ಮಹಾರಾಷ್ಟ್ರ: ಇಲ್ಲಿನ ರಾಜಕೀಯದಲ್ಲಿ ಬಿರುಗಾಳಿ ಏಳುವುದು ಹೊಸದೇನಲ್ಲ. ಇದಕ್ಕೆ ಮುಖ್ಯ ಕಾರಣ ಕುಟುಂಬ ರಾಜಕಾರಣ (Family politics). ಇದರ ಪರಿಣಾಮ ಯಾವಾಗಲೂ ಇಲ್ಲಿನ ಸಿಎಂ ಕುರ್ಚಿ (CM seat) ಮೇಲೆ ಬಿದ್ದಿದೆ. ಕುಟುಂಬದ ಮೇಲಿನ ವ್ಯಾಮೋಹದ ಪರಿಣಾಮ 2022ರಲ್ಲಿ ನಡೆದ ಒಂದು ಘಟನೆ ಪಕ್ಷವನ್ನು ಎರಡು ಬಣಗಳಾಗಿ ವಿಂಗಡಿಸಿತ್ತು. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Maharashtra Deputy Chief Minister Ajit pawar) ಅವರು ತಮ್ಮ ರಾಜಕೀಯ ಗುರು, ಚಿಕ್ಕಪ್ಪನ ವಿರುದ್ಧ ತಿರುಗಿ ನಿಂತಿದ್ದೆ ಇದಕ್ಕೆ ಮುಖ್ಯ ಕಾರಣ.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದಲ್ಲಿ 2022ರಲ್ಲಿ ಬಿರುಕು ಮೂಡಿತ್ತು. ಶಿವಸೇನೆ ಶಾಸಕರ ಬಂಡಾಯವು ಮಹಾ ವಿಕಾಸ್ ಅಘಾಡಿ ಸರಕಾರವನ್ನು ಉರುಳುವಂತೆ ಮಾಡಿತು. ಇದರಲ್ಲಿ ಮುಖ್ಯ ಪಾತ್ರವಹಿಸಿದ್ದು ಅಜಿತ್ ಪವಾರ್.
ಏನಾಗಿತ್ತು?
ಪ್ರತಿಪಕ್ಷದ ನಾಯಕ ಅಜಿತ್ ಪವಾರ್ ಅವರು ಬಿಜೆಪಿ ಜತೆ ಸಂಪರ್ಕ ಇಟ್ಟುಕೊಂಡಿರುವ ಮಾಹಿತಿ ತಿಳಿದ ಶರದ್ ಪವಾರ್ ಪಕ್ಷದ ಮೇಲೆ ಹಿಡಿತ ಸಾಧಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬಳಿಕ ಹಿಂಪಡೆದರು. ಈ ವೇಳೆ ಪಕ್ಷದ ಹೊಣೆಯನ್ನು ಮಗಳು, ಸಂಸದೆ ಸುಪ್ರಿಯಾ ಸುಳೆಗೆ ನೀಡಿದರು. ಸುಪ್ರಿಯಾ ಅವರನ್ನು ಪಕ್ಷದ ಕಾರ್ಯಾಧ್ಯಕ್ಷೆ ಹುದ್ದೆಗೆ ನೇಮಕ ಮಾಡಿದರು. ಈ ಮೂಲಕ ಅಜಿತ್ ಪವಾರ್ ಅವರನ್ನು ಕಡೆಗಣಿಸಿದರು. ಹೀಗಾಗಿಯೇ ಚಿಕ್ಕಪ್ಪನೂ ಆಗಿರುವ ಶರದ್ ಪವಾರ್ ವಿರುದ್ಧ ಅಜಿತ್ ಪವಾರ್ ತಿರುಗಿ ಬಿದ್ದರು.
ಅಜಿತ್ ಪವಾರ್ ಗೆ ಶರದ್ ಪವಾರ್ ರಾಜಕೀಯ ಗುರು ಕೂಡ ಆಗಿದ್ದರು. ಹೀಗಾಗಿ ಅವರ ಹಾದಿಯಲ್ಲೇ ನಡೆಯುವುದಾಗಿ ಅವರು ತಮ್ಮ ನಿರ್ಣಯದಿಂದ ತೋರಿಸಿಕೊಟ್ಟರು. ಯಾಕೆಂದರೆ 1978ರಲ್ಲಿ ಶರದ್ ಪವಾರ್ ಕೂಡ ಇದನ್ನೇ ಮಾಡಿದ್ದರು.
1978ರಲ್ಲಿ ಜನತಾ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್‌ನ ಎರಡು ಬಣಗಳು ಒಂದಾದವು. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ (ಎಸ್) ವಂಸತ ದಾದಾ ಪಾಟೀಲ್ ಮುಖ್ಯಮಂತ್ರಿಯಾದರು. ಕೆಲವೇ ದಿನಗಳಲ್ಲಿ ಮೈತ್ರಿಕೂಟದಲ್ಲಿ ಉಂಟಾದ ಭಿನ್ನಮತದ ಪರಿಣಾಮವೇ ಜನತಾ ಪಕ್ಷದ ಬೆಂಬಲದೊಂದಿಗೆ ಕಾಂಗ್ರೆಸ್ (ಐ) ಪಕ್ಷದಲ್ಲಿದ್ದ ಶರದ್ ಪವಾರ್ ಮುಖ್ಯಮಂತ್ರಿಯಾದರು. ಕಾಂಗ್ರೆಸ್ ಇಬ್ಬಾಗಕ್ಕೆ ಕಾರಣವಾಗಿದ್ದ ಶರದ್ ಪವಾರ್ ಬಳಿಕ ತಮ್ಮ ಪಕ್ಷಕ್ಕೆ ಕಾಂಗ್ರೆಸ್ (ಸೋಷಿಯಲಿಸ್ಟ್) ಎಂದು ನಾಮಕರಣ ಮಾಡಿದರು.
ತನ್ನ ಗರಡಿಯಲ್ಲಿ ಪಳಗಿರುವ ಅಜಿತ್ ಪವಾರ್ ತನಗೆ ರಾಜಕೀಯದಲ್ಲಿ ತಿರುಗೇಟು ನೀಡುತ್ತಾನೆ ಎಂದು ಶರದ್ ಪವಾರ್ ಊಹಿಸಿರಲಿಲ್ಲ. ಇದರ ಪರಿಣಾಮವಾಗಿ ಅವರ ಆಪ್ತರಾಗಿದ್ದ ಪ್ರಫುಲ್ ಪಟೇಲ್, ಛಗನ್ ಭುಜಬಲ್ ಸೇರಿದಂತೆ ಇನ್ನು ಹಲವಾರು ಶಾಸಕರು ಅಜಿತ್ ಪವರ್ ಜೊತೆಗೆ ನಿಂತರು. ಇದರ ಪರಿಣಾಮ ರಾಜ್ಯದ ಉಪಮುಖ್ಯಮಂತ್ರಿ ಸ್ಥಾನ ಅಜಿತ್ ಪವಾರ್ ಬಳಿ ಕೊನೆಯವರೆಗೆ ಸ್ಥಿರವಾಗಿ ಉಳಿಯಿತು.
Ajit Pawar Death: ಅಜಿತ್ ಪವಾರ್ ನಿಧನಕ್ಕೆ ಕರ್ನಾಟಕ ವಿಧಾನಮಂಡಲದಲ್ಲಿ ಸಂತಾಪ
ಈ ರಾಜಕೀಯ ಗಲಾಟೆ ಮುಂದುವರಿದರೂ ಕುಟುಂಬ ವ್ಯಾಮೋಹವೇ ಇದಕ್ಕೆ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಸದ್ಯ ಎನ್‌ಸಿಪಿಯ ಎರಡೂ ಬಣಗಳು ನಿಜವಾದ ಎನ್‌ಸಿಪಿ ಹಕ್ಕು ತಮಗೆ ಬೇಕೆಂದು ಹೋರಾಟ ನಡೆಸುತ್ತಿದ್ದರೆ ಇದರ ಶಕ್ತಿ ಅಜಿತ್ ಪವಾರ್ ಮಾತ್ರ ಎಲ್ಲವನ್ನೂ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ.