ಬಿಎಂಟಿಸಿ ಬಸ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಕಾಮುಕನಿಗೆ ಕಪಾಳಮೋಕ್ಷ ಮಾಡಿದ ಚಾಲಕ; ವಿಡಿಯೊ ವೈರಲ್
Viral News: ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಬಸ್‌ನಲ್ಲಿ ಮಹಿಳೆ ಜತೆ ಕಾಮುಕನೊಬ್ಬ ಅಸಭ್ಯ ವರ್ತನೆ ತೋರಿದ್ದಾನೆ. ಬಸ್ ಚಾಲಕನಿಗೆ ಈ ವಿಚಾರ ತಿಳಿಯುತ್ತಿದ್ದಂತೆ ಆತನಿಗೆ ಕಪಾಳಮೋಕ್ಷ ಮಾಡಿದ್ದು ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಎಂಟಿಸಿ ಬಸ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಕಾಮುಕ -
ಬೆಂಗಳೂರು,ಜು. 26: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಇತ್ತೀಚೆಗೆ ಹೆಚ್ಚು ಹೆಚ್ಚು ವರದಿಯಾಗುತ್ತಲೇ ಇದೆ. ಸಾರ್ವಜನಿಕ ಸ್ಥಳದಲ್ಲಿ ಕಿರುಕುಳ, ಉದ್ಯೋಗ ಸ್ಥಳದಲ್ಲಿ ದೌರ್ಜನ್ಯ ಎಸಗುವ ಘಟನೆಗಳು ಕಂಡುಬರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರು ಮಹಾನಗರ ಸಾರಿಗೆ ನಿಗಮ (BMTC) ಬಸ್‌ನಲ್ಲಿ ಮಹಿಳೆ ಜತೆ ಕಾಮುಕನೊಬ್ಬ ಅಸಭ್ಯ ವರ್ತನೆ ತೋರಿದ್ದಾನೆ. ಬಸ್ ಚಾಲಕನಿಗೆ ಈ ವಿಚಾರ ತಿಳಿಯುತ್ತಿದ್ದಂತೆ ಕಪಾಳಮೋಕ್ಷ ಮಾಡಿದ್ದು, ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಚಾಲಕನ ಸಮಯ ಪ್ರಜ್ಞೆಗೆ ಮೆಚ್ಚುಗೆ ನೀಡಿದ್ದಾರೆ.
ಸಹ ಪ್ರಯಾಣಿಕನೊಬ್ಬ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಬಸ್‌ನ ಮುಂಭಾಗದ ಬಳಿ ನಿಂತಿದ್ದ ಅವರು ತಮಗಾದ ಕೆಟ್ಟ ಅನುಭವವನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಮಹಿಳೆ ಆತನನ್ನು ತರಾಟೆಗೆ ತೆಗೆದುಕೊಂಡಿದ್ದು ಆರೋಪಿ ಈ ಕೂಡಲೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ಚಾಲಕ ಪ್ರವೀಣ್ ಸಮಯಪ್ರಜ್ಞೆ ಮರೆದು ಆತನನ್ನು ತಡೆದಿದ್ದಾರೆ.
ವಿಡಿಯೊ ನೋಡಿ:
Bravo to the woman who stood up against harassment on a BMTC route 500D bus near Hebbal!
— Gummalla Lakshmana (@GUMMALLALAKSHM3) July 25, 2026
Big salute to driver Praveen, who stopped the bus and stopped the accused. Public transport gets safer when victims speak up and people act. Police are taking action. #Bengaluru#Viralvideo pic.twitter.com/TPAjrv06jq
ಜುಲೈ 24ರಂದು ಮಧ್ಯಾಹ್ನ 12:42ರ ಸುಮಾರಿಗೆ ಹೆಬ್ಬಾಳ ಮತ್ತು ಮಾನ್ಯತಾ ಟೆಕ್ ಪಾರ್ಕ್ ನಡುವೆ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಈ ಘಟನೆ ನಡೆದಿದೆ. ವೈರಲ್ ಕ್ಲಿಪ್‌ನಲ್ಲಿ ಕಂಡುಬರುವಂತೆ, ಶರ್ಟ್ ಧರಿಸದ ಆರೋಪಿಯು ಬಸ್‌ನ ಪ್ರವೇಶದ್ವಾರದ ಬಳಿ ನಿಂತಿರುವುದು ಕಂಡುಬಂದಿದೆ.
ಕ್ಷುಲ್ಲಕ ಕಾರಣಕ್ಕೆ ಲಿಫ್ಟ್‌ನಲ್ಲೇ ಹೊಡೆದಾಡಿದ ಅಪಾರ್ಟ್‌ಮೆಂಟ್ ಮಾಲಕರು
ಮಹಿಳೆ ಮತ್ತು ಆರೋಪಿಯ ನಡುವೆ ತೀವ್ರ ವಾಗ್ವಾದ ನಡೆಯುತ್ತಿದ್ದಂತೆ ಚಾಲಕ ಪ್ರವೀಣ್ ನೆರವಿಗೆ ಬಂದಿದ್ದು ಆರೋಪಿಯನ್ನು ತರಾಟೆಗೆ ತೆಗೆದುಕೊಂಡು ಕೆನ್ನೆಗೆ ಬಾರಿಸಿದ್ದಾರೆ. ಈ ವೇಳೆ ಆರೋಪಿ ಚಾಲಕನ ಮೇಲೆಯೇ ಉಗುಳಿದ್ದು, ಮತ್ತಷ್ಟು ಜಗಳಕ್ಕೆ ಕಾರಣವಾಯಿತು. ವೈರಲ್ ಆದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ನಾಂದಿ ಹಾಡಿದ್ದು, ಘಟನೆಯ ಬಗ್ಗೆನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕೆಲವರು ಆರೋಪಿಯನ್ನು ತಡೆದ ಬಿಎಂಟಿಸಿ ಚಾಲಕನನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ಆತನ ವಿರುದ್ಧ ಜಗಳವಾಡಿದ್ದು ತಪ್ಪು, ಪೊಲೀಸರಿಗೆ ಕರೆ ಮಾಡಿ ಕಾನೂನು ಶಿಕ್ಷೆ ಕೊಡಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು, ಆತ ಮಾನಸಿಕ ಅಸ್ವಸ್ಥ ಇರಬೇಕು ಎಂದು ಕಮೆಂಟ್ ಮಾಡಿದ್ದಾರೆ.