್ಗ
ಕ್ರಿಕೆಟ್ ಕ್ರೀಡೆಯಲ್ಲಿ ಕೆಲವೊಮ್ಮೆ ಅಸಾಧ್ಯವಾದದ್ದು ಸಾಧ್ಯವಾಗುತ್ತದೆ. ಇನ್ನೊಮ್ಮೆ ಸಾಧ್ಯವಾದದ್ದೂ ಅಸಾಧ್ಯವಾಗುತ್ತದೆ ಯಾಕೆಂದರೆ, ಅದನ್ನು ಎದುರಾಳಿ ತಂಡ ಸಾಧಿಸಿರುತ್ತದೆ. ಇದಕ್ಕೆ ಉತ್ತಮ ಉದಾಹರಣೆ 2023ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಎದುರು ಸೋಲೊಪ್ಪಿಕೊಂಡು ಅದಾಗಲೇ ಅರ್ಧ ಮಂಡಿಯೂರಿದ್ದ ಕೊಲ್ಕತಾ ನೈಟ್ ರೈಡರ್ಸ್ ತಂಡವನ್ನು ರಿಂಕು ಸಿಂಗ್ ಇನಿಂಗ್ಸ್‌ನ ಕೊನೆಯ ಐದು ಬಾಲ್‌ಗಳಲ್ಲಿ ಸತತ ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಅವತ್ತಿನ ರಾತ್ರಿಗೆ ರಿಂಕು ಹೀರೋ. ಇಂತಹ ಅಚ್ಚರಿಗಳು ಕ್ರಿಕೆಟ್‌ನಲ್ಲಿ ಸದ್ದಿಲ್ಲದೆ ಸರಿದು ಹೋಗುತ್ತವೆ. ಇದಕ್ಕೆಲ್ಲಾ ಕೆಲವೊಮ್ಮೆ ಅದೃಷ್ಟ ಬೇಕು ಅಂತ ಕೆಲವರು ಹೇಳುವುದುಂಟು. ಆದರೆ, ಅದೃಷ್ಟ ಅಂದ ತಕ್ಷಣ ನನಗೆ ನೆನಪಿಗೆ ಬರುವುದೇ ಶ್ರೀಲಂಕಾದ ಕ್ರಿಕೆಟರ್ ಅಟಪಟ್ಟು. ಆತನ ಕ್ರಿಕೆಟ್ ಹಾದಿಯೇ ವಿಚಿತ್ರ ಬಿಡಿ.
ಅದಿರಲಿ ಇದೀಗ ನಮ್ಮ ಹೀರೋ ಬಗ್ಗೆ ಮಾತಾಡೋಣ. ಈತನಿಗೆ ಅಂತಹ ಲಕ್ ಏನೂ ಇರಲಿಲ್ಲ. ಬಿಹಾರದ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಬದಲು ಐಪಿಎಲ್‌ನಲ್ಲಿ ಅವಕಾಶ ಸಿಕ್ಕಿತ್ತು. ಆದರೆ, ಸಿಕ್ಕ ಅವಕಾಶಗಳನ್ನು ಬಾಚಿ ತಬ್ಬಿಕೊಂಡು ಚುಟುಕು ಕ್ರಿಕೆಟ್‌ನಲ್ಲಿ ಇಂದು ಸುನಾಮಿ ಎಬ್ಬಿಸಿರುವ ಈತ ಹದಿನೆಂಟು ವರ್ಷಗಳ ಹಿಂದೆ ಐಪಿಎಲ್ ಪ್ರಾರಂಭವಾದಾಗ ಇನ್ನು ಭೂಮಿಗಿಳಿದಿರಲಿಲ್ಲ. ಈಗಾಗಲೇ ನಿಮಗೆ ಗೊತ್ತಿರುವಂತೆ ಇವತ್ತಿನ ಅಂಕಣದ ಹೀರೋ ರಾಜಸ್ಥಾನ್ ರಾಯಲ್ಸ್ ತಂಡದ ಹದಿನಾಲ್ಕರ ವಯಸ್ಸಿನ ಆರಂಭಿಕ ಆಟಗಾರ ‘ವೈಭವ್ ಸೂರ್ಯವಂಶಿ’.
ಈತ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದಾಗ ಮುಖದ ಮೇಲೆ ಮೀಸೆ ಕೂಡ ಕಪ್ಪತ್ತದ ಈ ಸಣ್ಣ ಹುಡುಗ ಏನು ಆಡಿಯಾನು? ಇನ್ನೂ, ಮುಖ್ಯವಾಗಿ ಜಸ್‌ಪ್ರೀತ್ ಬುಮ್ರಾ ಅಂತಹ ಅನುಭವಿ ವೇಗಿಗಳು ಹಾಕುವ ಬಾಲಿಗೆ ಈತ ಪತರ್ ಗುಟ್ಟಿ ಹೋಗಬಹುದು. ರಾಜಸ್ಥಾನ್ ತಂಡದಲ್ಲಿ ಎಂತೆಂಥಹ ಘಟಾನುಘಟಿ ಆಟಗಾರರಿದ್ರೂ ಈತನಿಗೆ ಯಾಕೆ ಅವಕಾಶ ಕೊಟ್ರು? ಎನ್ನುವ ನಿರ್ಲಕ್ಷತೆಯ ಭಾವ ಎಲ್ಲರಲ್ಲೂ ಇತ್ತು. ಆದರೆ, ಈತ ಆ ಭಾವನೆಯನ್ನು ಹುಸಿಗೊಳಿಸಿ ಇಂದು ಜಾಗತಿಕ ಕ್ರಿಕೆಟ್ ಲೋಕದಲ್ಲೇ ಹೊಸ ಅಲೆಯನ್ನೇ ಎಬ್ಬಿಸಿದ್ದು, ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದಿರುವುದು ತೀರಾ ಅಚ್ಚರಿ ಎನಿಸಿದರೂ, ಅದು ವಾಸ್ತವ.
IND vs NZ 2nd T20I: ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ ತಂಡ!
ಹೆಸರಿನಲ್ಲೇ ವೈಭವವನ್ನು ಜೊತೆಗಿಟ್ಟುಕೊಂಡಿರುವ ಸೂರ್ಯವಂಶಿ “ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು” ಎನ್ನುವ ಸಾಲಿಗೆ ಹೇಳಿ ಮಾಡಿಸಿದ ಪ್ರತಿಭೆ. ಕ್ರಿಕೆಟ್‌ನಲ್ಲಿ ಇಂತಹ ಅನೇಕ ಉದಾಹರಣೆಗಳ ಸಂಗ್ರಹವಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ನಿದರ್ಶನವಿಲ್ಲದೆ ಹೋದರೆ ಈ ಬರಹ ಅಪೂರ್ಣ. ಹದಿನಾರನೆ ಪ್ರಾಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲೂರಿದ ಸಚಿನ್ ಅಂದು ಮೈದಾನದಲ್ಲಿ ದಿಟ್ಟತನದ ಆಟವಾಡಿ, ಭಾರತೀಯ ಕ್ರಿಕೆಟ್‌ನಲ್ಲಿ ಒಂದು ಹೊಸ ಯುಗ ಸೃಷ್ಟಿಸುವ ಮುನ್ಸೂಚನೆ ಕೊಟ್ಟಂತಿತ್ತು. ಅದರಂತೆ ಸಚಿನ್ ಎನ್ನುವ ಹೆಸರು ಇಂದಿಗೂ ಭಾರತೀಯ ಕ್ರಿಕೆಟ್ ಲೋಕದಲ್ಲಿ ಯಾರೂ ತುಂಬಲಾರದ ಸ್ಥಾನವಾಗಿ ನಿಂತಿದೆ. ಇನ್ನು ಕ್ರಿಸ್ ಗೇಲ್ ಕೂಡ ಆರಂಭದಲ್ಲಿ ಒಂದಷ್ಟು ಟೀಕೆಗಳನ್ನು ಎದುರಿಸಿದರೂ, ಒಂದೇ ಇನಿಂಗ್ಸ್ ನಲ್ಲಿ ಮ್ಯಾಚ್ ಮುಗಿಸುವ ಸಂಸ್ಕೃತಿಯನ್ನು ಪರಿಚಯಿಸಿದವರು. ಇಂಗ್ಲೆಂಡಿನ ಜೋಸ್ ಬಟ್ಲರ್ ಕೂಡ ಆರಂಭದ ಹಂತದಲ್ಲಿ ಟ್ಯಾಲೆಂಟ್ ಇದೆ. ಆದರೆ ಸ್ಥಿರತೆ ಇಲ್ಲ. ಎನ್ನುವ ಟೀಕೆ ಎದುರಿಸಿದರೂ, ವೈಟ್ ಬಾಲ್ ಕ್ರಿಕೆಟ್ ನಲ್ಲಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದರು. ಮತ್ತೊಂದು ಕಡೆ ಯಾವ ಟೆಸ್ಟ್ ಕ್ರಿಕೆಟ್ ಗೆ ಅಷ್ಟೊಂದು ಸೂಕ್ತವಲ್ಲ ಎನಿಸಿಕೊಂಡ ಡೇವಿಡ್ ವಾರ್ನರ್ ಅದೇ ಟೆಸ್ಟ್ ಕ್ರಿಕೆಟ್ ನಲ್ಲಿ ಶತಕಗಳ ಸರದಾರ ಎಂದೆನಿಸಿಕೊಂಡರು. ಹೀಗೆ ಹೇಳುತ್ತಾ ಹೋದರೆ, ಕ್ರಿಕೆಟ್ ಎನ್ನುವ ಮಹಾಸಾಗರದಲ್ಲಿ ಪಟ್ಟಿ ದೊಡ್ಡದಾಗುತ್ತೇ ಹೊರೆತು, ಉದಾಹರಣೆಗಳು ಬತ್ತುವುದಿಲ್ಲ.
ಆದರೆ, ಇವರೆಲ್ಲರನ್ನು ಮೆಟ್ಟಿ ನಿಲ್ಲುವ ಒಬ್ಬ ವಿಭಿನ್ನ ಮತ್ತು ವಿಶಿಷ್ಟ ಆಟಗಾರ ವೈಭವ್ ಸೂರ್ಯವಂಶಿ. ಮೈದಾನಕ್ಕೆ ಬಂದ ತಕ್ಷಣವೇ ಒಂದೆರಡು ಬಾಲುಗಳಲ್ಲೇ ಸನ್ನಿವೇಶಕ್ಕೆ ಹೊಂದಿಕೊಂಡು ಬ್ಯಾಟ್ ಬೀಸುವ ಶೈಲಿ ನೋಡಿದರೆ ಕೆಲವೊಮ್ಮೆ ಈತ ಪಾದರಸ ಇಟ್ಕೊಂಡು ಏನಾದ್ರೂ ಹುಟ್ಟಿದ್ದಾನ? ಅನ್ನಿಸಿದ್ದು ಇದೆ.
ಇವತ್ತಿನ ಕ್ರಿಕೆಟ್ ಜಗತ್ತಿನಲ್ಲಿ ಪ್ರತಿಭೆಗಳಿಗೆ ತಕ್ಕ ಅವಕಾಶಗಳು ಸಿಕ್ಕೇ ಸಿಗುತ್ತವೆ. ಕಾರಣ ಇಂದು ದೇಶಿ ಕ್ರಿಕೆಟ್ ಯುವ ಆಟಗಾರರಿಗೆ ವಿಫುಲ ಅವಕಾಶ ನೀಡುತ್ತಿದೆ. ಆದರೆ ಸಿಕ್ಕ ಅವಕಾಶಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವಲ್ಲಿ ಹಲವರು ಎಡವುತ್ತಿದ್ದಾರೆ. ಹಿಂದಿಯಲ್ಲಿರುವ ಒಂದು ಮಾತಿನಂತೆ “ಮುಖಮ್ ಮಲ್ಪರ್ ಪೌಂಚಾನಾ ಏಕ್ ಆಸಾಮಹೇ, ಮುಖಮ್ ಮಲ್ಪರ್ ಜಾದದೇ ಕಡೇ ರೆಹನಾ ಮುಶ್ಕಿಲ್ ಹೇ” ಅರ್ಥಾತ್, ಯಾವುದೇ ಕ್ಷೇತ್ರದಲ್ಲಿ ಒಂದು ಲೆವೆಲ್ ಅಥವಾ ಒಂದು ಹಂತದ ತನಕ ತಲುಪಬಹುದು. ಆದರೆ, ತಲುಪಿದ ಬಳಿಕ ಅಲ್ಲಿ ದೀರ್ಘ ಕಾಲ ಉಳಿದುಕೊಳ್ಳುವುದು ತುಂಬಾ ಕಷ್ಟ. ಇದರಂತೆ ಅವಕಾಶಗಳನ್ನು ಗಿಟ್ಟಿಸಿಕೊಂಡು ಒಂದೆರಡು ಪಂದ್ಯಗಳಲ್ಲಿ ಆಕರ್ಷಕ ಇನಿಂಗ್ಸ್ ಆಡಬಹುದು. ಆದರೆ ಆಟದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಆ ಕೆಲಸವನ್ನು ವೈಭವ್ ಅವರು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಅವರ ಸ್ಥಿರತೆ ಒಂದು ರೀತಿಯಾಗಿ ನದಿಯಂತೆ ಹರಿಯುತ್ತಲೇ ಇದೆ. ಎಂತಹದ್ದೇ ಸನ್ನಿವೇಶದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದಾಗಲೆಲ್ಲಾ ನಿರಾಸೆ ಮೂಡಿಸದೆ ಬೌಲರ್ ನ ಕೈಲಿಂದ ಬಾಲ್ ರಿಲೀಸ್ ಆಗುವ ಮುನ್ನವೇ ಚೆಂಡಿನ ದಿಕ್ಕನ್ನು ಅರಿತು ಬ್ಯಾಟ್ ಬೀಸುವ ಈ ಪುಟ್ಟ ಪೋರನ ಬ್ಯಾಟಿಂಗ್ ನೋಡುವುದೇ ಒಂಥರಾ ಕಣ್ಣುಗಳಗೆ ಹಿರಿಯ ಹಬ್ಬವಿದ್ದಂತೆ.
Ranji Trophy: ಸೌರಾಷ್ಟ್ರ ವಿರುದ್ಧ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಶುಭಮನ್ ಗಿಲ್ ವಿಫಲ!
ಮೈದಾನದಲ್ಲಿದ್ದಾಗ ಆತನ ಕಣ್ಣುಗಳಲ್ಲಿ ಸಾಧನೆಯ ಚಿಲುಮೆ ಸದಾ ಉಕ್ಕುತ್ತಿರುತ್ತದೆ. ಭವಿಷ್ಯ ಭಾರತದ ಕ್ರಿಕೆಟ್ ಲೋಕದ ಸಾರಥಿಯಾಗುವ ಸಾಧ್ಯತೆಗಳು ಸ್ಪಷ್ಟವಾಗಿ ಗೋಚರಿಸುವಂತಿವೆ. ಮುಂದೊಂದು ದಿನ ಟಿ20 ಕ್ರಿಕೆಟ್ ನ ಇತಿಹಾಸ ಬರೆಯುವಾಗ ವೈಭವ್ ಸೂರ್ಯವಂಶಿ ಎಂಬ ಪುಟ್ಟ ಪೋರನ ವಿಶೇಷ ಅಧ್ಯಾಯವೇ ಬರೆದಿಡುವ ಕಾಲ ದೂರವಿಲ್ಲ. ಮೈದಾನದಲ್ಲಿ ನಿರಂತರವಾಗಿ ಬಾಲನ್ನು ಸ್ಟೇಡಿಯಂ ಕಡೆಗಟ್ಟಿದರೂ, ಯಾವುದೇ ಅತಿರೇಕದ ವರ್ತನೆ ತೋರದೆ, ಸಂಯಮಿತ ಆಟ ಆಡುವ ಅಪರೂಪದ ಆಟಗಾರನೀತ. ಮೈದಾನದಲ್ಲಿ ಫೀಲ್ಡರ್ ಹಾಗೂ ಬೌಲರ್ ಗಳೊಂದಿಗಿನ ವರ್ತನೆ, ಪ್ರತಿಸ್ಪರ್ಧಿಯನ್ನು ಗೌರವಿಸುವ ಆತನ ವ್ಯಕ್ತಿತ್ವ ಕ್ರೀಡಾ ಮನೋಭಾವವನ್ನು ತೋರುತ್ತದೆ. ಇನ್ನೊಂದು ಇಂತಹದ್ದೆ ಉದಾಹರಣೆಯನ್ನು ನೆನಪು ಮಾಡಿಕೊಳ್ಳುವುದಾದರೆ ತಕ್ಷಣ ನೆನಪಿಗೆ ಬರುವುದೇ ಬ್ರಯಾನ್ ಲಾರ. ವೆಸ್ಟ್ ಇಂಡೀಸ್ ತಂಡ ಜಾಗತಿಕ ಕ್ರಿಕೆಟ್ ನಲ್ಲಿ ಮಿಂಚಿ ಮೆರೆಯುತ್ತಿದ್ದ ಕಾಲವದು. ಆ ವೇಳೆ ಟ್ರಿನಿಡಾಡ್‌ನ ಎನ್ನುವ ಸಣ್ಣ ಹಳ್ಳಿಯಿಂದ ಬಂದಿದ್ದ ಈತನ ಪ್ರತಿಭೆಯೇನು ಸಾಮಾನ್ಯದ್ದಲ್ಲ. ಈತ ಮೈದಾನದಲ್ಲಿ ಬ್ಯಾಟ್ ಮಾಡುತ್ತಿದ್ದಾನೆಂದರೆ, ಭರಪೂರ ಬೌಂಡರಿಗಳೇ ಹರಿದು ಬರುತ್ತಿದ್ದವು. ಅಂತಹ ಅನೇಕ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.
ಇನ್ನು ಐಪಿಎಲ್ ನಲ್ಲಿ ವೈಭವ್ ಆಡಿದ ಒಂದೊಂದು ಇನಿಂಗ್ಸ್ ಕೂಡ ಕ್ರಿಕೆಟ್ ಅಭಿಮಾನಿಗಳ ಮನಸ್ಸನ್ನು ಗೆದ್ದಿವೆ. ಆತನ ಐಪಿಎಲ್ ಕೆರಿಯರ್ ಶುರುವಾಗಿದ್ದೆ ಆಫ್ ಸೈಡ್ ನಲ್ಲಿ ಸಿಕ್ಸ್ ಬಾರಿಸುವ ಮೂಲಕ. ಇದು ಕ್ರಿಕೆಟಿಗನಾಗಲು ಕನಸು ಕಂಡ ಪ್ರತಿಯೊಂದು ಮನಸಿಗೆ ಸ್ಫೂರ್ತಿ ನೀಡಿದಂತಿತ್ತು. ರಾಂಚಿಯಲ್ಲಿ ನಡೆದ ವಿಜಯ್ ಹಝಾರೆ ಟ್ರೋಫಿಯ ಪಂದ್ಯವೊಂದರಲ್ಲಿ ಅರುಣಾಚಲ ಪ್ರದೇಶದ ಬೌಲರ್ ಗಳನ್ನು ಬೆಂಡೆತ್ತಿ ಕೇವಲ 36 ಬಾಲ್ ಗಳಲ್ಲಿ ಹದಿನೈದು ಸಿಕ್ಸರ್ ಸಿಡಿಸಿ ಭರ್ಜರಿ ಶತಕ ಬಾರಿಸಿದ್ದು ಈತನ ಆಟದ ವೈಖರಿಯನ್ನು ತೋರುತ್ತದೆ. ಭಾರತ ಅಂಡರ್- 19 ಮತ್ತು ಇಂಗ್ಲೆಂಡ್ ಅಂಡರ್-19 ನಡುವಿನ ಏಕದಿನ ಪಂದ್ಯದಲ್ಲಿ 52 ಎಸೆತಗಳಲ್ಲಿ ಅತ್ಯಂತ ವೇಗದ ಶತಕ ಬಾರಿಸಿ ವಿಶ್ವದಾಖಲೆ ಬರೆದ ವೈಭವ್ ಸೂರ್ಯವಂಶಿ ಏಕದಿನ ಕ್ರಿಕೆಟ್ ನಲ್ಲೂ ತನ್ನ ತಾಕತ್ತನ್ನು ಸಾಬೀತುಪಡಿಸಿದ್ದರು. ತನ್ನ ಪರಿಣಾಮಕಾರಿ ಆಟದ ಮೂಲಕ ಇರೋ-ಬರೋ ದಾಖಲೆಗಳನ್ನು ಪುಡಿಗಟ್ಟುತ್ತಿರುವ ಬಿಹಾರದ ಬ್ಯಾಟರ್ ಬಹುಶಃ ಮುಂದೊಂದು ದಿನ ಕ್ರಿಕೆಟ್ ಲೋಕವೆಂಬ ಶಿಖರದ ತುತ್ತ ತುದಿಗೆ ಏರುವುದರಲ್ಲಿ ಯಾವ ಸಣ್ಣ ಸಂಶಯವೂ ಇಲ್ಲ.
ಶುಭಮನ್ ಗಿಲ್ ಕಿತ್ತಾಕಿ, ಭಾರತ ಏಕದಿನ ತಂಡದ ನಾಯಕತ್ವ ರೋಹಿತ್ ಶರ್ಮಾಗೆ ನೀಡಿ ಎಂದ ಮನೋಜ್ ತಿವಾರಿ!
ಕೆಲವೊಮ್ಮೆ ಸಿಕ್ಸರ್ ಗಳು ಎಡ್ಜ್ ಆಗಿ ಕುಲ್ಡ್ ಶಾಟ್ ಗಳಾಗಿ ಹೋಗುವುದಿದೆ. ಆದರೆ ಈತನ ಶಾಟ್ ಸೆಲೆಕ್ಷನ್ ಎಲ್ಲವೂ ಪಕ್ಕ ಪ್ರೊಫೆಷನಲ್. ಶೇಕಡಾ 99% ರಷ್ಟು ಸಿಕ್ಸರ್ ಗಳು ಎಲ್ಲವೂ Middle of the Bat ನಲ್ಲೇ ಬಾರಿಸಿರುವಂತಹದ್ದು. ಹೀಗೆ ಬಹುಮುಖ ಪ್ರತಿಭೆ ಹೊಂದಿರುವ ಸೂರ್ಯವಂಶಿಯ ಹಠ, ಛಲ, ಆತ್ಮವಿಶ್ವಾಸ ಹಾಗೂ ಶಿಸ್ತು ನೋಡಿದರೆ ವಿರಾಟ್ ಕೊಹ್ಲಿಯವರಂತಹ ಯಶಸ್ವಿ ಕ್ರಿಕೆಟಿಗನಾಗುವ ಛಾಯೆ ಕಾಣಿಸುತ್ತಿದೆ. ಆರಂಭಿಕನಾಗಿ ಬ್ಯಾಟ್ ಹಿಡಿದು ಬಂದು ಒತ್ತಡದ ಸನ್ನಿವೇಶಗಳಲ್ಲೂ ತಂಡಕ್ಕೆ ಆಸರೆಯಾಗುವ ಇನ್ನೊಂದು ಕೋನದಲ್ಲಿ ನೋಡಿದರೆ ರೋಹಿತ್ ಶರ್ಮಾ ಅವರ ಬಿಂಬ ಕಾಣುತ್ತದೆ. ಮತ್ತೊಂದು ಕಡೆ ಮೈದಾನಕ್ಕಿಳಿದ ಕೂಡಲೇ ಸಿಕ್ಕಾಪಟ್ಟೆ ಸಿಕ್ಸರ್ ಬಾರಿಸುವುದರ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸುತ್ತಿರುವುದನ್ನು ನೋಡಿದರೆ ಸೂರ್ಯಕುಮಾರ್ ಅವರಂತಹ ಹೊಡಿ-ಬಡಿ ಆಟಗಾರನಂತೆ ಕಾಣುತ್ತಾರೆ.