ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kalita Majhi: ಮನೆಗೆಲಸ ಮಾಡುತ್ತಿದ್ಧ ಮಹಿಳೆ ಈಗ ಬಂಗಾಳದ ಶಾಸಕಿ!; ಯಾರು ಈ ಕಲಿತಾ ಮಾಝಿ?

Who is Kalita Majhi?: 294 ಸದಸ್ಯ ಬಲದ ವಿಧಾನಸಭೆಯಲ್ಲಿ 206 ಸ್ಥಾನಗಳನ್ನು ಗಳಿಸಿದ ಬಿಜೆಪಿಯ ಭರ್ಜರಿ ಗೆಲುವಿನ ಮಧ್ಯೆ ಮಾಝಿಯವರ ಗೆಲುವು ಕೂಡ ಗಮನಸೆಳೆದಿದೆ. ಬಿಜೆಪಿಯ ಈ ಗೆಲುವು ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿತು.

ಮನೆಗೆಲಸ ಮಾಡುತ್ತಿದ್ಧ ಮಹಿಳೆ ಬಂಗಾಳದ ಶಾಸಕಿ!

Who is Kalita Majhi? -

Abhilash BC
Abhilash BC May 5, 2026 12:45 PM

ಕೋಲ್ಕತಾ, ಮೇ 5: ಇಡೀ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೀವ್ರ ಹಣಾಹಣಿಗೆ ಸಾಕ್ಷಿಯಾಗಿದ್ದ ಭವಾನಿಪುರ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ಎದುರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 15,105 ಮತಗಳಿಂದ ಪರಾಭವ ಕಂಡಿದ್ದಾರೆ. ಜತೆಗೆ ಅವರ ಪಕ್ಷವೂ ಅಧಿಪತನ ಕಂಡಿದೆ. ರಾಜ್ಯದಲ್ಲಿ ಮೊದಲ ಸಲ ಅಧಿಕಾರದ ಗದ್ದುಗೆ ಏರಿದೆ. ರಾಜ್ಯ ವಿಧಾನಸಭೆಯ 294 ಸ್ಥಾನಗಳ ಪೈಕಿ 293 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಭರ್ಜರಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಮಧ್ಯೆ ಮನೆ ಕೆಲಸ ಮಾಡಿ ತಿಂಗಳಿಗೆ ಕೇವಲ 2,500 ರೂ. ಸಂಪಾದಿಸುತ್ತಿದ್ದ ಸಾಮಾನ್ಯ ಮಹಿಳೆ ಕಲಿತಾ ಮಾಝಿ ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ.

ಗುಸ್ಕಾರ ಪುರಸಭೆಯ ನಿವಾಸಿಯಾದ ಮಾಝಿ, ರಾಜಕೀಯಕ್ಕೆ ಪ್ರವೇಶಿಸುವ ಮೊದಲು ನಾಲ್ಕು ಮನೆಗಳಲ್ಲಿ ಮನೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಈ ಹಿಂದೆ 2021 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಆದರೆ ತೃಣಮೂಲ ಕಾಂಗ್ರೆಸ್‌ನ ಅಭೇದಾನಂದ ಥಂಡರ್ ವಿರುದ್ಧ 11,815 ಮತಗಳಿಂದ ಸೋತರು. ಆದರೆ ಎರಡನೇ ಬಾರಿಯೂ ಅವರ ಮೇಲೆ ವಿಶ್ವಾವಿಟ್ಟ ಬಿಜೆಪಿ ಅವರನ್ನು ಮತ್ತೆ ಇದೇ ಕ್ಷೇತ್ರದಿಂದ ಕಣಕ್ಕಿಳಿಸಿತು. ಈ ಬಾರಿ ಅವರು 1,07,692 ಮತಗಳನ್ನು ಪಡೆದು, ಶ್ಯಾಮ ಪ್ರಸನ್ನ ಲೋಹರ್ ಅವರನ್ನು 12,535 ಮತಗಳ ಅಂತರದಿಂದ ಸೋಲಿಸಿದರು.

294 ಸದಸ್ಯ ಬಲದ ವಿಧಾನಸಭೆಯಲ್ಲಿ 206 ಸ್ಥಾನಗಳನ್ನು ಗಳಿಸಿದ ಬಿಜೆಪಿಯ ಭರ್ಜರಿ ಗೆಲುವಿನ ಮಧ್ಯೆ ಮಾಝಿಯವರ ಗೆಲುವು ಕೂಡ ಗಮನಸೆಳೆದಿದೆ. ಬಿಜೆಪಿಯ ಈ ಗೆಲುವು ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿತು. ಈ ಗೆಲುವಿನ ಪ್ರಮಾಣವು ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ರಚನಾತ್ಮಕ ಬದಲಾವಣೆಯನ್ನು ಸೂಚಿಸುತ್ತದೆ.

ದಳಪತಿ ಗೆಲುವಿಗೆ ರಾಹುಲ್ ಗಾಂಧಿ ಅಭಿನಂದನೆ; ಟಿವಿಕೆ ಜೊತೆ ಸೇರಲು ಡಿಎಂಕೆಯೊಂದಿಗಿನ ಮೈತ್ರಿ ಮುರಿಯುತ್ತಾ ಕಾಂಗ್ರೆಸ್?

ಈ ಜನಾದೇಶವು ರಾಷ್ಟ್ರೀಯ ಮಹತ್ವವನ್ನು ಹೊಂದಿದೆ, 1972 ರ ನಂತರ ಮೊದಲ ಬಾರಿಗೆ ಪಶ್ಚಿಮ ಬಂಗಾಳವು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಅದೇ ಪಕ್ಷದ ಆಳ್ವಿಕೆಗೆ ಒಳಪಡಲಿದೆ. ಮಮತಾ ಬ್ಯಾನರ್ಜಿಯವರ ತವರು ಕ್ಷೇತ್ರವಾದ ಭವಾನಿಪುರ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. 2021ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಸುವೇಂದು ಎದುರು ಸೋತಿದ್ದ ಮಮತಾ, ಆ ಬಳಿಕ ಭವಾನಿಪುರದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿ ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಂಡಿದ್ದರು. ಈ ಬಾರಿಯೂ ಅದೇ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಅವರು ಈ ಬಾರಿಕನಿಷ್ಟ ಶಾಸಕ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿಯೂ ವಿಫಲರಾಗಿದ್ದಾರೆ.