ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Bhagwat: RSS ಹೆಂಡತಿ ಸತ್ತ ಗಂಡಂದಿರ ಸೇನೆ; ನಾಲಿಗೆ ಹರಿಬಿಟ್ಟ ಕಾಂಗ್ರೆಸ್‌ ನಾಯಕ

ಆರ್‌ ಎಸ್‌ ಎಸ್‌ ಒಂದು ಗಂಡ ಸತ್ತ ವಿಧವೆಯರ ಸೈನ್ಯ ಎಂದು ಅಪಹಾಸ್ಯ ಮಾಡಿದ್ದಾರೆ. ಆರ್‌ಎಸ್‌ಎಸ್‌ನ ಅನೇಕ ಸದಸ್ಯರು ಅವಿವಾಹಿತರಾಗಿರುವಾಗ ಅವರು ಕುಟುಂಬ ಯೋಜನೆ ಕುರಿತು ಅವರು ಸಲಹೆ ನೀಡಲು ಹೇಗೆ ಸಾಧ್ಯ ಎಂದು ರೈ ಪ್ರಶ್ನಿಸಿದ್ದಾರೆ. ಮೋಹನ್‌ ಭಾಗವತ್‌ ಅವರನ್ನು ತೆಗಳುವ ಸಮಯದಲ್ಲಿ ಕಾಂಗ್ರೆಸ್‌ ನಾಯಕನಿಂದ ಈ ಹೇಳಿಕೆ ಬಂದಿದೆ.

RSS ಹೆಂಡತಿ ಸತ್ತ ಗಂಡಂದಿರ ಸೇನೆ; ಕಾಂಗ್ರೆಸ್‌ ನಾಯಕ!

-

Vishakha Bhat Vishakha Bhat Aug 29, 2025 6:02 PM

ನವದೆಹಲಿ: ಉತ್ತರ ಭಾರತದ ಕಾಂಗ್ರೆಸ್‌ ನಾಯಕ ಅಜಯ್‌ ರೈ ಅವರು (Mohan Bhagwat) ಕಾಂಗ್ರೆಸ್‌ ವಿರುದ್ಧ ಅವಹೇಳನಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಭಾರತೀಯರು ಮೂರು ಮಕ್ಕಳನ್ನು ಹೊಂದಬೇಕು ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಕರೆಗೆ ಪ್ರತಿಕ್ರಿಯಿಸಿದ ರೈ, ಆರ್‌ ಎಸ್‌ ಎಸ್‌ ಒಂದು ಗಂಡ ಸತ್ತ ವಿಧವೆಯರ ಸೈನ್ಯ ಎಂದು ಅಪಹಾಸ್ಯ ಮಾಡಿದ್ದಾರೆ. ಆರ್‌ಎಸ್‌ಎಸ್‌ನ ಅನೇಕ ಸದಸ್ಯರು ಅವಿವಾಹಿತರಾಗಿರುವಾಗ ಅವರು ಕುಟುಂಬ ಯೋಜನೆ ಕುರಿತು ಅವರು ಸಲಹೆ ನೀಡಲು ಹೇಗೆ ಸಾಧ್ಯ ಎಂದು ರೈ ಪ್ರಶ್ನಿಸಿದ್ದಾರೆ.

ವಾರಣಾಸಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥರು, "ಸಂಘವು ವಿಧುರರಿಂದ ತುಂಬಿದೆ" ಎಂದು ಹೇಳಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಗುರುವಾರ ಆರ್‌ಎಸ್‌ಎಸ್ ಮುಖ್ಯಸ್ಥರು ಭಾರತೀಯ ಪೋಷಕರು ಮೂರು ಮಕ್ಕಳನ್ನು ಹೊಂದಬೇಕು. ಇದು , ಜನಸಂಖ್ಯೆಯನ್ನು ಸ್ಥಿರಗೊಳಿಸಲು ಮತ್ತು ಕುಸಿತವನ್ನು ತಡೆಯಲು ಇದು ಅಗತ್ಯವಾಗಿದೆ ಎಂದು ಹೇಳಿದ್ದರು.

ಆರ್‌ ಎಸ್‌ ಎಸ್‌ಗೆ 100 ವರ್ಷ ತುಂಬದ ಸಂಭ್ರಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಲ್ಲಿ ಮಾತನಾಡಿದ್ದ ಭಾಗವತ್‌, ಜನಸಂಖ್ಯೆಯು (ಫಲವತ್ತತೆ ದರ) 2.1 ಕ್ಕಿಂತ ಕಡಿಮೆಯಾದರೆ, ಆ ಸಮಾಜವು ಭೂಮಿಯಿಂದ ಕಣ್ಮರೆಯಾಗುತ್ತದೆ ಎಂದು ಆಧುನಿಕ ಜನಸಂಖ್ಯಾ ವಿಜ್ಞಾನವೇ ಹೇಳುತ್ತದೆ. ಈಗಾಗಲೇ ಈ ರೀತಿಯಲ್ಲಿ ಅನೇಕ ಭಾಷೆಗಳು ಮತ್ತು ಸಮಾಜಗಳು ಅಸ್ತಿತ್ವವನ್ನು ಕಳೆದುಕೊಂಡಿವೆ. ಹಾಗಾಗಿ ಜನಸಂಖ್ಯೆಯು 2.1 ಕ್ಕಿಂತ ಕಡಿಮೆ ಇರಬಾರದು' ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ:ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿ ನಿವೃತ್ತಿ ಘೋಷಿಸುತ್ತಾರಾ? ಬಿಜೆಪಿಯ 75 ವರ್ಷಕ್ಕೆ ನಿವೃತ್ತಿಯ ಅಘೋಷಿತ ನಿಯಮದ ಬಗ್ಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದೇನು?

"2.1 ರ ಫಲವತ್ತತೆ ದರವನ್ನು ಹೊಂದಿರುವ ಸಮುದಾಯಗಳು ನಿಧಾನವಾಗಿ ನಶಿಸಿ ಹೋಗುತ್ತವೆ ಮತ್ತು 3 ಕ್ಕಿಂತ ಹೆಚ್ಚಿನ ಜನನ ಪ್ರಮಾಣವನ್ನು ಕಾಯ್ದುಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ಸರಿಯಾದ ವಯಸ್ಸಿನಲ್ಲಿ ಮದುವೆಯಾಗುವುದು ಮತ್ತು ಮೂರು ಮಕ್ಕಳನ್ನು ಹೊಂದುವುದು ಪೋಷಕರು ಮತ್ತು ಮಕ್ಕಳು ಇಬ್ಬರೂ ಆರೋಗ್ಯವಾಗಿರುವುದನ್ನು ಖಚಿತಪಡಿಸುತ್ತದೆ. ಜನಸಂಖ್ಯಾ ಏರಿಕೆಯು ವರದಾನವಾಗಬಹುದು, ಆದರೆ ಅದೇ ಸಮಯದಲ್ಲಿ, ಅದು ಹೊರೆಯೂ ಆಗಿರಬಹುದು. ಮೂರು ಮಕ್ಕಳನ್ನು ಮಾಡಿಕೊಂಡರೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿದ್ದರು.