ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜಾರ್ಖಂಡ್ ಮಾಜಿ ಸಿಎಂ ಮೊಮ್ಮಗ ಮನಾಲಿಯಲ್ಲಿ ನಿಗೂಢ ಸಾವು! ಸೊರೆನ್ ಕುಟುಂಬದಲ್ಲಿ ಮಡುಗಟ್ಟಿದ ದುಃಖ

former CM’s grandson found dead: ಜಾರ್ಖಂಡ್‍ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಹಿಮಾಚಲ ಪ್ರದೇಶದ ಪ್ರಸಿದ್ಧ ಗಿರಿಧಾಮ ಮನಾಲಿಯಲ್ಲಿರುವ ಒಂದು ಹೋಂಸ್ಟೇನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಎಕ್ಸ್‌ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ಚಂಪೈ ಸೊರೆನ್, ತಮ್ಮ ಮೊಮ್ಮಗನ ಹಠಾತ್ ನಿಧನವನ್ನು ದೃಢಪಡಿಸಿದರು.

ಜಾರ್ಖಂಡ್ ಮಾಜಿ ಸಿಎಂ ಮೊಮ್ಮಗ ಮನಾಲಿಯಲ್ಲಿ ನಿಗೂಢ ಸಾವು

ಜಾರ್ಖಂಡ್ ಮಾಜಿ ಸಿಎಂ ಮೊಮ್ಮಗ ನಿಗೂಢ ಸಾವು -

Priyanka P
Priyanka P Feb 25, 2026 4:46 PM

ರಾಂಚಿ, ಫೆ.25: ಜಾರ್ಖಂಡ್‍ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ (Champai Soren) ಅವರ ಕುಟುಂಬವನ್ನು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಅವರ ಮೊಮ್ಮಗ ವೀರ್ ಸೋರೆನ್ (Veer Soren), ಹಿಮಾಚಲ ಪ್ರದೇಶದ (Himachal Pradesh) ಪ್ರಸಿದ್ಧ ಗಿರಿಧಾಮ ಮನಾಲಿಯಲ್ಲಿರುವ ಒಂದು ಹೋಂಸ್ಟೇನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಎಕ್ಸ್‌ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ಚಂಪೈ ಸೊರೆನ್, ತಮ್ಮ ಮೊಮ್ಮಗನ ಹಠಾತ್ ನಿಧನವನ್ನು ದೃಢಪಡಿಸಿದರು. ನಮ್ಮ ಪ್ರೀತಿಯ ಮೊಮ್ಮಗ ವೀರ್ ಸೊರೆನ್ ಫೆಬ್ರವರಿ 24, 2026 ರಂದು ಅಕಾಲಿಕವಾಗಿ ನಿಧನರಾದರು ಎಂದು ತೀವ್ರ ದುಃಖದಿಂದ ನಾವು ನಿಮಗೆ ತಿಳಿಸುತ್ತೇವೆ ಎಂದು ಬರೆದಿದ್ದಾರೆ.

ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಅವರ ಆರೋಗ್ಯ ಹಠಾತ್ತನೆ ಹದಗೆಟ್ಟ ನಂತರ, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವಿಧಿ ಬೇರೆಯದೇ ಯೋಜನೆಗಳನ್ನು ಹೊಂದಿತ್ತು. ವೀರ್ ಅವರ ನಿಧನದಿಂದ, ನಮ್ಮ ಕುಟುಂಬವು ಛಿದ್ರವಾಗಿದೆ. ಸೋರೆನ್ ಕುಟುಂಬವು ತೀವ್ರ ದುಃಖದಲ್ಲಿದೆ ಎಂದು ಅವರು ಹೇಳಿದರು.

ನಾಯಿ ಕಚ್ಚಿದ ಹಿನ್ನೆಲೆ; ರೇಬಿಸ್ ಭಯದಿಂದ ಆತ್ಮಹತ್ಯೆಗೆ ಶರಣಾದ ಯುವಕ: ಮಹಾರಾಷ್ಟ್ರದಲ್ಲಿ ಮನಕಲಕುವ ಘಟನೆ

ವರದಿಯ ಪ್ರಕಾರ, ವೀರ್ ಫೆಬ್ರವರಿ 22 ರಂದು ಇಬ್ಬರು ಸ್ನೇಹಿತರೊಂದಿಗೆ ರಜೆ ಮಜಾಗಾಗಿ ಮನಾಲಿಗೆ ಬಂದಿದ್ದರು. ಅವರು ಸಿಮ್ಸಾ ಪ್ರದೇಶದ ಹೋಂಸ್ಟೇಯಲ್ಲಿ ತಂಗಿದ್ದರು. ಅವರ ಸ್ನೇಹಿತರು ಫೆಬ್ರವರಿ 24 ರಂದು ಸೋಲಾಂಗ್ ಮತ್ತು ಸೇಥಾನ್ ಪ್ರದೇಶಗಳನ್ನು ನೋಡಲು ಹೊರಟಿದ್ದರು. ವೀರ್ ಹೋಂಸ್ಟೇಯಲ್ಲಿಯೇ ಉಳಿಯಲು ನಿರ್ಧರಿಸಿದರು.



ಮಧ್ಯಾಹ್ನ 12:30ರ ಸುಮಾರಿಗೆ ಅವನ ಸ್ನೇಹಿತರು ಹಿಂತಿರುಗಿದಾಗ, ವೀರ್ ನಿದ್ದೆ ಮಾಡುತ್ತಿದ್ದರು. ಅವರನ್ನು ಎಬ್ಬಿಸಿದಾಗ, ತೀವ್ರ ತಲೆನೋವಿದೆ ಎಂದು ಅವರು ಹೇಳಿದರು. ಅವರು ಆನ್‌ಲೈನ್‌ನಲ್ಲಿ ಕೆಲವು ಔಷಧಿಗಳನ್ನು ಆರ್ಡರ್ ಮಾಡಿ, ಅದನ್ನು ಅವರಿಗೆ ನೀಡಿದರು. ವೀರ್ ಮತ್ತೆ ನಿದ್ರೆಗೆ ಜಾರಿದರು ಎಂದು ಹೇಳಲಾಗಿದೆ. ಆದರೆ, ಮಧ್ಯಾಹ್ನ 2 ಗಂಟೆಯ ಸುಮಾರಿಗೆ, ಒಳಗೆ ಹೋದಾಗ ಅವನು ಹಾಸಿಗೆಯ ಮೇಲೆ ಪ್ರಜ್ಞಾಹೀನನಾಗಿ ಬಿದ್ದಿರುವುದನ್ನು ನೋಡಿದರು.

ಕೂಡಲೇ ವೀರ್ ಅವರನ್ನು ಅವರ ಸ್ನೇಹಿತರು ಮನಾಲಿಯ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಗೆ ಕರೆದೊಯ್ಯುವಾಗ ಅವರ ಬಾಯಿಯಿಂದ ನೊರೆ ಬರಲು ಪ್ರಾರಂಭಿಸಿತ್ತು ಎಂದು ಅವರು ಹೇಳಿದರು. ವೈದ್ಯರು ಅವರನ್ನು ಬದುಕಿಸಲು ಸಿಪಿಆರ್ ಪ್ರಯತ್ನಿಸಿದರು. ಆದರೆ, ಆಸ್ಪತ್ರೆಯಲ್ಲಿ ಅವರು ಮೃತಪಟ್ಟರು ಎಂದು ಘೋಷಿಸಲಾಯಿತು.

ವೀರ್ ಸಾವಿನ ಸುದ್ದಿ ತಿಳಿದ ನಂತರ, ಮನಾಲಿ ಪೊಲೀಸರು ಹೋಂಸ್ಟೇಗೆ ಧಾವಿಸಿ ಘಟನಾ ಸ್ಥಳವನ್ನು ನಿಯಂತ್ರಿಸಿದರು. ಅಧಿಕಾರಿಗಳ ಆರಂಭಿಕ ತಪಾಸಣೆಯಲ್ಲಿ ದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳು ಕಂಡುಬಂದಿಲ್ಲ. ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ. ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಅವರಿಗೆ ಹಸ್ತಾಂತರಿಸಲಾಗುವುದು ಎಂದು ಮನಾಲಿ ಡಿಎಸ್ಪಿ ಕೆ.ಡಿ. ಶರ್ಮಾ ತಿಳಿಸಿದ್ದಾರೆ. ವೀರ್ ಅವರ ಕುಟುಂಬ ಮನಾಲಿ ತಲುಪಿದೆ. ಮರಣೋತ್ತರ ಪರೀಕ್ಷೆಯ ನಂತರವೇ ನಿಖರವಾದ ಕಾರಣ ತಿಳಿದುಬರಲಿದೆ.